Diwali Muhurat Trading 2022: ದೀಪಾವಳಿಗೆ ಹೂಡಿಕೆ ಮಾಡ್ಬೇಕಾ..? ಇಲ್ಲಿದೆ ಶುಭ ಮುಹೂರ್ತ..!

Published : Oct 23, 2022, 01:57 PM ISTUpdated : Oct 23, 2022, 01:58 PM IST
Diwali Muhurat Trading 2022: ದೀಪಾವಳಿಗೆ ಹೂಡಿಕೆ ಮಾಡ್ಬೇಕಾ..? ಇಲ್ಲಿದೆ ಶುಭ ಮುಹೂರ್ತ..!

ಸಾರಾಂಶ

ಹೊಸ ಶಕೆ ಆರಂಭದ ನೆನಪಿಗಾಗಿ ಮುಹೂರ್ತದ ವ್ಯಾಪಾರವನ್ನು ನಡೆಸಲಾಗುತ್ತದೆ. ದೀಪಾವಳಿ ಹಬ್ಬದ ದಿನ ಈ  ಮುಹೂರ್ತ ಟ್ರೇಡಿಂಗ್ ನಡೆಯಲಿದೆ. 

ಸ್ಟಾಕ್ ಮಾರುಕಟ್ಟೆಗಳಾದ ಬಾಂಬೆ ಷೇರುಪೇಟೆ  (BSE) ಮತ್ತು ರಾಷ್ಟ್ರೀಯ ಸ್ಟಾಕ್‌ ಎಕ್ಸ್‌ಚೇಂಜ್‌ (NSE) ನಾಳೆ ಅಂದರೆ ಸೋಮವಾರ, ಅಕ್ಟೋಬರ್ 24, 2022 ರಂದು ದೀಪಾವಳಿಯ (Diwali) ರಜೆಯ ನಡುವೆಯೂ ಪ್ರತಿ ವರ್ಷದಂತೆ ಒಂದು ಗಂಟೆಯ ಮುಹೂರ್ತದ ವಹಿವಾಟು ನಡೆಯಲಿದೆ. ಕೇವಲ ಒಂದು ಗಂಟೆ ಕಾಲ ಷೇರು ಮಾರುಕಟ್ಟೆ (Share Market) ತೆರೆಯುವುದಾದರೂ, ಈ ವೇಳೆ ಸೂಚ್ಯಂಕದಲ್ಲಿ ಗೂಳಿಯ (Bull) ಅಬ್ಬರ ಜೋರಾಗಿರುತ್ತದೆ. ಅಂದ ಹಾಗೆ, ಈ ವಿಶೇಷ ಮುಹೂರ್ತ ವಹಿವಾಟು ಹಿಂದೂ ಪಂಚಾಂಗವನ್ನು (Hindu Panchanga) ಆಧರಿಸಿರುತ್ತದೆ. ಇದು ಹೊಸ ಸಂವತ್ (Samvat) ಅಥವಾ ಹೊಸ ಶಕೆಯ ಆರಂಭವನ್ನು ಸೂಚಿಸುತ್ತದೆ. ದೀಪಾವಳಿಯಂದು ಪ್ರಾರಂಭವಾಗುವ ಹಿಂದೂ ಕ್ಯಾಲೆಂಡರ್ ವರ್ಷವನ್ನು ಇದು ಸೂಚಿಸುತ್ತದೆ ಮತ್ತು ಮುಹೂರ್ತದ ವ್ಯಾಪಾರವು ವರ್ಷವಿಡೀ ಸಮೃದ್ಧಿ ಮತ್ತು ಸಂಪತ್ತನ್ನು ತರುತ್ತದೆ ಎಂದು ನಂಬಲಾಗಿದೆ.

ಹೊಸ ಶಕೆ ಆರಂಭದ ನೆನಪಿಗಾಗಿ ಮುಹೂರ್ತದ ವ್ಯಾಪಾರವನ್ನು ನಡೆಸಲಾಗುತ್ತದೆ. ಆಗ ಸಾಂಪ್ರದಾಯಿಕ ವ್ಯಾಪಾರ ಸಮುದಾಯವು ತಮ್ಮ ಅಕೌಂಟ್‌ ಪುಸ್ತಕಗಳನ್ನು ತೆರೆಯುತ್ತದೆ. ಈ ಮುಹೂರ್ತವು ಹಿಂದೂ ಜ್ಯೋತಿಷ್ಯದ ಪ್ರಕಾರ, ಹೊಸ ಅಥವಾ ಒಳ್ಳೆಯದನ್ನು ಪ್ರಾರಂಭಿಸಲು ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಇದನ್ನು ಓದಿ: ದೀಪಾವಳಿ ಬೋನಸ್ ಸಿಕ್ತಾ? ಆ ಹಣವನ್ನುಇಲ್ಲಿ ಹೂಡಿಕೆ ಮಾಡಿದ್ರೆ ಲಾಭ ಗ್ಯಾರಂಟಿ!

BSE ಮತ್ತು NSE ಸೂಚನೆಯ ಪ್ರಕಾರ, ಈಕ್ವಿಟಿ ಮತ್ತು ಈಕ್ವಿಟಿ ಉತ್ಪನ್ನ ವಿಭಾಗದಲ್ಲಿ ವ್ಯಾಪಾರವು ಅಕ್ಟೋಬರ್ 24, 2022 ಸೋಮವಾರ ಸಂಜೆ 6:15 ಕ್ಕೆ ಪ್ರಾರಂಭವಾಗುತ್ತದೆ. ಮತ್ತು ಒಂದು ಗಂಟೆಯ ನಂತರ ಸಂಜೆ 7:15 ಕ್ಕೆ ಕೊನೆಗೊಳ್ಳುತ್ತದೆ.ಈ ಮಧ್ಯೆ, ಪ್ರೀ - ಓಪನ್‌ ಸೆಷನ್‌ ಸಂಜೆ 6:00 ಕ್ಕೆ ಪ್ರಾರಂಭವಾಗುತ್ತದೆ ಮತ್ತು 6:08 ರವರೆಗೆ ಇರುತ್ತದೆ ಎಂದೂ ಮಾಹಿತಿ ತಿಳಿದುಬಂದಿದೆ.

ಮುಹೂರ್ತದ ವ್ಯಾಪಾರವು ದೀಪಾವಳಿಯಂದು (Deepavali) ಭಾರತದಲ್ಲಿ ಹಿಂದೂಗಳು ಲಕ್ಷ್ಮೀ ದೇವಿಯನ್ನು ಪೂಜಿಸುವಾಗ, ಲಕ್ಷ್ಮೀ ದೇವತೆಯ ಕೃಪೆಗೆ ಒಳಗಾಗಲು ಅಥವಾ ಆಕೆಯ ಆಶೀರ್ವಾದ ಪಡೆಯಲು ಒಂದು ಗಂಟೆಯ ಕಾಲ ನಡೆಯುವ ಮಂಗಳಕರವಾದ ಷೇರು ಮಾರುಕಟ್ಟೆ ವ್ಯಾಪಾರವಾಗಿದೆ. ಬಾಂಬೆ ಷೇರು ಮಾರುಕಟ್ಟೆ (BSE) ಯಲ್ಲಿ, ಈ ಅಭ್ಯಾಸವನ್ನು 1957 ರಲ್ಲಿ ಮತ್ತು 1992 ರಲ್ಲಿ ರಾಷ್ಟ್ರೀಯ ಸ್ಟಾಕ್‌ ಎಕ್ಸ್‌ಚೇಂಜ್ (NSE) ಪ್ರಾರಂಭಿಸಲಾಗಿದೆ. ಅಂದಿನಿಂದ ಪ್ರತಿ ವರ್ಷ ದೀಪಾವಳಿಯ ಸಂಜೆ ಒಂದು ಗಂಟೆಯ ಕಾಲ ಮುಹೂರ್ತ ಟ್ರೇಡಂಗ್ ನಡೆಯುತ್ತದೆ.

ಇದನ್ನೂ ಓದಿ: ದೀಪಾವಳಿ ಮುಹೂರ್ತ ಟ್ರೇಡಿಂಗ್; ಅ.24ರಂದು ರಜೆಯಿದ್ರೂ ಒಂದು ಗಂಟೆ ತೆರೆದಿರಲಿವೆ ಷೇರು ಮಾರುಕಟ್ಟೆಗಳು

ವಿಕ್ರಮ ಶಕೆ (ಸಂವತ್) 2079 ಹೆಚ್ಚು ಪ್ರಕಾಶಮಾನವಾಗಿ ಮತ್ತು ಹೆಚ್ಚು ಭರವಸೆಯನ್ನು ನೀಡುತ್ತದೆ ಹಾಗೂ ಭಾರತೀಯ ಆರ್ಥಿಕತೆಯು ಬೆಳವಣಿಗೆಯ ಸಿಹಿ ತಾಣದಲ್ಲಿದೆ ಮತ್ತು ಜಾಗತಿಕ ಆರ್ಥಿಕತೆ ಪ್ರಸ್ತುತ ಪರಿಸ್ಥಿತಿಯ ನಡುವೆಯೂ ನಮ್ಮ ದೇಶದ ಷೇರು ಮಾರುಕಟ್ಟೆ ಸ್ಥಿರತೆ ಕಾಯ್ದುಕೊಳ್ಳಲಿದೆ  ಎಂದು ದೇಶೀಯ ಬ್ರೋಕರೇಜ್ ಮತ್ತು ಸಂಶೋಧನಾ ಸಂಸ್ಥೆ ಆಕ್ಸಿಸ್ ಸೆಕ್ಯುರಿಟೀಸ್ ಹೇಳಿದೆ.

ಭಾರತೀಯ ಮಾರುಕಟ್ಟೆಯ ಉತ್ತಮ ಅಥವಾ ಸ್ಥಿರ ಪ್ರದರ್ಶನವು ಶಕೆ 2079 ರಲ್ಲೂ ಉಳಿಯುತ್ತದೆ ಎಂದು ಆಕ್ಸಿಸ್ ಸೆಕ್ಯುರಿಟೀಸ್ ವಿಶ್ವಾಸ ವ್ಯಕ್ತಪಡಿಸಿದೆ. ಇನ್ನು, ಅನುಕೂಲಕರ ಸ್ಥೂಲ ಆರ್ಥಿಕ ಅಂಶಗಳು ಮತ್ತು ಭಾರತೀಯ ಕಾರ್ಪೊರೇಟ್‌ಗಳ ಐತಿಹಾಸಿಕ ಮೂಲಗಳಿಗಿಂತ ಉತ್ತಮವಾಗಿರುತ್ತದೆ ಎಂದೂ ಹೇಳಲಾಗಿದೆ.

ಇನ್ನೊಂದೆಡೆ, "ವಿಕ್ರಮ ಶಕೆ (ಸಂವತ್) 2079 ರಲ್ಲಿ, ದರ ಏರಿಕೆಯ ಉತ್ತುಂಗದ ನಡುವೆಯೂ,  ಷೇರು ಮಾರುಕಟ್ಟೆ ನಿಧಾನಗತಿಯಲ್ಲಿದ್ದರೂ ಚಂಚಲತೆಯು ಮುಂದುವರಿಯಬಹುದು. ಜಾಗತಿಕ ಮಟ್ಟದಲ್ಲಿ ಮತ್ತು ವಿಶೇಷವಾಗಿ ದೇಶೀಯ ಮುಂಭಾಗದಲ್ಲಿ ಬೆಳವಣಿಗೆಯ ಪುನರಾರಂಭವು ಮಂದಗತಿಯ ಮನಸ್ಥಿತಿಯನ್ನು ಅಲುಗಾಡಿಸಲು ಮತ್ತು ಮಾರುಕಟ್ಟೆಗಳಲ್ಲಿ ನಿರಂತರ ಏರಿಕೆಯ ಹಾದಿಗೆ ಮರಳಲು ಅಗತ್ಯವಿದೆ" ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹೇಳಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!