Electric Vehicle ಚಾರ್ಜಿಂಗ್‌ ಕೇಂದ್ರಕ್ಕೆ ಲೈಸೆನ್ಸ್‌ ಬೇಕಿಲ್ಲ..!

Kannadaprabha News   | Asianet News
Published : Jan 17, 2022, 06:25 AM ISTUpdated : Jan 17, 2022, 09:43 AM IST
Electric Vehicle ಚಾರ್ಜಿಂಗ್‌ ಕೇಂದ್ರಕ್ಕೆ ಲೈಸೆನ್ಸ್‌ ಬೇಕಿಲ್ಲ..!

ಸಾರಾಂಶ

*   ಯಾರು ಬೇಕಾದರೂ ಕೇಂದ್ರ ತೆರೆಯಬಹುದು *   ಎಲೆಕ್ಟ್ರಿಕ್‌ ವಾಹನಗಳಿಗೆ ಸರ್ಕಾರದ ಉತ್ತೇಜನ *   ಎಲ್ಲಿ ಬೇಕಾದರೂ ಎಲೆಕ್ಟ್ರಿಕ್‌ ವಾಹನ ಚಾರ್ಜಿಂಗ್‌ ಘಟಕ ತೆರೆಯಬಹುದು  

ನವದೆಹಲಿ(ಜ.17): ವಿದ್ಯುತ್‌ ಚಾಲಿತ ವಾಹನಗಳಿಗೆ(Electric Vehicle) ಉತ್ತೇಜನ ನೀಡುವ ಸಲುವಾಗಿ ಮಹತ್ವದ ನಿರ್ಧಾರ ಕೈಗೊಂಡಿರುವ ಕೇಂದ್ರ ಸರ್ಕಾರ(Central Government), ಖಾಸಗಿ ಸಂಸ್ಥೆ ಅಥವಾ ವ್ಯಕ್ತಿಗಳು ಸಾರ್ವಜನಿಕ ಚಾರ್ಜಿಂಗ್‌ ಕೇಂದ್ರ ತೆರೆಯಲು ಯಾವುದೇ ಲೈಸೆನ್ಸ್‌(License) ಪಡೆಯಬೇಕಿಲ್ಲ ಎಂದು ಘೋಷಣೆ ಮಾಡಿದೆ.

ಇದೇ ವೇಳೆ, ಗೃಹಬಳಕೆಯ ವಿದ್ಯುತ್‌(Electricity) ದರದಲ್ಲೇ ಹಾಲಿ ಇರುವ ಸಂಪರ್ಕವನ್ನು ಬಳಸಿಕೊಂಡು ಮನೆ ಅಥವಾ ಕಚೇರಿಯಲ್ಲಿ ತಮ್ಮ ವಾಹನಗಳನ್ನು ಚಾರ್ಜ್‌(charge) ಮಾಡಿಕೊಳ್ಳಲು ವಿದ್ಯುತ್‌ ಚಾಲಿತ ವಾಹನಗಳ ಮಾಲಿಕರಿಗೆ ನಿಶಾನೆಯನ್ನೂ ತೋರಿದೆ. ಈ ಸಂಬಂಧ ವಿದ್ಯುತ್‌ ಸಚಿವಾಲಯ ಪರಿಷ್ಕೃತ ಮಾರ್ಗಸೂಚಿ ಹಾಗೂ ಮಾನದಂಡಗಳನ್ನು ಬಿಡುಗಡೆ ಮಾಡಿದೆ.

Electric Bike ಭಾರತದ ಮೊಟ್ಟ ಮೊದಲ ಎಲೆಕ್ಟ್ರಿಕ್ ಕ್ರ್ಯೂಸರ್ ಬೈಕ್ ದಾಖಲೆ, 350 ಕಿ.ಮೀ ಮೈಲೇಜ್!

ಸರ್ಕಾರಿ ಸಂಸ್ಥೆ ಅಥವಾ ಖಾಸಗಿ ಸಂಸ್ಥೆ ಅಥವಾ ವ್ಯಕ್ತಿಗಳು ಆದಾಯ ಹಂಚಿಕೆಯ ಆಧಾರದಲ್ಲಿ ಸಾರ್ವಜನಿಕ ಚಾರ್ಜಿಂಗ್‌ ಕೇಂದ್ರ ಸ್ಥಾಪಿಸಲು ಮುಂದೆ ಬಂದರೆ ಸರ್ಕಾರದ ಜಾಗ ನೀಡಲಾಗುತ್ತದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಹೊಸ ಉದ್ಯೋಗಾವಕಾಶಗಳು(Jobs) ಸೃಷ್ಟಿಯಾಗುವುದರ ಜತೆಗೆ, ಪಂಕ್ಚರ್‌ ಅಂಗಡಿಯ ರೀತಿಯಲ್ಲಿ ಸಾರ್ವಜನಿಕ ಚಾರ್ಜಿಂಗ್‌ ಕೇಂದ್ರಗಳು ತಲೆಎತ್ತಲಿವೆ. ವಿದ್ಯುತ್‌ ಚಾಲಿತ ವಾಹನಗಳ ಮಾಲಿಕರಿಗೆ ಪ್ರಯಾಣ ಮಧ್ಯೆ ಚಾರ್ಜ್‌ ಖಾಲಿಯಾಗುವ ಆತಂಕ ದೂರವಾಗುತ್ತದೆ.

ಹೊಸ ಮಾರ್ಗಸೂಚಿ ಪ್ರಕಾರ, ಸರ್ಕಾರ ಅಥವಾ ಸಾರ್ವಜನಿಕ ಸಂಸ್ಥೆಗಳು ಸರ್ಕಾರದಿಂದ ಭೂಮಿ(Land) ಪಡೆದು ಚಾರ್ಜಿಂಗ್‌ ಕೇಂದ್ರ ಸ್ಥಾಪಿಸಿದರೆ, ಅಲ್ಲಿ ಬಳಕೆಯಾಗುವ ಪ್ರತಿ ಯುನಿಟ್‌ ವಿದ್ಯುತ್‌ಗೆ ಸರ್ಕಾರಕ್ಕೆ 1 ರು. ನೀಡಬೇಕಾಗುತ್ತದೆ. ಖಾಸಗಿ ಸಂಸ್ಥೆಗಳಿಗೆ ಜಾಗ ಹಂಚಿಕೆ ಮಾಡಲು ಬಿಡ್‌ ಮಾಡಲಾಗುತ್ತದೆ.

ಸರ್ಕಾರದ ಈ ನೀತಿಯಿಂದ ವ್ಯಕ್ತಿಗಳು ಹಾಗೂ ಸ್ಟಾರ್ಟಪ್‌ ಕಂಪನಿಗಳನ್ನು ಸೆಳೆಯಲಾಗುತ್ತದೆ. ಸಾರಿಗೆ ವಲಯದಲ್ಲಿ ಇಂಗಾಲದ ಹೊರಸೂಸುವಿಕೆಯನ್ನು ತಗ್ಗಿಸಿದಂತಾಗುತ್ತದೆ. ರಿಲಯನ್ಸ್‌-ಬಿಪಿ, ಟಾಟಾ ಪವರ್‌, ಓಲಾ, ಇಂಡಿಯನ್‌ ಆಯಿಲ್‌ನಂತಹ ಕಂಪನಿಗಳು ಚಾರ್ಜಿಂಗ್‌ ಕೇಂದ್ರ(Charging Station)  ಸ್ಥಾಪಿಸಲು ಮುಂದಾಗಿದ್ದು, ಅವಕ್ಕೆ ಉತ್ತೇಜನ ನೀಡಿದಂತಾಗುತ್ತದೆ.

ಹೊಸ ನೀತಿಯೇನು?

*  ಖಾಸಗಿ ಕಂಪನಿ, ವ್ಯಕ್ತಿಗಳು ತಮ್ಮ ಜಾಗದಲ್ಲಿ ಎಲ್ಲಿ ಬೇಕಾದರೂ ಎಲೆಕ್ಟ್ರಿಕ್‌ ವಾಹನ ಚಾರ್ಜಿಂಗ್‌ ಘಟಕ ತೆರೆಯಬಹುದು
* ಸರ್ಕಾರಕ್ಕೆ ಪ್ರತಿ ಯುನಿಟ್‌ಗೆ 1 ರು. ನೀಡುವುದಾದರೆ ಸರ್ಕಾರವೇ ಚಾರ್ಜಿಂಗ್‌ ಘಟಕ ತೆರೆಯಲು ಜಾಗ ನೀಡುತ್ತದೆ
* ಜನರು ಮನೆ ಅಥವಾ ಕಚೇರಿಗಳಲ್ಲಿ ಈಗಿರುವ ವಿದ್ಯುತ್‌ ದರದಲ್ಲೇ ಎಲೆಕ್ಟ್ರಿಕ್‌ ವಾಹನ ಚಾರ್ಜ್‌ ಮಾಡಿಕೊಳ್ಳಬಹುದು

EVs, Hydrogen Fuel: ಎಲೆಕ್ಟ್ರಿಕ್, ಹೈಡ್ರೋಜನ್ ಚಾಲಿತ ವಾಹನಗಳು ಭಾರತದ ಭವಿಷ್ಯದ ಆಯ್ಕೆ: ಕೆಪಿಐಟಿ ಮುಖ್ಯಸ್ಥ

Electric Bike ಯುವ ಜನತೆಗಾಗಿ ಸೈಬಾರ್ಗ್ ಬಾಬ್ ಇ ಎಲೆಕ್ಟ್ರಿಕ್ ಬೈಕ್ ಅನಾವರಣ, 110KM ಮೈಲೇಜ್!

ಭಾರತದಲ್ಲಿನ ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಬೈಕ್ ಮಾರುಕಟ್ಟೆ ವಿಸ್ತಾರಗೊಳ್ಳುತ್ತಿದೆ. ಪ್ರತಿ ದಿನ ಇದೀಗ ಹೊಸ ಹೊಸ ಬೈಕ್ ಅನಾವರಣಗೊಳ್ಳುತ್ತಿದೆ. ಈ ಸಾಲಿಗೆ ಇದೀಗ ಮತ್ತೊಂದು ಸೇರಿಕೊಂಡಿದೆ. ಇಗ್ನಿಟ್ರಾನ್ ಮೊಟೊಕಾರ್ಪ್ ಇದೀಗ ಎರಡನೇ ಎಲೆಕ್ಟ್ರಿಕ್ ಬೈಕ್ ಅನಾವರಣ ಮಾಡಿದೆ. ಮೊದಲು ಸೈಬಾರ್ಗ್ ಬ್ರ್ಯಾಂಡ್ ನೇಮ್ ಅಡಿ ಕ್ರ್ಯೂಸರ್ ಬೈಕ್ ಬಿಡುಗಡೆ ಮಾಡಲಾಗಿತ್ತು. ಇದೀಗ ಯುವಜನತೆ ಗುರಿಯಾಗಿಸಿಕೊಂಡು ಸೈಬಾರ್ಗ್ ಬಾಂಬ್ ಇ ಬೈಕ್ ಅನಾವರ ಮಾಡಿದೆ.

ಸೈಬಾರ್ಗ್ ಇ ಬಾಬ್ ಬೈಕ್ ಡರ್ಟ್ ಸ್ಪೂರ್ತಿಯ ಬೈಕ್ ಆಗಿದೆ. ಹೀಗಾಗಿ ಸ್ಪೋರ್ಟ್ಸ್ ಲುಕ್ ಹಾಗೂ ಸ್ಪೋರ್ಟಿ ಪರ್ಫಾಮೆನ್ಸ್ ಈ ಬೈಕ್ ನೀಡಲಿದೆ. ಕೆಳಭಾಗದಲ್ಲಿರುವ ಹ್ಯಾಂಡ್ಲ್ ಬಾರ್, LED ಸ್ಲೀಕ್ ಹೆಡ್‌ಲ್ಯಾಂಪ್ಸ್ ಹಾಗೂ ಡಿಆರ್‌ಎಲ್, LED ಇಂಡಿಕೇಟರ್, ಸಿಂಗಲ್ ಪೀಸ್ ಸೀಟ್ ಹೊಂದಿದೆ. ಆರಂಭಿಕ ಹಂತದಲ್ಲಿ ಎರಡು ಬಣ್ಣಗಳಲ್ಲಿ ಸೈಬಾರ್ಗ್ ಬಾಬ್ ಇ ಬೈಕ್ ಲಭ್ಯವಿದೆ. ರೆಡ್ ಹಾಗೂ ಬ್ಲಾಕ್ ಬಣ್ಣಗಳಲ್ಲಿ ಅನಾವರಣ ಮಾಡಲಾಗಿದೆ.
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!