Nominee To PF:ನಾಮಿನಿ ಸೇರ್ಪಡೆಗೆ ಡಿ.31 ಕೊನೆಯ ದಿನಾಂಕ; ನಾಮಿನಿ ಸೇರಿಸೋದು ಹೇಗೆ? ಇಲ್ಲಿದೆ ಮಾಹಿತಿ

By Suvarna News  |  First Published Dec 14, 2021, 8:31 PM IST

*ಪಿಎಫ್ ಗೆ ನಾಮಿನಿ ಸೇರಿಸದಿದ್ರೆ ಮುಂದೆ ತೊಂದರೆ
*EPFO ಅಧಿಕೃತ ವೆಬ್ ಸೈಟ್ ಮೂಲಕ ಇ-ನಾಮಿನೇಷನ್ ಸಲ್ಲಿಕೆಗೆ ಅವಕಾಶ
*ಕುಟುಂಬ ಸದಸ್ಯರ ಸುರಕ್ಷತೆಗೆ ಪಿಎಫ್ ಗೆ ನಾಮಿನಿ ಸೇರಿಸೋದು ಅಗತ್ಯ


ನೀವು ನೌಕರರ  ಭವಿಷ್ಯ ನಿಧಿ ಖಾತೆ(EPF account)) ಹೊಂದಿದ್ರೆ ತಕ್ಷಣ ನಿಮ್ಮ ನಾಮಿನಿಯನ್ನು( nominee) ಸೇರ್ಪಡೆ ಮಾಡಿ. ನಾಮಿನಿ ಸೇರ್ಪಡೆಗೆ  ಡಿಸೆಂಬರ್ 31 ಕೊನೆಯ ದಿನಾಂಕವಾಗಿದೆ. ಒಂದು ವೇಳೆ ನೀವು ಈ ದಿನಾಂಕದೊಳಗೆ ನಾಮಿನಿ ಸೇರ್ಪಡೆ ಮಾಡಲು ವಿಫಲರಾದ್ರೆ ಇಪಿಎಫ್ ನಿಂದ  (EPF)ಸಿಗೋ ಕೆಲವು ಪ್ರಯೋಜನಗಳಿಂದ ವಂಚಿತರಾಗುತ್ತೀರಿ. 

ಭಾರತದಲ್ಲಿ ವೇತನ ಪಡೆಯುತ್ತಿರೋ ಎಲ್ಲ ಉದ್ಯೋಗಿಗಳು(employees)  ನೌಕರರ ಭವಿಷ್ಯ ನಿಧಿ ಸಂಸ್ಥೆಯಲ್ಲಿ ( EPFO)ಒಂದು ಖಾತೆ(account) ಹೊಂದಿರುತ್ತಾರೆ. ಪ್ರತಿ ತಿಂಗಳು ಅವರ ವೇತನದ(Salary) ಒಂದು ನಿರ್ದಿಷ್ಟ ಭಾಗ ಈ ಖಾತೆಗೆ ಜಮೆ ಆಗುತ್ತದೆ. ಜೊತೆಗೆ ಅವರು ಕಾರ್ಯನಿರ್ವಹಿಸುತ್ತಿರೋ ಸಂಸ್ಥೆ ಕೂಡ ಅಷ್ಟೇ ಮೊತ್ತದ ಹಣವನ್ನು ಜಮೆ ಮಾಡುತ್ತದೆ.  ಪಿಎಫ್ ಉದ್ಯೋಗಿಯ ಉಳಿತಾಯ (Savings) ಹಾಗೂ ನಿವೃತ್ತಿ ಯೋಜನೆಯ ಭಾಗವೇ ಆಗಿದೆ.  ಎಲ್ಲ ಉದ್ಯೋಗಿಗಳು ತಮ್ಮ ಪಿಎಫ್ ಖಾತೆಗೆ ಡಿಸೆಂಬರ್ 31ರೊಳಗೆ ನಾಮಿನಿ( nominee) ಸೇರ್ಪಡೆ ಮಾಡುವಂತೆ EPFO ಈಗಾಗಲೇ ಮಾಹಿತಿ ನೀಡಿದೆ. 'ಪಿಎಫ್ ಚಂದಾದಾರರು ಆನ್ಲೈನ್ ಪಿಎಫ್, ಪಿಂಚಣಿ (pension)ಹಾಗೂ ಇನ್ಯುರೆನ್ಸ್(insurance) ಸೇವೆಗಳ ಮೂಲಕ ತಮ್ಮ ಸಂಗಾತಿ(Spouse), ಮಕ್ಕಳು(Children) ಹಾಗೂ ಪೋಷಕರನ್ನು(Parents) ಸಂರಕ್ಷಿಸಲು ನಾಮಿನೇಷನ್(Nomination) ನೋಂದಣಿ ಮಾಡೋದು ಅತೀಮುಖ್ಯ' ಎಂದು ಇಪಿಎಫ್ಒ ಪ್ರಕಟಣೆಯಲ್ಲಿ ತಿಳಿಸಿದೆ.ಪಿಎಫ್ ಖಾತೆದಾರರು ಇಪಿಎಫ್ಒ ವೆಬ್ ಸೈಟ್ ಮೂಲಕ ಇ-ನಾಮಿನಿ ಅರ್ಜಿ(e-nominee form) ಭರ್ತಿ ಮಾಡಬಹುದು. 

Tap to resize

Latest Videos

undefined

ಜನ ಸಾಮಾನ್ಯರಿಗೆ ಡಬಲ್ ಶಾಕ್, 30 ವರ್ಷದ ಗರಿಷ್ಠಕ್ಕೆ Wholesale Inflation!

ಇ-ನಾಮಿನೇಷನ್ ಸಲ್ಲಿಕೆ ಹೇಗೆ?
-ಮೊದಲಿಗೆ EPFO ಅಧಿಕೃತ ವೆಬ್ ಸೈಟ್ epfindia.gov.in ಭೇಟಿ ನೀಡಿ. 
-ಇಲ್ಲಿ Services ಆಯ್ಕೆ ಕೆಳಗಿರೋ For Employees ಆಯ್ಕೆ ಮಾಡಿ.
- ಆ ಬಳಿಕ 'Member UAN/Online Service (OCS/OTCP)'ಆಯ್ಕೆ ಮೇಲೆ ಕ್ಲಿಕ್ ಮಾಡಿ.
-ಈಗ ನಿಮ್ಮ UAN ಹಾಗೂ ಪಾಸ್ ವರ್ಡ್ ಬಳಸಿ ಲಾಗಿ ಇನ್ ಆಗಿ.
-Manage ಪುಟದ ಕೆಳಗಿರೋ e-nomination option ಮೇಲೆ ಕ್ಲಿಕ್ ಮಾಡಿ ಅದನ್ನು ಸಕ್ರಿಯಗೊಳಿಸಿ (activate).
-ನಿಮ್ಮ ಕುಟುಂಬದ ಘೋಷಣೆ ( family declaration) ಬದಲಾಯಿಸಲು ಹಾಗೂ ಕಟುಂಬದ ವಿವರಗಳನ್ನು ಸೇರ್ಪಡೆ ಮಾಡಲು ಅಥವಾ ನಾಮಿನಿ ವಿವರಗಳನ್ನು ಸೇರಿಸಲು  'yes'ಆಯ್ಕೆ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ನಾಮಿನಿಯ ಸಂಪೂರ್ಣ ಮಾಹಿತಿಯನ್ನು ಸಲ್ಲಿಕೆ ಮಾಡಿ.
-ಒಂದು ವೇಳೆ ನೀವು ಒಂದಕ್ಕಿಂತ ಹೆಚ್ಚು ನಾಮಿನಿಗಳನ್ನು ಸೇರ್ಪಡೆ ಮಾಡಲು ಬಯಸಿದ್ರೆ 'Add New’ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಆ ಬಳಿಕ ಹೆಚ್ಚುವರಿ ನಾಮಿನಿ ಮಾಹಿತಿ ಸೇರ್ಪಡೆ ಮಾಡಿ. ಸೇವ್ ಕೊಡಿ.
-ನಿಮ್ಮ ಕುಟುಂಬದ ಎಲ್ಲ ಮಾಹಿತಿಗಳನ್ನು ಸೇವ್ ಮಾಡಿದ ತಕ್ಷಣ ನಿಮ್ಮ ಇ-ನಾಮಿನೇಷನ್ ಅರ್ಜಿ ನಿಮ್ಮ ಪಿಎಫ್ ಖಾತೆಗೆ ಸಲ್ಲಿಕೆಯಾಗುತ್ತದೆ. 

Cryptocurrency Bill: ಸಚಿವ ಸಂಪುಟದ ಅಂಗಳದಲ್ಲಿ ಕ್ರಿಪ್ಟೋಕರೆನ್ಸಿ ನಿಯಂತ್ರಣ ಮಸೂದೆ!

ನಾಮಿನಿ ಏಕೆ ಅಗತ್ಯ?
ಒಂದು ವೇಳೆ ಪಿಎಫ್ ಖಾತೆದಾರ ಅಕಾಲಿಕಾ ಮರಣ ಹೊಂದಿದ್ರೆ ಆತನ ನಾಮಿನಿಗೆ ವಿಮೆ ಹಾಗೂ ಪಿಎಫ್ ನ ಇತರ ಸೌಲಭ್ಯಗಳು ಸಿಗುತ್ತವೆ. ಒಂದು ವೇಳೆ ನಾಮಿನಿ ಹೆಸರನ್ನು ಸೇರ್ಪಡೆ ಮಾಡದಿದ್ರೆ ಪಿಎಫ್ ಖಾತೆದಾರನ ಮರಣದ ಬಳಿಕ ಅವರ ಕುಟುಂಬ ಸದಸ್ಯರಿಗೆ ಪಿಎಫ್ ಹಣ ಪಡೆಯೋದು ಕಷ್ಟದ ಕೆಲಸವಾಗುತ್ತದೆ. ಆದಕಾರಣ ಪಿಎಫ್ ಗೆ ನಾಮಿನಿ ಸೇರಿಸೋದು ಅಷ್ಟೊಂದು ಮುಖ್ಯವಾದ ಕೆಲಸವಲ್ಲ ಎಂದು ಭಾವಿಸಿ ನಿರ್ಲಕ್ಷ್ಯ ಮಾಡಬೇಡಿ. ಇದ್ರಿಂದ ಮುಂದೆ ನಿಮ್ಮನ್ನೇ ನಂಬಿಕೊಂಡಿರೋ ಕುಟುಂಬ ಸದಸ್ಯರು ತೊಂದರೆ ಅನುಭವಿಸೋ ಸಾಧ್ಯತೆ ಇರುತ್ತದೆ. ಆದಕಾರಣ ತಡಮಾಡದೆ ಡಿಸೆಂಬರ್ 31ರೊಳಗೆ ಪಿಎಫ್ ಖಾತೆಗೆ ನಾಮಿನಿ ಸೇರ್ಪಡೆ ಮಾಡಿ. 


 

click me!