*ಇದು ದೇಶದ ಹಲವು ಇಲಾಖೆಗಳ ವಾರ್ಷಿಕ ಬಜೆಟ್‌ಗಿಂತಲೂ ಹೆಚ್ಚು*ಷೇರುಪೇಟ್ಟೆಪ್ರವೇಶಕ್ಕೆ ಸೆಬಿಗೆ ಸಲ್ಲಿಸಿದ ಮಾಹಿತಿಯಲ್ಲಿ ಈ ಅಂಶ*10 ವರ್ಷದ ಬಳಿಕವೂ ಕ್ಲೇಮ್‌ ಮಾಡದಿದ್ರೆ ಹಿರಿಯರ ನಿಧಿಗೆ ಹಣ ವರ್ಗ

ನವದೆಹಲಿ (ಫೆ. 17): ದೇಶದ ಸರ್ಕಾರಿ ಸ್ವಾಮ್ಯದ ಅತಿದೊಡ್ಡ ವಿಮಾ ಸಂಸ್ಥೆಯಾದ ಜೀವವಿಮಾ ಕಂಪನಿ (LIC) ಬಳಿ ಇದುವರೆಗೆ 21539 ಕೋಟಿ ರು. ಗ್ರಾಹಕರು ಕ್ಲೇಮ್‌ ಮಾಡಿಕೊಳ್ಳದ ಹಣ (Unclaimed) ಉಳಿದುಕೊಂಡಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಈ ಹಣ ಭಾರತ ಸರ್ಕಾರದ ಹಲವು ಸಚಿವಾಲಯಗಳ ವಾರ್ಷಿಕ ಬಜೆಟ್‌ ಗಾತ್ರಕ್ಕಿಂತಲೂ ಹೆಚ್ಚು ಎನ್ನಲಾಗಿದೆ. ಎಲ್‌ಐಸಿ ಸಂಸ್ಥೆ ಷೇರು ಮಾರುಕಟ್ಟೆಪ್ರವೇಶಕ್ಕಾಗಿ (Share Market) ತನ್ನ ಎಲ್ಲಾ ವಹಿವಾಟುಗಳ ಮಾಹಿತಿಯನ್ನು ಷೇರುಮಾರುಕಟ್ಟೆನಿಯಂತ್ರಕ ಸಂಸ್ಥೆ ಸೆಬಿಗೆ ನೀಡಿದೆ. ಇದರಲ್ಲಿ ಈ ಅಂಶ ಉಲ್ಲೇಖಿಸಿದೆ.

2019ರಲ್ಲಿ ಎಲ್‌ಐಸಿಯ ಅನ್‌ಕ್ಲೇಮ್‌ ಮೊತ್ತ 13,843.70 ಕೋಟಿ ರು.ನಷ್ಟಿತ್ತು. 2020ರ ಮಾಚ್‌ರ್‍ನಲ್ಲಿ ಅದು 16,052.65 ಕೋಟಿ ರು.ಗೆ 2021ರ ಮಾಚ್‌ರ್‍ ವೇಳೆಗೆ 18495 ಕೋಟಿ ರು.ಗೆ ಜಿಗಿತವಾಗಿತ್ತು. ಇದೀಗ 2021ರ ಸೆಪ್ಟೆಂಬರ್‌ ವೇಳೆಗೆ 21,539 ಕೋಟಿ ರು.ಗೆ ಏರಿದೆ.

ಇದನ್ನೂ ಓದಿ: LIC IPO: ಎಲ್ ಐಸಿ ಪಾಲಿಸಿದಾರರು ಐಪಿಒನಲ್ಲಿ ಪಾಲ್ಗೊಳ್ಳಲು ತಪ್ಪದೇ ಈ ಒಂದು ಕೆಲ್ಸ ಮಾಡ್ಬೇಕು!

ನಾಗರಿಕ ವಿಮಾನಯಾನ ಸಚಿವಾಲಯದ ವಾರ್ಷಿಕ ಬಜೆಟ್‌ (10,667 ಕೋಟಿ ರು.), ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ (14,300 ಕೋಟಿ ರು.) ಹಾಗೂ ವಿದೇಶಾಂಗ ಸಚಿವಾಲಯ 17250 ಕೋಟಿ ರು. ಆಗಿದೆ. ಹೀಗಾಗಿ ಅನ್‌ಕ್ಲೇಮ್‌ ಹಣ ಬಜೆಟ್‌ ಮೊತ್ತಕ್ಕಿಂತಲೂ ಹೆಚ್ಚಾಗಿದೆ.

ಎಲ್ಲಾ ಜೀವ ವಿಮಾ ಕಂಪನಿಗಳು ತಮ್ಮ ವಿಮೆದಾರರ 1000 ರು. ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಅನ್‌ಕ್ಲೇಮ್‌ ಹಣದ ಮಾಹಿತಿಯನ್ನು ವೆಬ್‌ಸೈಟ್‌ ಮೂಲಕ ಬಹಿರಂಗಪಡಿಸಬೇಕು. ಅಲ್ಲದೆ ತಮಗೆ ಬರಬೇಕಿರುವ ಹಣದ ಮಾಹಿತಿಯನ್ನು ಫಲಾನುಭವಿಗಳು ಮತ್ತು ಪಾಲಿಸಿದಾರರಿಗೆ ಒದಗಿಸಬೇಕು. ಅಲ್ಲದೆ 10 ವರ್ಷಗಳ ಬಳಿಕವೂ ಕ್ಲೇಮ್‌ ಮಾಡದಿದ್ದರೆ, ಈ ಹಣ ಹಿರಿಯ ನಾಗರಿಕರ ಕಲ್ಯಾಣ ನಿಧಿಗೆ ಕಡ್ಡಾಯವಾಗಿ ವರ್ಗಾವಣೆಯಾಗಲಿದೆ.

ಇದನ್ನೂ ಓದಿ:LIC Kanyadan Policy : ಮಗಳ ಮದುವೆ ಚಿಂತೆ ಬಿಡ್ಬಿಡಿ,ಇಲ್ಲಿ ಹೂಡಿಕೆ ಮಾಡಿ

ನಿಮ್ಮ Unclaimed ಎಲ್‌ಐಸಿ ಮೊತ್ತವನ್ನು ಪರಿಶೀಲಿಸುವುದು ಹೇಗೆ?

*ಪ್ರತಿ ವಿಮಾದಾರರಂತೆ, ಎಲ್‌ಐಸಿ ಕೂಡ ಕಾರ್ಯನಿರ್ವಹಣೆಯನ್ನು ಹೊಂದಿದೆ, ಇದು ಪಾಲಿಸಿದಾರರು ತಮ್ಮ ಅನ್‌ಕ್ಲೇಮಡ್ ಮೊತ್ತವನ್ನು ಪರಿಶೀಲಿಸಲು ಅನುವು ಮಾಡಿಕೊಡುತ್ತದೆ.

*ಎಲ್‌ಐಸಿ ವೆಬ್‌ಸೈಟ್ licindia.in ಗೆ ಲಾಗ್ ಇನ್ ಮಾಡುವುದು ಮೊದಲ ಹಂತವಾಗಿದೆ. ಬಳಕೆದಾರರು ನಂತರ ಪುಟದ ಕೆಳಭಾಗಕ್ಕೆ ಸ್ಕ್ರಾಲ್ ಮಾಡಬೇಕು ಮತ್ತು ಅನ್‌ಕ್ಲೈಮ್ಡ್ ಪಾಲಿಸಿ ಡ್ಯೂಸ್ ಲಿಂಕನ್ನು ಕ್ಲಿಕ್ ಮಾಡಬೇಕು.

*ಪಾಲಿಸಿದಾರರು LIC ಪಾಲಿಸಿ ಸಂಖ್ಯೆ, ಪಾಲಿಸಿದಾರರ ಹೆಸರು, ಹುಟ್ಟಿದ ದಿನಾಂಕ ಮತ್ತು ಪ್ಯಾನ್ ಸಂಖ್ಯೆಯಂತಹ ವಿವರಗಳನ್ನು ಭರ್ತಿ ಮಾಡಬೇಕಾದ ಪುಟವನ್ನು ಇದು ತೆರೆಯುತ್ತದೆ.‌

*ಸಲ್ಲಿಸು ಕ್ಲಿಕ್ ಮಾಡಿದ ನಂತರ, ವಿವರಗಳನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ

ಪಾಲಿಸಿದಾರರಿಗೆ, ಸಿಬ್ಬಂದಿಗೆ ಎಷ್ಟು ಷೇರು ಮೀಸಲಿಡಲಾಗಿದೆ?: ಎಲ್ಐಸಿ ಐಪಿಒನಲ್ಲಿ ಎಲ್ಐಸಿ ಪಾಲಿಸಿದಾರರು (LIC Policyholders) ಹಾಗೂ ಸಿಬ್ಬಂದಿಗೆ ಆದ್ಯತೆ ನೀಡಲು ತೀರ್ಮಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಐಸಿ ಪಾಲಿಸಿದಾರರಿಗೆ ಶೇ.10 ಹಾಗೂ ಎಲ್ಐಸಿ ಸಿಬ್ಬಂದಿಗೆ ಶೇ.5 ಷೇರುಗಳನ್ನು ಮೀಸಲಿಡಲಾಗಿದೆ. ಇನ್ನು ಇವರಿಗೆ ಡಿಸ್ಕೌಂಟ್ ನೀಡೋ ಸಾಧ್ಯತೆಯೂ ಇದೆ. ಆದ್ರೆ ಡಿಸ್ಕೌಂಟ್ ಪ್ರಮಾಣ ಎಷ್ಟಿರಲಿದೆ ಎಂಬ ಮಾಹಿತಿ ಹರಾಜಿಗೆ ಎರಡು ದಿನ ಮುನ್ನ ಸಿಗೋ ಸಾಧ್ಯತೆಯಿದೆ. 

ಷೇರು ಖರೀದಿಸೋದು ಹೇಗೆ?: ಎಲ್ಐಸಿ ಪಾಲಿಸಿದಾರರು ಎಲ್ಐಸಿ ಐಪಿಒನಲ್ಲಿ ಪಾಲ್ಗೊಳ್ಳಲು ಡಿಮ್ಯಾಟ್ ಖಾತೆ ಹೊಂದಿರೋದು ಕಡ್ಡಾಯ. ಡಿ ಮ್ಯಾಟ್ ಖಾತೆ ಮೂಲಕ ಮಾತ್ರ ಷೇರು ಖರೀದಿಗೆ ಅವಕಾಶವಿದೆ. ಇನ್ನು ಐಪಿಒದಲ್ಲಿ ಕನಿಷ್ಠ ಇಷ್ಟೇ ಷೇರುಗಳನ್ನು ಖರೀದಿಸಬೇಕೆಂಬ ಮಿತಿಯಿರುತ್ತದೆ. ಎಲ್ ಐಸಿ ಪಾಲಿಸಿದಾರರು ಪಾಲಿಸಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡೋದು ಕಡ್ಡಾಯ. ಹೀಗೆ ಮಾಡಿದ್ರೆ ಮಾತ್ರ ಪಾಲಿಸಿದಾರರಿಗೆ ಐಪಿಒ ಡಿಸ್ಕೌಂಟ್ ಆಫರ್ ಪಡೆಯಲು ಸಾಧ್ಯವಾಗುತ್ತದೆ.