
ಬೆಂಗಳೂರು[ಸೆ.30]: ಸ್ಪೇಸ್ ಬೇಸಿಕ್ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಸಹ ಸಂಸ್ಥಾಪಕಿಯಾಗಿರುವ ಯುವ ಉದ್ಯಮಿ ಮಾಧವಿ ಶಂಕರ್ (29) ವಿಶ್ವ ಸಂಸ್ಥೆಯಲ್ಲಿ ಭಾಷಣ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಯುವ ಉತ್ಸಾಹಿ ಉದ್ಯಮಿಯಾಗಿರುವ ಮಾಧವಿ ಶಂಕರ್ ಗೌರವ ಡಾಕ್ಟರೇಟ್ ಪ್ರಶಸ್ತಿ ಪುರಸ್ಕೃತೆಯೂ ಹೌದು. ಯುನೈಟೆಡ್ ನೇಷನ್ಸ್‌ನ ಪ್ರಧಾನ ಕಚೇರಿಯಲ್ಲಿ ಸೆ.27ರಂದು ನಡೆದ ‘1ಎಂ-2030’ ಸಂವಾದ ಕಾರ್ಯಕ್ರಮದಲ್ಲಿ ಭಾರತದ ಪರ ಯುವ ಉದ್ಯಮಿಯಾಗಿ ಪ್ರತಿನಿಧಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ತಂತ್ರಜ್ಞಾನ ಹಾಗೂ ಉದ್ಯಮ ಕ್ಷೇತ್ರದಲ್ಲಿ ವಿಶಿಷ್ಟಸಾಧನೆ ತೋರಿರುವ ಭಾರತದ 60 ಮಂದಿ ಮಹಿಳೆಯರ ಪೈಕಿ ಮಾಧವಿ ಶಂಕರ್ ಕೂಡ ಒಬ್ಬರು. ಅವರ ಸ್ಪೇಸ್ ಬೇಸಿಕ್ ಸಂಸ್ಥೆ ಭಾರತ ಸರ್ಕಾರ ಹಾಗೂ ಯುನೈಟೆಡ್ ನೇಷನ್ಸ್‌ನಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಯುಎನ್ ಪ್ರಧಾನ ಕಚೇರಿ ಜಿನೆವಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಔದ್ಯಮಿಕ ಕ್ಷೇತ್ರದ ಪ್ಯಾನೆಲಿಸ್ಟ್‌ಗಳ ಮುಂದೆ ತಮ್ಮ ಚಿಂತನೆ ಹಾಗೂ ಉದ್ಯಮ ಕ್ಷೇತ್ರದಲ್ಲಿ ಆಗಬೇಕಿರುವ ಬದಲಾವಣೆಗಳ ಬಗ್ಗೆ ವಿಚಾರ ಮಂಡಿಸಿದರು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.