ಪಿಂಚಣಿ, ಪಿಎಫ್ ಮೊತ್ತದ ಕುರಿತು ಬಹುತೇಕರು ತಿಳಿದುಕೊಂಡಿರುತ್ತಾರೆ. ಆದರೆ EPFO ಸದಸ್ಯರಿಗೆ ಗರಿಷ್ಠ 7 ಲಕ್ಷ ರೂಪಾಯಿ ವರೆಗೆ ವಿಮೆ ಸೌಲಭ್ಯವೂ ಇದೆ. ಇದಕ್ಕಾಗಿ ಯಾವುದೇ ಪ್ರೀಮಿಯಂ ಪಾವತಿಸಬೇಕಿಲ್ಲ.ಈ ಯೋಜನಾ ಸೌಲಭ್ಯ ಪಡೆಯಲು ಏನು ಮಾಡಬೇಕು?
ನವದೆಹಲಿ(ಆ.13) ಉದ್ಯೋಗಿಗಳ ಭವಿಷ್ಯ ನಿಧಿ( EPFO) ಬಹುತೇಕ ಯೋಜನೆಗಳ ಕುರಿತು ಜನರು ತಿಳಿದುಕೊಂಡಿರುತ್ತಾರೆ. ತಿಂಗಳ ವೇತನದಲ್ಲಿ ಕಡಿತಗೊಳ್ಳವ ಪಿಎಫ್ ಮೊತ್ತ, ಪಿಎಫ್ ಒಟ್ಟು ಮೊತ್ತ, ಪಿಂಚನೆ, ತುರ್ತು ಅಗತ್ಯಕ್ಕಾಗಿ ಪಿಎಫ್ ಮೊತ್ತದಿಂದ ಹಣ ಪಡೆಯುವಿಕೆ ಸೇರಿದಂತೆ ಹಲುವು ಸೌಲಭ್ಯಗಳಿವೆ. ಇದರ ಜೊತೆಗೆ EPFO ಸದಸ್ಯರಿಗೆ 7 ಲಕ್ಷ ರೂಪಾಯಿ ವರೆಗೆ ವಿಮೆ ಸೌಲಭ್ಯವೂ ಇದೆ. ಇದಕ್ಕೆ ಪಿಎಫ್ ಸದಸ್ಯರು ಯಾವುದೇ ಪ್ರಿಮಿಯಂ ಪಾವತಿಸಬೇಕಿಲ್ಲ. ಈ ಯೋಜನಾ ಸೌಲಭ್ಯ ಮಾಹಿತಿ ಇಲ್ಲಿದೆ.
ಉದ್ಯೋಗಿಗಳ ಡೆಪಾಸಿಟ್ ಲಿಂಕ್ ಇನ್ಶುರೆನ್ಸ್ ಲಿಮಿಟೆಡ್( EDLI) ಅಡಿಯಲ್ಲಿ ಈ ಯೋಜನೆ ನೀಡಲಾಗಿದೆ. ಇಲ್ಲಿ ಯಾವುದೇ ಪ್ರಿಮಿಯಂ ಪಾವತಿಸಬೇಕಿಲ್ಲ. ಭವಿಷ್ಯ ನಿಧಿಗೆ ಕಂಪನಿ ಅಥವಾ ಸಂಸ್ಥೆ ಪಾವತಿಸುವ ಶೇಕಡಾವಾರು ಮೊತ್ತದಡಿಯಲ್ಲಿ ಈ ವಿಮೆಯ ಒಟ್ಟು ಮೊತ್ತ ನಿರ್ಧಾರವಾಗಲಿದೆ. ಈ ವಿಮೆ ಯೋಜನೆಯಡಿ ಪಿಎಫ್ ಸದಸ್ಯರು ಗರಿಷ್ಠ 7 ಲಕ್ಷ ರೂಪಾಯಿ ವರೆಗೆ ವಿಮೆ ಮೊತ್ತ ಪಡೆಯಲಿದ್ದಾರೆ.
EPFO ತನ್ನ ಸದಸ್ಯರಿಗೆ ನೀಡುವ 7 ಬಗೆಯ ಮಾಸಿಕ ಪಿಂಚಣಿ ಯೋಜನೆಗಳ ಲಿಸ್ಟ್, ಇವುಗಳ ಬಗ್ಗೆ ನಿಮಗೆ ಗೊತ್ತಿರಲಿ..
ವಿಮೆ ಮೊತ್ತವನ್ನು ಉದ್ಯೋಗಿಯ ಅಂತಿಮ 12 ತಿಂಗಳ ಮೂಲ ವೇತನ ಹಾಗೂ ಭತ್ಯೆ ಆಧರಿಸಿ ನಿರ್ಣಯಿಸಲಾಗುತ್ತದೆ. ಈ ಯೋಜನೆ ಮೂಲಕ ವಿಮೆ ಹಣವನ್ನು ಕ್ಲೈಮ್ ಮಾಡುವಾಗ ಅಂತಿಮ ಬೇಸಿಕ್ ಸ್ಯಾಲರಿಯ 35 ಪಟ್ಟು + ಭತ್ಯೆ ಹಾಗೂ ಬೋನಸ್ ಮೊತ್ತ ಗರಿಷ್ಠ 1,75,000 ರೂಪಾಯಿ ಸೇರಿಸಿ ನೀಡಲಾಗುತ್ತದೆ. ಈ ವಿಮೆಯಲ್ಲಿ ಗರಿಷ್ಠ 7 ಲಕ್ಷ ರೂಪಾಯಿ ವರೆಗೆ ಕವರೇಜ್ ಸಿಗಲಿದೆ.
ಇದು ಪಿಎಫ್ ಉದ್ಯೋಗಿಯ ಜೀವ ವಿಮೆ. ಉದ್ಯೋಗಿ ಮೃತಪಟ್ಟರೆ ನಾಮಿನಿ ಈ ಮೊತ್ತ ಪಡೆಯಲಿದ್ದಾರೆ. ಈ ಮೊತ್ತ ಪಡೆಯಲು ನಾಮನಿಗೆ ಕನಿಷ್ಠ 18 ವಯಸ್ಸು ತುಂಬಿರಬೇಕು. ನಾಮಿನಿ 18 ವರ್ಷಕ್ಕಿಂತ ಕೆಳಗಿದ್ದರೆ ಅವರ ಗಾರ್ಡಿಯನ್ ಈ ಮೊತ್ತವನ್ನು ನಾಮಿನಿ ಮೂಲಕ ಪಡೆಯಲು ಅರ್ಹ. ಕ್ಲೈಮ್ ಮಾಡುವಾಗ ಪಿಎಫ್ ಉದ್ಯೋಗಿಯ ಡೆತ್ ಸರ್ಟಿಫಿಕೇಟ್, ಅತ್ಯವಶ್ಯಕವಾಗಿದೆ.
ಒಂದು ವೇಳೆ ಪಿಎಪ್ ಉದ್ಯೋಗಿ ಕೇವಲ 12 ತಿಂಗಳು ಕೆಲಸ ಮಾಡಿ ಅಚಾನಕ್ಕಾಗಿ ಮೃತಪಟ್ಟರೆ, ಈ ಉದ್ಯೋಗಿಯ ನಾಮಿನಿ 2.5 ಲಕ್ಷ ರೂಪಾಯಿ ವಿಮೆಯ ರೂಪದಲ್ಲಿ ಪಡೆಯಲಿದ್ದಾರೆ. ಒಂದು ವೇಳೆ ನಾಮಿನಿ ದಾಖಲಿಸದಿದ್ದರೆ ಈ ವಿಮೆ ಮೊತ್ತವು ಪತ್ನಿ ಅಥವಾ ಪತಿ, ಮಕ್ಕಳುನ್ನು ಅರ್ಹರನ್ನಾಗಿ ಪರಿಗಣಿಸಲಾಗುತ್ತದೆ. 5 IF ವಿಮೆ ಫಾರ್ಮ್ ಭರ್ತಿ ಮಾಡಿ ಈ ವಿಮೆ ಮೊತ್ತಕ್ಕ ಅರ್ಜಿ ಹಾಕಬಹುದು.