
Business Desk: ವೇತನ (Salary) ಪಡೆಯೋ ವರ್ಗಕ್ಕೆ ಹೂಡಿಕೆಗೆ (Investment) ಅತ್ಯಂತ ವಿಶ್ವಾಸಾರ್ಹ ಮಾರ್ಗವೆಂದ್ರೆ ಅದು ನೌಕರರ ಭವಿಷ್ಯ ನಿಧಿ (EPF).ಇದ್ರಲ್ಲಿ ಹೂಡಿಕೆ (Invest) ಮಾಡೋದ್ರಿಂದ ಅನೇಕ ಪ್ರಯೋಜನಗಳನ್ನು ಕೂಡ ಪಡೆಯಬಹುದು. ಚಂದಾದಾರರಿಗೆ (Subscriber) ಇಪಿಎಫ್ (EPF) ಅನೇಕ ಯೋಜನೆಗಳನ್ನು ಹೊಂದಿದ್ದು, ಅದ್ರಲ್ಲಿ ಯಾವುದೇ ಪ್ರೀಮಿಯಂ (Premium) ಪಾವತಿಸದೆ 7ಲಕ್ಷ ರೂ. ತನಕ ಜೀವ ವಿಮಾ (Life Insurance) ಸೌಲಭ್ಯ ಪಡೆಯೋದು ಕೂಡ ಸೇರಿದೆ. ಇಪಿಎಫ್ ಒ ಈ ಯೋಜನೆಯನ್ನು ಉದ್ಯೋಗಿಗಳ ಠೇವಣಿ (Deposit) ಸಂಪರ್ಕಿತ (Linked) ವಿಮಾ ಯೋಜನೆ ಅಥವಾ ಇಡಿಎಲ್ಐ (EDLI) ಎಂದು ಕರೆಯಲಾಗುತ್ತದೆ. ಹಾಗಾದ್ರೆ ಈ ಯೋಜನೆಯಿಂದ ಇಪಿಎಫ್ಒ ಖಾತೆ ಹೊಂದಿರೋರು ಪ್ರೀಮಿಯಂ ಪಾವತಿಸದೆ ಹೇಗೆ 7ಲಕ್ಷ ರೂ. ತನಕ ಜೀವ ವಿಮಾ ಸೌಲಭ್ಯ ಪಡೆಯಬಹುದು? ಇಲ್ಲಿದೆ ಮಾಹಿತಿ.
ಅರ್ಹ ಖಾತೆದಾರರಿಗೆ ಮಾತ್ರ ಈ ಸೌಲಭ್ಯ
ಉದ್ಯೋಗಿಗಳ ಠೇವಣಿ (Deposit) ಸಂಪರ್ಕಿತ (Linked) ವಿಮಾ (Insurance) ಯೋಜನೆ ಅಥವಾ ಇಡಿಎಲ್ಐ (EDLI) ಅರ್ಹ ಪಿಎಫ್ (PF) ಖಾತೆದಾರರಿಗೆ ಗರಿಷ್ಠ 7ಲಕ್ಷ ರೂ. ತನಕ ವಿಮಾ (Insurance) ಸೌಲಭ್ಯಗಳನ್ನು ಕಲ್ಪಿಸುತ್ತದೆ. ಹಿಂದೆ ಈ ಮೊತ್ತ 6ಲಕ್ಷ ರೂ. ಆಗಿತ್ತು. ಆದ್ರೆ ಕಳೆದ ವರ್ಷ ಏಪ್ರಿಲ್ ನಲ್ಲಿ ಒಂದು ಲಕ್ಷ ರೂ. ಏರಿಕೆ ಮಾಡಲಾಗಿತ್ತು. ಒಂದು ವೇಳೆ ಖಾತೆದಾರ ನಿವೃತ್ತಿಗೂ ಮುನ್ನ ಮರಣ (demise) ಹೊಂದಿದ್ರೆ ಈ ವಿಮಾ ಮೊತ್ತವನ್ನು ಆತ ಅಥವಾ ಆಕೆಯ ಶಾಸನಬದ್ಧ ವಾರಸುದಾರರಿಗೆ ವರ್ಗಾಯಿಸಲಾಗುತ್ತದೆ. ಇನ್ನು ಖಾತೆದಾರ ಕಳೆದ 12 ತಿಂಗಳಿಂದ ನಿರಂತರವಾಗಿ ಸೇವೆಯಲ್ಲಿದ್ದುನಿಧನ ಹೊಂದಿದ ಸಂದರ್ಭದಲ್ಲಿ ಕನಿಷ್ಠ 2.5ಲಕ್ಷ ರೂ. ವಿಮಾ ಸೌಲಭ್ಯವನ್ನು ವಾರಸುದಾರರಿಗೆ ನೀಡಲಾಗೋದು.
LIC ಬಳಿಯಿದೆ ₹21500 ಕೋಟಿ ಯಾರೂ ಕೇಳದ ಹಣ: ನಿಮ್ಮ ಅನ್‌ಕ್ಲೇಮಡ್ ಪಾಲಿಸಿ ಪರಿಶೀಲಿಸುವುದು ಹೇಗೆ?
ಪ್ರೀಮಿಯಂ ಪಾವತಿಸಬೇಕಿಲ್ಲ
ಇಡಿಎಲ್ಐ (EDLI) ಯೋಜನೆಯಡಿಯಲ್ಲಿ ನಿಗದಿತ ಜೀವ ವಿಮಾ ಪ್ರಯೋಜನಗಳನ್ನು ಪಡೆಯಲು ಖಾತೆದಾರರು ಪ್ರೀಮಿಯಂ (Premium) ಮೊತ್ತ ಪಾವತಿಸಬೇಕಾಗಿಲ್ಲ. ಹಾಗಾದ್ರೆ ಪ್ರೀಮಿಯಂ ಮೊತ್ತವನ್ನು ಯಾರು ಪಾವತಿಸುತ್ತಾರೆ? ಉದ್ಯೋಗದಾತರೇ ಇದಕ್ಕೆ ಪ್ರೀಮಿಯಂ ಪಾವತಿಸುತ್ತಾರೆ. ಇದು ಖಾತೆದಾರರ ಮಾಸಿಕ ವೇತನದ 0.50%. ಇದರ ಗರಿಷ್ಠ ಮೊತ್ತ 15,000ರೂ.
ಪ್ರತ್ಯೇಕ ನೋಂದಣಿ ಅಗತ್ಯವಿಲ್ಲ
ಖಾತೆದಾರರು ಇಪಿಎಫ್ಒಗೆ ಸೇರ್ಪಡೆಗೊಂಡ ತಕ್ಷಣ ಜೀವ ವಿಮಾ ಯೋಜನೆ ಪ್ರಯೋಜನ ಪಡೆಯಲು ಅರ್ಹತೆ ಗಳಿಸುತ್ತಾರೆ. ಇದಕ್ಕಾಗಿ ಪ್ರತ್ಯೇಕ ನೋಂದಣಿ (Registration) ಮಾಡಬೇಕಾದ ಅಗತ್ಯವೂ ಇಲ್ಲ. ಅಲ್ಲದೆ, ಈ ಯೋಜನೆಯ ಪ್ರಯೋಜನವನ್ನು ನೇರವಾಗಿ ಬ್ಯಾಂಕ್ ಖಾತೆಗೇ ವರ್ಗಾಯಿಸಲಾಗುತ್ತದೆ. ಇಡಿಎಲ್ಐ ಯೋಜನೆ ಪ್ರಯೋಜನಗಳು ನಾಮಿನಿ ಅಥವಾ ಖಾತೆದಾರರ ಕಾನೂನುಬದ್ಧ ವಾರಸುದಾರರ ಬ್ಯಾಂಕ್ ಖಾತೆಗೆ ನೇರವಾಗಿ ಲಿಂಕ್ ಆಗಿರುತ್ತದೆ. ಹೀಗಾಗಿ ಇಪಿಎಫ್ಒ ಚಂದದಾರರು ಮರಣ ಹೊಂದಿದ ಸಂದರ್ಭದಲ್ಲಿ ವಿಮಾ ಮೊತ್ತವನ್ನು ನೇರವಾಗಿ ಲಿಂಕ್ ಆಗಿರೋ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.
Monthly Economic Review : ಬಲಿಷ್ಠ ರಾಷ್ಟ್ರಗಳಿಗಿಂತ ವೇಗವಾಗಿ ಭಾರತದ ಆರ್ಥಿಕತೆ ಬೆಳೆಯಲಿದೆ
ನಾಮಿನಿ ಸೇರ್ಪಡೆ ಅಗತ್ಯ
ಜೀವ ವಿಮಾ ಸೌಲಭ್ಯ ಪಡೆಯಲು ಇಪಿಎಫ್ ಖಾತೆದಾರ ನಾಮಿನಿ (Nominee) ಹೆಸರನ್ನು ಸೇರ್ಪಡೆಗೊಳಿಸೋದು ಅಗತ್ಯ. ಕೆಲವರು ಉದ್ಯೋಗ ಸಿಕ್ಕ ಸಂದರ್ಭದಲ್ಲಿ ಇಪಿಎಫ್ ಗೆ ಸೇರ್ಪಡೆಗೊಳ್ಳುವಾಗ ನಾಮಿನಿ ಹೆಸರನ್ನು ಸೇರಿಸೋದಿಲ್ಲ. ಇದ್ರಿಂದ ಪಿಎಫ್ ಖಾತೆದಾರ ಅಕಾಲಿಕಾ ಮರಣ ಹೊಂದಿದ ಸಂದರ್ಭದಲ್ಲಿಆತನ ಪಿಎಫ್ ಖಾತೆಯಲ್ಲಿರೋ ಹಣ ಹಿಂಪಡೆಯಲು ಕುಟುಂಬ ಸದಸ್ಯರು ಪರದಾಡಬೇಕಾಗುತ್ತದೆ. ಅಲ್ಲದೆ, ವಿಮೆ ಸೇರಿದಂತೆ ಕೆಲವು ಸೌಲಭ್ಯಗಳು ಕೂಡ ಸಿಗೋದಿಲ್ಲ. ಅದೇ ಪಿಎಫ್ ಗೆ ನಾಮಿನಿ ಸೇರ್ಪಡೆ ಮಾಡಿದ್ರೆ ಒಂದು ವೇಳೆ ಪಿಎಫ್ ಖಾತೆದಾರ ಅಕಾಲಿಕಾ ಮರಣ ಹೊಂದಿದ್ರೆ ಆತನ ನಾಮಿನಿಗೆ ವಿಮೆ ಹಾಗೂ ಪಿಎಫ್ ನ ಇತರ ಸೌಲಭ್ಯಗಳು ಸಿಗುತ್ತವೆ. ಇಪಿಎಫ್ ಗೆ ಇ-ನಾಮಿನೇಷನ್ ಸೇಪರ್ಡೆಗೆ ಡಿಸೆಂಬರ್ 31, 2021 ಕೊನೆಯ ದಿನಾಂಕವಾಗಿತ್ತು. ಆದ್ರೆ ಈ ಅವಧಿಯನ್ನು EPFO ವಿಸ್ತರಿಸಿದ್ದು, ಅಂತಿಮ ದಿನಾಂಕವನ್ನು ಇನ್ನೂ ನಿಗದಿಪಡಿಸಿಲ್ಲ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.