Budget 2023: ಕೇಂದ್ರ ಬಜೆಟ್‌ನ ಈ ವಿವರಗಳ ಬಗ್ಗೆ ನಿಮಗೆಷ್ಟು ಗೊತ್ತು?

By Santosh Naik  |  First Published Jan 31, 2023, 1:10 PM IST

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಫೆ.1 ರಂದು ಐದನೇ ಬಾರಿಗೆ ಕೇಂದ್ರ ಬಜೆಟ್‌ ಮಂಡನೆ ಮಾಡಲಿದ್ದಾರೆ. ಜಗತ್ತು ಆರ್ಥಿತ ಹಿಂಜರಿತಕ್ಕೆ ಒಳಗಾಗಿ ಭೀತಿಯಲ್ಲಿರುವ ನಡುವೆ, ಈ ಬಜೆಟ್‌ ಬಗ್ಗೆ ಭಾರತ ಮಾತ್ರವಲ್ಲ ವಿದೇಶಗಳೂ ಕೂಡ ದೊಡ್ಡ ನಿರೀಕ್ಷೆ ಇಟ್ಟಿದೆ. ಪ್ರತಿ ವರ್ಷ ಬಜೆಟ್‌ ಮಂಡನೆ ಆದ ಬಳಿಕ ದೇಶದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತದೆ. 


ನವದೆಹಲಿ (ಜ.31): ಕೇಂದ್ರ ಬಜೆಟ್‌ಗೆ ಇನ್ನೇನು ಒಂದು ದಿನ ಬಾಕಿ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಬುಧವಾರ ಐದನೇ ಬಾರಿಗೆ ಕೇಂದ್ರ ಬಜೆಟ್‌ ಮಂಡನೆ ಮಾಡಲಿದ್ದಾರೆ. ಒಂದೆಡೆ ಜಗತ್ತಿನ ಬಲಾಢ್ಯ ದೇಶಗಳು ಆರ್ಥಿಕ ಹಿಂಜರಿತದ ಸುಳಿಗೆ ಸಿಲುಕಿದ್ದರೆ, ಭಾರತ ಮಾತ್ರ ಜಗತ್ತಿನಲ್ಲಿಯೇ ಅತಿವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಉಳಿದುಕೊಂಡಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌), ವಿಶ್ವ ಬ್ಯಾಂಕ್‌ ಕುಡ ಭಾರತದ ಪ್ರಗತಿಯ ಮುನ್ಸೂಚನೆಯನ್ನು ಪಾಸಿಟಿವ್‌ ಆಗಿ ಇರಿಸಿದ್ದಾರೆ. ಈ ಹಂತದಲ್ಲಿ ದೇಶಕ್ಕೆ ದಿಕ್ಸೂಚಿ ಆಗಬಲ್ಲ ಬಜೆಟ್‌ ಬಹಳ ಪ್ರಮುಖವಾಗಿರುತ್ತದೆ. ಮೋದಿ ಸರ್ಕಾರ ಹಿಂದಿನ ವರ್ಷಗಳ ಮಾಡಿದಂತೆ ಜನಪ್ರಿಯ ಘೋಷಣೆಗಳಿರುವ ಬಜೆಟ್‌ ಇದಾಗಿರುವುದಿಲ್ಲ. ಲೋಕಸಭೆ ಚುನಾವಣೆ ನಿಗದಿಯಾಗಿದ್ದರೂ, ಸರ್ಕಾರದ ಗಮನ ಅಭಿವೃದ್ಧಿ ಕೇಂದ್ರಿತ ಬಜೆಟ್‌ ಮಾತ್ರ. ವೋಟು ಬರುವಂಥ ಘೋಷಣೆಗಳು ಬಜೆಟ್‌ನಲ್ಲಿ ಖಂಡಿತಾ ಬರೋದಿಲ್ಲ. ಪ್ರತಿ ವರ್ಷ ಮಂಡನೆಯಾಗುವ ಬಜೆಟ್‌ ಬಳಿಕ ಆರ್ಥಿಕ ವರ್ಷದಲ್ಲಿ ಸಾಕಷ್ಟು ಬದಲಾವಣೆ ಆಗುತ್ತದೆ. ಇದು ಎಲ್ಲರಿಗೂ ಗೊತ್ತಿರಬೇಕಾದದ್ದು ಅನಿವಾರ್ಯ. ಆದರೆ, ಬಜೆಟ್‌ನಲ್ಲಿ ಪ್ರಸ್ತಾಪ ಮಾಡುವ ಕೆಲವು ಪದಗಳು, ಬಜೆಟ್‌ ಸಂಬಂಧಿತ ಕೆಲ ವಿಚಾರಗಳ ಬಗ್ಗೆ ಜನರಿಗೆ ಮಾಹಿತಿಯೇ ಇರೋದಿಲ್ಲ. ಅವುಗಳ ವಿವರ ಇಲ್ಲಿ ನೀಡಲಾಗಿದೆ.

ಬಜೆಟ್‌ ಎನ್ನುವ ಪದದ ನಿಜವಾದ ಅರ್ಥವೇನು: ಬಜೆಟ್‌ ಎನ್ನವ ಪದದ ನಿಜವಾದ ಅರ್ಥ 'ಬ್ಯಾಗ್‌'. ಇದು ಮೂಲತಃ ಫ್ರೆಂಚ್‌ ಶಬ್ದ ಬೊಗೆಟ್‌ (bougette) ಇಂದ ಬಂದಿದ್ದು,  ಇದರ ಅರ್ಥ ಪುಟ್ಟ ಬ್ಯಾಗ್‌. 15ನೇ ಶತಮಾನದಲ್ಲಿ ಈ ಪದ ಮೊದಲಿಗೆ ಬಳಕೆ ಆಗಿದ್ದು ಎನ್ನುತ್ತಾರೆ.

Tap to resize

Latest Videos

undefined

ಜಿಡಿಪಿ ಪದದ ವಿಸ್ತ್ರತ ರೂಪವೇನು: ಜಿಡಿಪಿ ಎಂದರೆ ಗ್ರಾಸ್‌ ಡೊಮೆಸ್ಟಿಕ್‌ ಪ್ರಾಡಕ್ಟ್‌. ಕನ್ನಡದಲ್ಲಿ ಒಟ್ಟು ದೇಶೀಯ ಉತ್ಪಾದನೆ ಎನ್ನುತ್ತಾರೆ. ದೇಶದ ಪ್ರಗತಿಯ ಅಳತೆಗೋಲು ಇದು. ಜಿಡಿಪಿ ಎಷ್ಟು ಪಾಸಿಟಿವ್‌ ದರದಲ್ಲಿ ಹೋಗುತ್ತದೆಯೋ ದೇಶ ಅಷ್ಟು ಪ್ರಗತಿ ಸಾಧಿಸುತ್ತಿದೆ ಎಂದರ್ಥ.

ಬಜೆಟ್‌ ಮಂಡನೆ ಭಾಷಣದಲ್ಲಿ ಎಷ್ಟು ಭಾಗಗಳು ಇರುತ್ತವೆ: ಬಜೆಟ್‌ ಮಂಡಳಿ ಭಾಷಣದಲ್ಲಿ ಒಟ್ಟು ಎರಡು ಭಾಗಗಳು ಇರುತ್ತದೆ.

ಬಜೆಟ್‌ ಪೇಪರ್‌ಗಳು ಮುದ್ರಣವಾಗೋದೆಲ್ಲಿ: ಕೇಂದ್ರ ಬಜೆಟ್‌ನ ಸಂಪೂರ್ಣ ಪೇಪರ್‌ಗಳು ದೆಹಲಿಯ ಪ್ರಭಾವಿ ನಾರ್ಥ್‌ ಬ್ಲಾಕ್‌ನಲ್ಲಿ ಪ್ರಿಂಟ್‌ ಆಗುತ್ತವೆ.

ಯಾವ ವರ್ಷದಲ್ಲಿ ಮಾತ್ರ ಬಜೆಟ್‌ಅನ್ನು ಎರಡು ಬಾರಿ ಮಂಡನೆ ಮಾಡಬಹುದು: ಲೋಕಸಭೆ ಚುನಾವಣೆ ವರ್ಷದಲ್ಲಿ ಮಾತ್ರವೇ ಬಜೆಟ್‌ಅನ್ನು ಎರಡು ಬಾರಿ ಮಂಡನೆ ಮಾಡಬಹುದು.

ಹಣಕಾಸು ಮಸೂದೆಯನ್ನು ಯಾವಾಗ ಸದನಕ್ಕೆ ತರಲಾಗುತ್ತದೆ: ಬಜೆಟ್‌ ಮುಗಿದ ಬಳಿಕವೇ ಆಯಾ ವರ್ಷದ ಹಣಕಾಸು ಮಸೂದೆಯನ್ನು ಸದನದ ಮುಂದೆ ಇರಿಸಲಾಗುತ್ತದೆ.

ಆರ್ಥಿಕ ಸರ್ವೇ ಪ್ರಕಟವಾಗೋದು ಯಾವಾಗ: ಬಜೆಟ್‌ಗೂ ಮುನ್ನ ದೇಶದ ಆರ್ಥಿಕ ಸರ್ವೇ ಪ್ರಕಟವಾಗುತ್ತದೆ. ವಿತ್ತ ಸಚಿವರು ಇದನ್ನು ಪ್ರಕಟ ಮಾಡುತ್ತಾರೆ.

ಸಂಸತ್ ಅಧಿವೇಶನ ಹಿನ್ನೆಲೆಯಲ್ಲಿ ಸರ್ವ ಪಕ್ಷದ ಸಭೆ ಮುಕ್ತಾಯ, ಜಂಟಿ ಅಧಿವೇಶನ ಕುರಿತು ನಾಳೆ ರಾಷ್ಟ್ರಪತಿ ಭಾಷಣ

ಸ್ವತಂತ್ರ ಭಾರತದ ಮೊದಲ ಬಜೆಟ್‌ ಮಂಡಿಸಿದ್ದು ಯಾರು: ಆರ್‌ಕೆ ಷಣ್ಮುಗಂ ಚೆಟ್ಟಿ

Budget 2023:ಕೇಂದ್ರ ಬಜೆಟ್ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿವೆ ಬಜೆಟ್ ಕುರಿತ ಆಸಕ್ತಿಕರ ಸಂಗತಿಗಳು

ಸ್ವತಂತ್ರ ಭಾರತದಲ್ಲಿ ಗರಿಷ್ಠ ಬಾರಿ ಬಜೆಟ್‌ ಮಂಡಿಸಿದವರು ಯಾರು: ಮೊರಾರ್ಜಿ ದೇಸಾಯಿ

ಯಾವ ವರ್ಷ ಬಜೆಟ್‌ಅನ್ನು ಹಿಂದಿಯಲ್ಲಿ ಮೊದಲ ಬಾರಿಗೆ ಸಿದ್ಧ ಮಾಡಲಾಗಿತ್ತು: 1955/56ರ ಬಜೆಟ್‌
 

click me!