ಉತ್ತರ ಭಾರತದಲ್ಲಿ ದೀಪಾವಳಿಯ ಆರಂಭದ ದಿನವೆಂದು ಪರಿಗಣಿಸಲಾಗುವ ಧನತೇರಾಸ್ ನಿಮಿತ್ತ ಶುಕ್ರವಾರ ದೇಶಾದ್ಯಂತ ಭಾರೀ ಪ್ರಮಾಣದಲ್ಲಿ ಚಿನ್ನ ಮಾರಾಟವಾಗಿದೆ. ಒಂದು ಅಂದಾಜಿನ ಪ್ರಕಾರ 41 ಟನ್ ಚಿನ್ನ ಮತ್ತು 400 ಟನ್‌ನಷ್ಟು ಬೆಳ್ಳಿ ಆಭರಣ ಮತ್ತು ನಾಣ್ಯವನ್ನು ಜನರು ಒಂದೇ ದಿನ ಖರೀದಿಸಿದ್ದಾರೆ ಎಂದು ಹೇಳಲಾಗಿದೆ.
ನವದೆಹಲಿ: ಉತ್ತರ ಭಾರತದಲ್ಲಿ ದೀಪಾವಳಿಯ ಆರಂಭದ ದಿನವೆಂದು ಪರಿಗಣಿಸಲಾಗುವ ಧನತೇರಾಸ್ ನಿಮಿತ್ತ ಶುಕ್ರವಾರ ದೇಶಾದ್ಯಂತ ಭಾರೀ ಪ್ರಮಾಣದಲ್ಲಿ ಚಿನ್ನ ಮಾರಾಟವಾಗಿದೆ. ಒಂದು ಅಂದಾಜಿನ ಪ್ರಕಾರ 41 ಟನ್ ಚಿನ್ನ ಮತ್ತು 400 ಟನ್‌ನಷ್ಟು ಬೆಳ್ಳಿ ಆಭರಣ ಮತ್ತು ನಾಣ್ಯವನ್ನು ಜನರು ಒಂದೇ ದಿನ ಖರೀದಿಸಿದ್ದಾರೆ ಎಂದು ಹೇಳಲಾಗಿದೆ.
ಅಂದರೆ ಅಂದಾಜು 30000 ಕೋಟಿ ರು. ಮೊತ್ತದ ಚಿನ್ನ ಮತ್ತು ಬೆಳ್ಳಿ ಒಂದೇ ದಿನ ಮಾರಾಟವಾಗಿದೆ. ಈ ಬಾರಿ ಧನ್‌ತೇರಾಸ್ ಸಮಯಕ್ಕೆ ಸರಿಯಾಗಿ ಚಿನ್ನದ ದರ ಇಳಿಕೆಯಾಗಿದೆ. 24 ಕ್ಯಾರೆಟ್ ಚಿನ್ನ 10 ಗ್ರಾಮ್‌ಗೆ 63000ಕ್ಕೆ ಹೋಗಿದ್ದ ದರವೀಗ ಸುಮಾರು 60-61 ಸಾವಿರ ರು.ಗೆ ಇಳಿದಿದೆ. ಹೀಗಾಗಿ ಜನರು ಮುಗಿಬಿದ್ದು ಚಿನ್ನ ಖರೀದಿಸಿದ್ದಾರೆ. ಚಿನ್ನದ ಜೊತೆಗೆ ಬೆಳ್ಳಿ ಹಾಗೂ ಇನ್ನಿತರ ಲೋಹಗಳು ಹಾಗೂ ಗೃಹಬಳಕೆ ವಸ್ತುಗಳ ಮಾರಾಟವೂ ಶುಕ್ರವಾರ ಭರ್ಜರಿಯಾಗಿ ನಡೆದಿದೆ. ಧನ್‌ತೇರಾಸ್ ದಿನ ಯಾವುದಾದರೂ ಹೊಸ ವಸ್ತು ಖರೀದಿಸಬೇಕು, ಅದು ಅಮೂಲ್ಯ ವಸ್ತುವಾಗಿದ್ದರೆ ಒಳ್ಳೆಯದು ಎಂಬ ನಂಬಿಕೆಯಿದೆ.
2 ವರ್ಷದಿಂದ ಬಳಕೆಯಲ್ಲಿಲ್ಲದ Gmail ಖಾತೆ ಡಿಲೀಟ್: ಒಮ್ಮೆ ಲಾಗಿನ್ ಆಗಿ ಖಾತೆ ಉಳಿಸಿಕೊಳ್ಳಿ
ಖುಲಾಯಿಸಿದ ಅದೃಷ್ಟ: ರಾತ್ರೋರಾತ್ರಿ ಲಕ್ಷಾಧಿಪತಿಯಾದ ಪಾಕಿಸ್ತಾನದ ಮೀನುಗಾರ