ಬಳಕೆಯಾದ ವಸ್ತು ನೀಡಿದ ಅಮೆಜಾನ್, ಅಪಾರಿಯೋರಿಟೇಲ್ ಕಂಪನಿಗೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ( ₹60,000 ದಂಡ ವಿಧಿಸಿದೆ
ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ
ಧಾರವಾಡ (ಜೂ.10) : ಧಾರವಾಡದ ಯಾಲಕ್ಕಿ ಶೆಟ್ಟರ ಕಾಲನಿಯ ತೇಜಸ್ವಿನಿ ಹುದ್ದಾರ ಅನ್ನುವ ವಿದ್ಯಾರ್ಥಿನಿ ತನ್ನ ವ್ಯಾಸಂಗಕ್ಕಾಗಿ ಅಮೆಜಾನ್ ಕಂಪನಿ(Amazon Company) ಮೂಲಕ ಪೇ ಲೇಟರ್ ವ್ಯವಸ್ಥೆ ಅಡಿ ರೂ.1,999 ಕಿಮ್ಮತ್ತಿನ ಟ್ಯಾಬ್ ಪೆನ್ ಖರೀದಿಸಿದ್ದರು. ಪಾರ್ಸಲ್ ಬಂದು ಅದನ್ನು ತೆರೆದು ನೋಡಿದಾಗ ಅದರೊಳಗೆ ಉಪಯೋಗಿಸಿದ ಹಳೆಯ ಟ್ಯಾಬ್ ಪೆನ್ ಇತ್ತು ತಕ್ಷಣ ಆ ಸಂಗತಿಯನ್ನು ದೂರುದಾರರು ಅಮೆಜಾನ್ ಕಸ್ಟಮರ್ ಕೇರ(Amazon Customer Care)ಗೆ ತಿಳಿಸಿದರು.
ಎದುರುದಾರರು ಯಾವುದೇ ಕ್ರಮ ಕೈಗೊಳ್ಳದಿದ್ದಾಗ ದೂರುದಾರರು ಬೇರೊಂದು ಟ್ಯಾಬ್ ಪೆನ್(Tab pen) ಖರೀದಿಸಿ ತಮ್ಮ ವ್ಯಾಸಂಗ ಮುಂದುವರಿಸಿದರು. ದೋಷ ಪೂರಿತ ಟ್ಯಾಬ್ ಪೆನ್ ಸರಬರಾಜು ಮಾಡಿರುವುದು ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಬೆಂಗಳೂರಿನ ಅಮೆಜಾನ್ ಹಾಗೂ ಅಪಾರಿಯೋರಿಟೇಲ್ ಪ್ರೈ.ಲಿ. ಅವರ ಮೇಲೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಕ್ರಮ ಕೈಗೊಳ್ಳುವಂತೆ ಫಿರ್ಯಾದಿದಾರರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ(Dharwad District Consumer Commission)ದ ಮುಂದೆ ದೂರು ಸಲ್ಲಿಸಿದ್ದರು.
ಈ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ, ವಿಶಾಲಾಕ್ಷಿ.ಅ ಬೋಳಶೆಟ್ಟಿ ಹಾಗೂ ಪ್ರಭು. ಸಿ ಹಿರೇಮಠ ಸದಸ್ಯರು, ಹಣಕೊಟ್ಟು ಹೊಸ ಸರಕನ್ನು ಖರೀದಿಸುವಾಗ ಮಾರುವವರು ಗ್ರಾಹಕರು ಕೇಳುವ ಒಳ್ಳೆ ಗುಣ ಮಟ್ಟದ ಹೊಸ ಸರಕನ್ನು ಕೊಡುವುದು ಮಾರಾಟಗಾರರ ಕರ್ತವ್ಯವಾಗಿದೆ.
ಒಪ್ಪಂದ ಉಲ್ಲಂಘನೆಗೆ ಪೃಥ್ವಿ ಬಿಲ್ಡರ್ಸ್‍ಗೆ ಬಡ್ಡಿ ಸಮೇತ ಪರಿಹಾರ ಕೊಡುವಂತೆ ಆದೇಶಿಸಿದ ಗ್ರಾಹಕರ ಆಯೋಗ!
ಆದರೆ ಈ ಪ್ರಕರಣದಲ್ಲಿ ಹೊಸ ಸರಕನ್ನು ಸರಬರಾಜು ಮಾಡುವ ಬದಲು ಉಪಯೋಗಿಸಿದ ಮತ್ತು ಹಳೆಯದಾದ ದೋಷಯುಕ್ತ ಸರಕನ್ನು ದೂರುದಾರಳಾದ ವಿದ್ಯಾರ್ಥಿನಿಗೆ ಸರಬರಾಜು ಮಾಡಿರುವುದರಿಂದ ಅವರ ಅಂತಹ ಕ್ರಮ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ. ಮತ್ತು ಆ ತಪ್ಪಿಗೆ ಇಬ್ಬರುಎದುರುದಾರರು ಹೊಣೆಗಾರರಾಗುತ್ತಾರೆ ಅಂತಾ ಅಭಿಪ್ರಾಯ ಪಟ್ಟು ಆಯೋಗ ತೀರ್ಪು ನೀಡಿದೆ.
ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ದೂರುದಾರಳಿಗೆ ಟ್ಯಾಬ್ ಪೆನ್ನಿನ ಹಣ ರೂ.1,999 ಗಳನ್ನು ಇಬ್ಬರು ಎದುರು ದಾರರು ಕೊಡಬೇಕು ಮತ್ತು ದೋಷಯುಕ್ತ ಸರಕನ್ನು ಕೊಟ್ಟಿರುವುದರಿಂದ ವಿದ್ಯಾರ್ಥಿನಿಯಾದ ದೂರುದಾರಳಿಗೆ ಆಗಿರುವ ಅನಾನುಕೂಲ ಹಾಗೂ ಮಾನಸಿಕ ತೊಂದರೆಗಾಗಿ ರೂ.50,000 ಪರಿಹಾರ ಮತ್ತು ರೂ.10,000 ಪ್ರಕರಣದ ಖರ್ಚು ವೆಚ್ಚ ಕೊಡುವಂತೆ ಎರಡು ಕಂಪನಿಗಳಿಗೆ ಆಯೋಗ ಆದೇಶ ನೀಡಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ಆಡಳಿತಾಧಿಕಾರಿಗಳು ಮತ್ತು ಸಹಾಯಕ ರಿಜಿಸ್ಟ್ರಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಬಿಲ್ಡರ್‌ಗೆ 11 ಲಕ್ಷ ರೂ ದಂಡ ಮತ್ತು ಪರಿಹಾರ ವಿಧಿಸಿದ ಧಾರವಾಡ ಗ್ರಾಹಕ ನ್ಯಾಯಾಲಯ ಆದೇಶ