
ನವದೆಹಲಿ(ಫೆ.07): 10 ರೂ. ನಾಣ್ಯ ಸ್ವೀಕಾರ್ಹ ಎಂದು ಸುಪ್ರೀಂ ಕೋರ್ಟ್ ಮತ್ತು ಆರ್‌ಬಿಐ ಪದೇ ಪದೇ ಹೇಳುತ್ತಿದೆ. ಆದರೂ ಮಾರುಕಟ್ಟೆಯಲ್ಲಿ 10 ರೂ. ನಾಣ್ಯಗಳನ್ನು ಸ್ವೀಕರಿಸಲು ಹಿಂದೇಟು ಹಾಕುತ್ತಿರುವುದು ಬ್ಯಾಂಕ್‌ಗಳಿಗೆ ತಲೆನೋವು ತಂದಿದೆ.
ಪ್ರಮುಖವಾಗಿ ಹೊಟೇಲ್, ಅಂಗಡಿ ಮುಂತಾದ ವಾಣಿಜ್ಯ ಸಂಕೀರ್ಣಗಳಲ್ಲಿ 10 ರೂ. ನಾಣ್ಯಗಳನ್ನು ಸ್ವೀಕರಿಸಲು ವ್ಯಾಪಾರಸ್ಥರು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ 10 ರೂ. ನಾಣ್ಯಗಳನ್ನು ಬ್ಯಾಂಕ್‌ಗಳಿಗೆ ತಂದು ಜಮೆ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಹೋಟೆಲ್ ಉದ್ಯಮದ ಅಗತ್ಯತೆಗಳ ಪೂರೈಕೆಗಾಗಿ ಪ್ರತಿವರ್ಷ ಆರ್‌ಬಿಐ 1,2, 5 ಮತ್ತು 10 ರೂ. ಹೊಸ ನಾಣ್ಯಗಳನ್ನು ಬಿಡುಗಡೆ ಮಾಡುತ್ತದೆ. ಜನವರಿಯಲ್ಲಿ ಬಿಡುಗಡೆಯಾದ ನಾಣ್ಯಗಳ ಪೈಕಿ ಶೇ.50ರಷ್ಟು 10 ರೂ. ನಾಣ್ಯಗಳಾಗಿವೆ ಎಂಬುದು ವಿಶೇಷ.
ಇತ್ತ 10 ರೂ. ನಾಣ್ಯಗಳನ್ನು ಸ್ವೀಕರಿಸದೇ ಇರುವುದು ಅಪರಾಧ ಎಂದು ಸುಪ್ರೀಂ ಕೋರ್ಟ್ ಮತ್ತು ಆರ್‌ಬಿಐ ಎಚ್ಚರಿಸಿದ್ದರೂ, 10 ರೂ. ನಾಣ್ಯಗಳನ್ನು ಸ್ವೀಕರಿಸಲು ವ್ಯಾಪಾರಸ್ಥರು ಸಿದ್ಧರಿಲ್ಲ.
ಇದರಿಂದ ಬ್ಯಾಂಕ್ ಗಳಲ್ಲಿ 10 ರೂ. ನಾಣ್ಯಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮೆಯಾಗುತ್ತಿವೆ. ತಮ್ಮ ವಹಿವಾಟುಗಳನ್ನು ಅವಲಂಬಿಸಿ ಸೀಮಿತ ಮೊತ್ತದ ನಾಣ್ಯ ಸಂಗ್ರಹಿಸಲು ಬ್ಯಾಂಕ್‌ಗಳಿಗೆ ಅವಕಾಶವಿದೆ. ಆದರೆ ಈಗಾಗಲೇ 10 ರೂಪಾಯಿ ನಾಣ್ಯದ ಸಂಗ್ರಹ 25% ನಗದು ಮಿತಿ ಮೀರಿದೆ ಎನ್ನಲಾಗಿದೆ.
ಬ್ಯಾಂಕ್‌ಗಳಲ್ಲಿ 50,000 ರೂ. ಮೌಲ್ಯದ ನಾಣ್ಯಗಳನ್ನು ಶೇಖರಿಸಬಹುದಾಗಿದೆ ಆದರೆ ಕೆಲವು ಬ್ಯಾಂಕ್‌ಗಳಲ್ಲಿ ಸಂಗ್ರಹಗೊಂಡ 10 ರೂ. ನಾಣ್ಯಗಳ ಒಟ್ಟು ಮೊತ್ತ 8 ಲಕ್ಷ ರೂ. ಎನ್ನಲಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.