ಪದೇಪದೆ ಕ್ರೆಡಿಟ್ ಸ್ಕೋರ್ ಚೆಕ್ ಮಾಡಿದ್ರೆ ತೊಂದರೆ ತಪ್ಪಿದ್ದಲ್ಲ!

By Suvarna NewsFirst Published Oct 29, 2022, 7:02 PM IST
Highlights

ಸಾಲ ನೀಡುವ ಮುನ್ನ ಬ್ಯಾಂಕ್ ಗಳು ಅಥವಾ ಇತರ ಸಂಸ್ಥೆಗಳು ನಿಮ್ಮ ಕ್ರೆಡಿಟ್ ಸ್ಕೋರ್ ಚೆಕ್ ಮಾಡಿಯೇ ಮಾಡುತ್ತವೆ. ಆದರೆ, ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ನೀವೇ ಆಗಾಗ ಚೆಕ್ ಮಾಡುತ್ತಿದ್ರೆ ಏನಾದ್ರೂ ಸಮಸ್ಯೆಯಾಗುತ್ತಾ? ಕ್ರೆಡಿಟ್ ಸ್ಕೋರ್ ಕಡಿಮೆಯಾಗುತ್ತಾ? ಇಲ್ಲಿದೆ ಮಾಹಿತಿ. 
 

Business Desk:ಇಂದು ಸಾಲ ಪಡೆಯುವಲ್ಲಿ ಕ್ರೆಡಿಟ್ ಸ್ಕೋರ್ ನಿರ್ಣಾಯಕ ಪಾತ್ರ ವಹಿಸುತ್ತದೆ. ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದ್ರೆ ಮಾತ್ರ ಸುಲಭವಾಗಿ ಸಾಲ ಸಿಗುತ್ತದೆ. ಕಡಿಮೆ ಕ್ರೆಡಿಟ್ ಸ್ಕೋರ್ ಹೊಂದಿರೋರಿಗೆ ಸಾಲ ಸಿಗೋದು ಸ್ವಲ್ಪ ಕಷ್ಟ. ಕ್ರೆಡಿಟ್ ಸ್ಕೋರ್ ಅಂದ್ರೆ ಏನು ಎಂಬ ಪ್ರಶ್ನೆ ಕಾಡಬಹುದು. ಸರಳವಾಗಿ ಹೇಳಬೇಕೆಂದ್ರೆ  3 ಅಂಕೆಗಳ ರೂಪದಲ್ಲಿರುವ ಗ್ರಾಹಕರ ಕ್ರೆಡಿಟ್ ವಿವರ.  ಇದು ಗ್ರಾಹಕರು ಈ ಹಿಂದೆ ಸಾಲಗಳನ್ನು ಪಡೆದಿರೋದು ಹಾಗೂ ಅದನ್ನು ಮರುಪಾವತಿಸಿದ ಬಗ್ಗೆ ಬ್ಯಾಂಕ್ ಗಳು ಹಾಗೂ ಸಾಲಗಾರರು ನಿಯಮಿತವಾಗಿ ಕ್ರೆಡಿಟ್ ಇನ್ಫಾರ್ಮೇಷನ್ ಬ್ಯುರೋ ಆಫ್ ಇಂಡಿಯಾ ಲಿಮಿಟೆಡ್ ಗೆ (ಸಿಬಿಲ್) ನೀಡಿರುವ ಮಾಹಿತಿಗಳನ್ನು ಆಧರಿಸಿರುತ್ತದೆ. ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡೋದು. ಅನಗತ್ಯವಾಗಿ ಸಾಲ ಪಡೆಯದಿದ್ರೆ ಅಂಥವರ ಕ್ರೆಡಿಟ್ ಸ್ಕೋರ್ ಉತ್ತಮವಾಗಿರುತ್ತದೆ. ಕ್ರೆಡಿಟ್ ಸ್ಕೋರ್ ಹೆಚ್ಚಾಗಿದ್ರೆ ನಿಮಗೆ ಸಾಲ ಪಡೆಯಲು ಹೆಚ್ಚು ಅರ್ಹತೆ ಇರುತ್ತದೆ. ಕೆಲವು ಬ್ಯಾಂಕುಗಳು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರೋರಿಗೆ ಕಡಿಮೆ ಬಡ್ಡಿದರಕ್ಕೆ ಸಾಲ ಕೂಡ ನೀಡುತ್ತವೆ. ಕೆಲವರಿಗೆ ಪದೇಪದೆ ಕ್ರೆಡಿಟ್ ಸ್ಕೋರ್ ಚೆಕ್ ಮಾಡುವ ಅಭ್ಯಾಸವಿರುತ್ತದೆ. ಆದರೆ, ಈ ಅಭ್ಯಾಸ ಕ್ರೆಡಿಟ್ ಸ್ಕೋರ್ ಕಡಿಮೆಯಾಗಲು ಕೂಡ ಕಾರಣವಾಗಬಲ್ಲದು. ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ. 

ನೀವು ಯಾವುದೇ ಸಮಯದಲ್ಲಿ ಕ್ರೆಡಿಟ್ ಸ್ಕೋರ್ ಚೆಕ್ ಮಾಡಿದ್ರೂ ನಿಮ್ಮ ಕ್ರೆಡಿಟ್ ವರದಿಯಲ್ಲಿ ಆ ಬಗ್ಗೆ ಉಲ್ಲೇಖವಿರುತ್ತದೆ. ನಿಮ್ಮ ಕ್ರೆಡಿಟ್ ಅನ್ನು ಯಾರು, ಏಕೆ ಚೆಕ್ ಮಾಡಿದರು ಎಂಬ ಆಧಾರದಲ್ಲಿ ತನಿಖೆಯನ್ನು ಮೃದು ತನಿಖೆ ಅಥವಾ ಕಠಿಣ ತನಿಖೆ ಎಂದು ವರ್ಗೀಕರಿಸಲಾಗುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ನೀವೇ ಚೆಕ್ ಮಾಡಿದ್ರೆ ಅದನ್ನು ಮೃದು ತನಿಖೆ ಎಂದು ಪರಿಗಣಿಸಲಾಗುತ್ತದೆ. ಇದ್ರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಯಾವುದೇ ಪರಿಣಾಮವಾಗೋದಿಲ್ಲ. ಆದರೆ, ಕಠಿಣ ತನಿಖೆ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ. ಹಾಗಾದ್ರೆ  ಕಠಿಣ ತನಿಖೆ ಅಂದ್ರೆ ಏನು? ನೀವು ಸಾಲಕ್ಕೆ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಸಾಲ ನೀಡುವ ಬ್ಯಾಂಕ್ ಅಥವಾ ಸಂಸ್ಥೆ ನಿಮ್ಮ ಕ್ರೆಡಿಟ್ ಸ್ಕೋರ್ ಪರಿಶೀಲನೆಗೆ ವಿನಂತಿಸಿದರೆ ಅದನ್ನು ಕಠಿಣ ತನಿಖೆ ಎಂದು ಕರೆಯಲಾಗುತ್ತದೆ. ಈ ಕಠಿಣ ತನಿಖೆಗಳು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತವೆ. 

ಹೊಸ ಮನೆ ಖರೀದಿಸುತ್ತಿದ್ದೀರಾ? ಹಾಗಾದ್ರೆ ಆಸ್ತಿ ತೆರಿಗೆ ಬಗ್ಗೆ ನೀವು ತಿಳಿಯಲೇಬೇಕು!

ಎಷ್ಟು ಬಾರಿ ಕ್ರೆಡಿಟ್ ಸ್ಕೋರ್ ಚೆಕ್ ಮಾಡ್ಬಹುದು?
ನಿಮ್ಮ ಕ್ರೆಡಿಟ್ ಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ನೀವು ಆಗಾಗ ನಿಮ್ಮ ಕ್ರೆಡಿಟ್ ಸ್ಕೋರ್ ಚೆಕ್ ಮಾಡಬಹುದು. ನಿಯಮಿತವಾಗಿ ಕ್ರೆಡಿಟ್ ಸ್ಕೋರ್ ಚೆಕ್ ಮಾಡೋದು ಉತ್ತಮ ಐಡಿಯಾ ಕೂಡ ಹೌದು. ಅದರಲ್ಲೂ ಗೃಹ, ವಾಹನ ಅಥವಾ ಇನ್ಯಾವುದೇ ಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ ಒಮ್ಮೆ ನಿಮ್ಮ ಕ್ರೆಡಿಟ್ ಸ್ಕೋರ್ ಚೆಕ್ ಮಾಡೋದು ಉತ್ತಮ. ಇದ್ರಿಂದ ನಿಮಗೆ ಸಾಲ ದೊರೆಯುವಲ್ಲಿ ಯಾವುದೇ ತೊಂದರೆಯಿಲ್ಲ ಎಂಬುದು ಖಚಿತವಾಗುತ್ತದೆ. ಅಲ್ಲದೆ, ಸಾಲಕ್ಕೆ ಅರ್ಜಿ ಸಲ್ಲಿಸುವ ಕೆಲವು ತಿಂಗಳು ಮೊದಲೇ ಪರಿಶೀಲನೆ ಮಾಡೋದ್ರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಗೆ ತೊಂದರೆಯುಂಟು ಮಾಡುವ ಯಾವುದೇ ಸಮಸ್ಯೆಗಳಿದ್ರೆ ಅದನ್ನು ಬಗೆಹರಿಸಲು ಕೂಡ ಸಮಯಾವಕಾಶ ಸಿಗುತ್ತದೆ. ಕನಿಷ್ಠ ವರ್ಷಕ್ಕೊಮ್ಮೆಯಾದ್ರೂ ಕ್ರೆಡಿಟ್ ಸ್ಕೋರ್ ಚೆಕ್ ಮಾಡೋದು ಒಳ್ಳೆಯದು. 

ಚೆಕ್ ಮಾಡೋದು ಹೇಗೆ?
*https://www.cibil.com ಭೇಟಿ ನೀಡಿ.
*Get free CIBIL score and report ಮೇಲೆ ಕ್ಲಿಕ್ ಮಾಡಿ.
*ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ, ಹೆಸರು, ಐಡಿ ಸಂಖ್ಯೆ ನಮೂದಿಸಿ. 
*Accept and continue ಮೇಲೆ ಕ್ಲಿಕ್ ಮಾಡಿ.
*ಮೊಬೈಲ್ ಲಿಂಕ್ ಮಾಡಲು ಕೇಳುತ್ತದೆ. ಇದರಿಂದ ಲಾಗಿ ಇನ್ ಪ್ರಕ್ರಿಯೆ ಸರಳವಾಗುತ್ತದೆ.

ಭಾರತೀಯ ಹೂಡಿಕೆದಾರರ ನಂ.1 ಆಯ್ಕೆ ಎಫ್ ಡಿ ಅಲ್ಲ, ಮ್ಯೂಚ್ಯುವಲ್ ಫಂಡ್ಸ್: ಸಮೀಕ್ಷೆ

*ಆಯ್ಕೆಗಳಲ್ಲಿ ಯಾವುದು ಬೇಕು ಅನ್ನೋದನ್ನು ಆಯ್ಕೆ ಮಾಡಿ. ಆ ಬಳಿಕ Continue ಮೇಲೆ ಕ್ಲಿಕ್ ಮಾಡಿ.
*ಈಗ You have successfully enrolled ಮೇಲೆ ಕ್ಲಿಕ್ ಮಾಡಿ.
*ಮುಂದಿನ ಪುಟದಲ್ಲಿ ನಿಮ್ಮ ಸಿಬಿಲ್ ಸ್ಕೋರ್ ಲಭ್ಯವಾಗುತ್ತದೆ. 

click me!