ಬಳಕೆದಾರರ ಗುರುತನ್ನು ಪರಿಶೀಲಿಸಿ ಟ್ವಿಟ್ಟರ್ ಕಂಪನಿ ಅಂಥವರಿಗೆ ಬ್ಲೂಟಿಕ್ ನೀಡುತ್ತದೆ. ಇದಕ್ಕಾಗಿ ಈವರೆಗೆ ಮಾಸಿಕ ಅಂದಾಜು 413 ರೂ. ಪಾವತಿಸಬೇಕಿತ್ತು. ಅದನ್ನು ಇದೀಗ ಅಂದಾಜು 1655 ರೂ. ಗೆ ಏರಿಕೆ ಮಾಡಲು ಎಲಾನ್ ಮಸ್ಕ್ ನಿರ್ಧರಿಸಿದ್ದಾರೆ.
ನವದೆಹಲಿ: ಜನಪ್ರಿಯ ಕಿರು ಸಂದೇಶ ತಾಣ ಟ್ವಿಟ್ಟರ್ (Twitter) ಅನ್ನು ಲಾಭದ ಹಾದಿಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಬ್ಲೂಟಿಕ್ (Blue Tick) ಚಂದಾದಾರರಿಗೆ ವಿಧಿಸುವ ವಾರ್ಷಿಕ ಶುಲ್ಕವನ್ನು 4 ಪಟ್ಟು ಹೆಚ್ಚಿಸಲು ಎಲಾನ್ ಮಸ್ಕ್ (Elon musk) ಮುಂದಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದು ಖಚಿತಪಟ್ಟಲ್ಲಿ ಟ್ವಿಟ್ಟರ್‌ನಲ್ಲಿ ವೆರಿಫೈಡ್ ಖಾತೆ (Verified Twitter Users) ಹೊಂದಿರುವವರು ವಾರ್ಷಿಕ ಅಂದಾಜು 20000 ರೂ. ಶುಲ್ಕ ತೆರಬೇಕಾಗಿ ಬರಲಿದೆ.
ಬಳಕೆದಾರರ ಗುರುತನ್ನು ಪರಿಶೀಲಿಸಿ ಟ್ವಿಟ್ಟರ್ ಕಂಪನಿ ಅಂಥವರಿಗೆ ಬ್ಲೂಟಿಕ್ ನೀಡುತ್ತದೆ. ಇದಕ್ಕಾಗಿ ಈವರೆಗೆ ಮಾಸಿಕ (Monthly) ಅಂದಾಜು 413 ರೂ. ಪಾವತಿಸಬೇಕಿತ್ತು. ಅದನ್ನು ಇದೀಗ ಅಂದಾಜು 1655 ರೂ. ಗೆ ಏರಿಕೆ ಮಾಡಲು ಎಲಾನ್ ಮಸ್ಕ್ ನಿರ್ಧರಿಸಿದ್ದಾರೆ. ವೆರಿಫೈಡ್ ಬಳಕೆದಾರರು ಬ್ಲೂಟಿಕ್ ಪಡೆದ 90 ದಿನದಲ್ಲಿ ಚಂದಾದಾರರಾಗಬೇಕು (Subscribe). ಇಲ್ಲದೇ ಹೋದಲ್ಲಿ ಅವರ ಬ್ಲೂಟಿಕ್ ರದ್ದಾಗಲಿದೆ ಎನ್ನಲಾಗಿದೆ.
undefined
ಇದನ್ನು ಓದಿ: Twitter ಸ್ಥಾಪಕನಿಂದ ಶೀಘ್ರ ಹೊಸ App ಸ್ಥಾಪನೆ: ಎಲಾನ್ ಮಸ್ಕ್‌ಗೆ ಸಡ್ಡು?
ಈ ನಡುವೆ ಈ ಯೋಜನೆ ಜಾರಿಗೆ ಕಂಪನಿ ಅಧಿಕಾರಿಗಳಿಗೆ ಎಲಾನ್ ಮಸ್ಕ್ ಒಂದು ವಾರದ ಸಮಯ ನೀಡಿದ್ದು, ಅಷ್ಟರಲ್ಲಿ ಜಾರಿಯಾಗದೇ ಹೋದಲ್ಲಿ, ಈ ಕೆಲಸಕ್ಕೆ ನಿಯೋಜನೆಗೊಂಡವರನ್ನು ತೆಗೆದು ಹಾಕುವ ಎಚ್ಚರಿಕೆಯನ್ನೂ ನೀಡಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಕೇಂದ್ರ ಐಟಿ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಪರಿಶೀಲನಾ ಬ್ಯಾಡ್ಜ್‌ಗಾಗಿ ಪ್ರತಿ ತಿಂಗಳು 20 ಡಾಲರ್ ಪಾವತಿಸುವ ಬಗ್ಗೆ ವದಂತಿಗಳು ಕೇಳಿ ಬರುತ್ತಿದೆಯಷ್ಟೇ. ಈ ಬಗ್ಗೆ ಟ್ವಿಟ್ಟರ್ ಇನ್ನು ಖಚಿತ ಪಡಿಸಿಲ್ಲ. ಟ್ವಿಟ್ಟರ್ ಈ ಬಗ್ಗೆ ತನ್ನ ನಿಲುವು ಸ್ಪಷ್ಟಪಡಿಸಿದ ಬಳಿಕ ನಿರ್ಧರಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಟ್ವಿಟ್ಟರ್ ಸರಿಪಡಿಸುವ ಹೊಣೆ ರಾಮಕೃಷ್ಣನ್‌ಗೆ ವಹಿಸಿದ ಎಲಾನ್ ಮಸ್ಕ್
ವಾಷಿಂಗ್ಟನ್: ಟ್ವಿಟ್ಟರ್ ಅನ್ನು ಖರೀದಿಸಿದ ಬಳಿಕ ಅದನ್ನು ತಮ್ಮ ಇಷ್ಟಕ್ಕೆ ತಕ್ಕಂತೆ ಬದಲಾಯಿಸಲು ಹೊರಟಿರುವ ಎಲಾನ್ ಮಸ್ಕ್, ಈ ಹೊಣೆಯನ್ನು ಭಾರತೀಯ ಮೂಲದ ಖ್ಯಾತನಾಮ ಟೆಕ್ಕಿ, ಹೂಡಿಕೆದಾರ ಶ್ರೀರಾಮ ಕೃಷ್ಣನ್ ಅವರಿಗೆ ವಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಟ್ವಿಟ್ಟರ್ ಹೇಗಿರಬೇಕು ಎಂಬ ಸಲಹೆಯನ್ನು ಎಲಾನ್ ಮಸ್ಕ್ ಮುಂದಿಟ್ಟಿದ್ದು, ಅದನ್ನು ಜಾರಿಗೆ ತರುವ ಕೆಲಸ ಮಾಡುತ್ತಿರುವುದಾಗಿ ಸ್ವತಃ ಶೀರಾಮ ಕೃಷ್ಣನ್ ಟ್ವಿಟ್ಟರ್‌ನಲ್ಲಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Elon Musk: ಟ್ವಿಟರ್‌ಗೆ ಎಲಾನ್ ಮಸ್ಕ್ ಬಾಸ್: ಪರಾಗ್ ಅಗರವಾಲ್ ಸೇರಿ ಹಲವು ಉನ್ನತ ಅಧಿಕಾರಿಗಳು ವಜಾ?
ಹೀಗಾಗಿ ಮುಂಬರುವ ದಿನಗಳಲ್ಲಿ ಶ್ರೀರಾಮ್ ಕೃಷ್ಣನ್ ಅವರನ್ನೇ ಕಂಪನಿಯ ನೂತನ ಸಿಇಒ ಆಗಿ ನೇಮಿಸಿದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೇ ಭಾರತೀಯ ಮೂಲದ ಸಿಇಒ ಪರಾಗ್ ಅಗರ್‌ವಾಲ್ ಅವರನ್ನುಎಲಾನ್ ಮಸ್ಕ್ ವಜಾಗೊಳಿಸಿದ್ದರು. ಚೆನ್ನೈ ಮೂಲದ ಕೃಷ್ಣನ್ ಟ್ವಿಟ್ಟರ್, ಮೆಟಾ, ಮೈಕ್ರೋಸಾಫ್ಟ್, ಸ್ನ್ಯಾಪ್‌ಚಾಟ್ ಮೊದಲಾದ ಕಂಪನಿಗಳಲ್ಲಿ ಉನ್ನತ ಹುದ್ದೆ ನಿರ್ವಹಿಸಿದ ಅನುಭವ ಹೊಂದಿದ್ದಾರೆ.
ಇದನ್ನೂ ಓದಿ: ಸಿಂಕ್ ಹಿಡಿದು ಟ್ವಿಟ್ಟರ್ ಕಚೇರಿಗೆ ಭೇಟಿ ನೀಡಿದ Elon Musk..!