ನೀವು ಒಂದಕ್ಕಿಂತ ಹೆಚ್ಚು Bank Account ಹೊಂದಿದ್ದೀರಾ..? ಹಾಗಾದ್ರೆ ಈ ಅಂಶಗಳ ಬಗ್ಗೆ ಗಮನವಿರಲಿ..!

By BK AshwinFirst Published Sep 21, 2022, 12:40 PM IST
Highlights

ನೀವು ಒಂದಕ್ಕಿಂತ ಹೆಚ್ಚು ಬ್ಯಾಂಕ್‌ ಖಾತೆಗಳನ್ನು ಹೊಂದಿರಬಹುದು. ಆದರೂ, ಕೆಲವು ಅಂಶಗಳ ಬಗ್ಗೆ ಗ್ರಾಹಕರು ಗಮನವಹಿಸಬೇಕಾಗಿದೆ. 

ಈಗ ದೇಶದ ಕೋಟ್ಯಂತರ ಜನರ ಬಳಿ ಬ್ಯಾಂಕ್‌ ಖಾತೆಗಳಿವೆ (Bank Accounts). ಮೋದಿ ಸರ್ಕಾರ ಜನ ಧನ ಯೋಜನೆಯನ್ನು (Jan Dhan Scheme) ಜಾರಿಗೆ ತಂದ ಬಳಿಕ ಬ್ಯಾಂಕ್‌ ಖಾತೆಗಳ ಸಂಖ್ಯೆ ಸಾಕಷ್ಟು ಹೆಚ್ಚಾಗಿದೆ. ಈ ಪೈಕಿ, ಉಳಿತಾಯ ಖಾತೆಯನ್ನು (Savings Account) ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಅಲ್ಲದೆ, ಹಲವರು ಒಂದಕ್ಕಿಂತ ಹೆಚ್ಚು ಬ್ಯಾಂಕ್‌ ಅಕೌಂಟ್‌ಗಳನ್ನು ಸಹ ಹೊಂದಿರುತ್ತಾರೆ. ಉಳಿತಾಯ ಖಾತೆಯನ್ನು ತೆರೆಯಲು ಹಲವಾರು ಬ್ಯಾಂಕುಗಳು ಲಾಭದಾಯಕ ಯೋಜನೆಗಳನ್ನು ನೀಡುತ್ತವೆ. ಅಲ್ಲದೆ, ಹಲವು ಬ್ಯಾಂಕುಗಳು ನೀಡುವ ಸೇವೆಗಳು ಮತ್ತು ಸೌಲಭ್ಯಗಳು ಬೇರೆ ಬೇರೆ ಇರುತ್ತದೆ. ಈ ಹಿನ್ನೆಲೆ ಹಲವು ಬ್ಯಾಂಕ್‌ ಅಕೌಂಟ್‌ಗಳನ್ನು ಓಪನ್‌ ಮಾಡಲು ಕೆಲವರನ್ನು ಪ್ರೇರೇಪಿಸುತ್ತದೆ. ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿರುವುದು ಒಳ್ಳೆಯದು ಎಂದು ತೋರುತ್ತದೆಯಾದರೂ, ನೀವು ಈ ಕೆಳಗಿನ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಒಳಿತು..

1) ಮಿನಿಮಮ್‌ ಬ್ಯಾಲೆನ್ಸ್ (Minimum Balance) :
ಬ್ಯಾಂಕ್‌ ಅಕೌಂಟ್‌ನಲ್ಲಿ ಮಿನಿಮಮ್‌ ಬ್ಯಾಲೆನ್ಸ್ ಕಾಯ್ದುಕೊಳ್ಳಬೇಕು ಎಂಬುದನ್ನು ಗಮನಿಸಬೇಕು. ಸೇವೆ ಮತ್ತು ಖಾತೆಯನ್ನು ನಿರ್ವಹಿಸುವ ವೆಚ್ಚವನ್ನು ಪರಿಗಣಿಸಿ ಬ್ಯಾಂಕ್‌ಗಳು ಈ ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ಧರಿಸುತ್ತವೆ ಮತ್ತು ನಾವು ಮಿನಿಮಮ್‌ ಬ್ಯಾಲೆನ್ಸ್‌ ಅನ್ನು ಮೇಂಟೇನ್‌ ಮಾಡದಿದ್ದಲ್ಲಿ, ಬ್ಯಾಂಕ್‌ಗಳು ನಿಮ್ಮ ಅಕೌಂಟ್‌ ಮೇಲೆ ನಿರ್ದಿಷ್ಟ ಶುಲ್ಕಗಳನ್ನು ವಿಧಿಸಬಹುದು. 

ಇದನ್ನು ಓದಿ: ಇನ್ನೆರಡು ದಿನಗಳ ಬಳಿಕ ಶಾಶ್ವತವಾಗಿ ಬಂದ್‌ ಆಗಲಿದೆ ಈ ಬ್ಯಾಂಕ್‌, ಹಣ ಮರಳಿ ಪಡೆಯಿರಿ ಎಂದ ಆರ್‌ಬಿಐ!

ಇನ್ನು, ಒಂದು ಅಥವಾ ಎರಡು ಉಳಿತಾಯ ಖಾತೆಗಳಲ್ಲಿ ಮಿನಿಮಮ್‌ ಬ್ಯಾಲೆನ್ಸ್ ಅನ್ನು ಇಟ್ಟುಕೊಳ್ಳುವುದು ಅನುಕೂಲಕರವಾಗಿದೆ. ಆದರೂ, ಹಲವು ಬ್ಯಾಂಕ್‌ ಅಕೌಂಟ್‌ಗಳೊಂದಿಗೆ ಅದೇ ರೀತಿ ಮಾಡುವುದು ಸವಾಲನ್ನು ಉಂಟುಮಾಡಬಹುದು.

2) ಹಿಂತೆಗೆದುಕೊಳ್ಳುವ ಮಿತಿ (Withdrawal Limit) :
ಕೆಲವು ಉಳಿತಾಯ ಖಾತೆಗಳಿಗೆ ಲಿಂಕ್ ಮಾಡಲಾದ ಡೆಬಿಟ್ ಕಾರ್ಡ್‌ಗಳು ಹಣವನ್ನು ಹಿಂಪಡೆಯಲು ಪ್ರತಿ ದಿನಕ್ಕಿಷ್ಟು ಹಣ ಹಿಂಪಡೆಯಬಹುದು ಎಂಬ ಮಿತಿಯನ್ನು ಹೊಂದಿರುತ್ತವೆ. ಅಂತಹ ಸನ್ನಿವೇಶದಲ್ಲಿ, ಹಲವು ಖಾತೆಗಳನ್ನು ಹೊಂದಿರುವುದರಿಂದ ನಿಮಗೆ ಸಹಾಯಕ ಎನಿಸಬಹುದು. ಏಕೆಂದರೆ, ನೀವು ವಿವಿಧ ಖಾತೆಗಳಿಂದ ಹೆಚ್ಚು  ಮೊತ್ತವನ್ನು ಹಿಂಪಡೆಯಬಹುದಾಗಿದೆ. 

ಇನ್ನು, ನೀವು ಎಷ್ಟು ಬ್ಯಾಂಕ್‌ ಸೇವಿಂಗ್ಸ್‌ ಅಕೌಂಟ್‌ ಅಥವಾ ಉಳಿತಾಯ ಖಾತೆಯನ್ನು ಹೊಂದಬಹುದು ಎಂಬುದಕ್ಕೆ ಯಾವುದೇ ಮಿತಿಯಿಲ್ಲ. ಆದರೂ, ನಿಮ್ಮ ಬ್ಯಾಂಕ್‌ ಖಾತೆ ಚಟುವಟಿಕೆಯಿಂದ ಇರಬೇಕು.  ಸ್ವಲ್ಪ ಸಮಯದವರೆಗೆ ನಿಮ್ಮ ಖಾತೆಯಲ್ಲಿ ಯಾವುದೇ ಚಟುವಟಿಕೆಯನ್ನು ಪತ್ತೆಹಚ್ಚದಿದ್ದರೆ, ನಿಮ್ಮ ಬ್ಯಾಂಕ್‌ ಖಾತೆಯನ್ನು ನಿಷ್ಕ್ರಿಯವೆಂದು ಬ್ಯಾಂಕ್‌ ಗುರುತಿಸಬಹುದು. ಅಲ್ಲದೆ, ನಿಮ್ಮ ಬ್ಯಾಂಕ್‌ ಖಾತೆ ನಿಷ್ಕ್ರಿಯವಾದರೆ, ಇದರಿಂದ ನೀವು ದಂಡವನ್ನು ಪಾವತಿಸಬೇಕಾಗಬಹುದು. ಇದರಿಂದ ಅಂತಿಮವಾಗಿ ನಿಮ್ಮ ಅಕೌಂಟ್‌ನ ಬ್ಯಾಂಕ್ ಬ್ಯಾಲೆನ್ಸ್ ಕಡಿಮೆಯಾಗಲು ಕಾರಣವಾಗುತ್ತದೆ.

ಇದನ್ನೂ ಓದಿ: ಬ್ಯಾಂಕ್‌ಗಳು ಸ್ಥಳೀಯ ಭಾಷೆ ಮಾತನಾಡುವವರನ್ನು ನೇಮಿಸಬೇಕು: Nirmala Sitharaman

3) ಬ್ಯಾಂಕ್ ಶುಲ್ಕಗಳು (Bank Charges) :
ಹಲವು ಬ್ಯಾಂಕುಗಳು ಉಳಿತಾಯ ಖಾತೆಗಳಿಗೆ ಅನೇಕ ಸೇವೆಗಳನ್ನು ಉಚಿತವಾಗಿ ನೀಡುತ್ತವೆ, ಆದರೆ ಕೆಲವು ಸೇವೆಗಳಿಗೆ ಬ್ಯಾಂಕುಗಳು ನಾನಾ ಶುಲ್ಕಗಳನ್ನೂ ವಿಧಿಸುತ್ತವೆ. ಈ ಹಿನ್ನೆಲೆ ಗ್ರಾಹಕರಾಗಿ, ನೀವು ಬ್ಯಾಂಕ್‌ಗಳ ವಿವಿಧ ಶುಲ್ಕಗಳು ಮತ್ತು ದಂಡಗಳ ಬಗ್ಗೆ ತಿಳಿದಿರಬೇಕು. ಇನ್ನೊಂದೆಡೆ, ಸಾಮಾನ್ಯವಾಗಿ, ಗ್ರಾಹಕರಿಗೆ ಹೆಚ್ಚಿನ ಶುಲ್ಕಗಳ ಬಗ್ಗೆ ತಿಳಿದಿರುವುದಿಲ್ಲ. ಈ ಹಿನ್ನೆಲೆ ನೀವು ಬ್ಯಾಂಕ್‌ ಅಕೌಂಟ್‌ ಅನ್ನು ತೆರೆಯುವಾಗ ಅಥವಾ ಅವರ ಉತ್ಪನ್ನಗಳನ್ನು ಖರೀದಿಸುವಾಗ ನೀವು ಎಲ್ಲಾ ಮಾಹಿತಿಯನ್ನು ಸಂಗ್ರಹಿಸುವುದು ಅವಶ್ಯಕವಾಗಿದೆ. 

ಈ ಎಲ್ಲ ಅಂಶಗಳನ್ನು ಪರಿಗಣಿಸಿ ನೀವು ನಿಮ್ಮ ಅನುಕೂಲಕ್ಕೆ ತಕ್ಕಷ್ಟು ಬ್ಯಾಂಕ್‌ ಅಕೌಂಟ್‌ಗಳನ್ನು ಇಟ್ಟುಕೊಳ್ಳಬಹುದಾಗಿದೆ. 

click me!