ಇನ್​ಸ್ಟಾಗ್ರಾಮ್ ನಲ್ಲಿ ಡ್ರೋನ್ ಪ್ರತಾಪ್ ಮತ್ತೆ ಪ್ರತ್ಯಕ್ಷ, ಹೊಸ ಕಂಪನಿ ಘೋಷಣೆ; ಸಖತ್ತಾಗಿ ಕಾಲೆಳೆದ ನೆಟ್ಟಿಗರು

By Suvarna News  |  First Published Nov 14, 2022, 12:41 PM IST

ಈ ತಿಂಗಳು ಹೊಸ ಅವತಾರದಲ್ಲಿ ಎರಡು ಬಾರಿ ಇನ್ ಸ್ಟಾಗ್ರಾಮ್ ನಲ್ಲಿ ಪ್ರತ್ಯಕ್ಷರಾಗಿರುವ  ಡ್ರೋನ್ ಪ್ರತಾಪ್ ,ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ನವೆಂಬರ್ ಮೊದಲ ವಾರದಲ್ಲಿ ಡ್ರೋನ್ ತಯಾರಿಸುವ ಗೆಟ್ ಅಪ್ ನಲ್ಲಿ ಫೋಟೋ ಪೋಸ್ಟ್ ಮಾಡಿ ಸುದ್ದಿಯಾಗಿದ್ದ ಪ್ರತಾಪ್, ಈಗ ಇನ್ ಸ್ಟಾಗ್ರಾಮ್ ಲೈವ ವಿಡಿಯೋದಲ್ಲಿ ಹೊಸ ಡ್ರೋನ್ ಕಂಪನಿ ಸ್ಥಾಪಿಸಿದ್ದು, ನಾನೇ ಅದರ ಸಿಇಒ ಎಂದು  ಘೋಷಿಸಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿ, ಪ್ರತಾಪ್ ಕಾಲೆಳೆದಿದ್ದಾರೆ. 
 


ಬೆಂಗಳೂರು (ನ.14): ಡ್ರೋನ್ ಪ್ರತಾಪ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಹೊಸ ಡ್ರೋನ್ ಕಂಪನಿ ಸ್ಥಾಪಿಸಿಸುತ್ತಿದ್ದು, ನಾನೇ ಅದರ ಸಿಇಒ ಎಂದು ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಲೈವ್ ವಿಡಿಯೋದಲ್ಲಿ ಸಿನಿಮೀಯ ಶೈಲಿಯಲ್ಲಿ ಘೋಷಣೆ ಮಾಡಿದ್ದಾರೆ. ನಾನು ಯುವಿಜ್ಞಾನಿ ಡ್ರೋನ್ ತಯಾರಿಸಿದ್ದೇನೆ ಎಂದು ಹೇಳಿಕೊಂಡು ಸಾಕಷ್ಟು ಬಿಟ್ಟಿ ಪ್ರಚಾರ ಗಿಟ್ಟಿಸಿಕೊಳ್ಳುವ ಮೂಲಕ ಗಮನ ಸೆಳೆದು, ರಾಜಕಾರಣಿಗಳು ಹಾಗೂ ನಟರು ಸೇರಿದಂತೆ ಗಣ್ಯ ವ್ಯಕ್ತಿಗಳಿಗೆ ಟೋಪಿ ಹಾಕಿರುವ ಆರೋಪಕ್ಕೊಳಗಾಗಿದ್ದ ಪ್ರತಾಪ್ ಇತ್ತೀಚೆಗೆ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ತಮ್ಮ ಇನ್​ಸ್ಟಾಗ್ರಾಮ್ ನಲ್ಲಿ ಲೈವ್ ಬಂದ ಪ್ರತಾಪ್, ನಾನು 'ಡ್ರೋನಾರ್ಕ್ ಏರೋಸ್ಪೇಸ್' ಎಂಬ ಡ್ರೋನ್ ತಯಾರಿಕಾ ಕಂಪನಿ ಸ್ಥಾಪಿಸಿದ್ದೇನೆ. ಈ ಕಂಪನಿ  ಬೆಂಗಳೂರು, ನಾಸಿಕ, ಪುಣೆ, ಧುಲೆ ಈ ನಾಲ್ಕು ನಗರಗಳನ್ನು ಕೇಂದ್ರೀಕರಿಸಿ ಕಾರ್ಯನಿರ್ವಹಿಸಲಿದೆ ಎಂದು ಪ್ರತಾಪ್ ತಿಳಿಸಿದ್ದಾರೆ. ಇನ್ನು ಕೃಷಿ ಸಂಬಂಧಿ ಡ್ರೋನ್ ಉತ್ಪಾದನೆಗೆ ಈಗಾಗಲೇ ಆಡರ್ರ್ ಸಿಕ್ಕಿದ್ದು, ಉತ್ಪಾದನೆ ಪ್ರಾರಂಭಿಸಲಾಗಿದೆ ಎಂದೂ ಮಾಹಿತಿ ನೀಡಿದ್ದಾರೆ. ಕಂಪನಿ ಹೆಸರಿನಲ್ಲಿ ಈಗಾಗಲೇ ಇನ್​ಸ್ಟಾಗ್ರಾಮ್ , ಟ್ವಿಟ್ಟರ್ ಖಾತೆ ತೆರೆದಿದ್ದು, ಅಲ್ಲಿ ಪರಿಶೀಲಿಸಬಹುದು ಎಂದಿದ್ದಾರೆ. ಅದೇ ವಿಡಿಯೋದಲ್ಲಿ ಇನ್ನೊಂದೆಡೆ ಈಗಾಗಲೇ ಎರಡು ಡ್ರೋನ್ ಉತ್ಪಾದಿಸಲಾಗಿದೆ ಎಂದಿದ್ದಾರೆ. ಇನ್ನು ಡ್ರೋನ್ ಬಗ್ಗೆ ಆಸಕ್ತಿ ಹೊಂದಿರುವ ಯುವಕರಿಗೆ ಉದ್ಯೋಗ ಸೃಷ್ಟಿಸುವ ಉದ್ದೇಶ ಹೊಂದಿರೋದಾಗಿ ತಿಳಿಸಿದ್ದಾರೆ. ಟ್ರೋಲ್ ಮಾಡೋರು ಮಾಡಿ, ನಾನು ನನ್ನ ಕೆಲಸ ಮಾಡುತ್ತೇನೆ ಎಂದು ಪ್ರತಾಪ್ ಹೇಳಿದ್ದಾರೆ. 

ಪ್ರತಾಪ್ ಹೊಸ ವಿಡಿಯೋಗೆ ನೆಟ್ಟಿಗರು ತರಹೇವಾರಿ ಕಮೆಂಟ್ ಮಾಡಿ, ಸಖತ್ತಾಗಿ ಕಾಲೆಳೆದಿದ್ದಾರೆ ಕೂಡ. 'I am announcing a company called Dronak Aerospace' ಎಂದು ಪ್ರತಾಪ್ ಘೋಷಣೆ ಮಾಡಿರೋದನ್ನು ಕೆಲವರು ಕೆ.ಜಿ.ಎಫ್. ಸ್ಟೈಲ್ ಗೆ ಹೋಲಿಸಿದ್ದಾರೆ. ಪ್ರತಾಪ್ ಈ ವಿಡಿಯೋಗೆ  500ಕ್ಕೂ ಹೆಚ್ಚು ಮಂದಿ ಕಾಮೆಂಟ್ ಮಾಡಿದ್ದಾರೆ. ಅದ್ರಲ್ಲಿ ಬಹುತೇಕರು ಪ್ರತಾಪ್ ಕಾಲೆಳೆದಿದ್ದಾರೆ. ಆದರೆ, ಕೆಲವೇ ಕೆಲವು ಮಂದಿ ಮಾತ್ರ ಎಷ್ಟೇ ನೆಗೆಟಿವ್ ಕಾಮೆಂಟ್ ಬಂದ್ರೂ ಏನಾದ್ರೂ ಮಾಡುವ ಪ್ರತಾಪ್ ಗುಣವನ್ನು ಹೊಗಳಿದ್ದಾರೆ. 'ನಾನು ಕೂಡ ಕಾಗೆ ಡ್ರೋನ್ ಎಂಬ ಕಂಪನಿ ಸ್ಥಾಪಿಸಿದ್ದೇನೆ.  ನಾನು ಕೂಡ ಅದರ ಸಿಇಒ. ನಾವು ಕಾಗೆಗಳನ್ನು ಬಳಸಿ ಡ್ರೋನ್ ತಯಾರಿಸಿದ್ದೇವೆ' ಎಂದು ಒಬ್ಬರು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.  ಇನ್ನೊಬ್ಬರು 'ಸರ್ ಗ್ರೇಟ್ ನೀವು, ಗಂಧದ ಗುಡಿಯಾ ಶ್ರೀಗಂಧ' ಎಂದು ಕಾಲೆಳೆದಿದ್ದರೆ. ಮತ್ತೊಬ್ಬರು ವಿಡಿಯೋದುದ್ದಕ್ಕೂ ಕೇಳಿಸುತ್ತಿದ್ದ ಕುಕ್ಕರ್  ವಿಸಿಲ್ ಸದ್ದು ಕೇಳಿ, 'ಕುಕ್ಕರ್ ನ 3 ವಿಸಿಲ್ ಆಯ್ತು ಅನ್ಸುತ್ತೆ ಹೋಗಿ ಗ್ಯಾಸ್ ಆಫ್ ಮಾಡು ಅಣ್ಣ' ಎಂದು ಕಾಮೆಂಟ್ ಮಾಡಿದ್ದಾರೆ. 'ಎಲ್ಲ ಓಕೆ ಅಣ್ಣ, ಆದ್ರೆ ಆ ಕೋಲ್ಗೇಟ್ ಪೇಸ್ಟ್ ಕ್ಯಾಪ್ ಕಿವಿಗೆ ಯಾಕಣ್ಣ ಹಾಕೊಂಡಿದ್ದೀಯ' ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬರು 'ಕಾಗೆ ಇಮೋಜಿನೇ ಸಿಕ್ತಾ ಇಲ್ಲ' ಎಂದು ಕಾಮೆಂಟ್ ಮಾಡಿದ್ದಾರೆ.

Tap to resize

Latest Videos

FTX ಸಹ ಸಂಸ್ಥಾಪಕ ಅಳುವಂತೆ ಮಾಡಿದ ಈ ಭಾರತೀಯ ಸಂಜಾತ ಯಾರು ಗೊತ್ತಾ?

ಇನ್ನು ಮುಂಬೈನಲ್ಲಿ ಕಂಪನಿಗಳ ನೋಂದಣಾಧಿಕಾರಿ ಬಳಿ ಡ್ರೋನಾರ್ಕ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ ಎಂಬ ಹೆಸರಿನ ಕಂಪನಿ ನೋಂದಣಿಯಾಗಿದೆ. ಅಲ್ಲಿನ ಮಾಹಿತಿ ಅನ್ವಯ ಈ ಕಂಪನಿ 2022ರ ಸೆಪ್ಟೆಂಬರ್ 19ರಂದು ಸ್ಥಾಪನೆಯಾಗಿದೆ. ಇದು ಇತರ ಎಲೆಕ್ಟ್ರಿಕ್ ಸಾಧನಗಳ ಉತ್ಪಾದನಾ ಕಂಪನಿಯಾಗಿದೆ ಎಂಬ ಮಾಹಿತಿಯನ್ನು ನೋಂದಣಾಧಿಕಾರಿಗೆ ನೀಡಲಾಗಿದೆ. ಇದು ಈ ಕಂಪನಿ 10ಲಕ್ಷ ರೂ. ಷೇರ್ ಕ್ಯಾಪಿಟಲ್ ಹಾಗೂ 50,000ರೂ. ಪೇಯ್ಡ್ ಅಪ್ ಕ್ಯಾಪಿಟಲ್ ಹೊಂದಿದೆ. ಇನ್ನು ಈ ಕಂಪನಿಯ ನಿರ್ದೇಶಕರು ಕೈಲಾಸ್ ಬಾಬುಲಾಲ್ ಗಾರ್ಗ್ ಹಾಗೂ ನೆಟ್ಕಲ್ ಮರಿಮಾದಯ್ಯ ಪ್ರತಾಪ್ ಎಂದಿದೆ. 

Sam Bankman Fried: ಒಂದೇ ವಾರದಲ್ಲಿ 160 ಕೋಟಿಯಿಂದ ಶೂನ್ಯಕ್ಕೆ ಇಳಿದ ಉದ್ಯಮಿ!

ಇದಕ್ಕೂ ಮುನ್ನ ನವೆಂಬರ್ ಮೊದಲ ವಾರದಲ್ಲಿ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಒಂದು ಫೋಟೋ ಪೋಸ್ಟ್ ಮಾಡಿದ್ದರು.  ಅದರಲ್ಲಿ ಟೇಬಲ್​ ಮೇಲೊಂದು ಲ್ಯಾಪ್​ಲಾಪ್​ ಇಟ್ಟು, ಅದಕ್ಕೆ ಡಾಟಾ ಕೇಬಲ್​ ಅವಳವಡಿಸಿರುವ ಯಾವುದೋ ಒಂದು ಸಾಧನವನ್ನು ತಮ್ಮ ಮುಂದಿಟ್ಟುಕೊಂಡು, ಎರಡು ಕೈಗಳಿಗೆ ಹಳದಿ ಬಣ್ಣದ ರಕ್ಷಾ ಕವಚ ಹಾಗೂ ಕಣ್ಣಿಗೆ ಸುರಕ್ಷಿತ ಕನ್ನಡಕ ಧರಿಸಿ, ಒಂದು ಕೈಯಲ್ಲಿ ಸಾಲ್ಡರಿಂಗ್ ಗೇರ್​ ಹಿಡಿದಿದ್ದರು. ಟೇಬಲ್​ನ ಒಂದು ಬದಿಯಲ್ಲಿ ಡ್ರೋನ್​ ಕ್ಯಾಮೆರಾದ ಅರ್ಧ ಚಿತ್ರ ಕಾಣುತ್ತಿತ್ತು. ಇನ್ನು ಈ ಫೋಟೋಗೆ  'ಕೆಟ್ಟ ಜನರು ನಿಮ್ಮ ಜೀವನವನ್ನು ತೊರೆದಾಗ, ಸರಿಯಾದ ವಿಷಯಗಳು ನಿಮ್ಮ ಜೀವನದಲ್ಲಿ ನಡೆಯಲು ಪ್ರಾರಂಭಿಸುತ್ತವೆ' ಎಂಬ ಅಡಿಬರಹ ನೀಡಿದ್ದರು. 
 

 
 
 
 
 
 
 
 
 
 
 
 
 
 
 

A post shared by Prathap N M (@droneprathap)

 

 

 

 

 

 

 

click me!