ಶೇ.5ಕ್ಕಿಂತ ಕಡಿಮೆ ಸ್ಪ್ಯಾಮ್ ಖಾತೆ ಇರೋದಕ್ಕೆ ಸಾಕ್ಷ್ಯ ಒದಗಿಸೋ ತನಕ Twitter ಖರೀದಿ ಒಪ್ಪಂದಕ್ಕೆ ಬ್ರೇಕ್: ಎಲಾನ್ ಮಸ್ಕ್

By Suvarna NewsFirst Published May 17, 2022, 8:27 PM IST
Highlights

*44 ಬಿಲಿಯನ್ ಡಾಲರ್ ಗೆ ಟ್ವಿಟರ್ ಕಂಪನಿ ಖರೀದಿಸಲು ಒಪ್ಪಂದ ಮಾಡಿಕೊಂಡಿರುವ ಮಸ್ಕ್
*ಸ್ಪ್ಯಾಮ್ ಖಾತೆಗಳ ಪ್ರಮಾಣ ಶೇ.5ಕ್ಕಿಂತ ಕಡಿಮೆ ಎಂದಿರುವ ಟ್ವಿಟರ್ ಸಿಇಒ ಪರಾಗ್ ಅಗರ್ ವಾಲ್ 
*ಒಪ್ಪಂದಕ್ಕಿಂತ ಕಡಿಮೆ ಬೆಲೆಗೆ ಟ್ವಿಟರ್ ಖರೀದಿಸಲು ಮಸ್ಕ್ ಯತ್ನಿಸುತ್ತಿದ್ದಾರೆ ಎಂಬ ಊಹೆ
 

Business Desk: ಟ್ವಿಟರ್  (Twitter) ಸ್ಪ್ಯಾಮ್ ಖಾತೆಗಳ (spam bots account) ಸಂಖ್ಯೆ ಒಟ್ಟು ಬಳಕೆದಾರರ ಶೇ.5ಕ್ಕಿಂತ ಕಡಿಮೆಯಿರುವುದಕ್ಕೆ ಟ್ವಿಟರ್ ಇಂಕ್ ಸಾಕ್ಷ್ಯ ಒದಗಿಸುವ ತನಕ 44 ಬಿಲಿಯನ್ ಡಾಲರ್ ಖರೀದಿ ಒಪ್ಪಂದವನ್ನು ಮುಂದುವರಿಸುವುದಿಲ್ಲ ಎಂದು  ಎಲಾನ್ ಮಸ್ಕ್ (Elon Musk) ಮಂಗಳವಾರ (ಮೇ 17) ತಿಳಿಸಿದ್ದಾರೆ. ಟ್ವಿಟರ್ ಕಂಪನಿಯನ್ನು ನಿಗದಿಗಿಂತ ಕಡಿಮೆ ಬೆಲೆಗೆ ಕೇಳುವ ಸಾಧ್ಯತೆಯಿದೆ ಎಂದು ತಿಳಿಸಿದ ಗಂಟೆಗಳ ಬಳಿಕ ಮಸ್ಕ್ ಈ ಹೇಳಿಕೆ ನೀಡಿದ್ದಾರೆ.

'ಟ್ವಿಟರ್ ಮಾಹಿತಿಗಳ ನಿಖರತೆಯ ಆಧಾರದಲ್ಲಿ ನಾನು ಆಫರ್ ನೀಡಿದ್ದೆ. ಆದರೆ, ನಿನ್ನೆ ಟ್ವಿಟ್ಟರ್ ಸಿಇಒ ಶೇ.5ಕ್ಕಿಂತಲೂ ಕಡಿಮೆ  ಸ್ಪ್ಯಾಮ್ ಖಾತೆಗಳಿವೆ ಎಂಬುದಕ್ಕೆ ಸಾಕ್ಷ್ಯ ನೀಡಲು ಸಾರ್ವಜನಿಕವಾಗಿ ನಿರಾಕರಿಸಿದ್ದಾರೆ. ಹೀಗಾಗಿ ಅವರು ಈ ಮಾಹಿತಿ ನೀಡೋ ತನಕ ಈ ಒಪ್ಪಂದ ಮುಂದುವರಿಸಲು ಸಾಧ್ಯವಿಲ್ಲ' ಎಂದು ಮಸ್ಕ್ ಟ್ವೀಟ್ ಮುಖಾಂತರ ತಿಳಿಸಿದ್ದಾರೆ.

Latest Videos

Elon Musk:ಟ್ವಿಟರ್ ಒಪ್ಪಂದ ಯಶಸ್ವಿಯಾಗದಿದ್ರೆ ಚಿಂತೆ ಬೇಡ, ಆ ಹಣವನ್ನು ಭಾರತದಲ್ಲಿ ಹೂಡಿಕೆ ಮಾಡಿ; ಮಸ್ಕ್ ಗೆ ಪೂನಾವಾಲಾ ಸಲಹೆ

ಶೇ.5ಕ್ಕಿಂತ ಕಡಿಮೆ ಸ್ಪ್ಯಾಮ್ ಖಾತೆಗಳಿವೆ ಎಂಬ ಟ್ವಿಟರ್ ಸಿಇಒ ಪರಾಗ್ ಅಗರ್ ವಾಲ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿ ಎಲಾನ್ ಮಸ್ಕ್, ದೈತ್ಯ ಮೈಕ್ರೋಬ್ಲಾಗಿಂಗ್ ಸೈಟ್ ನಲ್ಲಿ ಕನಿಷ್ಠ ಶೇ.20ರಷ್ಟು ಸ್ಪ್ಯಾಮ್ ಖಾತೆಗಳನ್ನು ಹೊಂದಿದೆ ಎಂದು ಇತ್ತೀಚೆಗೆ ಹೇಳಿದ್ದರು. ಇನ್ನು ಸೋಮವಾರ ಮಿಯಾಮಿಯಲ್ಲಿ (Miami) ನಡೆದ ಆಲ್ ಇನ್ ಸಮಿತಿ 2022 (All-In Summit 2022) ಸಮ್ಮೇಳನದಲ್ಲಿ 'ಅವರು ಹೇಳೋದಕ್ಕಿಂತ ಪರಿಸ್ಥಿತಿ ಇನ್ನೂ ಕೆಟ್ಟದಿರುವಾಗ ನೀವು ಅದೇ ಬೆಲೆಯನ್ನು ಪಾವತಿಸಲು ಸಾಧ್ಯವಿಲ್ಲ' ಎಂದು ಮಸ್ಕ್ ಹೇಳಿದ್ದರು. 

ಟ್ವಿಟರ್ ಸಿಇಒ ಪರಾಗ್ ಅಗರವಾಲ್  ಸೋಮವಾರ (ಮೇ 16) ಕಂಪನಿಯು ಸ್ಪ್ಯಾಮ್ ಖಾತೆಗಳನ್ನು ನಿರ್ವಹಿಸುವ ಕುರಿತು ಸುದೀರ್ಘವಾದ ಥ್ರೆಡ್  ಪೋಸ್ಟ್ ಮಾಡಿದ್ದಾರೆ. ಕಳೆದ ನಾಲ್ಕು ತ್ರೈಮಾಸಿಕಗಳಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಸ್ಪ್ಯಾಮ್ ಖಾತೆಗಳು ಅಂದಾಜು 5% ಕ್ಕಿಂತ ಕಡಿಮೆ ಎಂದು ಅವರು ಟ್ವೀಟ್ ಮಾಡಿದ್ದರು. ಕಂಪನಿಯ ಕಾರ್ಯವಿಧಾನವನ್ನು ಸಮರ್ಥಿಸಿಕೊಂಡಿರುವ ಪರಾಗ್‌ ಅಗರ್‌ವಾಲ್‌ ಟ್ವೀಟ್‌ಗೆ ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್  ಪೂಪ್ ಎಮೋಜಿಯೊಂದಿಗೆ ಪ್ರತಿಕ್ರಿಯಿಸಿದ್ದರು. 

ಟ್ವಿಟರ್ ಅನ್ನು ಈ ಹಿಂದೆ ಒಪ್ಪಂದ ಮಾಡಿಕೊಂಡಿರುವುದಕ್ಕಿಂತ ಕಡಿಮೆ ಬೆಲೆಗೆ ಖರೀದಿಸಲು ಎಲಾನ್ ಮಸ್ಕ್ ಈ ರೀತಿಯ ತಂತ್ರಗಳನ್ನು ಹೂಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ಕಳೆದ ತಿಂಗಳು ಟ್ವಿಟರ್ ಅನ್ನು 44 ಬಿಲಿಯನ್ ಡಾಲರ್ ನಗದು ನೀಡಿ ಖರೀದಿಸುವ ಪ್ರಸ್ತಾಪ ಮಾಡಿದ್ದರು. ಸ್ವಾಧೀನ  ಪ್ರಕ್ರಿಯೆಗಳು ಕೂಡ ಪ್ರಗತಿಯಲ್ಲಿದ್ದು, ಡಿಸೆಂಬರ್ ವೇಳೆಗೆ ಟ್ವಿಟರ್ ಮಸ್ಕ್ ತೆಕ್ಕೆಗೆ ಸೇರಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಮಸ್ಕ್ ಟ್ವಿಟರ್ ಖರೀದಿ ಘೋಷಣೆ ಮಾಡುತ್ತಿದ್ದಂತೆ ಕಂಪನಿಯ ಷೇರುಗಳ ಬೆಲೆ ತಗ್ಗಿದೆ. 

Elon Musk Tips ಕಾರ್ಮಿಕರ ದಿನದಂದು ಸಂಪತ್ತು ಹೆಚ್ಚಿಸುವ ಟಿಪ್ಸ್ ನೀಡಿದ ವಿಶ್ವದ ನಂ.1 ಶ್ರೀಮಂತ ಮಸ್ಕ್!

ಎಲ್ಲ ಊಹೆಗಳ ನಡುವೆ ಟ್ವಿಟರ್ ಖರೀದಿಗೆ ಕಡಿಮೆ ಮೊತ್ತದ ಒಪ್ಪಂದ ಕೂಡ ಅಸಾಧ್ಯವೇನಲ್ಲ ಎಂಬ ಹೇಳಿಕೆ ನೀಡಿದ್ದಾರೆ ಕೂಡ. ಹೀಗಾಗಿ ಮಸ್ಕ್ ಟ್ವಿಟರ್ ಅನ್ನು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಬೆಲೆಗೆ ಖರೀದಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿ ಕಾಣಿಸುತ್ತಿದೆ.ಇನ್ನು ಎಲಾನ್ ಮಸ್ಕ್ ಸದಾ ಟ್ವಿಟರ್ ಸ್ಪ್ಯಾಮ್ ಖಾತೆಗಳ ವಿರುದ್ಧ ಧ್ವನಿ ಎತ್ತುತ್ತ ಬಂದಿದ್ದಾರೆ. ಟ್ವಿಟರ್ ನಲ್ಲಿ ಅತ್ಯಂತ ಕಿರಿಕಿರಿಯುಂಟು ಮಾಡುವ ಏಕೈಕ ಸಂಗತಿಯೆಂದ್ರೆ ಅದು ಸ್ಪ್ಯಾಮ್ ಖಾತೆಗಳು ಎಂದಿದ್ದರು. ಹೀಗಾಗಿ ಟ್ವಿಟರ್ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡು ಮಸ್ಕ್  ಆ ಕಂಪನಿಯ ಬಾಸ್ ಆದ ಬಳಿಕ ಮೊದಲು ಮಾಡುವ ಕೆಲಸವೆಂದ್ರೆ ಸ್ಪ್ಯಾಮ್ ಹಾಗೂ ನಕಲಿ ಖಾತೆಗಳನ್ನು ತೆಗೆಯುವುದು ಎಂದು ಭಾವಿಸಲಾಗಿತ್ತು. ಟ್ವಿಟರ್ ನಲ್ಲಿ ಎಲಾನ್ ಮಸ್ಕ್ ಅವರು ಸುಮಾರು ಶೇ.50ರಷ್ಟು ನಕಲಿ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ ಎಂದು ಇತ್ತೀಚಿನ ಕೆಲವು ವರದಿಗಳು ಹೇಳಿದ್ದವು.

click me!