ದರ ಹೆಚ್ಚಿಸಲು ದರ್ಶಿನಿ, ಕ್ಯಾಂಟೀನ್‌ಗಳ ಹಿಂದೇಟು

Published : Apr 06, 2022, 08:12 AM IST
ದರ ಹೆಚ್ಚಿಸಲು ದರ್ಶಿನಿ, ಕ್ಯಾಂಟೀನ್‌ಗಳ ಹಿಂದೇಟು

ಸಾರಾಂಶ

*   ಗ್ಯಾಸ್‌, ಅಡುಗೆ ಎಣ್ಣೆ, ತರಕಾರಿ ಬೆಲೆ ಹೆಚ್ಚಳದಿಂದ ಸಮಸ್ಯೆ *   ಬೆಲೆ ಹೆಚ್ಚಿಸಿದರೆ ಗ್ರಾಹಕರು ಬರುವುದಿಲ್ಲ ಎಂಬ ಭಯದಲ್ಲಿ ಮಾಲೀಕರು *   ಸದ್ಯ ದರ ಹೆಚ್ಚಳವಿಲ್ಲ  

ಬೆಂಗಳೂರು(ಏ.06):  ಬೆಂಗಳೂರು ಹೋಟೆಲ್‌ ಮಾಲೀಕರ ಸಂಘ ತಿಂಡಿ-ತಿನಿಸುಗಳ ದರ ಹೆಚ್ಚಳ ಮಾಡಲು ನಿರ್ಧರಿಸಿದ್ದರೂ ದರ್ಶಿನಿ, ಹೋಟೆಲ್‌(Hotel) ಕ್ಯಾಂಟೀನ್‌ಗಳ(Canteen) ಮಾಲೀಕರು ದರ ಹೆಚ್ಚಳ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಹಿನ್ನೆಲೆ ತಿಂಡಿ-ತಿನಿಸು ದರ ಶೇಕಡ 10ರಷ್ಟು ಹೆಚ್ಚಿಸಲು ಬೃಹತ್‌ ಬೆಂಗಳೂರು ಹೋಟೆಲುಗಳ ಸಂಘ ಹಸಿರು ನಿಶಾನೆ ತೋರಿದ್ದರೂ ಸಹ ನಾನಾ ಕಾರಣಗಳಿಂದಾಗಿ ಹೋಟೆಲ್‌ ಮಾಲಿಕರು ಬೆಲೆ ಹೆಚ್ಚಳಕ್ಕೆ ಮುಂದಾಗದೇ ಒಂದಷ್ಟು ದಿವಸ ಕಾದು ನೋಡಿ ಬಳಿಕ ಬೆಲೆ ಹೆಚ್ಚಳ ಮಾಡಲು ನಿರ್ಧರಿಸಿದ್ದಾರೆ.

ಕೊರೋನಾ(Coronavirus) ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷದಿಂದ ಹೋಟೆಲ್‌ ಉದ್ಯಮ(Business) ತತ್ತರಿಸಿ ಹೋಗಿದೆ. ಲಾಕ್‌ಡೌನ್‌(Lockdown), ಕರ್ಫ್ಯೂನಿಂದಾಗಿ(Curfew) ಸಾವಿರಾರು ಹೋಟೆಲ್‌ಗಳು ಮುಚ್ಚಿ ಹೋಗಿವೆ. ಇದೀಗ ಉದ್ಯಮ ಸ್ವಲ್ಪ ಚೇತರಿಸಿಕೊಳ್ಳುತ್ತಿದೆ. ಕೊರೋನಾದಿಂದಾಗಿ ಜನರ ಜೀವನ ಶೈಲಿಯಲ್ಲಿಯೂ ಸ್ವಲ್ಪ ಬದಲಾವಣೆಯಾಗಿದ್ದು, ಹೋಟೆಲ್‌ಗಳಿಗೆ ಆಗಮಿಸುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಕುಟುಂಬ ಸಮೇತ ಆಗಮಿಸುತ್ತಿದ್ದವರ ಸಂಖ್ಯೆಯೂ ಇಳಿಮುಖವಾಗಿದೆ. ಇಂತಹ ಸಂದರ್ಭದಲ್ಲಿ ಏಕಾಏಕಿ ಬೆಲೆ ಹೆಚ್ಚಿಸಿದರೆ ವ್ಯಾಪಾರದಲ್ಲಿ ನಷ್ಟವಾಗಬಹುದು ಎಂಬ ಭೀತಿಯಿಂದಾಗಿ ದರ ಹೆಚ್ಚಳಕ್ಕೆ ಹೋಟೆಲ್‌ಗಳು ಮುಂದಾಗುತ್ತಿಲ್ಲ.

ಬೆಲೆ ಏರಿಕೆ ಮಧ್ಯೆ ಹೋಟೆಲ್‌ ತಿಂಡಿ ತಿನಿಸು ಬೆಲೆ ಮತ್ತಷ್ಟು ದುಬಾರಿ..!

ದರ ಹೆಚ್ಚಳ ಅನಿವಾರ್ಯ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೃಹತ್‌ ಬೆಂಗಳೂರು ಹೋಟೆಲ್‌ಗಳ ಸಂಘದ ಗೌರವ ಕಾರ್ಯದರ್ಶಿ ವೀರೇಂದ್ರ ಎನ್‌.ಕಾಮತ್‌, ಪ್ರಮುಖವಾಗಿ ಅಡುಗೆ ಅನಿಲ ಸಿಲಿಂಡರ್‌ ಬೆಲೆ ಒಂದೇ ಬಾರಿಗೆ .265 ಹೆಚ್ಚಳವಾಗಿದೆ. ಅಡುಗೆ ಎಣ್ಣೆಯೂ ದುಬಾರಿಯಾಗಿದೆ. ವಿದ್ಯುತ್‌ ದರವೂ ಪರಿಷ್ಕರಣೆಯಾಗಿದೆ. ಇದನ್ನೆಲ್ಲಾ ಭರಿಸಲು ತಿನಿಸುಗಳ ದರ ಹೆಚ್ಚಳ ಅನಿವಾರ್ಯವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಗ್ರಾಹಕರಿಗೆ(Customers) ಮಾಹಿತಿ ನೀಡುವುದು ಸಂಘದ ಕರ್ತವ್ಯವಾಗಿದೆ. ಆದ್ದರಿಂದ ದರ ಹೆಚ್ಚಳ ಬಗ್ಗೆ ಮೊದಲೇ ಮಾಹಿತಿ ನೀಡಿದ್ದೇವೆ. ಗ್ರಾಹಕರಿಗೆ ಹೊರೆ ಆಗುವುದು ನಮ್ಮ ಗಮನಕ್ಕೂ ಬಂದಿದ್ದು, ದರ ಹೆಚ್ಚಳ ಅನಿವಾರ್ಯವಾಗಿದೆ. ಆದರೆ ದರ ಹೆಚ್ಚಳ ಮಾಡಲೇಬೇಕು ಎಂದು ನಾವು ಕಡ್ಡಾಯ ಮಾಡಿಲ್ಲ. ಆಯಾ ಹೋಟೆಲ್‌ಗಳ ತೀರ್ಮಾನಕ್ಕೆ ಬಿಟ್ಟಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಸದ್ಯ ದರ ಹೆಚ್ಚಳವಿಲ್ಲ

ಅಡುಗೆ ಅನಿಲ, ಎಣ್ಣೆ, ತರಕಾರಿ ಸೇರಿದಂತೆ ಹೋಟೆಲ್‌ಗಳಲ್ಲಿ ಉಪಯೋಗಿಸುವ ಹಲವು ವಸ್ತುಗಳ ಬೆಲೆ ಹೆಚ್ಚಳವಾಗಿದೆ. ತಿಂಡಿ, ತಿನಿಸುಗಳ ದರ ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ. ಆದರೆ ಸದ್ಯಕ್ಕೆ ಹೆಚ್ಚಳ ಮಾಡುವುದಿಲ್ಲ ಅಂತ ವಿ.ವಿ.ಪುರಂ ಶ್ರೀಕೃಷ್ಣ ದರ್ಶಿನಿ ರಂಗನಾಥ್‌ ಕೆ. ಶೆಟ್ಟಿ ತಿಳಿಸಿದ್ದಾರೆ. 

ಕಡಿವಾಣ ಹಾಕಲಿ

ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ, ಹೋಟೆಲ್‌ ತಿನಿಸು(Food), ತರಕಾರಿ ಸೇರಿದಂತೆ ಎಲ್ಲವೂ ದುಬಾರಿಯಾಗುತ್ತಿವೆ. ಜೀವನ ನಿರ್ವಹಣೆ ಕಷ್ಟವಾಗಿದೆ. ಸರ್ಕಾರ ತಕ್ಷಣ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು ಅಂತ ರಾಜಾಜಿನಗರದ ಆಟೋ ಚಾಲಕ ಚಂದ್ರು ಹೇಳಿದ್ದಾರೆ.  

ಹೀಗೆ ತಿನ್ಬೇಕಂತೆ ಮಸಾಲೆ ದೋಸೆ : ವಿಡಿಯೋ ವೈರಲ್

ಈಗಲೇ ವ್ಯಾಪಾರ ಕಡಿಮೆಯಾಗಿದೆ. ತಿನಿಸುಗಳ ಬೆಲೆ ಹೆಚ್ಚಳ ಮಾಡಿದರೆ ಬರುವವರೂ ಬರುವುದಿಲ್ಲ. ಆದ್ದರಿಂದ ದರ ಹೆಚ್ಚಳ ಮಾಡುವುದಿಲ್ಲ. ಇದ್ದುದರಲ್ಲೇ ಹೊಂದಾಣಿಕೆ ಮಾಡಿಕೊಂಡು ಹೋಗಲಾಗುವುದು ಅಂತ ಪ್ಯಾಲೇಸ್‌ ರಸ್ತೆ ಶ್ರೀರಾಮ ಕ್ಯಾಂಟೀನ್‌ ದೇವರಾಜು ತಿಳಿಸಿದ್ದಾರೆ.  

ಹೋಟೆಲಲ್ಲಿ ತಿನಿಸು ಶೇ.10 ದುಬಾರಿ: ಹೋಟೆಲ್‌ ಮಾಲೀಕರ ಸಂಘ

ಬೆಂಗಳೂರು: ವಿದ್ಯುತ್‌, ಅಡುಗೆ ಅನಿಲ, ಅಡುಗೆ ಎಣ್ಣೆ (Edible Oil) ಹಾಗೂ ಪೆಟ್ರೋಲ್‌ ದರ (Fuel Price) ಹೆಚ್ಚಾದ ಹಿನ್ನೆಲೆಯಲ್ಲಿ ಈಗ ಹೋಟೆಲ್‌ (Hotel) ತಿಂಡಿ, ತಿನಿಸುಗಳ ದರವೂ ಏರಿಕೆಯಾಗಿದೆ. ಬೆಂಗಳೂರಿನ ಹೋಟೆಲ್‌ಗಳು ತಿನಿಸುಗಳ ಬೆಲೆಯನ್ನು ಕನಿಷ್ಠ ಶೇ.10ರಷ್ಟು ಏರಿಕೆ ಮಾಡಲು ನಿರ್ಧರಿಸಿವೆ. ಸೋಮವಾರ ಬೆಂಗಳೂರು ಹೋಟೆಲ್‌ ಮಾಲಿಕರ ಸಂಘದ ಸಭೆ ನಡೆಯಿತು. ಸಭೆಯಲ್ಲಿ ಚರ್ಚಿಸಿ ಹೋಟೆಲ್‌ ಆಹಾರ ಪದಾರ್ಥಗಳ ಬೆಲೆ ಶೇ.10ರಷ್ಟು ಹೆಚ್ಚಿಸುವ ಬಗ್ಗೆ ತೀರ್ಮಾನಿಸಲಾಯಿತು. ಮುಂದಿನ ಒಂದು ವಾರದೊಳಗೆ ಈ ದರ ಏರಿಕೆ ನಿಯಮ ಅನ್ವಯಿಸಲಿದೆ. ಕೆಲವು ಹೋಟೆಲ್‌ ಮಾಲಿಕರು ಮಂಗಳವಾರದಿಂದಲೇ ದರ ಏರಿಕೆ ಮಾಡಿದರೂ ಮಾಡಬಹುದು ಎಂದು ಬೆಂಗಳೂರು ಹೋಟೆಲ್‌ ಮಾಲಿಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್‌ (PC Rao) ತಿಳಿಸಿದ್ದರು. 
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ
ರೆಪೋ ದರ ಕಡಿತ : ಸಾಲಗಾರರಿಗೆ ಅನುಕೂಲ, ಹೂಡಿಕೆದಾರರಿಗೆ ಬೇಸರ