
ಮಕ್ಕಳಾದ್ಮೇಲೆ ಮತ್ತೆ ವೃತ್ತಿ ಜೀವನಕ್ಕೆ ವಾಪಸ್ ಆಗೋದು ಮಹಿಳೆಯರಿಗೆ ಬಹಳ ಕಷ್ಟ. ಮಕ್ಕಳು, ಮನೆ ಕೆಲ್ಸದಲ್ಲಿ ಬ್ಯುಸಿ ಇರುವ ಮಹಿಳೆಯರಿಗೆ ಮನೆಯಿಂದ ಹೊರಗೆ ಹೋಗಿ ಕೆಲ್ಸ ಮಾಡೋದು ಸವಾಲು. ಮತ್ತೆ ಕೆಲ್ಸಕ್ಕೆ ಮಾಡ್ತೇನೆ ಎನ್ನುವ ಮಹಿಳೆಯರ ಸಂಖ್ಯೆ ಹೆಚ್ಚಿದೆ ಆದ್ರೆ ಧೈರ್ಯ ಮಾಡಿ ಕೆಲ್ಸಕ್ಕೆ ಧುಮುಕುವವರ ಸಂಖ್ಯೆ ಬಹಳ ಕಡಿಮೆ. ಅದ್ರಲ್ಲೂ ಸ್ವಂತ ಉದ್ಯೋಗ ಎಂದಾಗ ಮನಸ್ಸು ಹೆದರುತ್ತೆ. ಇತ್ತೀಚಿನ ದಿನಗಳಲ್ಲಿ ಸ್ವಂತ ಬ್ಯುಸಿನೆಸ್ (Business) ಮಾಡುವವರ ಸಂಖ್ಯೆ ಹೆಚ್ಚಾಗ್ತಿದೆ. ಅದ್ರಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಅನ್ನೋದು ಸಂತೋಷದ ವಿಷ್ಯ. ಮನೆಯಲ್ಲಿ ಖಾಲಿ ಕುಳಿತುಕೊಳ್ಳುವ ಬದಲು ಏನಾದ್ರೂ ಮಾಡ್ಬೇಕು ಎನ್ನುವ ಮಹಿಳೆಯರಿಗೆ ಮಯೂರಿ ನಿತಿನ್ ಕಾಳೆ ಸ್ಫೂರ್ತಿ. ಸಣ್ಣದಾಗಿ ಕೆಲ್ಸ ಶುರು ಮಾಡಿದ್ರೂ ಧೈರ್ಯಗೆಡದೆ, ಹಗಲಿರುಳು ದುಡಿದು ಈಗ ಯಶಸ್ಸು ಕಂಡಿದ್ದಾರೆ.
ಬೀದಿ ಬದಿ ಆಹಾರಕ್ಕೆ ಈಗ ಬೇಡಿಕೆ ಹೆಚ್ಚು. ಫಾಸ್ಟ್ ಫುಡ್, ಮೊಮೊಸ್ ಮಾರಾಟ ಮಾಡಿ ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುವ ವ್ಯಾಪಾರಸ್ಥರಿದ್ದಾರೆ. ಜ್ಯೂಸ್ ಆರೋಗ್ಯಕ್ಕೆ ಒಳ್ಳೆಯದು. ಕೆಲ್ಸ ಚಿಕ್ಕದ್ದೆನ್ನಿಸಿದ್ರೂ ಅದ್ರಿಂದ ಗಳಿಕೆ ಹೆಚ್ಚು. ಆರೋಗ್ಯದ ದೃಷ್ಟಿಯಿಂದ ಜನರು ತಾಜಾ, ಶುಚಿಯಾದ ಜ್ಯೂಸ್ ನೀಡಿದ್ರೆ ಗ್ರಾಹಕರ ಸಂಖ್ಯೆ ಹೆಚ್ಚಾಗೋದ್ರಲ್ಲಿ ಅನುಮಾನ ಇಲ್ಲ. ನಾಸಿಕದ ಮಯೂರಿ ನಿತಿನ್ ಕಾಳೆ, ಜ್ಯೂಸ್ ಸೆಂಟರ್ ಶುರು ಮಾಡಿ ಯಶಸ್ಸು ಕಂಡಿದ್ದಾರೆ. ಐಟಿ ಕ್ಷೇತ್ರದಲ್ಲಿ ಕೆಲ್ಸ ಮಾಡಿದ್ದ ಮಯೂರಿ ನಿತಿನ್ ಕಾಳೆ, ಮಕ್ಕಳಾದ್ಮೇಲೆ ತಮ್ಮ ವೃತ್ತಿ ಬದಲಿಸಿದ್ರು.
ಬರೀ 10 ಸಾವಿರ ಹೂಡಿಕೆ ಮಾಡಿದ್ದವರಿಗೆ ಇಂದು 19 ಕೋಟಿ ಜಾಕ್‌ಪಾಟ್, ಜನರನ್ನು ಕೋಟ್ಯಧಿಪತಿ ಮಾಡಿದ 10 ಷೇರುಗಳು!
ಎಂಜಿನಿಯರಿಂಗ್ ಪದವಿದರೆಯಾಗಿರುವ ಮಯೂರಿ ನಿತಿನ್ ಕಾಳೆಗೆ ಒಂದು ಕಾಲದಲ್ಲಿ 5 ಲಕ್ಷದ ಪ್ಯಾಕೇಜ್ ಜಾಬ್ ಆಫರ್ ಬಂದಿತ್ತು. ಮದುವೆಯಾಗಿ, ಮಕ್ಕಳಾದ್ಮೇಲೆ ಮಯೂರಿ ನಿತಿನ್ ಕಾಳೆ ಮತ್ತೆ ಕೆಲಸಕ್ಕೆ ಹೋಗುವ ನಿರ್ಧಾರ ತೆಗೆದುಕೊಳ್ಳಲಿಲ್ಲ. ಉತ್ತಮ ಆಫರ್ ಬಂದ್ರೂ ಉದ್ಯೋಗ ನಿರಾಕರಿಸಿದ ಮಯೂರಿ ನಿತಿನ್ ಕಾಳೆ ಹೋರಾಟದ ಜೀವನ ಆಯ್ದುಕೊಂಡ್ರು. ಸ್ವಂತ ಬ್ಯುಸಿನೆಸ್ ಮಾಡುವ ಆಸೆ ಹೊಂದಿದ್ದ ಮಯೂರಿ ನಿತಿನ್ ಕಾಳೆ ಎಂದೂ ಧೈರ್ಯಗೆಡಲಿಲ್ಲ. ಹೋರಾಟ ನಿಮ್ಮನ್ನು ತಡೆಯೋದಿಲ್ಲ. ನಿರಂತರ ಹೋರಾಟ ನಿಮ್ಮ ಯಶಸ್ಸಿಗೆ ಕಾರಣವಾಗುತ್ತದೆ. ಆದ್ರೆ ಮನಸ್ಸಿನಲ್ಲಿರುವ ಭಯವೇ ನಿಮ್ಮ ಸೋಲಿಗೆ ಕಾರಣ ಎಂಬುದನ್ನು ಬಲವಾಗಿ ನಂಬಿದ್ದ ಅವರು ಹೋರಾಟ ಮುಂದುವರೆಸಿದ್ದರು. ಬೆಳಗಿನ ಜಾವದಿಂದ ತಮ್ಮ ಕೆಲ್ಸ ಶುರು ಮಾಡುವ ಅವರು ತಡರಾತ್ರಿಯವರೆಗೆ ಗ್ರಾಹಕರಿಗೆ ಜ್ಯೂಸ್ ನೀಡ್ತಾರೆ.
Success Story: ಮೀಡಿಯಾ ಬಿಟ್ಟು ಹಿಟ್ಟಿನ ವ್ಯಾಪಾರ ಪ್ರಾರಂಭಿಸಿ ಕೋಟ್ಯಾಧಿಪತಿಯಾದರು
ಜ್ಯೂಸ್ ಬಗ್ಗೆ ಯಾವುದೇ ಅನುಭವಿಲ್ಲದ ಮಯೂರಿ ನಿತಿನ್ ಕಾಳೆ, ಆತ್ಮವಿಶ್ವಾಸದಲ್ಲಿಯೇ ವ್ಯಾಪಾರ ಶುರು ಮಾಡಿದ್ದರು. ಫೆಬ್ರವರಿ 2024ರಲ್ಲಿ ಜ್ಯೂಸ್ ಸೆಂಟರ್ ಶುರು ಮಾಡಿದ್ದರು. ಶೀಘ್ರವೇ ಜವಾಬ್ದಾರಿ ಮಯೂರಿ ನಿತಿನ್ ಕಾಳೆ ಮೈಮೇಲೆ ಬಿತ್ತು. ಅಂಗಡಿ, ಮನೆ, ಮಗು, ಗ್ರಾಹಕರು, ಸಾಮಗ್ರಿಗಳ ಎಲ್ಲ ಜವಾಬ್ದಾರಿ ಮಯೂರಿ ನಿತಿನ್ ಕಾಳೆ ಮೇಲೆ ಬಿತ್ತು. ಸಾಕಷ್ಟು ದಣಿದಿದ್ದರೂ ಸೋಲದ ಮಯೂರಿ ನಿತಿನ್ ಕಾಳೆ ತಮ್ಮ ಕೆಲ್ಸ ಬಿಡಲಿಲ್ಲ. ಮಯೂರಿ ನಿತಿನ್ ಕಾಳೆ ಜ್ಯೂಸ್ ಸೆಂಟರ್ ಗೆ ಬಂದ ಗ್ರಾಹಕರಿಗೆ ಜ್ಯೂಸ್ ಮಾತ್ರ ಇಷ್ಟವಾಗ್ಲಿಲ್ಲ. ಮಯೂರಿ ನಿತಿನ್ ಕಾಳೆ ಅವರ ಆತ್ಮವಿಶ್ವಾಸ, ಗುಣಮಟ್ಟ ಅವರನ್ನು ಮತ್ತೆ ಮತ್ತೆ ಬರುವಂತೆ ಮಾಡಿತ್ತು. ನಿಧಾನವಾಗಿ ಮಯೂರಿ ನಿತಿನ್ ಕಾಳೆ ಜ್ಯೂಸ್ ಸೆಂಟರ್ ನಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಯ್ತು. ತಿಂಗಳಿಗೆ 80 ಸಾವಿರಕ್ಕೂ ಹೆಚ್ಚು ಸಂಪಾದನೆ ಮಾಡ್ತಿದ್ದಾರೆ ಮಯೂರಿ ನಿತಿನ್ ಕಾಳೆ. ಬ್ಯುಸಿನೆಸ್ ಶುರು ಮಾಡಲು ಅನುಭವಕ್ಕಿಂತ ಧೈರ್ಯ ಮುಖ್ಯ ಎಂಬ ನಂಬಿಕೆಯಲ್ಲೇ ನಡೆಯುತ್ತಿರುವ ಮಯೂರಿ ನಿತಿನ್ ಕಾಳೆ ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.