ಹೊಸ ವರ್ಷದಲ್ಲೇ ಬ್ಯಾಂಕ್ ಕೆಲ್ಸಗಳನ್ನು ಮುಗಿಸಬೇಕೆಂದು ಪ್ಲ್ಯಾನ್ ಮಾಡಿಕೊಂಡಿರೋರು ಜನವರಿಯಲ್ಲಿ ಯಾವೆಲ್ಲ ದಿನ ಬ್ಯಾಂಕ್ ಕ್ಲೋಸ್ ಆಗಿರುತ್ತೆ ಎಂಬ ಮಾಹಿತಿ ಹೊಂದಿರೋದು ಅಗತ್ಯ. RBI ಬಿಡುಗಡೆ ಮಾಡಿರೋ ಜನವರಿಯ ರಜಾದಿನಗಳ ಪಟ್ಟಿ ಇಲ್ಲಿದೆ.
Business Desk: 2021ಕ್ಕೆ ಗುಡ್ ಬೈ ಹೇಳಿ 2022 ಎಂಬ ಹೊಸ ವರ್ಷವನ್ನು (New year) ಸ್ವಾಗತಿಸಲು ಹೊಸ್ತಿಲಲ್ಲಿ ನಿಂತಿದ್ದೇವೆ. ವರುಷ ಹೊಸದಾದ್ರೂ ಹಳೆಯ ಕೆಲವು ಕೆಲಸಗಳನ್ನು ಮುಂದುವರಿಸೋದು ಅನಿವಾರ್ಯ. ಈ ತಿಂಗಳಲ್ಲಿ ನಿಮಗೆ ಮುಗಿಸಲು ಸಾಧ್ಯವಾಗದ ಕೆಲವು ಬ್ಯಾಂಕ್(Bank) ಕೆಲಸಗಳನ್ನು ನೀವು ಜನವರಿಯಲ್ಲಿ( January) ಮಾಡಲು ತೀರ್ಮಾನಿಸಿರಬಹುದು. ಹಾಗಿದ್ರೆ ನೀವು ಜನವರಿಯಲ್ಲಿ ಯಾವೆಲ್ಲ ದಿನ ಬ್ಯಾಂಕ್ ಮುಚ್ಚಿರುತ್ತದೆ(Closed) ಎಂಬ ಮಾಹಿತಿಯನ್ನು ತಿಳಿದಿರೋದು ಅಗತ್ಯ. 2022ರ ಜನವರಿಯ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್(RBI) ಬಿಡುಗಡೆಗೊಳಿಸಿದೆ. ಈ ಪಟ್ಟಿಯ ಪ್ರಕಾರ ಜನವರಿಯಲ್ಲಿ ಬ್ಯಾಂಕ್ ಗಳು ಒಟ್ಟು 16 ದಿನಗಳ ಕಾಲ ಮುಚ್ಚಿರಲಿವೆ. ಆರ್ ಬಿಐ ಪಟ್ಟಿಯಲ್ಲಿರೋ ಎಲ್ಲ ರಜೆಗಳು ಎಲ್ಲ ರಾಜ್ಯಗಳಿಗೂ(States) ಅನ್ವಯಿಸೋದಿಲ್ಲ. ಹೀಗಾಗಿ ನಿಮ್ಮ ರಾಜ್ಯಕ್ಕೆ ಅನ್ವಯಿಸೋ ರಜೆಗಳನ್ನು ಮಾತ್ರ ಪರಿಗಣಿಸಬೇಕಾಗುತ್ತದೆ. ಎಲ್ಲ ಭಾನುವಾರ(Sunday) ಬ್ಯಾಂಕುಗಳಿಗೆ ರಜೆಯಿರುತ್ತದೆ. ಇನ್ನು ಎರಡನೇ ಮತ್ತು ನಾಲ್ಕನೇ ಶನಿವಾರ(Saturday) ಕೂಡ ಬ್ಯಾಂಕ್ ಗಳು ಕಾರ್ಯನಿರ್ವಹಿಸೋದಿಲ್ಲ.
KYC Update: ನೀವಿನ್ನೂ ಕೆವೈಸಿ ಮಾಹಿತಿ ನೀಡಿಲ್ವ? ಹಾಗಾದ್ರೆ ಜನವರಿ 1ರಿಂದ ಸ್ಥಗಿತವಾಗಲಿದೆ ನಿಮ್ಮ ಖಾತೆ!
undefined
ಜನವರಿಯಲ್ಲಿ ಈ ಎಲ್ಲ ದಿನ ಬ್ಯಾಂಕುಗಳಿಗೆ ರಜೆ
ಜನವರಿ 1: ಹೊಸ ವರ್ಷದ ಪ್ರಯುಕ್ತ ದೇಶಾದ್ಯಂತ ಬ್ಯಾಂಕುಗಳಿಗೆ ರಜೆಯಿರುತ್ತದೆ.
ಜನವರಿ 2: ಭಾನುವಾರ
ಜನವರಿ 3: ಹೊಸ ವರ್ಷ ಸಂಭ್ರಮಾಚರಣೆ / ಲುಸೂಂಗ್ (Losoong) ಪ್ರಯುಕ್ತ ಐಜ್ವಾಲ್(Aizawl) ಹಾಗೂ ಗ್ಯಾಂಗ್ಟಕ್ ನಲ್ಲಿ ( Gangtok) ಬ್ಯಾಂಕ್ ಗಳು ಮುಚ್ಚಿರುತ್ತವೆ.
ಜನವರಿ 4: ಲುಸೂಂಗ್ ಪ್ರಯುಕ್ತ ಗ್ಯಾಂಗ್ಟಕ್ ನಲ್ಲಿ ( Gangtok) ಬ್ಯಾಂಕ್ ಗಳು ಮುಚ್ಚಿರುತ್ತವೆ.
ಜನವರಿ 8: ಎರಡನೇ ಶನಿವಾರ
ಜನವರಿ 9: ಭಾನುವಾರ
ಜನವರಿ 11: ಮಿಷನರಿ ಡೇ ಪ್ರಯುಕ್ತ ಐಜ್ವಾಲ್ ನಲ್ಲಿ (Aizawl) ಬ್ಯಾಂಕ್ ಕ್ಲೋಸ್ ಆಗಿರುತ್ತದೆ.
ಜನವರಿ 12: ಸ್ವಾಮಿ ವಿವೇಕಾನಂದ ಜಯಂತಿ
ಜನವರಿ 14: ಮಕರ ಸಂಕ್ರಾಂತಿ/ಪೊಂಗಲ್ ಪ್ರಯಕ್ತ ಕೆಲವು ರಾಜ್ಯಗಳಲ್ಲಿ ರಜೆ
ಜನವರಿ 15: ಮಕರ ಸಂಕ್ರಾಂತಿ ಪ್ರಯುಕ್ತ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಕೆಲವು ರಾಜ್ಯಗಳಲ್ಲಿರಜೆ
ಜನವರಿ 16: ಭಾನುವಾರ
ಜನವರಿ 18: ತಾಯಿ ಪೋಸಂ (Thai Poosam) ಪ್ರಯುಕ್ತ ಚೆನ್ನೈನಲ್ಲಿ ಬ್ಯಾಂಕ್ ಗಳಿಗೆ ರಜೆ
ಜನವರಿ 22: 4ನೇ ಶನಿವಾರ
ಜನವರಿ 23: ಭಾನುವಾರ
ಜನವರಿ 26: ಗಣರಾಜ್ಯೋತ್ಸವದ ಪ್ರಯುಕ್ತ ದೇಶಾದ್ಯಂತ ರಜೆ
ಜನವರಿ 30: ಭಾನುವಾರ
Aadhaar card: ಆಧಾರ್ ಕಾರ್ಡ್ ಕಳೆದು ಹೋಗಿದೆಯಾ? ಮರಳಿ ಪಡೆಯಲು ಹೀಗೆ ಮಾಡಿ
ಆನ್ಲೈನ್ ವ್ಯವಹಾರಕ್ಕೆ ಅಡ್ಡಿಯಿಲ್ಲ
ಈ ಎಲ್ಲ ರಜಾದಿನಗಳಂದು ಆನ್ಲೈನ್ ಬ್ಯಾಂಕಿಂಗ್ ವ್ಯವಹಾರಗಳಿಗೆ ಯಾವುದೇ ತೊಂದರೆಯಾಗೋದಿಲ್ಲ. ಹೀಗಾಗಿ ಆನ್ಲೈನ್ ಬ್ಯಾಂಕಿಂಗ್ ಸೌಲಭ್ಯ ಹೊಂದಿರೋರು ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಆದ್ರೆ ಬ್ಯಾಂಕ್ಗೆ ಹೋಗಿಯೇ ಮಾಡುವಂತಹ ಕೆಲಸಗಳಿದ್ರೆ ಮಾತ್ರ ರಜಾ ದಿನಗಳನ್ನು ಗಮನಿಸಿ ಹೋಗಿ!
ಎಲ್ಲ ರಾಜ್ಯಗಳಿಗೂ ಅನ್ವಯಿಸೋದಿಲ್ಲ
ರಿಸರ್ವ್ ಬ್ಯಾಂಕ್ ರಜಾಪಟ್ಟಿಯಲ್ಲಿದೆ ಎಂದ ಮಾತ್ರಕ್ಕೆ ಎಲ್ಲ ರಾಜ್ಯಗಳ ಬ್ಯಾಂಕ್ಗಳಿಗೆ 16 ದಿನಗಳ ರಜೆ ಇರೋದಿಲ್ಲ. ಬ್ಯಾಂಕ್ ರಜೆಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಸಾರ್ವಜನಿಕ ಹಾಗೂ ಗೆಜೆಟೆಡ್ ರಜಾ ದಿನಗಳು ಮಾತ್ರ ದೇಶಾದ್ಯಂತ ಎಲ್ಲ ಬ್ಯಾಂಕ್ಗಳಿಗೂ ಅನ್ವಯಿಸುತ್ತವೆ. ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರಗಳು ಕೂಡ ಈ ಪಟ್ಟಿಯಲ್ಲಿ ಸೇರಿರೋ ಕಾರಣ ಈ ದಿನಗಳಂದು ದೇಶಾದ್ಯಂತ ಬ್ಯಾಂಕ್ಗಳು ಕಾರ್ಯನಿರ್ವಹಿಸೋದಿಲ್ಲ. ಕೆಲವೊಂದು ರಜೆಗಳನ್ನು ಆಯಾ ರಾಜ್ಯಗಳ ಸ್ಥಳೀಯ ಅಗತ್ಯಕ್ಕೆ ಅನುಗುಣವಾಗಿ ನೀಡಲಾಗುತ್ತದೆ. ಹೀಗಾಗಿ ಕರ್ನಾಟದ ಬ್ಯಾಂಕ್ಗಳಿಗೆ ಡಿಸೆಂಬರ್ನಲ್ಲಿ 16 ದಿನಗಳ ರಜೆಯಿದೆ ಎಂದ ಮಾತ್ರಕ್ಕೆ ಬೇರೆ ರಾಜ್ಯಗಳಲ್ಲಿನ ಬ್ಯಾಂಕ್ಗಳಿಗೂ ಇಷ್ಟೇ ದಿನ ರಜೆಯಿದೆ ಎಂದರ್ಥವಲ್ಲ.