
ಬೆಂಗಳೂರು(ಜೂ.15): ಕಾಲರ್ ಐಡಿ ಅಪ್ಲಿಕೇಶನ್ ಟ್ರೂ ಕಾಲರ್ ಸ್ಮಾರ್ಟ್ ಫೋನ್ ಬಳಕೆದಾರರ ಫವರೆಟ್ ಆ್ಯಪ್. ಇದೀಗ ಟ್ರೂ ಕಾಲರ್ ಪೇಮೆಂಟ್ ಅಪ್ಲಿಕೇಶನ್ ಚಿಲ್ಲರ್ ಅನ್ನು ಸ್ವಾಧೀನಪಡಿಸಿಕೊಂಡಿರುವುದಾಗಿ ಘೋಷಿಸಿದೆ.
ಇದೇ ವೇಳೆ ಆನ್‌ಲೈನ್ ಪೇಮೆಂಟ್‌ನ ಸರ್ವಾಧಿಕಾರಿಯಾದಂತಹ ಪೇಟಿಎಂ ಅನ್ನು ಎದುರಿಸಲು ಸಿದ್ಧವಾಗಿರುವುದಾಗಿ ಟ್ರೂ ಕಾಲರ್ ಘೋಷಿಸಿದೆ. ಸದ್ಯದಲ್ಲೇ ಭಾರತದ ಮಾರುಕಟ್ಟೆಯನ್ನು ವಾಟ್ಸ್ಯಾಪ್ ಪೇಮೆಂಟ್ ಪ್ರವೇಶಿಸಲಿರುವುದರಿಂದ ಟ್ರೂ ಕಾಲರ್ ಕೂಡ ಈ ನಿಟ್ಟಿನಲ್ಲಿ ಹೆಜ್ಜೆ ಇರಿಸಿದೆ. ಕಳೆದ ಮಾರ್ಚ್‌ನಲ್ಲಿ ಟ್ರೂ ಕಾಲರ್ ಘೋಷಿಸಿದಂತೆ ಆನ್‌ಲೈನ್ ಡಿಜಿಟಲ್ ಪೇಮೆಂಟ್ ಕ್ಷೇತ್ರದಲ್ಲಿ ಚಿಲ್ಲರ್ ಅಪ್ಲಿಕೇಷನ್‌ನ್ನು ಸ್ವಾಧೀನಪಡಿಸಿಕೊಂಡಿದೆ.
ಸ್ವೀಡನ್ ಮೂಲದ ಅಪ್ಲಿಕೇಶನ್ ಆದ ಟ್ರೂ ಕಾಲರ್, ಇದೀಗ ತನ್ನಲ್ಲಿ ಯುಪಿಐ ಆಧಾರಿತ ಸೇವೆಗಳನ್ನು ನೀಡಲು ಸಿದ್ಧವಾಗಿದೆ. ಟ್ರೂ ಕಾಲರ್ ಪೇ 2.0 ಅಪ್ಲಿಕೇಶನ್‌ನ ಬಿಡುಗಡೆಯೊಂದಿಗೆ ಕಂಪನಿ ಬ್ಯಾಂಕಿಂಗ್ ಮತ್ತು ಪೇಮೆಂಟ್‌ಗಳ ಸೌಲಭ್ಯಗಳನ್ನೂ ಸಹ ನೀಡುತ್ತಿದೆ. ಮುಂಬರುವ ದಿನಗಳಲ್ಲಿ ಕ್ರೆಡಿಟ್ ಮತ್ತು ಇತರ ಹಣಕಾಸಿನ ಸೌಲಭ್ಯಗಳನ್ನು ಭಾರತದಲ್ಲಿ ಪರಿಚಯಿಸಲು ಟ್ರೂ ಕಾಲರ್ ಚಿಂತನೆ ನಡೆಸುತ್ತಿದೆ.
ಚಿಲ್ಲರ್‌ನ ಸಂಸ್ಥಾಪಕರಾಗಿರುವ ಸೋನಿ ಜಾಯ್, ಅನೂಪ್ ಶಂಕರ್, ಮಹಮ್ಮದ್ ಗಲೀಬ್ ಮತ್ತು ಭಾಸ್ಕರನ್ ಹಾಗೂ ಇನ್ನಿತರರು ಸದ್ಯದಲ್ಲೇ ಟ್ರೂಕಾಲರ್ ಸಂಸ್ಥೆಯನ್ನು ಸೇರಲಿದ್ದಾರೆ. ಸೋನಿ ಜಾಯ್ ಟ್ರೂ ಕಾಲರ್ ಪೇ ಗೆ ಉಪಾಧ್ಯಕ್ಷರಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.