Economic Survey: 2022-23ರಲ್ಲಿ ದೇಶದ ಜಿಡಿಪಿ ಶೇ. 7ರಷ್ಟು ಬೆಳವಣಿಗೆ ಎಂದ ಆರ್ಥಿಕ ಸಮೀಕ್ಷೆ!

By Santosh Naik  |  First Published Jan 31, 2023, 1:44 PM IST

ಆರ್ಥಿಕ ಸಮೀಕ್ಷೆ 2022-23, ಆರ್ಥಿಕತೆಯ ವಿವಿಧ ವಲಯಗಳ ಸ್ಥಿತಿ ಮತ್ತು ಬೆಳವಣಿಗೆಯನ್ನು ವೇಗಗೊಳಿಸಲು ಕೈಗೊಳ್ಳಬೇಕಾದ ಸುಧಾರಣೆಗಳನ್ನು ವಿವರಿಸುತ್ತದೆ. ಪ್ರತಿ ಬಜೆಟ್‌ಗೂ ಮುನ್ನ ದೇಶದ ಆರ್ಥಿಕ ಸಮೀಕ್ಷೆಯನ್ನು ಬಿಡುಗಡೆ ಮಾಡಲಾಗುತ್ತದೆ.


ನವದೆಹಲಿ (ಜ.31): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ 2022-23ರ ವರ್ಷದ ಆರ್ಥಿಕ ಸಮೀಕ್ಷೆಯನ್ನು ಸದನದಲ್ಲಿ ಮಂಡಿಸಿದ್ದಾರೆ. ಮಂಗಳವಾರ 2023-24ರ ಬಜೆಟ್‌ ಅಧಿವೇಶನದ ಮೊದಲ ದಿನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣದ ಬಳಿಕ ದೇಶದ ಆರ್ಥಿಕ ಸಮೀಕ್ಷೆಯನ್ನು ಪ್ರಕಟ ಮಾಡಲಾಯಿತು. ಆರ್ಥಿಕ ಸಮೀಕ್ಷೆ 2022-23, ಆರ್ಥಿಕತೆಯ ವಿವಿಧ ಕ್ಷೇತ್ರಗಳ ಸ್ಥಿತಿಯನ್ನು ವಿವರಿಸುತ್ತದೆ ಮತ್ತು ಬೆಳವಣಿಗೆಯನ್ನು ವೇಗಗೊಳಿಸಲು, ಉದ್ಯೋಗವನ್ನು ಸೃಷ್ಟಿಸಲು ಮತ್ತು ಹಣದುಬ್ಬರವನ್ನು ನಿಯಂತ್ರಿಸಲು ಕೈಗೊಳ್ಳಬೇಕಾದ ಸುಧಾರಣೆಗಳನ್ನು ವಿವರಿಸುತ್ತದೆ. ಸಂಸತ್ತಿನಲ್ಲಿ ಶ್ರೀಮತಿ ಸೀತಾರಾಮನ್ ಅವರು 2022-23 ರ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದ ನಂತರ ಮುಖ್ಯ ಆರ್ಥಿಕ ಸಲಹೆಗಾರ ಡಾ. ವಿ. ಅನಂತ ನಾಗೇಶ್ವರನ್ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಹಿಂದಿನ ವರ್ಷದ ಆರ್ಥಿಕ ಸಮೀಕ್ಷೆಯು ಕೋವಿಡ್‌-19 ಸಾಂಕ್ರಾಮಿಕದಿಂದ ಭಾರತೀಯ ಆರ್ಥಿಕತೆಯ ಚೇತರಿಕೆಯ ಮೇಲೆ ಕೇಂದ್ರೀಕರಿಸಿದ್ದರೆ, ಈ ವರ್ಷದ ದಾಖಲೆಯು ರಷ್ಯಾ-ಉಕ್ರೇನ್ ಸಂಘರ್ಷದ ಪರಿಣಾಮಗಳ ಮೇಲೆ ಕೇಂದ್ರೀಕರಿಸುವ ನಿರೀಕ್ಷೆಯಿದೆ. ಇದಕ್ಕೂ ಮುನ್ನ, ಅಂತಾರಾಷ್ಟ್ರೀಯ ಹಣಕಾಸು ನಿಧಿ ಕೂಡ ಭಾರತದ ಬೆಳವಣಿಗೆಯನ್ನು ಪಾಸಿಟಿವ್‌ ಆಗಿ ಇರಿಸಲಿದೆ. ಭಾರತದ ಆರ್ಥಿಕತೆಯು ಮುಂದಿನ ಆರ್ಥಿಕ ವರ್ಷದಲ್ಲಿ ಕೆಲವು ನಿಧಾನಗತಿಯನ್ನು ಎದುರಿಸಲಿದೆ ಮತ್ತು ಮಾರ್ಚ್ 31 ಕ್ಕೆ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ ಬೆಳವಣಿಗೆಯನ್ನು 6.8% ರಿಂದ 6.1% ಆಗಿರಬಹದು ಎಂದು ಹೇಳಿದೆ.

ಹಾಲಿ ಹಣಕಾಸು ವರ್ಷದಲ್ಲಿ ಶೇ.7 ಹಾಗೂ 2021-22ರ ಶೇ.8.7ಕ್ಕೆ ಹೋಲಿಸಿದರೆ, ಭಾರತದ ಆರ್ಥಿಕತೆಯು 2023-24 ರಲ್ಲಿ 6.5% ರಷ್ಟು ಬೆಳವಣಿಗೆಯಾಗಲಿದೆ. ಜಾಗತಿಕ ಆರ್ಥಿಕ, ರಾಜಕೀಯ ಬೆಳವಣಿಗೆಗಳ ಆಧಾರದ ಮೇಲೆ ಮುಂದಿನ ಹಣಕಾಸು ವರ್ಷದಲ್ಲಿ ನೈಜ GDP ಬೆಳವಣಿಗೆಯು 6-6.8% ವ್ಯಾಪ್ತಿಯಲ್ಲಿರುತ್ತದೆ ಎಂದು ಆರ್ಥಿಕ ಸಮೀಕ್ಷೆಯಲ್ಲಿ ತಿಳಿಸಲಾಗಿದೆ.

ಭಾರತವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಉಳಿದಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ. ನಾಮಮಾತ್ರದಲ್ಲಿ ಜಿಡಿಪಿ ಮುಂದಿನ ಹಣಕಾಸು ವರ್ಷದಲ್ಲಿ 11% ಎಂದು ಅಂದಾಜಿಸಲಾಗಿದೆ. ಈ ನಡುವೆ ಆರ್‌ಬಿಐ ಈ ಹಣಕಾಸು ವರ್ಷದಲ್ಲಿ ಅಪ್ಪರ್‌  ಟಾರ್ಗೆಟ್‌ ಲಿಮಿಟ್‌ನ ಹೊರಗೆ 6.8% ಹಣದುಬ್ಬರವನ್ನು ಯೋಜಿಸುತ್ತದೆ, ಆರ್ಥಿಕ ಸಮೀಕ್ಷೆಯು "ಖಾಸಗಿ ಬಳಕೆಯನ್ನು ತಡೆಯುವಷ್ಟು ಹೆಚ್ಚಿಲ್ಲ, ಹೂಡಿಕೆಗೆ ಪ್ರಚೋದನೆಯನ್ನು ದುರ್ಬಲಗೊಳಿಸಲು ತುಂಬಾ ಕಡಿಮೆ ಅಲ್ಲ" ಎಂದು ಹೇಳಿದೆ.

Budget 2023: ಕೇಂದ್ರ ಬಜೆಟ್‌ನ ಈ ವಿವರಗಳ ಬಗ್ಗೆ ನಿಮಗೆಷ್ಟು ಗೊತ್ತು?

ಆರ್ಥಿಕ ಸಮೀಕ್ಷೆ 2023ರ ಪ್ರಕಾರ ಭಾರತವು ವಿನಿಮಯ ದರದಲ್ಲಿ ಐದನೇ ಅತಿದೊಡ್ಡ ಆರ್ಥಿಕತೆ ಮತ್ತು ಖರೀದಿ ಸಾಮರ್ಥ್ಯದ ಸಮಾನತೆಯ ವಿಷಯದಲ್ಲಿ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿದೆ ಎಂದು ಹೇಳಿದೆ. ಕೋವಿಡ್-19 ಸಾಂಕ್ರಾಮಿಕ ಆಘಾತದಿಂದ ಭಾರತ ಚೇತರಿಸಿಕೊಳ್ಳುವುದು ಸಾಕಷ್ಟು ತ್ವರಿತವಾಗಿದೆ ಎಂದು ಆರ್ಥಿಕ ಸಮೀಕ್ಷೆ 2023 ಹೇಳಿದೆ. ದೇಶೀಯ ಮಟ್ಟದಲ್ಲಿ ಬೇಡಿಕೆ ಹಾಗೂ ಬಂಡವಾಳ ಹೂಡಿಕೆಯ ಹೆಚ್ಚಳ ಮುಂದಿನ ಹಣಕಾಸು ವರ್ಷದ ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸಲಿದೆ ಎಂದು ಅಂದಾಜು ಮಾಡಿದೆ.
ಆರ್ಥಿಕ ಸಮೀಕ್ಷೆ 2023 ಭಾರತವು ತನ್ನ ಚಾಲ್ತಿ ಖಾತೆ ಕೊರತೆ (ಸಿಎಡಿ) ಗೆ ಹಣಕಾಸು ಒದಗಿಸಲು ಮತ್ತು ರೂಪಾಯಿ ಚಂಚಲತೆಯನ್ನು ನಿರ್ವಹಿಸಲು ವಿದೇಶೀ ವಿನಿಮಯ ಮಾರುಕಟ್ಟೆಯಲ್ಲಿ ಮಧ್ಯಪ್ರವೇಶಿಸಲು ಸಾಕಷ್ಟು ವಿದೇಶಿ ವಿನಿಮಯ ಮೀಸಲು ಹೊಂದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.

Tap to resize

Latest Videos

ಇಂದಿನಿಂದ ಸಂಸತ್ತಿನ ಬಜೆಟ್‌ ಕಲಾಪ ಆರಂಭ, ನಾಳೆ ಕೇಂದ್ರ ಬಜೆಟ್‌

2023 ರ ಆರ್ಥಿಕ ಸಮೀಕ್ಷೆಯು ಭಾರತೀಯ ಆರ್ಥಿಕತೆಯು ಕಳೆದುಹೋದದ್ದನ್ನು ಬಹುತೇಕ "ಮರುಪಡೆದುಕೊಂಡಿದೆ" ಎಂದು ಸೂಚಿಸಿದೆ. ಭಾರತದ ಬೆಳವಣಿಗೆಯನ್ನು ಬೆಂಬಲಿಸುವ ವಿಚಾರದಲ್ಲಿ ಯಾವೆಲ್ಲಾ ಕ್ಷೇತ್ರ ಸ್ತಬ್ಧವಾಗಿತ್ತೋ ಅವುಗಳಲ್ಲಾ "ನವೀಕರಣವಾಗಿದೆ' ಮತ್ತು ಸಾಂಕ್ರಾಮಿಕ ಸಮಯದಲ್ಲಿ ಮತ್ತು ಯುರೋಪಿನ ಸಂಘರ್ಷದ ನಂತರ ನಿಧಾನಗೊಂಡಿದ್ದನ್ನು "ಪುನರುಜ್ಜೀವನಗೊಳಿಸಿದೆ"ಎಂದು ಹೇಳಿದೆ.

click me!