ಪಾನ್‌ನೊಂದಿಗೆ ಆಧಾರ್‌ ಲಿಂಕ್ ಕಡ್ಡಾಯ: ಸುಪ್ರೀಂ ಆದೇಶ!

By Web DeskFirst Published Feb 7, 2019, 8:30 AM IST
Highlights

ಪಾನ್‌ನೊಂದಿಗೆ ಆಧಾರ್‌ ಸಂಯೋಜನೆ ಕಡ್ಡಾಯ| ಆಧಾರ್‌ ಸಂಯೋಜನೆ ಸಡಿಲ ಮಾಡಿದ್ದ ದಿಲ್ಲಿ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ನಕಾರ| 

ನವದೆಹಲಿ[ಫೆ.07]: ಪಾನ್‌ ಕಾರ್ಡ್‌ನೊಂದಿಗೆ ಆಧಾರ್‌ ಸಂಖ್ಯೆ ಸಂಯೋಜನೆ ಕಡ್ಡಾಯ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. ನ್ಯಾ| ಎ.ಕೆ. ಸಿಕ್ರಿ ಹಾಗೂ ನ್ಯಾ| ಅಬ್ದುಲ್‌ ನಜೀರ್‌ ಅವರನ್ನು ಒಳಗೊಂಡ ಪೀಠ ಈ ಸಂಗತಿಯನ್ನು ಪುನರುಚ್ಚಾರ ಮಾಡಿದ್ದು, ಈ ವಿಷಯವನ್ನು ಈಗಾಗಲೇ ಆದಾಯ ತೆರಿಗೆ ಕಾಯ್ದೆ 139ಎಎ ಪರಿಚ್ಛೇದದ ಅಡಿ ಎತ್ತಿ ಹಿಡಿಯಲಾಗಿದೆ ಎಂದಿದೆ.

ಶ್ರೇಯಾ ಸೇನ್‌ ಹಾಘೂ ಜಯಶ್ರೀ ಸಾತ್‌ಪುತೆ ಎಂಬ ಇಬ್ಬರಿಗೆ 2018-19ನೇ ಸಾಲಿನ ಆದಾಯ ತೆರಿಗೆಯನ್ನು, ಪಾನ್‌ ಸಂಖ್ಯೆಗೆ ಆಧಾರ್‌ ಸಂಯೋಜಿಸದೇ ಪಾವತಿಸಲು ದಿಲ್ಲಿ ಹೈಕೋರ್ಟ್‌ ಅನುಮತಿ ನೀಡಿತ್ತು. ಇದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರವು ದಿಲ್ಲಿ ಹೈಕೋರ್ಟ್‌ ಮೊರೆ ಹೋಗಿತ್ತು.

‘ಆದರೆ ಈಗಾಗಲೇ ಹೈಕೋರ್ಟ್‌ ಆದೇಶದ ಅನುಸಾರ ಶ್ರೇಯಾ ಹಾಗೂ ಜಯಶ್ರೀ ಅವರು ಆದಾಯ ತೆರಿಗೆ ರಿಟನ್ಸ್‌ರ್‍ ಸಲ್ಲಿಸಿಯಾಗಿದೆ. ಅಲ್ಲದೆ ಅದರ ಪರಿಶೀಲನೆ ಕೂಡ ಆಗಿಹೋಗಿದೆ. ಹೀಗಾಗಿ ಇನ್ನು 2019-20ನೇ ಸಾಲಿನಲ್ಲಿ ಎಲ್ಲ ಆದಾಯ ತೆರಿಗೆ ರಿಟನ್ಸ್‌ರ್‍ ಸಲ್ಲಿಸುವಾಗ ಆಧಾರ್‌ ಸಂಖ್ಯೆಗೆ ಪಾನ್‌ ಸಂಖ್ಯೆ ಅನುಮೋದನೆ ಕಡ್ಡಾಯವಾಗಲಿದೆ’ ಎಂದು ಹೇಳಿ ಅರ್ಜಿ ವಿಚಾರಣೆಗೆ ಮಂಗಳ ಹಾಡಿತು.

ಈ ಹಿಂದೆ ಸೆ.26ರಂದು ನೀಡಿದ ಆದೇಶದಲ್ಲಿ ‘ಬ್ಯಾಂಕ್‌ ಖಾತೆ, ಮೊಬೈಲ್‌ ಸಂಖ್ಯೆ ಹಾಗೂ ಶಾಲಾ ಪ್ರವೇಶಕ್ಕೆ ಆಧಾರ್‌ ಸಂಖ್ಯೆ ಕಡ್ಡಾಯವಲ್ಲ. ಆದರೆ ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯಲು ಮತ್ತು ಆದಾಯ ತೆರಿಗೆ ರಿಟನ್ಸ್‌ರ್‍ ಸಲ್ಲಿಸಲು ಆಧಾರ್‌ ಸಂಯೋಜನೆ ಕಡ್ಡಾಯ. ಹಾಗೆಯೇ ಪಾನ್‌ ಸಂಖ್ಯೆಯನ್ನು ಆಧಾರ್‌ನೊಂದಿಗೆ ನಿಯೋಜಿಸಲೇಬೇಕು’ ಎಂದು ಹೇಳಿತ್ತು.

click me!