ಗಣೇಶನಿಗೂ ತಟ್ಟಿದ ಆರ್ಥಿಕ ಹಿಂಜರಿತ!: ದೇಣಿಗೆ ಸಂಗ್ರಹದಲ್ಲಿ ಶೇ.25ರಷ್ಟು ಇಳಿಕೆ!

Published : Aug 28, 2019, 07:45 AM ISTUpdated : Aug 28, 2019, 07:46 AM IST
ಗಣೇಶನಿಗೂ ತಟ್ಟಿದ ಆರ್ಥಿಕ ಹಿಂಜರಿತ!: ದೇಣಿಗೆ ಸಂಗ್ರಹದಲ್ಲಿ ಶೇ.25ರಷ್ಟು ಇಳಿಕೆ!

ಸಾರಾಂಶ

ಗಣೇಶನಿಗೂ ತಟ್ಟಿದ ಆರ್ಥಿಕ ಹಿಂಜರಿತ!| ದೇಣಿಗೆ ಸಂಗ್ರಹದಲ್ಲಿ ಶೇ.25ರಷ್ಟು ಇಳಿಕೆ| ಗಣೇಶನ ಆಭರಣಕ್ಕೂ ಬಂದಿಲ್ಲ ಬೇಡಿಕೆ

ಮುಂಬೈ[ಆ.28]: ಮಹಾರಾಷ್ಟ್ರ ಅದರಲ್ಲೂ ಮುಂಬೈನಲ್ಲಿ ಭಾರೀ ವಿಜೃಂಭಣೆಯಿಂದ ಆಚರಿಸಲಾಗುವ ಗಣೇಶೋತ್ಸವಕ್ಕೂ ಈ ಬಾರಿ ಆರ್ಥಿಕ ಹಿಂಜರಿಕೆಯ ಬಿಸಿ ತಟ್ಟಿದೆ.

ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ದೇಣಿಗೆ ಸಂಗ್ರಹದಲ್ಲಿ ಶೆ.25ರಷ್ಟುಭಾರೀ ಕುಸಿತವಾಗಿದೆ ಎಂದು ಮುಂಬೈನ 10000ಕ್ಕೂ ಹೆಚ್ಚು ಗಣೇಶೋತ್ಸವ ಸಮಿತಿಗಳ ಮುಖ್ಯ ಸಮಿತಿಯಾದ ‘ಬೃಹನ್ಮುಂಬೈ ಸಾರ್ವಜನಿಕ ಗಣೇಶೋತ್ಸವ ಸಮನ್ವಯ ಸಮಿತಿ’ ಹೇಳಿದೆ. ಅಲ್ಲದೆ ಈ ಬಾರಿ ಸ್ಥಳೀಯ ಉದ್ಯಮಿಗಳು ಗಣೇಶೋತ್ಸವ ಕಾರ್ಯಕ್ರಮಗಳಿಗೆ ನೀಡುವ ಜಾಹೀರಾತನ್ನೂ ಭಾರೀ ಪ್ರಮಾಣದಲ್ಲಿ ಕಡಿಮೆ ಮಾಡಿದ್ದಾರೆ.

ಗಣಪತಿಯ ಪಿಒಪಿ ರೂಪ, ಪರಿಸರಕ್ಕೆ ಕೊಳೆ ಕೂಪ!

ಮತ್ತೊಂದೆಡೆ ನಗರದ ಶ್ರೀಮಂತ ಗಣೇಶ ಮಂಡಳಿಗಳು ಪ್ರತಿ ವರ್ಷ ಗಣೇಶನಿಗೆ ಹೊಸ ಹೊಸ ಚಿನ್ನ ಮತ್ತು ಬೆಳ್ಳಿ ಆಭರಣ ಮಾಡಿಸುವುದು ಸಾಮಾನ್ಯ. ಆದರೆ ಈ ಬಾರಿ ಇಂಥ ಆಭರಣಗಳಿಗೆ ಬಂದ ಬೇಡಿಕೆಯಲ್ಲಿ ಶೇ.50ರಷ್ಟುಇಳಿಕೆ ಕಂಡುಬಂದಿದೆ ಎಂದು ಆಭರಣ ಉದ್ಯಮಿಗಳು ಹೇಳಿದ್ದಾರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್
ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!