ಆಧಾರ್-ಪಾನ್ ಕಾರ್ಡ್ ಲಿಂಕ್ ಗಡುವು ವಿಸ್ತರಿಸಿದ ಕೇಂದ್ರ!

By Suvarna NewsFirst Published Mar 31, 2021, 9:27 PM IST
Highlights

ಕಳೆದ ಕೆಲ ದಿನಗಳಿಂದ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಕುರಿತು ಹಲವು ತಲೆ ಕೆಡಿಸಿಕೊಂಡಿದ್ದಾರೆ. ಮಾರ್ಚ್ 31ಕ್ಕೆ ಅಂತಿಮ ದಿನಾಂಕ ಕೂಡ ಫಿಕ್ಸ್ ಮಾಡಲಾಗಿತ್ತು. ಲಿಂಕ್ ಮಾಡದಿದ್ದರೆ ಮುಂದೆ ಎದುರಿಸಬೇಕಾದ ಸಮಸ್ಯೆಗಳ ದೊಡ್ಡ ಪಟ್ಟಿಯನ್ನೇ ಮುಂದಿಡಲಾಗಿತ್ತು. ಇದೀಗ ಈ ಎಲ್ಲಾ ಟೆನ್ಶನ್‌ಗೆ ಕೊಂಚ ರಿಲೀಫ್ ಸಿಕ್ಕಿದೆ.

ನವದೆಹಲಿ(ಮಾ.31):  ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಮಾಡದಿದ್ದರೆ, 1,000 ರೂಪಾಯಿ ದಂಡ, ಪ್ಯಾನ್ ಕಾರ್ಡ್ ನಿಷ್ಕ್ರೀಯ ಸೇರಿದಂತೆ ಹಲವು ತೆರಿಗೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ. ಇದನ್ನು ತಡೆಯಲು ಮಾರ್ಚ್ 31ರೊಳಗೆ ಲಿಂಕ್ ಮಾಡಿ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಆದರೆ ಕೊರೋನಾ ಕಾರಣ ಇದೀಗ ಅಂತಿಮ ಗಡುವನ್ನು ಕೇಂದ್ರ ಮತ್ತೆ ವಿಸ್ತರಿಸಿದೆ.

ಪಾನ್‌ ಜತೆ ಆಧಾರ್‌ ಲಿಂಕ್‌ ಮಾಡದಿದ್ರೆ 10 ಸಾವಿರ ರು. ದಂಡ

ಕೊರೋನಾ ವೈರಸ್ ಹೆಚ್ಚಾದ ಕಾರಣ ವಿವಿಧ ತೆರಿಗೆ ಮತ್ತು ಬೆನಾಮಿ ಕಾನೂನುಗಳ ಅಡಿಯಲ್ಲಿ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ನಿಗದಿಪಡಿಸಿದ್ದ ಮಾರ್ಚ್ 31ರ ಅಂತಿಮ ಗಡುವನ್ನು ಕೇಂದ್ರ ಹಣಕಾಸು ಸಚಿವಾಲಯ ವಿಸ್ತರಿಸುತ್ತಿದೆ ಎಂದು ಅಧಿಸೂಚನೆ ಹೊರಡಿಸಿದೆ.

ಆಧಾರ್‌ ಸಂಖ್ಯೆ ನೀಡಿದ 10 ನಿಮಿಷದಲ್ಲಿ ಪಾನ್‌ ಕಾರ್ಡ್

1961ರ ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಮಾರ್ಚ್ 31, 2021 ಅಂತಿಮ ದಿನವಾಗಿತ್ತು. ಕೊರೋನಾ ಕಾರಣದಿಂದ ತೆರಿಗೆದಾರರು ಎದುರಿಸುತ್ತಿರುವ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು, ಮತ್ತೆ ಮೂರು ತಿಂಗಳು ವಿಸ್ತರಿಸುತ್ತಿದೆ. ಇದೀಗ ಜೂನ್ 30, 2021ಕ್ಕೆ ಕೊನೆಯ ದಿನಾಂಕ ಎಂದು ಅಧಿಸೂಚನೆ ಹೊರಡಿಸಲಾಗಿದೆ.

click me!