ಹಬ್ಬದ ಸೀಜನ್‌ನಲ್ಲಿ Amazonನ ಭರ್ಜರಿ ಆಫರ್, ಶಾಪಿಂಗ್ ಮಾಡಿದ 1 ತಿಂಗಳ ಬಳಿಕ ಹಣ ಪಾವತಿಸಿ!

By Suvarna NewsFirst Published Nov 10, 2020, 11:08 AM IST
Highlights

ದೀಪಾವಳಿಯ ಹಬ್ಬದ ವಾತಾವರಣ ಎಲ್ಲೆಲ್ಲೂ ಮೂಡಿದೆ| ಕಂಪನಿಗಳೂ ಅನೇಕ ಬಗೆಯ ಆಫರ್| ಅಮೆಜಾನ್ ಕೂಡಾ ಬೈ ನೌ ಪೇ ಲೇಟರ್ ಸ್ಕೀಮ್ ಆರಂಭ

ನವದೆಹಲಿ(ನ.10): ದೀಪಾವಳಿಯ ಹಬ್ಬದ ವಾತಾವರಣ ಎಲ್ಲೆಲ್ಲೂ ಮೂಡಿದೆ. ಜನರು ಕೂಡಾ ಈ ಹಬ್ಬದ ಸಂದರ್ಭದಲ್ಲಿ ಭರ್ಜರಿಯಾಗಿ ಖರೀದಿಸುತ್ತಾರೆ. ಹೀಗಿರುವಾಗ ಕಂಪನಿಗಳೂ ಅನೇಕ ಬಗೆಯ ಆಫರ್ ಘೋಷಿಸಿವೆ. ಇಂತಹ ಸಂದರ್ಭದಲ್ಲಿ ದೇಶದ ಅತಿ ದೊಡ್ಡ ಇ- ಕಾಮರ್ಸ್ ಕಂಪನಿ ಅಮೆಜಾನ್ ಕೂಡಾ ಬೈ ನೌ ಪೇ ಲೇಟರ್ ಸ್ಕೀಮ್ ಆರಂಭಿಸಿದೆ. ಕಂಒಪನಿ ಈ ಸೇವೆಯ ಹೆಸರನ್ನು ಅಮೆಜಾನ್ ಪೇ ಲೇಟರ್ ಎಂದು ಇರಿಸಿದೆ. ಈ ಸೇವೆಯಡಿ ಕಂಪನಿಯು ಬಳಕೆದಾರರಿಗೆ ಕ್ರೆಡಿಟ್ ಲಿಮಿಟ್ ಕೂಡಾ ನೀಡುತ್ತಿದೆ. ಬಳಕೆದಾರರು ಈ ಕ್ರೆಡಿಟ್ ಲಿಮಿಟ್ ಒಳಗೆ ಖರ್ಚು ಮಾಡಬಹುದು ಹಾಗೂ ಪೇಮೆಂಟ್ ಮುಂದಿನ ತಿಂಗಳು ಪಾವತಿಸಬಹುದು.

ಎಲ್ಲಿ ಇದನ್ನು ಬಹಳಸಬಹುದು?

ಅಮೆಜಾನ್ ಪೇ ಲೇಟರ್ ಸರ್ವಿಸ್‌ನ್ನು ಅಮೆಜಾನ್‌ನ ಅಧಿಕೃತ ವೆನ್‌ಸೈಟ್ ಅಥವಾ ಅಮೆಜಾನ್ ಆಪ್‌ನಲ್ಲಷ್ಟೇ ಬಳಸಬಹುದಾಗಿದೆ. ಇದರ ಅನ್ವಯ ದಿನ ನಿತ್ಯದ ವಸ್ತುಗಳಿಂದ ಹಿಡಿದು ಮನೆಗೆ ಉಪಯೋಗಿಸುವ ವಸ್ತುಗಳು, ಇಲೆಕ್ಟ್ರಾನಿಕ್ ವಸ್ತುಗಳು, ದಿನಸಿ ವಸ್ತುಗಳನ್ನು ಖರೀದಿಸಬಹುದಾಗಿದೆ. ಇದನ್ನು ಹೊರತುಪಡಿಸಿ ವಿದ್ಯುತ್ ಬಿಲ್ ಪಾವತಿ, ಮೊಬೈಲ್ ಹಾಗೂ ಡಿಟಿಎಚ್ ರಿಚಾರ್ಜ್ ಕೂಡಾ ಮಾಡಬಹುದಾಗಿದೆ. ಆದರೆ ಈ ಸರ್ವಿಸ್‌ನ ಬಳಕೆ ಗಿಫ್ಟ್‌ ಕಾರ್ಡ್ ಖರೀದಿ ಅಥವಾ ಅಮೆಜಾನ್ ಪೇ ಬ್ಯಾಲೆನ್ಸ್‌ನಲ್ಲಿ ಹಣ ಹಾಕಲು ಬಳಸಲಾಗುವುದಿಲ್ಲ.

ಇಎಂಐ ಆಪ್ಶನ್ ಕೂಡಾ ಇದೆ

ಅಮೆಜಾನ್‌ನಲ್ಲಿ 3000 ರೂಗಿಂತ ಅಧಿಕ ಶಾಪಿಂಗ್ ಅಥವಾ ಬಿಲ್ ಪೇಮೆಂಟ್ ಮಾಡಿದರೆ ಅಮೆಜಾನ್ ಪೇ ಲೇಟರ್‌ನ ಕಸ್ಟಮರ್ ಅದನ್ನು ಇಎಂಐ ಆಗಿಯೂ ಬದಲಾಯಿಸಬಹುದು. ಇಎಂಐ ಗರಿಷ್ಠ ಹನ್ನೆರಡು ತಿಂಗಳು ಆಗಬಹುದು. ಅಮೆಜಾನ್ ಪೇ ಲೇಟರ್‌ನಲ್ಲಿ ಗ್ರಾಹಕರಿಗೆ ಅಟೋ ರೀ-ಪೇಮೆಂಟ್ ಆಯ್ಕೆಯೂ ಸಿಗುತ್ತದೆ. ಈ ಸ್ಕೀಂನಲ್ಲಿ ಒಂದೇ ಬಾರಿ ಹಣ ಪಾವತಿಸಿದರೆ ಹೆಚ್ಚುವರಿ ಹಣ ನೀಡಬೇಕಾಗಿಲ್ಲ.

ಆಕ್ಟಿವೇಟ್ ಮಾಡೋದು ಹೇಗೆ?

ಅಮೆಜಾಣ್ ಪೇ ಲೇಟರ್ ಆಕ್ಟಿವೇಟ್ ಮಾಡಲು ಸ್ಮಾರ್ಟ್‌ಪೋನ್‌ನಲ್ಲಿ ಅಮೆಜಾನ್‌ ಓಪನ್ ಮಾಡಿ ಅಮೆಜಾನ್ ಪೇ ಆಯ್ಕೆಗೆ ತೆರಳಿ ಅಲ್ಲಿ ತೋರಿಸುವ Amazon Pay Later ಕಗ್ಲಿಕ್ ಮಾಡಬೇಕು. ಇದಾದ ಬಳಿಕ Sign up in 60 seconds ಮೇಲೆ ಕ್ಲಿಕ್ ಮಾಡಿ. ತದ ನಂತರ PAN ಹಾಗೂ ಆಧಾರ್ ಸಂಖ್ಯೆ ನಮೂದಿಸಿ ಬಳಿಕ ಒಟಿಪಿ ಹಾಕಿ. ಇದಾದ ಕೂಡಲೇ ಈ ಸೇವೆ ಆರಂಭವಾಗುತ್ತದೆ. 

click me!