Minimum Balance: ಖಾತೆಯಲ್ಲಿ 10 ಸಾವಿರ ಇಲ್ಲ ಅಂದ್ರೆ ದಂಡ, ಎಟಿಎಂ ಹಣ ವಿತ್ಡ್ರಾಗೆ ಪಾವತಿಸಬೇಕು ಹೆಚ್ಚಿನ ಶುಲ್ಕ

Published : Jun 27, 2025, 05:11 PM ISTUpdated : Jun 27, 2025, 05:28 PM IST
bank

ಸಾರಾಂಶ

ಬ್ಯಾಂಕ್ ನಿಯಮದಲ್ಲಿ ಮಹತ್ವದ ಬದಲಾವಣೆ ಆಗ್ತಿದೆ. ಬ್ಯಾಕ್ ತನ್ನ ಗ್ರಾಹಕರಿಗೆ ಶಾಕ್ ನೀಡಿದೆ. ಬ್ಯಾಲೆನ್ಸ್ ಹಾಗೂ ಎಟಿಎಂ ವಿತ್ ಡ್ರಾ ನಿಯಮದಲ್ಲಿ ಬದಲಾವಣೆಯಾಗಿದೆ. 

ಡಿಬಿಎಸ್ ಬ್ಯಾಂಕ್ ಇಂಡಿಯಾ (DBS Bank India) ಗ್ರಾಹಕರಿಗೆ ಮಹತ್ವದ ಸುದ್ದಿಯೊಂದಿದೆ. ಡಿಬಿಎಸ್ ಬ್ಯಾಂಕ್ ಇಂಡಿಯಾ, ಸೇವಿಂಗ್ ಅಕೌಂಟ್ ಬ್ಯಾಲೆನ್ಸ್ ಮೊತ್ತದಲ್ಲಿ ಬದಲಾವಣೆ ಮಾಡಿದೆ. ನಿಮ್ಮ ಸೇವಿಂಗ್ ಖಾತೆಯಲ್ಲಿ ಸರಾಸರಿ ಬ್ಯಾಲೆನ್ಸ್ (AMB) ಕಡಿಮೆಯಿದ್ರೆ ನೀವು ದಂಡ ಪಾವತಿಸಬೇಕಾಗುತ್ತದೆ. ಈ ನಿಯಮ ಆಗಸ್ಟ್ 1, 2025 ರಿಂದ ಜಾರಿಗೆ ಬರಲಿದೆ. ಬ್ಯಾಂಕ್ ತನ್ನ ವೆಬ್ಸೈಟ್ನಲ್ಲಿ ಈ ಮಾಹಿತಿಯನ್ನು ನೀಡಿದೆ. ನಿಮ್ಮ ಖಾತೆಯಲ್ಲಿ ಅಗತ್ಯಕ್ಕಿಂತ ಕಡಿಮೆ ಬ್ಯಾಲೆನ್ಸ್ ಇದ್ರೆ ಕಡಿಮೆ ಬ್ಯಾಲೆನ್ಸ್ನ ಶೇಕಡಾ 6 ದಂಡವನ್ನು ಪಾವತಿಸಬೇಕು. ಆದರೆ ಈ ದಂಡ 500 ರೂಪಾಯಿಗಿಂತ ಹೆಚ್ಚಿರೋದಿಲ್ಲ ಎಂದು ಬ್ಯಾಂಕ್ ಹೇಳಿದೆ. ಒಂದ್ವೇಳೆ ನಿಮ್ಮ ಖಾತೆಯಲ್ಲಿ ಬ್ಯಾಲೆನ್ಸ್ ಕಡಿಮೆಯಿದ್ದರೆ ಇನ್ಮುಂದೆ ದಂಡದ ರೂಪದಲ್ಲಿ ನೀವು ಹಣ ಪಾವತಿಸಬೇಕು.

ಕನಿಷ್ಠ ಬ್ಯಾಲೆನ್ಸ್ : ಉಳಿತಾಯ ಖಾತೆಗೆ ಮಾತ್ರ ಬ್ಯಾಲೆನ್ಸ್ ಮೊತ್ತ 10, 000 ರೂಪಾಯಿ ಆಗಿದೆ. ಬ್ಯಾಂಕ್ ವೆಬ್ಸೈಟ್ ಪ್ರಕಾರ, ವಿಭಿನ್ನ ಖಾತೆಗಳಿಗೆ ವಿಭಿನ್ನ ಶುಲ್ಕ ವಿಧಿಸಲಾಗುತ್ತದೆ. ಡಿಬಿಎಸ್ ಬ್ಯಾಂಕ್ ಇಂಡಿಯಾ ಪ್ರಕಾರ, ಸಾಮಾನ್ಯ ಉಳಿತಾಯ ಖಾತೆಯಲ್ಲಿ ಗ್ರಾಹಕರ ಸರಾಸರಿ ಮಾಸಿಕ ಬ್ಯಾಲೆನ್ಸ್ (AMB)10,000 ರೂಪಾಯಿ ಆಗಿರಬೇಕು. ನಿಮ್ಮ ಬ್ಯಾಲೆನ್ಸ್ ಇದಕ್ಕಿಂತ ಕಡಿಮೆಯಿದ್ದರೆ, ನೀವು ದಂಡವನ್ನು ಪಾವತಿಸಬೇಕಾಗುತ್ತದೆ. ಡಿಬಿಎಸ್ ಬ್ಯಾಂಕ್ ಈ ಮಾಹಿತಿಯನ್ನು ತನ್ನ ಗ್ರಾಹಕರಿಗೆ ಎಸ್ ಎಂಎಸ್ ಮೂಲಕ ನೀಡಿದೆ.

ಎಟಿಎಂ ನಿಯಮದಲ್ಲಿ ಬದಲಾವಣೆ : ಮೇ 1, 2025 ರಿಂದ, ಡಿಬಿಎಸ್ ಬ್ಯಾಂಕ್ ಎಟಿಎಂ ಹಣ ಹಿಂಪಡೆಯುವ ನಿಯಮಗಳನ್ನು ಸಹ ಬದಲಾಯಿಸಿದೆ. ಉಚಿತ ಮಿತಿಗಿಂತ ಹೆಚ್ಚಿನ ಹಣವನ್ನು ವಿತ್ ಡ್ರಾ ಮಾಡಲು ಹೆಚ್ಚಿನ ಶುಲ್ಕ ಪಾವತಿಸಬೇಕಾಗುತ್ತದೆ. ಉಚಿತ ಮಿತಿಯ ನಂತರ ಎಟಿಎಂನಿಂದ ಹಣವನ್ನು ಹಿಂಪಡೆಯಲು ಗರಿಷ್ಠ 23 ರೂಪಾಯಿಗಳವರೆಗೆ ಶುಲ್ಕ ವಿಧಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಬ್ಯಾಂಕುಗಳಿಗೆ ಅವಕಾಶ ನೀಡಿದೆ. ಡಿಬಿಎಸ್ ಬ್ಯಾಂಕ್ ಈಗ ಡಿಬಿಎಸ್ ಅಲ್ಲದ ಬ್ಯಾಂಕ್ ಎಟಿಎಂನಿಂದ ಉಚಿತ ಮಿತಿಯ ನಂತರ ಹಣವನ್ನು ಹಿಂಪಡೆಯಲು 23 ರೂಪಾಯಿ ಶುಲ್ಕ ವಿಧಿಸುತ್ತದೆ. ಡಿಬಿಎಸ್ ಬ್ಯಾಂಕ್ ಎಟಿಎಂಗಳಿಂದ ಹಣವನ್ನು ಹಿಂಪಡೆಯಲು ಯಾವುದೇ ಶುಲ್ಕವಿರುವುದಿಲ್ಲ. ನೀವು ಯಾವುದೇ ಶುಲ್ಕವಿಲ್ಲದೆ ಡಿಬಿಎಸ್ ಬ್ಯಾಂಕ್ ಎಟಿಎಂಗಳಿಂದ ಬಯಸಿದಷ್ಟು ಬಾರಿ ಹಣವನ್ನು ವಿತ್ ಡ್ರಾ ಮಾಡಬಹುದು.

ಜುಲೈನಲ್ಲಿ ಏನೆಲ್ಲ ಬದಲಾವಣೆ : ತತ್ಕಾಲ್ ಟಿಕೆಟ್ ಬುಕಿಂಗ್ ನಿಯಮಗಳಲ್ಲಿ ಬದಲಾವಣೆ ಆಗಲಿದೆ. ಜುಲೈ 1 ರಿಂದ, ತ್ವರಿತ ಟಿಕೆಟ್ಗಳನ್ನು ಬುಕ್ ಮಾಡುವ ವಿಧಾನವು ಬದಲಾಗಲಿದೆ. ಈಗ ಒಬ್ಬ ವ್ಯಕ್ತಿಯು IRCTC ಯ ವೆಬ್ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ನಿಂದ ತ್ವರಿತ ಟಿಕೆಟ್ ಬುಕ್ ಮಾಡಿದರೆ, ಅವನ ಮೊಬೈಲ್ಗೆ OTP ಕಳುಹಿಸಲಾಗುತ್ತದೆ. ಪ್ರಯಾಣಿಕನು ಈ OTP ಅನ್ನು ನಮೂದಿಸುವವರೆಗೆ, ಅವನ ಟಿಕೆಟ್ ಕನ್ಫರ್ಮ್ ಆಗಲಿದೆ.

HDFC ಬ್ಯಾಂಕ್ ತನ್ನ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಹಲವು ಹೊಸ ಶುಲ್ಕಗಳನ್ನು ಜಾರಿಗೆ ತಂದಿದೆ. ಈ ನಿಯಮಗಳ ಪ್ರಕಾರ, ಒಬ್ಬ ವ್ಯಕ್ತಿಯು HDFC ಕಾರ್ಡ್ನೊಂದಿಗೆ Dream11, MPL, Rummy Culture ನಂತಹ ಗೇಮಿಂಗ್ ಅಪ್ಲಿಕೇಶನ್ಗಳಲ್ಲಿ ಒಂದು ತಿಂಗಳಲ್ಲಿ ರೂ 10,000 ಕ್ಕಿಂತ ಹೆಚ್ಚು ಖರ್ಚು ಮಾಡಿದರೆ, ಅವರು ಶೇಕಡಾ 1 ರಷ್ಟು ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಗ್ರಾಹಕರು ಪೇಟಿಎಂ, ಮೊಬಿಕ್ವಿಕ್, ಫ್ರೀಚಾರ್ಜ್ನಂತಹ ವ್ಯಾಲೆಟ್ಗಳಲ್ಲಿ 10,000 ಕ್ಕಿಂತ ಹೆಚ್ಚು ಖರ್ಚು ಮಾಡಿದರೂ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!