ಸೆ.30ರೊಳಗೆ ಈ ಒಂದು ಕೆಲಸ ಮಾಡದಿದ್ರೆ ನಿಷ್ಕ್ರಿಯಗೊಳ್ಳುತ್ತೆ ನಿಮ್ಮ ಡಿಮ್ಯಾಟ್ ಖಾತೆ!

Published : Sep 22, 2023, 05:19 PM IST
ಸೆ.30ರೊಳಗೆ ಈ ಒಂದು ಕೆಲಸ ಮಾಡದಿದ್ರೆ ನಿಷ್ಕ್ರಿಯಗೊಳ್ಳುತ್ತೆ ನಿಮ್ಮ ಡಿಮ್ಯಾಟ್ ಖಾತೆ!

ಸಾರಾಂಶ

ಡಿಮ್ಯಾಟ್ ಖಾತೆದಾರರು, ಮ್ಯೂಚುವಲ್ ಫಂಡ್ ಹೊಂದಿರೋರು ಸೆ.30ರೊಳಗೆ ನಾಮಿನಿ ಸೇರ್ಪಡೆಗೊಳಿಸೋದು ಅಗತ್ಯ. ಇಲ್ಲವಾದ್ರೆ ನಿಮ್ಮ ಖಾತೆ ನಿಷ್ಕ್ರಿಯಗೊಳ್ಳುತ್ತದೆ. ಹಾಗಾದ್ರೆ ಡಿಮ್ಯಾಟ್ ಖಾತೆ, ಮ್ಯೂಚುವಲ್ ಫಂಡ್ ಗೆ ನಾಮಿನಿ ಸೇರ್ಪಡೆ ಹೇಗೆ? ಇಲ್ಲಿದೆ ಮಾಹಿತಿ.   

ನವದೆಹಲಿ( ಸೆ.22): ಡಿಮ್ಯಾಟ್ ಖಾತೆ, ಟ್ರೇಡಿಂಗ್ ಹಾಗೂ ಮ್ಯೂಚುವಲ್ ಫಂಡ್ ಹೂಡಿಕೆಗಳಿಗೆ ನಾಮಿನಿ ಸೇರ್ಪಡೆಗೊಳಿಸಲು ಸೆಪ್ಟೆಂಬರ್ 30 ಅಂತಿಮ ದಿನವಾಗಿದೆ. ಒಂದು ವೇಳೆ ಈ ಅಂತಿಮ ಗಡುವಿನೊಳಗೆ ನಾಮಿನಿ ಸೇರ್ಪಡೆಗೊಳಿಸದಿದ್ದರೆ ಡಿಮ್ಯಾಟ್ ಖಾತೆ, ಮ್ಯೂಚುವಲ್ ಫಂಡ್ ಹೂಡಿಕೆ ನಿಷ್ಕ್ರಿಯಗೊಳ್ಳಲಿದೆ. ಈ ಹಿಂದೆ ನಾಮಿನಿ ಸೇರ್ಪಡೆಗೆ ಮಾ.31ರ ಗಡುವು ನೀಡಲಾಗಿತ್ತು. ಆದರೆ, ಸೆಬಿ ಆ ಬಳಿಕ ಈ ಗಡುವನ್ನು ಸೆಪ್ಟೆಂಬರ್ 30ಕ್ಕೆ ವಿಸ್ತರಿಸಿತ್ತು. ಅನೇಕ ಸ್ಟಾಕ್ ಹೋಲ್ಡರ್ ಗಳ ಮನವಿ ಮೇರೆಗೆ ಸೆಬಿ ಈ ಗಡುವು ವಿಸ್ತರಣೆ ಮಾಡಿತ್ತು. ಹೀಗಾಗಿ ಈ ಬಾರಿ ಟ್ರೇಡಿಂಗ್ ಹಾಗೂ ಡಿಮ್ಯಾಟ್ ಖಾತೆಗೆ ನಾಮಿನಿ ಸೇರಿಸಲು ಹೂಡಿಕೆದಾರರಿಗೆ ಕೊನೆಯ ಅವಕಾಶವನ್ನು ಸೆಬಿ ನೀಡಿದೆ. ನೀವು ಡಿಮ್ಯಾಟ್ ಖಾತೆ ಹೊಂದಿದ್ದು, ಇನ್ನೂ ನಾಮಿನಿ ಸೇರಿಸದಿದ್ರೆ ಸೆ.3೦ರ ತನಕ ಕಾಯುವ ಬದಲು ಈಗಲೇ ಮಾಡಿ ಮುಗಿಸಿ. ನ್ಯಾಷನಲ್ ಸೆಕ್ಯುರಿಟೀಸ್ ಡೆಫಾಸಿಟರಿ ಲಿಮಿಟೆಡ್ (ಎನ್ ಎಸ್ ಡಿಎಲ್) ಕೂಡ ಇತ್ತೀಚೆಗೆ ನಾಮಿನಿ ಸೇರ್ಪಡೆಗೆ ಸಂಬಂಧಿಸಿ ಎಕ್ಸ್ ಪೋಸ್ಟ್ ಮೂಲಕ ಹೂಡಿಕೆದಾರರಿಗೆ ಅಂತಿಮ ಗಡುವನ್ನು ನೆನಪಿಸಿದೆ. 

ಸೆಬಿ ಸುತ್ತೋಲೆಯಲ್ಲಿ ಏನಿದೆ?
2021ರ ಜುಲೈನಲ್ಲಿ ಸೆಬಿ ಈಗಾಗಲೇ ಅಸ್ತಿತ್ವದಲ್ಲಿರುವ ಎಲ್ಲ ಅರ್ಹ ಟ್ರೇಡಿಂಗ್ ಹಾಗೂ ಡಿಮ್ಯಾಟ್ ಖಾತೆದಾರರಿಗೆ ನಾಮಿನಿ ಸೇರ್ಪಡೆಗೆ ಆಯ್ಕೆ ನೀಡಿತ್ತು. ಈಗಾಗಲೇ ಇರುವ ಹೂಡಿಕೆದಾರರು 2021ರ ಜುಲೈನಲ್ಲಿ ಸುತ್ತೋಲೆ ಹೊರಡಿಸುವ ಮುನ್ನ ನಾಮಿನಿ ಮಾಹಿತಿಗಳನ್ನು ನೀಡಿದ್ರೆ ಅವರು ಅದನ್ನು ಮತ್ತೆ ಸಲ್ಲಿಕೆ ಮಾಡುವ ಅಗತ್ಯವಿಲ್ಲ ಎಂದು ಸೆಬಿ ತಿಳಿಸಿತ್ತು. ಇನ್ನು ನಾಮಿನಿ ಮಾಹಿತಿಗಳನ್ನು ಈ ತನಕ ಸಲ್ಲಿಕೆ ಮಾಡದ ಹೂಡಿಕೆದಾರರಿಗೆ ಸೆ.30ರ ತನಕ ಅವಕಾಶವಿದೆ ಎಂದು ತಿಳಿಸಿತ್ತು. ಈಗಾಗಲೇ ಇರುವ ಹೂಡಿಕೆದಾರರು ಈ ಹಿಂದೆ ನಾಮಿನಿ ಮಾಹಿತಿ ನೀಡಿದ್ದರೆ ಮತ್ತೆ ಸಲ್ಲಿಕೆ ಮಾಡುವ ಅಗತ್ಯವಿಲ್ಲ.ನಾಮಿನಿ ಸೇರಿಸದ ಹೂಡಿಕೆದಾರರು ತನ್ನ ನಾಮಿನಿ ಸಲ್ಲಿಕೆ ಮಾಡಬಹುದು ಅಥವಾ ಸ್ಟಾಕ್ ಬ್ರೋಕರ್ಸ್ ಟ್ರೇಡಿಂಗ್ ಪ್ಲ್ಯಾಟ್ ಫಾರ್ಮ್ ನಲ್ಲಿ  2-ಫ್ಯಾಕ್ಟರ್ ದೃಢೀಕರಣ ಮೂಲಕ ನಾಮಿನಿ ಸಲ್ಲಿಕೆ ಮಾಡಬಹುದು. ಇಲ್ಲವೆ ಇಂಥ ಸೇವೆ ಒದಗಿಸುವ ಠೇವಣಿ ಪಾಲುದಾರರಡಿ ಕೂಡ ನಾಮಿನಿ ಸಲ್ಲಿಕೆ ಮಾಡಲು ಅವಕಾಶವಿದೆ. ನಾಮಿನಿ ಅಥವಾ ಅಪ್ರಾಪ್ತ ವಯಸ್ಸಿನ ನಾಮಿನಿಯ ಪಾಲಕರ ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ ಹಾಗೂ ಗುರುತಿನ ಮಾಹಿತಿಗಳನ್ನು ನೀಡುವುದು ಅವರ ಆಯ್ಕೆಗೆ ಬಿಟ್ಟಿದ್ದು.

ಆಧಾರ್ ಸಂಖ್ಯೆ ಇದ್ದರೆ ಸಾಕು ತಕ್ಷಣ ಪ್ಯಾನ್ ಕಾರ್ಡ್ ಪಡೆಯಬಹುದು, ಅದು ಹೇಗೆ? ಇಲ್ಲಿದೆ ಮಾಹಿತಿ

ಡಿಮ್ಯಾಟ್ ಖಾತೆಗೆ ನಾಮಿನಿ ಸೇರ್ಪಡೆ ಹೇಗೆ?
ಹಂತ: 1: ನಿಮ್ಮ ಡಿಮ್ಯಾಟ್ ಖಾತೆಗೆ ಲಾಗಿನ್ ಆಗಿ
ಹಂತ 2:ಪ್ರೊಫೈಲ್ ವರ್ಗದಲ್ಲಿ 'My nominees'ಆಯ್ಕೆ ಮಾಡಿ. ಈಗ ನಾಮಿನಿ ಮಾಹಿತಿ ಪುಟ ತೆರೆದುಕೊಳ್ಳುತ್ತದೆ.
ಹಂತ 3: Ig 'add nominee' ಅಥವಾ 'opt-out'ಆಯ್ಕೆ ಮಾಡಿ.
ಹಂತ 4: ನಾಮಿನಿ ಮಾಹಿತಿ ಭರ್ತಿ ಮಾಡಿ ಹಾಗೂ ನಾಮಿನಿ ಐಡಿ ಪ್ರೂಫ್ ಅಪ್ಲೋಡ್ ಮಾಡಿ. ಆ ಬಳಿಕ ನಾಮಿನಿಗೆ ನೀವು ನೀಡಬಯಸುವ ಷೇರಿನ ಪ್ರಮಾಣವನ್ನು 'percentage' ಫೀಲ್ಡ್ ನಲ್ಲಿ ನಮೂದಿಸಿ.
ಹಂತ 5: ಆಧಾರ್ ಒಟಿಪಿ ಬಳಸಿಕೊಂಡು ದಾಖಲೆಗೆ ಇ-ಸಹಿ ಮಾಡಿ.
ಹಂತ 6: ನಾಮಿನಿ ಮಾಹಿತಿಯನ್ನು ಪರಿಶೀಲಿಸಿ ಡಿಮ್ಯಾಟ್ ಖಾತೆಗೆ 24-48 ಗಂಟೆಗಳಲ್ಲಿ ಸೇರ್ಪಡೆ ಮಾಡಲಾಗುತ್ತದೆ. 

ಆನ್ ಲೈನ್ ಶಾಪಿಂಗ್ ಮಾಡೋರು ಗಮನಿಸಿ; ಇಂದಿನಿಂದ ಈ ಇ-ಕಾಮರ್ಸ್ ತಾಣದಲ್ಲಿ 2 ಸಾವಿರ ರೂ. ನೋಟು ನಡೆಯಲ್ಲ!

MF ಪೋರ್ಟ್ ಫೋಲಿಯೋಗೆ ನಾಮಿನಿ ಸೇರ್ಪಡೆ ಹೇಗೆ?
ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡುವ ಸಂದರ್ಭದಲ್ಲಿ ನಾಮಿನಿ ಸೇರಿಸಬಹುದು. ಪ್ರಾರಂಭದಲ್ಲಿ ಅರ್ಜಿ ಸಲ್ಲಿಸುವಾಗ ಅಥವಾ ನಿಗದಿತ ನಾಮಿನಿ ಅರ್ಜಿ ಸಲ್ಲಿಕೆ ಮಾಡುವ ಮೂಲಕ ಈ ಪ್ರಕ್ರಿಯೆ ಪೂರ್ಣಗೊಳಿಸಬಹುದು. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಏರಿಕೆಯಾಗ್ತಿರೋ ಚಿನ್ನವನ್ನು ಲಾಭದಾಯಕವಾಗಿ ಹೇಗೆ ಖರೀದಿಸಬೇಕು? ತಜ್ಞರ ಸಲಹೆ
YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ