304 ಕೋಟಿ ರೂಗೆ ಖರೀದಿಸಿದ ಮನೆ ಈಗ 1260 ಕೋಟಿಗೆ ಮಾರಾಟ, ಎಸೆಲ್ ಗ್ರೂಪ್ ಚೇರ್ಮನ್ ದಾಖಲೆ

Published : Jun 17, 2026, 08:19 PM IST
Essel Group Subhash Chandra

ಸಾರಾಂಶ

ಎಸೆಲ್ ಗ್ರೂಪ್ ಚೇರ್ಮನ್ ಸುಭಾಷ್ ಚಂದ್ರ ಹೂಡಿಕೆ ಹಾಗೂ ರಿಟರ್ನ್ಸ್ ವಿಚಾರದಲ್ಲಿ ಪಕ್ಕಾ. ಜೊತೆಗೆ ಭರ್ಜರಿ ಆದಾದಲ್ಲೂ ಮುಂದಿದ್ದಾರೆ. 2015ರಲ್ಲಿ ದೆಹಲಿಯಲ್ಲಿ 304 ಕೋಟಿ ರೂಪಾಯಿಗೆ ಖರೀದಿಸಿದ ಮನೆಯನ್ನು ಇದೀಗ 1260 ಕೋಟಿ ರೂಪಾಯಿ ಮಾರಾಟ ಮಾಡಿ ಹೊಸ ದಾಖಲೆ ಬರೆದಿದ್ದಾರೆ.

ದೆಹಲಿ (ಜೂ.17) ಎಸೆಲ್ ಗ್ರೂಪ್ ಚೇರ್ಮೆನ್ ಸಭಾಷ್ ಚಂದ್ರ ಒಂದು ಟ್ರಾನ್ಸಾಕ್ಷನ್‌ನಲ್ಲಿ 956 ಕೋಟಿ ರೂಪಾಯಿ ಲಾಭಗಳಿಸಿದ್ದಾರೆ. ಸುಭಾಷ್ ಚಂದ್ರ ತಮ್ಮ ದೆಹಲಿಯ ಲುಟಿನ್ಸ್ ಝೋನ್‌ನಲ್ಲಿದ್ದ ಬಂಗಲೆಯನ್ನು ಮಾರಾಟ ಮಾಡಿದ್ದಾರೆ. 2015ರಲ್ಲಿ 305 ಕೋಟಿ ರೂಪಾಯಿಗೆ ಈ ಮನೆ ಖರೀದಿಸಿದ್ದ ಸುಭಾಷ್ ಚಂದ್ರ ಇದೀಗ 1,260 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಈ ಮೂಲಕ ದೆಹಲಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಗರಿಷ್ಠ ಮೊತ್ತಕ್ಕೆ ಮಾರಾಟವಾದ ಮನೆ ಅನ್ನೋ ದಾಖಲೆಯನ್ನು ಸುಭಾಷ್ ಚಂದ್ರ ಬರೆದಿದ್ದಾರೆ.

ಇಂಡಿಯಾ ಗೇಟ್ ಪಕ್ಕದಲ್ಲೇ ಇರುವ ಬಂಗಲೆ

ಎಸೆಲ್ ಗ್ರೂಪ್ ಮೂಲಕ ಅತೀ ದೊಡ್ಡ ಉದ್ಯಮ ಸಾಮ್ರಾಜ್ಯ ಕಟ್ಟಿರುವ ಸುಭಾಷ್ ಚಂದ್ರ ದೆಹಲಿಯ ಇಂಡಿಯಾ ಗೇಟ್ ಪಕ್ಕದಲ್ಲಿರುವ ಕೋನೌಟ್ ಪ್ಯಾಲೇಸ್‌ನ ಭಗವಾನ್ ದಾಸ್ ರಸ್ತೆಯಲ್ಲಿ ಭವ್ಯ ಬಂಗಲೆ ಹೊಂದಿದ್ದರು. ಇದು ದೆಹಲಿಯ ಹೃದಯ ಭಾಗ. ಇದೀಗ ಈ ಭವ್ಯ ಬಂಗಲೆಯನ್ನು ದೆಹಲಿ ಮೂಲದ ಉದ್ಯಮಿಗೆ ಮಾರಾಟ ಮಾಡಿದ್ದಾರೆ. ಖರೀದಿ ಮಾಡಿದ ಉದ್ಯಮಿಯ ಮಾಹಿತಿ ಬಹಿರಂಗಪಡಿಸಿಲ್ಲ.

ಪ್ರತಿಷ್ಠಿತರು ವಾಸಿಸುವ ವಲಯ

ಲುಟಿನ್ಸ್ ಬಂಗಲೆ ಝೋನ್ ಅತ್ಯಂತ ಪ್ರತಿಷ್ಠಿತರ ರೆಸೆಡೆನ್ಸಿಯಾಗಿದೆ. ಹಿರಿಯ ಸರ್ಕಾರಿ ಅಧಿಕಾರಿಗಳು, ರಾಯಭಾರಿಗಳು, ನ್ಯಾಯಾಧೀಶರು, ಕೈಗಾರಿಕೋದ್ಯಮಿಗಳು ಸೇರಿದಂತೆ ಪ್ರತಿಷ್ಠಿತರು ವಾಸವಿರುವ ವಲಯವಾಗಿದೆ. ಇದೇ ಕಾರಣದಿಂದ ಇಲ್ಲಿನ ಭೂಮಿಗೆ ಚಿನ್ನಕ್ಕೂ ಮಿಗಿಲಾದ ಬೆಲೆ ಇದೆ. ಈ ಪ್ರದೇಶದಲ್ಲಿ ಭೂಮಿ ಕಡಿಮೆ. ಜೊತೆಗೆ ದೊಡ್ಡ ದೊಡ್ಡ ಕಟ್ಟಡ ನಿರ್ಮಾಣಕ್ಕೆ ಅವಕಾಶವಿಲ್ಲ.

ಗರಿಷ್ಠ ಮೌಲ್ಯದ ಆಸ್ತಿ ಮಾರಾಟ

ದೆಹಲಿಯ ಲುಟಿನ್ಸ್ ಝೋನ್‌ನಲ್ಲಿ ಕೋವಿಡ್ ಬಳಿಕ ಹಲವು ಆಸ್ತಿಗಳು ಮಾರಾಟ ನಡೆದಿದೆ. 300 ಕೋಟಿ, 500 ಕೋಟಿ, 1000 ಕೋಟಿ ರೂಪಾಯಿಗೆ ಬಂಗಲೆಗಳು ಮಾರಾಟವಾಗಿದೆ. ಆದರೆ ಸುಭಾಷ್ ಚಂದ್ರ ಅವರ ಬಂಗಲೆ 1260 ಕೋಟಿ ರೂಪಾಯಿಗೆ ಮಾರಾಟವಾಗುವ ಮೂಲಕ ಹೊಸ ದಾಖಲೆ ಬರೆದಿದೆ.

ಮನೆ ಖರೀದಿ ದೂರದ ಮಾತು

ದೆಹಲಿಯಲ್ಲಿ ಪ್ರಮುಖ ವಲಯದಲ್ಲಿ ಮನೆ, ಬಂಗಲೆ ಆಪಂಊಿರ ಬೆಲೆ 200, 300 ಕೋಟಿ ರೂಪಾಯಿಗಿಂತ ಮೇಲಿದೆ. ಇನ್ನು ದೆಹಲಿ ಹಾಗೂ ಗುರುಗ್ರಾಂ ವಲಯದಲ್ಲಿ ಅಪಾರ್ಟ್‌ಮೆಂಟ್ ಬೆಲೆಗಳೇ 50 ಕೋಟಿ ರೂಪಾಯಿಗಳಿಂದ ಮೇಲಿದೆ. ಇದೀಗ ನಗರ ಪ್ರದೇಶಗಳಲ್ಲಿ ಭೂಮಿ ಖರೀದಿ, ಮನೆ ಖರೀದಿ ಮಧ್ಯವ ವರ್ಗದ ಜನ ಮಾತ್ರವಲ್ಲ ಮಧ್ಯಮ ವರ್ಗಕ್ಕಿಂತ ಮೇಲ್ಪಟ್ಟವರಿಗು ಕೈಗೆಟುಕದ ವಸ್ತುವಾಗಿ ಪರಿಣಮಿಸಿದೆ.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

PhonePe, GPay ಬಳಸ್ತೀರಾ? 2000 ರೂಪಾಯಿಗಿಂದ ಹೆಚ್ಚು ಕಳಿಸಿದ್ರೆ ಟ್ಯಾಕ್ಸ್ ಬೀಳುತ್ತಾ? UPI Rules
ಇಲ್ಲಿ ‘ಭೂತ ಬಂಗಲೆ’ ಖರೀದಿಸಲು ನಡೆಯುತ್ತೆ ಪೈಪೋಟಿ! ಕಾರಣ ಕೇಳಿದ್ರೆ ಶಾಕ್ ಆಗ್ತೀರಿ