PF ಚಂದಾದಾರರಿಗೆ ದೀಪಾವಳಿಗೆ ಸಿಗಲಿದೆ ಸಿಹಿ!

By Suvarna News  |  First Published Oct 11, 2020, 3:29 PM IST

ದೀಪಾ​ವ​ಳಿಗೆ ಮೊದಲ ಕಂತಿನ ಪಿಎಫ್‌ ಬಡ್ಡಿ| 2019-20ನೇ ಸಾಲಿನ ಶೇ.8.5 ಪಿಎಫ್‌ ಬಡ್ಡಿ ದರದ ಮೊದಲ ಕಂತು| 


ನವ​ದೆ​ಹ​ಲಿ(ಅ.11): ನೌಕ​ರರ ಭವಿಷ್ಯ ನಿಧಿ ಮಂಡಳಿ (ಇ​ಪಿ​ಎ​ಫ್‌​ಒ) 2019-20ನೇ ಸಾಲಿನ ಶೇ.8.5 ಪಿಎಫ್‌ ಬಡ್ಡಿ ದರದ ಮೊದಲ ಕಂತನ್ನು ದೀಪಾ​ವಳಿ ವೇಳೆ ಚಂದಾ​ದಾ​ರ​ರಿಗೆ ನೀಡುವ ನಿರೀ​ಕ್ಷೆ​ಯಿದೆ.

ಸೆಪ್ಟೆಂಬ​ರ್‌​ನಲ್ಲಿ ನಡೆದ ಸಭೆ​ಯಲ್ಲಿ ಇಪಿ​ಎ​ಫ್‌ಒ ಕೇಂದ್ರೀಯ ಮಂಡಳಿ 2 ಕಂತುಗ​ಳಲ್ಲಿ ಪಿಎಫ್‌ ಬಡ್ಡಿ​ದ​ರ​ವನ್ನು ಚಂದಾ​ದಾ​ರ​ರಿಗೆ ನೀಡು​ವು​ದಾಗಿ ನಿರ್ಧ​ರಿ​ಸಿ​ತ್ತು. ಆ ಪ್ರಕಾರ ಶೇ.8.15 ಬಡ್ಡಿ​ದ​ರ​ದ ಮೊದಲ ಕಂತು ದೀಪಾ​ವ​ಳಿಗೆ ಹಾಗೂ ಶೇ.0.35ರ 2ನೇ ಕಂತು ಡಿಸೆಂಬರ್‌ ಸಂದಾ​ಯ​ವಾ​ಗುವ ಸಾಧ್ಯತೆ ಇದೆ.

Latest Videos

undefined

ಚಂದಾ​ದಾ​ರರು ತಮ್ಮ ಪಿಎಫ್‌ ಹಣ​ದ ಬ್ಯಾಲೆ​ನ್ಸನ್ನು ಎಸ್ಸೆ​ಮ್ಮೆಸ್‌ ಮೂಲ​ಕವೇ ತಿಳಿ​ದು​ಕೊ​ಳ್ಳ​ಬ​ಹುದು. 7738299899 ಸಂಖ್ಯೆಗೆ ’EPFOHO’ ಎಂಬ ಸಂದೇಶ ಕಳಿ​ಸ​ಬೇ​ಕು. ಹಿಂದಿ​ಯಲ್ಲಿ ಮಾಹಿತಿ ಬೇಕು ಎಂದರೆ ‘EPFOHO UAN’ ಎಂಬ ಸಂದೇ​ಶ​ವನ್ನು ಅದೇ ಸಂಖ್ಯೆಗೆ ಕಳಿ​ಸ​ಬೇ​ಕು. ಕನ್ನಡ ಸೇರಿ 9 ಭಾಷೆ​ಗ​ಳಲ್ಲಿ ಮಾಹಿತಿ ತೆಗೆ​ದು​ಕೊ​ಳ್ಳ​ಬ​ಹು​ದು.

ಚಂದಾ​ದಾ​ರರ ಯುಎ​ಎನ್‌ ಸಂಖ್ಯೆ ಹಾಗೂ ಬ್ಯಾಂಕ್‌ ಖಾತೆ ಸಂಖ್ಯೆಯು ಪಾನ್‌ ಖಾತೆ ಸಂಖ್ಯೆ​ಯೊಂದಿಗೆ ಸಂಯೋ​ಜಿ​ತ​ವಾ​ಗ​ಬೇ​ಕು.

ಇಪಿ​ಎಫ್‌ಒ ವೆಬ್‌​ಸೈ​ಟ್‌​ನ​ಲ್ಲಿನ ಪಾಸ್‌​ಬುಕ್‌ ಮೂಲ​ಕವೂ ಬ್ಯಾಲೆನ್ಸ್‌ ಪರಿ​ಶೀ​ಲನೆ ಮಾಡ​ಬ​ಹುದು. ಪಾಸ್‌​ಬುಕ್‌ ನೋಡಲು ಯುಎ​ಎನ್‌ ಸಂಖ್ಯೆ ಕಡ್ಡಾ​ಯ.

ಇ ಪಾಸ್‌​ಬು​ಕ್‌​ಗಾಗಿ https://passbook.epfindia.gov.in/MemberPassBook/Login ವೆಬ್‌​ಸೈಟ್‌ನಲ್ಲಿ ಲಾಗಿನ್‌ ಆಗಿ ನೋಡ​ಬ​ಹು​ದು.

click me!