ನಾ ಕೊಟ್ಟ ಖದೀಮರ ಪಟ್ಟಿ ಎಲ್ಲಿ ಮೋದಿಜೀ?: ರಾಜನ್ ಬಾಂಬ್!

By Web DeskFirst Published 12, Sep 2018, 2:37 PM IST
Highlights

ಬಿರುಗಾಳಿ ಎಬ್ಬಿಸಿದ ರಾಜನ್ ಸಿಡಿಸಿದ ಬಾಂಬ್! ಮೋದಿಗೆ ಹೈಪ್ರೊಫೈಲ್ ಸುಸ್ತಿದಾರರ ಪಟ್ಟಿ ಕೊಟ್ಟಿದ್ದರಾ ರಾಜನ್?! ರಾಜನ್ ಪಟ್ಟಿ ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದ ಪ್ರಧಾನಿ ಕಚೇರಿ?! ತಕ್ಷಣ ಕ್ರಮಕ್ಕೆ ಪ್ರಧಾನಿ ಮೋದಿ ಅವರನ್ನು ಕೇಳಿಕೊಂಡಿದ್ದ ರಾಜನ್! ಸಂಸದೀಯ ಸಮಿತಿ ಮುಂದೆ ಸದ್ಯ ಇರುವ ಆಯ್ಕೆಗಳೇನು?  

ನವದೆಹಲಿ(ಸೆ.12): ಹೆಚ್ಚುತ್ತಿರುವ ಮರುಪಾವತಿಯಾಗದ ಸಾಲಗಳ ಕುರಿತು ಸಂಸತ್ ಸಮಿತಿಯ ಪ್ರಶ್ನೆಗಳಿಗೆ, ಆರ್ ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ನೀಡಿದ್ದ ವಿವರಣೆ ಇದೀಗ ರಾಜಕೀಯ ವಲಯದಲ್ಲಿ ವಿವಾದದ ಬಿರುಗಾಳಿ ಎಬ್ಬಿಸಿದೆ. 

ಹೈಪ್ರೊಫೈಲ್ ಸುಸ್ತಿದಾರರ ಬಗ್ಗೆ ರಘುರಾಮ್ ರಾಜನ್ ನೀಡಿದ್ದ ಪಟ್ಟಿಯನ್ನು ಪ್ರಧಾನಿ ನರೇಂದ್ರ ಮೋದಿ ಕಚೇರಿ ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿತ್ತು ಎಂಬ ಅರ್ಥದಲ್ಲಿ ರಘುರಾಮ್ ರಾಜನ್ ಹೇಳಿಕೆ ನೀಡಿದ್ದಾರೆ. 

ಬ್ಯಾಂಕ್ ವಂಚನೆಗಳಿಗೆ ಸಂಬಂಧಿಸಿದಂತೆ  ವಂಚನೆ ಮೇಲ್ವಿಚಾರಣಾ ಸೆಲ್ ನ್ನು ಆರ್ ಬಿಐ  ಪ್ರಾರಂಭಿಸಿತ್ತು. ಅಷ್ಟೇ ಅಲ್ಲದೇ ಹೈ-ಪ್ರೊಫೈಲ್ ಸುಸ್ತಿದಾರರ ಪಟ್ಟಿಯನ್ನೂ ತಾವು ಪ್ರಧಾನಿ ಕಚೇರಿಗೆ ಕಳಿಸಿಕೊಟ್ಟು ತಕ್ಷಣವೇ ಕ್ರಮ ಕೈಗೊಳ್ಳುವುದಕ್ಕೆ ಮನವಿ ಮಾಡಿದ್ದಾಗಿ ರಾಜನ್ ಹೇಳಿಕೆ ನೀಡಿದ್ದಾರೆ. 

ರಾಜನ್ ವಿಸ್ತೃತ ವಿವರಣೆ ನೀಡಿರುವ ಹಿನ್ನೆಲೆಯಲ್ಲಿ ಮುರಳಿ ಮನೋಹರ್ ಜೋಷಿ ನೇತೃತ್ವದ ಸಂಸದೀಯ ಸಮಿತಿ ಇದೀಗ, ಪ್ರಧಾನಿಗಳ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರ, ಹಣಕಾಸು ಕಾರ್ಯದರ್ಶಿ ಹಸ್ಮುಖ್ ಅಧಿಯಾ ಅವರನ್ನು ಪ್ರಶ್ನೆ ಮಾಡಲಿದೆ.

Last Updated 19, Sep 2018, 9:24 AM IST