ಡಿಸೆಂಬರ್ ತಿಂಗಳಲ್ಲಿ ಎಷ್ಟು ದಿನ ಬ್ಯಾಂಕ್ ರಜೆ? ಇಲ್ಲಿದೆ ಫುಲ್ ಲಿಸ್ಟ್!

By Suvarna NewsFirst Published Dec 1, 2020, 5:23 PM IST
Highlights

ದೀಪಾವಳಿ ಸೇರಿದಂತೆ ಸಾಲು ಸಾಲು ಹಬ್ಬಗಳಿಂದ ತುಂಬಿರುವ ನವೆಂಬರ್ ತಿಂಗಳು ಕಳದು ಇದೀಗ ಡಿಸೆಂಬರ್ ತಿಂಗಳಿಗೆ ಕಾಲಿಟ್ಟಿದ್ದೇವೆ. ಕಳೆದ ತಿಂಗಳಲ್ಲಿ ಹೆಚ್ಚು ದಿನ ಬ್ಯಾಂಕ್ ರಜಾ ಗ್ರಾಹಕರನ್ನು ಹೈರಾಣಾಗಿಸಿತ್ತು.  ಡಿಸೆಂಬರ್ ತಿಂಗಳಲ್ಲಿ ಎಷ್ಟು ದಿನ ಬ್ಯಾಂಕ್ ರಜಾ? ಈ ಕುರಿತ ಮಾಹಿತಿ ಇಲ್ಲಿದೆ.
 

ನವದೆಹಲಿ(ಡಿ.01): ನವೆಂಬರ್ ತಿಂಗಳಿಗೆ ಹೋಲಿಸಿದರೆ, ಡಿಸೆಂಬರ್ ತಿಂಗಳಲ್ಲಿ ಹಬ್ಬ ಕಡಿಮೆ. ಡಿಸೆಂಬರ್ ತಿಂಗಳಲ್ಲಿ ಬರುವ ಪ್ರಮುಖ ಹಬ್ಬ ಕ್ರಿಸ್ಮಸ್. ಆದರೂ ಕೆಲ ದಿನ ಬ್ಯಾಂಕ್ ಕಾರ್ಯನಿರ್ವಹಿಸುವುದಿಲ್ಲ. ಸಾರ್ವಜನಿಕ ರಜೆ ಹಾಗೂ ರಾಜ್ಯದ ಕೆಲ ರಜೆಗಳಂದು ಬ್ಯಾಂಕ್ ಕಾರ್ಯನಿರ್ವಹಿಸುವುದಿಲ್ಲ. ಇದರ ಜೊತೆಗೆ  ಪ್ರತಿ ಭಾನುವಾರ ಹಾಗೂ 2ನೇ ಮತ್ತು 4ನೇ ಶನಿವಾರ ಕೂಡ ಬ್ಯಾಂಕ್ ರಜಾದಿನವಾಗಿದೆ.

ಸಾಲ ಪಡೆಯಲು ಅಗತ್ಯ ಕ್ರೆಡಿಟ್ ಸ್ಕೋರ್, ತಿಳಿದುಕೊಳ್ಳಲೇಬೇಕು ಈ 7 ಪಾಂಯಿಟ್ಸ್

ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಭಾನುವಾರ, 2ನೇ ಮತ್ತು 4ನೇ ಶನಿವಾರ ಹೊರತುಪಡಿಸಿದರೆ, ಡಿಸೆಂಬರ್ 3 ರಂದು ಕನಕದಾಸ ಜಯಂತಿ ಕಾರಣ ಬ್ಯಾಂಕ್ ರಜಾದಿನವಾಗಿದೆ. ಇನ್ನು ಡಿಸೆಂಬರ್ 25ಕ್ಕೆ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ರಜಾದಿನವಾಗಿದೆ. 

ಬ್ಯಾಂಕ್ ಖಾತೆ ಕ್ಲೋಸ್ : ಮಹತ್ವದ ಆದೇಶ

ಡಿಸೆಂಬರ್ ತಿಂಗಳಲ್ಲಿರುವ 31 ದಿನಗಳ ಪೈಕಿ, ನಾಲ್ಕು ಭಾನುವಾರ,  ಕನಕದಾಸ ಜಯಂತಿ, ಕ್ರಿಸ್ಮಸ್ ಹಾಗೂ 2 ಶನಿವಾರ ರಜಾ ಸೇರಿದರೆ ಒಟ್ಟು 8 ದಿನ ಬ್ಯಾಂಕ್‌ಗೆ ರಜಾದಿನವಾಗಿದೆ. ಹೀಗಾಗಿ ಗ್ರಾಹಕರು ಈ ರಜಾ ದಿನಗಳಿಗಿಂತ ಮೊದಲೆ ಬ್ಯಾಂಕ್ ವ್ಯವಹಾರ ಮುಗಿಸಿಕೊಳ್ಳುವುದು ಉತ್ತಮ.

ಬ್ಯಾಂಕ್ ರಜಾದಿನಗಳಲ್ಲಿ ಆನ್‌ಲೈನ್ ಬ್ಯಾಂಕಿಂಗ್ ಕಾರ್ಯನಿರ್ವಹಸಲಿದೆ. ಆದರೆ ವೀಕೆಂಡ್ ಹಾಗೂ ಕ್ರಿಸ್ಮಸ್ ಹಬ್ಬದ ವೇಳೆ ಎಟಿಂಗಳಲ್ಲಿ ನಗದು ಹಣದ ಕೊರೆತೆಯನ್ನು ಗ್ರಾಹಕರು ಎದುರಿಸುವ ಸಾಧ್ಯತೆ ಇದೆ. ಹೀಗಾಗಿ ಕ್ರಿಸ್ಮಸ್ ವೇಳೆ ನಿಗದಿಗಿಂತ ಮೊದಲೇ ಹಣ ತೆಗೆಯುವುದು ಉತ್ತಮ. 
 

click me!