ಎಷ್ಟೇ IPO ಅಪ್ಲೈ ಮಾಡಿದ್ರೂ, ಷೇರುಗಳು ಸಿಗ್ತಾ ಇಲ್ವಾ? ಐಪಿಒ ಅಲಾಟ್ಮೆಂಟ್‌ ಚಾನ್ಸ್‌ ಹೆಚ್ಚಿಸಿಕೊಳ್ಳೋಕೆ ಇದೆ ಸುಲಭ ವಿಧಾನ!

By Santosh Naik  |  First Published Sep 6, 2024, 3:25 PM IST

ಐಪಿಒನಲ್ಲಿ ಷೇರುಗಳು ಅಲಾಟ್‌ ಆಗಬೇಕೆಂದರೆ, ಅದಕ್ಕೆ ಇದೇ ಮಾರ್ಗ ಅನ್ನೋದಿಲ್ಲ. ಆದರೆ, ನೀವು ಮಾಡುವ ಸಣ್ಣತಪ್ಪುಗಳು ಕೂಡ ನಿಮ್ಮ ಅಪ್ಲಿಕೇಶನ್‌ ರಿಜೆಕ್ಟ್‌ ಆಗಲು ಕಾರಣವಾಗುತ್ತೆ. ಐಪಿಒಗೆ ಅಪ್ಲೈ ಮಾಡುವಾಗ ನಿಮ್ಮ ಅಪ್ಲಿಕೇಶನ್‌ ಹೇಗಿರಬೇಕು? ಅಲಾಟ್ಮೆಂಟ್‌ ಚಾನ್ಸ್‌ ಹೆಚ್ಚಿಸಿಕೊಳ್ಳೋದು ಹೇಗೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ.


ಬೆಂಗಳೂರು (ಸೆ.6): ದೇಶದ ಯಾವುದೇ ರಿಟೇಲ್‌ ಇನ್ವೆಸ್ಟರ್‌ಗಳನ್ನ ಕೇಳಿ ನೋಡಿ. ಅವರಿಗೆ ತಮ್ಮ ಷೇರು ಕುಸಿದರೆ ಆಗೋ ದುಃಖಕ್ಕಿಂತ ಐಪಿಒನಲ್ಲಿ ಷೇರು ಅಲಾಟ್ಮೆಂಟ್‌ ಆಗದೇ ಇದ್ದಾಗ ಆಗುವ ದುಃಖವೇ ಹೆಚ್ಚು. ಎಷ್ಟೇ ಬಾರಿ ಟ್ರೈ ಮಾಡಿದ್ರೂ ಐಪಿಒನಲ್ಲಿ ಷೇರು ಅಲಾಟ್ಮೆಂಟ್‌ ಆಗೋದೇ ಇಲ್ಲ ಅನ್ನೋದು ರಿಟೇಲ್‌ ಇನ್ವೆಸ್ಟರ್‌ಗಳ ಸಾಮಾನ್ಯ ಮಾತು. ಹಾಗೇನಾದರೂ ಐಪಿಒಗೆ ಬಿಡ್‌ ಮಾಡಿ ಷೇರು ಅಲಾಟ್‌ ಆದರೆ ಆಗುವ ಖುಷಿ ಅಷ್ಟಿಷ್ಟಲ್ಲ. ಇನ್ನೇನಾದರೂ ಅವರು ಐಪಿಒನಲ್ಲಿ ಖರೀದಿ ಮಾಡಿದ ಷೇರು, ಲಿಸ್ಟಿಂಗ್‌ ಡೇ ದಿನ ಡಬಲ್‌ ಆದರಂತೂ ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂಥ ಪರಿಸ್ಥಿತಿ ರಿಟೇಲ್‌ ಇನ್ವೆಸ್ಟರ್‌ಗಳದ್ದು. ಒಂದಂತೂ ಸತ್ಯ ಏನೆಂದರೆ, ಐಪಿಒಗೆ ಅಪ್ಲೈ ಮಾಡಿದ ಎಲ್ಲರಿಗೂ ಷೇರು ಸಿಕ್ಕೋದಿಲ್ಲ. ಇತ್ತೀಚೆಗೆ ಮಾರುಕಟ್ಟೆಗೆ ಲಿಸ್ಟಿಂಗ್‌ ಆದ ಪ್ರೀಮಿಯಂ ಎನರ್ಜೀಸ್‌ ಷೇರುಗಳನ್ನೇ ತೆಗೆದುಕೊಳ್ಳಿ. ದಾಖಲೆಯ ಮಟ್ಟದಲ್ಲಿ ಇದಕ್ಕೆ ಐಪಿಒ ಅಪ್ಲಿಕೇಶನ್‌ಗಳು ಬಂದಿದ್ದವು. ಲಾಟರಿ ಪದ್ದತಿ ಮೂಲಕ ಕೊನೆಗೆ ಅಲಾಟ್‌ಮೆಂಟ್‌ ಮಾಡಲಾಗಿತ್ತು. ನಿರೀಕ್ಷೆಗೆ ತಕ್ಕಂತೆ ದೊಡ್ಡ ಮಟ್ಟದ ಲಾಭವನ್ನು ಇನ್ವೆಸ್ಟರ್‌ಗೆ ಮೊದಲ ದಿನವೇ ತಂದುಕೊಟ್ಟಿತ್ತು. 

ಐಪಿಒನಲ್ಲಿ ಷೇರುಗಳು ಅಲಾಟ್‌ ಆಗಬೇಕೆಂದರೆ, ಅದಕ್ಕೆ ಇದೇ ಮಾರ್ಗ ಅನ್ನೋದಿಲ್ಲ. ಆದರೆ, ನೀವು ಮಾಡುವ ಸಣ್ಣತಪ್ಪುಗಳು ಕೂಡ ನಿಮ್ಮ ಅಪ್ಲಿಕೇಶನ್‌ ರಿಜೆಕ್ಟ್‌ ಆಗಲು ಕಾರಣವಾಗುತ್ತೆ. ಹಾಗಿದ್ದರೆ, ಐಪಿಒಗೆ ಅಪ್ಲೈ ಮಾಡುವಾಗ ನಿಮ್ಮ ಅಪ್ಲಿಕೇಶನ್‌ ಹೇಗಿರಬೇಕು? ಅಲಾಟ್ಮೆಂಟ್‌ ಚಾನ್ಸ್‌ ಹೆಚ್ಚಿಸಿಕೊಳ್ಳೋದು  ಹೇಗೆ ಅನ್ನೋದರ ವಿವರ ಇಲ್ಲಿದೆ.

Tap to resize

Latest Videos

undefined

ಸರಿಯಾಗಿ ಅರ್ಜಿ ಭರ್ತಿ ಮಾಡಿ: ಐಪಿಒ ಅಪ್ಲೈ  ಮಾಡುವಾಗ ಯಾವುದೇ ತಪ್ಪುಗಳು ಆಗುವಂತಿಲ್ಲ. ನಿಮ್ಮ ಪ್ಯಾನ್‌ ನಂಬರ್,‌ ಡಿಮ್ಯಾಟ್‌ ಖಾತೆಗಳ ವಿವರ, ಬ್ಯಾಂಕ್‌ ವಿವರ ಸರಿಯಾಗಿ ಇರಬೇಕು. ಸ್ಪಷ್ಟ ಮಾಹಿತಿ ಇಲ್ಲದೇ ಇದ್ದಾಗ ಅರ್ಜಿ ರದ್ದಾಗಲಿದೆ. ಬಿಡ್ಡಿಂಗ್‌ ಮಾಡುವಾಗ ಒಂದು ಕಡೆ ಇನ್ವೆಸ್ಟರ್‌ ಇನ್ನೊಂದು ಕಡೆ ಶೇರ್‌ ಹೋಲ್ಡರ್‌ ಆಗಿ ಎರಡು ಅರ್ಜಿ ಭರ್ತಿ ಮಾಡಿದರೆ, ನಿಮ್ಮ ಮನವಿ ರದ್ದಾಗುತ್ತದೆ.

ಒಂದೇ ಪಾನ್‌ಗೆ ಹಲವು ಡಿಮ್ಯಾಟ್‌ ಖಾತೆ ಬಳಸಬೇಡಿ: ಒಂದು ಡಿಮ್ಯಾಟ್‌ಗೆ ಒಂದೇ ಅರ್ಜಿ ಅನ್ನೋದನ್ನ ನೀವು ನೆನಪಿಟ್ಟುಕೊಳ್ಳಲೇಬೇಕು. ಒಂದೇ ಪಾನ್‌ ನಂಬರ್‌ ಬಳಸಿಕೊಂಡು ಎರಡು ಮೂರು ಡಿಮ್ಯಾಟ್‌ ಖಾತೆ ರಚಿಸಿಕೊಂಡು ಆ ಎಲ್ಲದರಿಂದಲೂ ಅರ್ಜಿ ಹಾಕಿದಲ್ಲಿ ನಿಮ್ಮ ಅರ್ಜಿ ತಿರಸ್ಕೃತವಾಗೋದು ಖಚಿತ.

ಮನೆಯ ಎಲ್ಲರ ಡಿಮ್ಯಾಟ್‌ನಿಂದ ಅರ್ಜಿ ದಾಖಲಿಸಿ: ನಿಮ್ಮ ಒಂದು ಡಿಮ್ಯಾಟ್‌ ಖಾತೆಯಿಂದ ಅರ್ಜಿ ಸಲ್ಲಿಸಿದ ಬಳಿಕ ಸುಮ್ಮನಾಗಬೇಕಿಲ್ಲ. ನಿಮ್ಮ ಪತ್ನಿ, ಮಕ್ಕಳು, ಸಂಬಂಧಿಗಳು, ಸ್ನೇಹಿತರು ಇವರ ಹೆಸರಲ್ಲಿ ಡಿಮ್ಯಾಟ್‌ ಖಾತೆ ಇದ್ದರೆ, ಅವರ ಹೆಸರಿನಲ್ಲೂ ಐಪಿಒ ಅರ್ಜಿ ಸಲ್ಲಿಕೆ ಮಾಡಿ. ಐಪಿಒ ಹಂಚಿಕೆ ಆಗೋದು ಡಿಮ್ಯಾಟ್‌ ಬದಲಿಗೆ ಪ್ಯಾನ್‌ ಕಾರ್ಡ್‌ ಆಧಾರದಲ್ಲಿ. ಆಗ ನಿಮ್ಮ ಪಾರ್ನ್‌ ಕಾರ್ಡ್‌ಗೂ ನಿಮ್ಮ ಸ್ನೇಹಿತರ ಪಾನ್‌ ಕಾರ್ಡ್‌ಗೂ ಷೇರು ಅಲಾಟ್‌ ಆಗುವ ಸಾಧ್ಯತೆ ಇರುತ್ತದೆ.

ಕಂಪನಿಯಲ್ಲಿ ಪರಿಚಿತರ ಮೂಲಕ ಅಪ್ಲಿಕೇಶನ್‌: ಕೆಲವೊಂದು ಕಂಪನಿಗಳು ತನ್ನ ಉದ್ಯೋಗಿಗಳಿಗೆ ಐಪಿಒನಲ್ಲಿ ಷೇರು ಖರೀದಿ ಮಾಡುವ 'ಎಂಪ್ಲಾಯಿ' ಅನ್ನೋ ಆಯ್ಕೆಯನ್ನು ನೀಡುತ್ತದೆ. ಹಾಗೇನಾದರೂ ಐಪಿಒಗೆ ಹೋಗುವ ಕಂಪನಿಯಲ್ಲಿ ನಿಮ್ಮ ಸ್ನೇಹಿತರು ಅಥವಾ ಪತ್ನಿ/ಪತಿ ಕೆಲಸ ಮಾಡುತ್ತಿದ್ದಲ್ಲಿ ಅವರಿಗೆ ಎಂಪ್ಲಾಯಿ ಆಯ್ಕೆಯಲ್ಲಿ ಐಪಿಒ ಷೇರು ಖರೀದಿ ಮಾಡುವ ಅವಕಾಶ ಇರುತ್ತದೆ. ಬಳಿಕ ನೀವು ಅವರಿಂದ ಷೇರನ್ನು ವರ್ಗಾವಣೆ ಮಾಡಿಸಿಕೊಳ್ಳಬಹುದು.

ಅಮೆರಿಕಕ್ಕಿಂತ ಸ್ವಿಜರ್ಲೆಂಡ್‌ನಲ್ಲಿಯೇ ಹೆಚ್ಚು ಮಿಲಿಯನೇರ್‌ಗಳೇಕೆ? ಇಲ್ಲಿದೆ ರಹಸ್ಯ!

ಆಪ್‌ ಮೂಲಕ ಅರ್ಜಿ ಸಲ್ಲಿಸುವಾಗ ಹುಷಾರಾಗಿರಿ: ಗ್ರೋವ್‌, ಜೀರೋಧಾ, ಇಂಡಿಯಾ ಮನಿ ಸೇರಿದಂತೆ ಹಲವು ಬ್ರೋಕರೇಜ್‌ ಅಪ್ಲಿಕೇಶನ್‌ಗಳು ಕೂಡ ಐಪಿಒಗೆ ಬಿಡ್‌ ಮಾಡುವ ಅವಕಾಶ ನೀಡುತ್ತದೆ. ಹಾಗೇನಾದರೂ ಇಂಥ ಆಪ್‌ಗಳ ಮೂಲಕ ಅರ್ಜಿ ಸಲ್ಲಿಕೆ ಮಾಡುತ್ತಿದ್ದರೆ, ಬ್ಯಾಂಕ್‌ ಅಕೌಂಟ್‌, ಡಿ ಮ್ಯಾಟ್‌ ಅಕೌಂಟ್‌, ಯುಪಿಐ ಐಡಿ, ಪ್ಯಾನ್‌ ನಂಬರ್‌ ಲಿಂಕ್‌ ಆಗಿದೆಯಾ ಅನ್ನೋದನ್ನ ನೋಡಿಕೊಳ್ಳಿ. ನಿಮ್ಮ ಹೆಸರಿನಲ್ಲಿ ಅಪ್ಲಿಕೇಶನ್‌ ಭರ್ತಿ ಮಾಡಿ, ಪತ್ನಿಯ ಯುಪಿಐ ಐಡಿಯಿಂದ ಹಣ ಬ್ಲಾಕ್‌ ಮಾಡಿದ್ದರೆ ನಿಮ್ಮ ಅರ್ಜಿ ತಿರಸ್ಕೃತವಾಗುತ್ತದೆ.

ಬರಲಿದೆ ದೇಶದ ಟಾಪ್‌ ಕಂಪನಿಗಳ ಭರ್ಜರಿ ಐಪಿಒ: ಹೂಡಿಕೆಗೆ ಸಜ್ಜಾಗಿ!

ಗರಿಷ್ಠ ಬೆಲೆಗೆ ಆಯ್ಕೆ ಮಾಡಿ: ಐಪಿಒನಲ್ಲಿ ಒಂದು ಪ್ರೈಸ್‌ ಬ್ಯಾಂಡ್‌ ಇರುತ್ತದೆ. ಸೋಮವಾರದಿಂದ ಬಿಡ್ಡಿಂಗ್‌ಗೆ ಬರಲಿರುವ ಬಜಾಜ್‌ ಹೌಸಿಂಗ್‌ ಫೈನಾನ್ಸ್‌ ಕಂಪನಿ 66-70 ರೂಪಾಯಿ ಪ್ರೈಸ್‌ ಬ್ಯಾಂಡ್‌ಅನ್ನು ತನ್ನ ಷೇರಿಗೆ ನಿಗದಿ ಮಾಡಿದೆ. ಈ ಹಂತದಲ್ಲಿ ನೀವು ಗರಿಷ್ಠ ಕಟ್‌ಆಫ್‌ ಬೆಲೆ ಆಗಿರುವ 70 ಅನ್ನೇ ಆಯ್ಕೆ ಮಾಡಿಕೊಳ್ಳಿ. ಪ್ರತಿ ಷೇರಿಗೆ ಗರಿಷ್ಠ ಬೆಲೆಯನ್ನು ನೀಡಲು ಒಪ್ಪಿರುವ ನಿಮಗೆ ಷೇರು ಅಲಾಟ್‌ಆಗುವ ಅವಕಾಶ ಜಾಸ್ತಿ ಇರುತ್ತದೆ.

ಮೂಲ ಸಂಸ್ಥೆಯ ಷೇರು ಖರೀದಿ ಮಾಡಿ: ಉದಾಹರಣೆಗೆ ಬಜಾಜ್‌ ಹೌಸಿಂಗ್‌ ಫೈನಾನ್ಸ್‌ನ ಐಪಿಒ ಬಿಡ್ಡಿಂಗ್‌ನಲ್ಲಿದೆ. ನೀವೇನಾದರೂ ಈ ಕಂಪನಿಯ ಮೂಲ ಸಂಸ್ಥೆಯಾಗಿರುವ ಬಜಾಜ್‌ ಫಿನ್‌ಸರ್ವ್‌ನ ಷೇರು ಹೊಂದಿದ್ದಲ್ಲಿ, ಪೇರೆಂಟ್‌ ಕಂಪನಿ ಷೇರು ಹೊಂದಿರುವ ಕೋಟಾದಲ್ಲಿ ನೀವು ಬಜಾಜ್‌ ಹೌಸಿಂಗ್‌ ಫೈನಾನ್ಸ್‌ನ ಐಪಿಒ ಅಪ್ಲೈ ಮಾಡಬಹುದು. ಆಗ ಅಲಾಟ್‌ಮೆಂಟ್‌ ಅವಕಾಶ ಹೆಚ್ಚಿರುತ್ತದೆ.
 

click me!