ಎಂದಿನಂತೆ ಈಗಲೂ 9 ಗಂಟೆ ಅವಧಿಯ ಶಿಫ್ಟ್‌ಗಳು ನಡೆಯುತ್ತಿವೆ. ಶಿಫ್ಟ್ ಸಮಯ ಆ ಉದ್ಯಮಗಳಿಗೆ ತಕ್ಕಂತೆ ಬದಲಾಗಿರುತ್ತದೆ
ಬೆಂಗಳೂರು: 14 ಗಂಟೆ ಕೆಲಸದ ಅವಧಿಯ ಶಿಫ್ಟ್ ಬಗ್ಗೆ ಎಲೆಕ್ಟ್ರಾನಿಕ್ಸ್, ಐಟಿ/ಬಿಟಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ,ಕರ್ನಾಟಕ ಸರ್ಕರದ ಮಾಹಿತಿ ತಂತ್ರಜ್ಞಾನ- ಜೈವಿಕ ತಂತ್ರಜ್ಞಾನ ಕಾರ್ಯದರ್ಶಿ ಎಕ್‌ರೂಪ್ ಕೌರ್, ಖಾಸಗಿ ವಾಹಿನಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸಂವಹನ ಕಾರ್ಯಕ್ರಮದಲ್ಲಿ ಮಾತನಾಡಿದ ಏಕ್‌ರೂಪ್ ಕೌರ್, ಸದ್ಯಕ್ಕೆ ಶಿಫ್ಟ್ ಸಮಯದಲ್ಲಿ ಯಾವುದೇ ಬದಲಾವಣೆಗಳಿಲ್ಲ. 9 ಗಂಟೆಯ ಶಿಫ್ಟ್ ಮುಂದುವರಿಯಲಿದೆ ಎಂದು ಸಚಿವ ಸ್ಪಷ್ಟಪಡಿಸಿದರು.
ಬದಲಾವಣೆಗಳು ಕೆಲ ಉದ್ಯಮಗಳ ಬೇಡಿಕೆಗಳಾಗಿವೆಯೇ ಹೊರತು ಸರ್ಕಾರದ ಯೋಜನೆಗಳಲ್ಲ. ಈ ಸಂಬಂಧ ಸರ್ಕಾರ ಮತ್ತು ಉದ್ಯಮಗಳ ನಡುವೆ ಚರ್ಚೆ ಅಥವಾ ಸಂವಹನ ನಡೆದಿಲ್ಲ. ಎಂದಿನಂತೆ ಈಗಲೂ 9 ಗಂಟೆ ಅವಧಿಯ ಶಿಫ್ಟ್‌ಗಳು ನಡೆಯುತ್ತಿವೆ. ಶಿಫ್ಟ್ ಸಮಯ ಆ ಉದ್ಯಮಗಳಿಗೆ ತಕ್ಕಂತೆ ಬದಲಾಗಿರುತ್ತದೆ. ಕರ್ನಾಟಕ ಸರ್ಕಾರ ಓವರ್‌ಟೈಮ್‌ನಲ್ಲಿಯೂ ಮೃದುಧೋರಣೆಯನ್ನು ಹೊಂದಿದ್ದು, 9 ರಿಂದ 12 ಗಂಟೆಯವರೆಗೆ ಓರ್ವ ಉದ್ಯೋಗಿ ಕೆಲಸ ಮಾಡಬಹುದಾಗಿದೆ. ಈ ಓವರ್ ಟೈಮ್ ಸಹ ಪ್ರತಿ ತ್ರೈಮಾಸಿಕದಲ್ಲಿ ಉದ್ಯೋಗಿಯ ಒಟ್ಟು ಕೆಲಸದ ಅವಧಿ ಮೇಲೆ ಅವಲಂಬಿತವಾಗುತ್ತದೆ. 14 ಗಂಟೆಯ ಕೆಲಸದಲ್ಲಿ ಎರಡು ಗಂಟೆಯಷ್ಟು ವಿರಾಮದ ಸಮಯವನ್ನು ಒಳಗೊಂಡಿರುತ್ತದೆ ಎಂದು ಏಕ್‌ರೂಪ್ ಕೌರ್ ತಿಳಿಸಿದರು.
undefined
ಹಿಂಡೆನ್‌ಬರ್ಗ್ ರಿಪೋರ್ಟ್ ಬೆನ್ನಲ್ಲಿಯೇ ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್ ಷೇರುಗಳಲ್ಲಿ ಭಾರೀ ಕುಸಿತ!
ಭಾರತ ಸರ್ಕಾರದ Model Shops and Establishment Bill ಪ್ರಕಾರ, ನಿರಂತರವಾಗಿ ಐದು ಗಂಟೆಯ ಕೆಲಸದ ಬಳಿಕ ಒಂದು ಗಂಟೆಯ ವಿರಾಮ ನೀಡಲಾಗುತ್ತದೆ. ಗುಜರಾತ್, ತೆಲಂಗಾಣ ಮತ್ತು ಒಡಿಶಾ ರಾಜ್ಯಗಳಲ್ಲಿ ವಿರಾಮದ ಅವಧಿ ಅರ್ಧ ಗಂಟೆಯಾಗಿರುತ್ತದೆ. ಕೆಲಸದ ಅವಧಿ ವಿಸ್ತರಣೆ ಬಗ್ಗೆ ಚರ್ಚೆಗಳು ನಡೆಯುತ್ತಿದ್ದೂ, ಹಾಗಂತ ದಿನಕ್ಕೆ 14 ಗಂಟೆ ಕೆಲಸ ಮಾಡೋದಕ್ಕೆ ಆಗಲ್ಲ ಎಂದು ಕೌರ್ ಅಭಿಪ್ರಾಯ ಪಟ್ಟರು.
ಸರ್ಕಾರದ ಪ್ರಸ್ತಾಪವನ್ನು ತಪ್ಪಾಗಿ ಅರ್ಥೈಸಲಾಗಿದೆ. ಮೂಲ ಉದ್ದೇಶಗಳನ್ನು ಮರೆಮಾಡಲಾಗುತ್ತಿದೆ. ಈ ತಿದ್ದುಪಡಿಯಲ್ಲಿ ರಾಜ್ಯ ಕಾರ್ಮಿಕ ಇಲಾಖೆಯಿಂದ ಅನುಮತಿ ಪಡೆಯುವ ನಿರ್ದಿಷ್ಟ ಕೈಗಾರಿಕೆಗಳು ಅಥವಾ ಕಂಪನಿಗಳಿಗೆ ಮಾತ್ರ ಅನ್ವಯಿಸುತ್ತದೆ. ಇದು ಕಾಯಿದೆಗೆ ಏಕರೂಪದ ಬದಲಾವಣೆಯಲ್ಲ. ನಾವು ಜಾಗತಿಕ ಪರಿಸರದಲ್ಲಿ ಕಾರ್ಯನಿರ್ವಹಿಸುತ್ತೇವೆ, ಅಲ್ಲಿ ವೇಳಾಪಟ್ಟಿಗಳು ಇತರ ದೇಶಗಳೊಂದಿಗೆ ಹೊಂದಿಕೆಯಾಗಬೇಕು. ನಾವು 14 ಗಂಟೆಯ ಕೆಲಸದ ಅವಧಿಯನ್ನು ಕಡ್ಡಾಯಗೊಳಿಸಿಲ್ಲ ಎಂದು ಹೇಳಿದರು.
ಜಿಯೋದಿಂದ ಸೂಪರ್ ಪ್ಲಾನ್ - ಜಸ್ಟ್ 175 ರೂಪಾಯಿಗೆ ಡೇಟಾ ಜೊತೆ 12 OTT ಪ್ಲಾಟ್‌ಫಾರಂಗೆ ಎಂಟ್ರಿ
It was a privilege to be at ’s Startup Conclave 2024, an event that unites the brightest minds and the most innovative spirits within the startup ecosystem.
Karnataka’s program has propelled over 983 startups by providing grants of upto 50 lakhs.
32% of… pic.twitter.com/wSbxd5tBxQ