ಎಲಾನ್ ಮಸ್ಕ್ ಕೈಜಾರಿದ ವಿಶ್ವದ ನಂ.1 ಶ್ರೀಮಂತನ ಪಟ್ಟ ಜೆಫ್ ಬೆಜೋಸ್ ಪಾಲು

By Suvarna News  |  First Published Mar 5, 2024, 4:49 PM IST

ಬ್ಲೂಮ್ ಬರ್ಗ್ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ನಂ.1 ಸ್ಥಾನ ಪಡೆದಿದ್ದಾರೆ. ಟೆಸ್ಲಾ ಸಿಇಒ ಒಂಭತ್ತು ತಿಂಗಳ ಬಳಿಕ ಈ ಪಟ್ಟವನ್ನು ಕಳೆದುಕೊಂಡು ಎರಡನೇ ಸ್ಥಾನಕ್ಕೆ ಜಾರಿದ್ದಾರೆ. 


ನ್ಯೂಯಾರ್ಕ್ (ಮಾ.4): ಎಲಾನ್ ಮಸ್ಕ್ ಈಗ ವಿಶ್ವದ ನಂ.1 ಶ್ರೀಮಂತನಾಗಿ ಉಳಿದಿಲ್ಲ. ಈ ಸ್ಥಾನ ಈಗ ಅಮೆಜಾನ್ ಸಂಸ್ಥಾಪಕ ಹಾಗೂ ಮಾಜಿ ಸಿಇಒ ಜೆಫ್ ಬೆಜೋಸ್ ಪಾಲಾಗಿದೆ. ಒಂಭತ್ತಕ್ಕೂ ಅಧಿಕ ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಎಲಾನ್ ಮಸ್ಕ್ ವಿಶ್ವದ ಶ್ರೀಮಂತನ ಪಟ್ಟ ಕಳೆದುಕೊಂಡಿದ್ದಾರೆ. ಬ್ಲೂಮ್ ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ ಸೋಮವಾರ ಟೆಸ್ಲಾ ಇಂಕ್ ಷೇರುಗಳು ಶೇ. 7.2ರಷ್ಟು ಇಳಿಕೆ ಕಂಡ ಬೆನ್ನಲ್ಲೇ ಮಸ್ಕ್ ಸಂಪತ್ತಿನಲ್ಲಿ ಇಳಿಕೆಯಾಗಿದೆ. ಪ್ರಸ್ತುತ ಮಸ್ಕ್ ನಿವ್ವಳ ಸಂಪತ್ತು 197.7 ಬಿಲಿಯನ್ ಡಾಲರ್ ಇದ್ದರೆ, ಬೆಜೋಸ್ ಸಂಪತ್ತು 200.3 ಬಿಲಿಯನ್ ಡಾಲರ್ ಇದೆ. 2021ರ ಬಳಿಕ ಇದೇ ಮೊದಲ ಬಾರಿಗೆ 60 ವರ್ಷ ವಯಸ್ಸಿನ ಅಮೆಜಾನ್  ಸ್ಥಾಪಕ ಬೆಜೋಸ್ ಬ್ಲೂಮ್ ಬರ್ಗ್ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದ್ದಾರೆ. ಒಂದು ಸಮಯದಲ್ಲಿ ಮಸ್ಕ್ ಹಾಗೂ ಬೆಜೋಸ್ ನಡುವಿನ ಸಂಪತ್ತಿನ ಅಂತರ 142 ಬಿಲಿಯನ್ ಡಾಲರ್ ಇತ್ತು. ಆದರೆ, ಅಮೆಜಾನ್ ಹಾಗೂ ಟೆಸ್ಲಾ ಷೇರುಗಳು ವಿರುದ್ಧ ದಿಕ್ಕಿನಲ್ಲಿ ಚಲಿಸಲು ಪ್ರಾರಂಭಿಸಿದ ಬೆನ್ನಲ್ಲೇ ಈ ಅಂತರ ತಗ್ಗಿದೆ. 

ಅಮೆಜಾನ್ ಹಾಗೂ ಟೆಸ್ಲಾ ಅಮೆರಿಕದ ಇಕ್ವಿಟಿ ಮಾರುಕಟ್ಟೆಯಲ್ಲಿ ಸೆವೆನ್ ಸ್ಟಾಕ್ಸ್ ಸ್ಥಾನ ಪಡೆದಿವೆ. ಅಮೆಜಾನ್ ಷೇರುಗಳ ಮೌಲ್ಯ 2022ರ ಅಂತ್ಯದಿಂದ ಈ ತನಕ ದುಪ್ಪಟ್ಟಾಗಿದೆ. ಇನ್ನೊಂದೆಡೆ ಟೆಸ್ಲಾ ಷೇರುಗಳ ಮೌಲ್ಯ 2021ರಲ್ಲಿ ಅತ್ಯಧಿಕ ಮಟ್ಟದಲ್ಲಿದ್ದರೆ, ಆ ಬಳಿಕ ಶೇ.50ರಷ್ಟು ಇಳಿಕೆ ಕಂಡಿವೆ. 

Tap to resize

Latest Videos

ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿಗೆ ಎಲಾನ್ ಮಸ್ಕ್ ಹೆಸರು ನಾಮನಿರ್ದೇಶನ!

ಟೆಸ್ಲಾ ಷೇರುಗಳು ಸೋಮವಾರ ಭಾರೀ ಇಳಿಕೆ ಕಂಡಿವೆ. ಇದಕ್ಕೆ ಕಾರಣ ಪ್ರಿಲಿಮಿನರಿ ಮಾಹಿತಿಯಲ್ಲಿ ಟೆಸ್ಲಾದ ಶಾಂಘೈ ಕಾರ್ಖಾನೆಯಿಂದ ಒಂದು ವರ್ಷಕ್ಕಿಂತಲೂ ಅಧಿಕ ಸಮಯದಿಂದ ಶಿಪ್ಪಮೆಂಟ್ ಅತ್ಯಂತ ಕಡಿಮೆ ಮಟ್ಟದಲ್ಲಿದೆ ಎಂದು ತಿಳಿಸಲಾಗಿತ್ತು. ಇನ್ನೊಂದೆಡೆ ಅಮೆಜಾನ್ ಕೋವಿಡ್ ಪೆಂಡಾಮಿಕ್ ಸಮಯದಿಂದ ತನ್ನ ಆನ್ ಲೈನ್ ಮಾರಾಟದಲ್ಲಿ ಭಾರೀ ಬೆಳವಣಿಗೆ ದಾಖಲಿಸಿದೆ.

ಇನ್ನು ಮಸ್ಕ್ ಸಂಪತ್ತಿನಲ್ಲಿ ಇನ್ನಷ್ಟು ಇಳಿಕೆಯಾಗುವ ಸಾಧ್ಯತೆಯಿದೆ. ಇದಕ್ಕೆ ಕಾರಣ ಬರೀ ಟೆಸ್ಲಾ ಷೇರುಗಳ ಮೌಲ್ಯದಲ್ಲಿನ ಇಳಿಕೆ ಮಾತ್ರವಲ್ಲ. ಬದಲಿಗೆ ಡೆಲವರೆ ತೀರ್ಪಿನ ಹಿನ್ನೆಲೆಯಲ್ಲಿ ಮಸ್ಕ್ 55 ಬಿಲಿಯನ್ ಡಾಲರ್ ವೇತನ ಟೆಸ್ಲಾದಲ್ಲಿ ಉಳಿದುಕೊಂಡಿದೆ. ಟೆಸ್ಲಾ ಸಿಇಒ ಆಗಿರುವ ಮಸ್ಕ್ ಗೆ ಬರಬೇಕಾಗಿರುವ ಈ ವೇತನ ಹೂಡಿಕೆದಾರರೊಬ್ಬರು ಕೋರ್ಟ್ ನಲ್ಲಿ ಮಸ್ಕ್ ಪರಿಹಾರ ಯೋಜನೆಗೆ ಸವಾಲು ಹಾಕಿದ ಹಿನ್ನೆಲೆಯಲ್ಲಿ ಅವರ ವೇತನ ಇನ್ನೂ ಕೈಸೇರಿಲ್ಲ. ಇದು ಇತಿಹಾಸದಲ್ಲೇ ಅತೀದೊಡ್ಡ ಮೊತ್ತದ ಪರಿಹಾರ ದಾವೆ ಎಂದು ಕೂಡ ಹೇಳಲಾಗಿದೆ.

ಬೆಜೋಸ್ ಅವರ ಸಂಪತ್ತಿನ ಬಹುಪಾಲು ಅಮೆಜಾನ್ ನಲ್ಲಿ ಅವರು ಹೊಂದಿರುವ ಶೇ.9ರಷ್ಟು ಷೇರುಗಳಿಂದ ಬರುತ್ತಿದೆ. ಬೆಜೋಸ್ ಕಳೆದ ತಿಂಗಳು 8.5 ಬಿಲಿಯನ್ ಡಾಲರ್ ಮೌಲ್ಯದ 50 ಮಿಲಿಯನ್ ಷೇರುಗಳನ್ನು ಬಿಡುಗಡೆಗೊಳಿಸಿದ ಬಳಿಕ ಕೂಡ ಅಮೆಜಾನ್ ನ ಅತೀದೊಡ್ಡ ಷೇರುದಾರರಾಗಿದ್ದಾರೆ. 

ಮನಸ್ಸಿನಲ್ಲಿ ಯೋಚಿಸಿ ಮೌಸ್‌ ಚಲಾಯಿಸಿದ ರೋಗಿ: ಮಸ್ಕ್‌ ನ್ಯೂರೋಲಿಂಕ್‌ ಯೋಜನೆಗೆ ಮೊದಲ ಯಶಸ್ಸು

ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಬೆಜೋಸ್ ಅಗ್ರ ಸ್ಥಾನವನ್ನು ಅಲಂಕರಿಸುತ್ತಿರೋದು ಇದೇ ಮೊದಲೇನಲ್ಲ. ಈ ಮೊದಲು 2017ರಲ್ಲಿ ಬೆಜೋಸ್ ಮೈಕ್ರೋಸಾಫ್ಟ್ ಇಂಕ್ ಸಹಂಸ್ಥಾಪಕ ಬಿಲ್ ಗೇಟ್ಸ್ ಅವರನ್ನು ಹಿಂದಿಕ್ಕಿ ನಂ.1 ಸ್ಥಾನ ಅಲಂಕರಿಸಿದ್ದರು. ಆದರೆ, ಟೆಸ್ಲಾ ಷೇರುಗಳು ದೊಡ್ಡ ಪ್ರಮಾಣದಲ್ಲಿ ಏರಿಕೆ ಕಂಡ ಹಿನ್ನೆಲೆಯಲ್ಲಿ ಬೆಜೋಸ್ 2021ರಲ್ಲಿ ಮಸ್ಕ್ ಗೆ ಸ್ಥಾನ ಬಿಟ್ಟುಕೊಟ್ಟರು. ಅಲ್ಲಿಂದ ಈ ತನಕ ನಂ.1 ಪಟ್ಟವನ್ನು ಮರಳಿ ಪಡೆಯಲು ಸಾಧ್ಯವಾಗಿರಲಿಲ್ಲ. 

ಪ್ರಖ್ಯಾತ ಐಷಾರಾಮಿ ಉತ್ಪನ್ನ ತಯಾರಕ ಸಂಸ್ಥೆ ಎಲ್‌ವಿಎಂಎಚ್‌ ಮುಖ್ಯಸ್ಥ ಬರ್ನಾರ್ಡ್‌ ಅರ್ನಾಲ್ಟ್‌ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಇವರ ನಿವ್ವಳ ಸಂಪತ್ತು 197.5 ಬಿಲಿಯನ್ ಡಾಲರ್. 


 

click me!