
ನವದೆಹಲಿ (ಜು.14): ಕೇಂದ್ರ ಸರ್ಕಾರದ ಈ ಒಂದು ಇಲಾಖೆಯ ಉದ್ಯೋಗಿಗಳಿಗೆ ಶುಭ ಸುದ್ದಿ ಸಿಕ್ಕಿದೆ. ಸಿಪಿಎಸ್ಇಎಸ್ ಕಾರ್ಯನಿರ್ವಾಹಕರು ಹಾಗೂ ಮೇಲ್ವಿಚಾರಕರಿಗೆ ಸಾರ್ವಜನಿಕ ಉದ್ಯಮಗಳ ಇಲಾಖೆ ತುಟ್ಟಿ ಭತ್ಯೆ ದರಗಳನ್ನು (ಡಿಎ) ಪರಿಷ್ಕರಿಸಿದೆ. 2023ರ ಜುಲೈ 7ರ ಸಾರ್ವಜನಿಕ ಉದ್ಯಮಗಳ ಇಲಾಖೆಯ ಅಧಿಕೃತ ಜ್ಞಾಪನ ಪತ್ರದಲ್ಲಿ ಈ ಮಾಹಿತಿ ನೀಡಲಾಗಿದೆ. ಬೋರ್ಡ್ ಮಟ್ಟ, ಬೋರ್ಡ್ ಮಟ್ಟಕ್ಕಿಂತ ಕೆಳಗಿನ ಹಾಗೂ ಸೂಪರ್ ವೈಸರ್ ಹುದ್ದೆಗಳ ಡಿಎಯಲ್ಲಿ ಹೆಚ್ಚಳ ಮಾಡಲಾಗಿದೆ. ಉದ್ಯೋಗಿಗಳ ಜೀವನ ನಿರ್ವಹಣಾ ವೆಚ್ಚದ ಆಧಾರದಲ್ಲಿ ಡಿಎ ನಿಗದಿಪಡಿಸಲಾಗುತ್ತದೆ. ಉದ್ಯೋಗಿ ನಗರ, ಗ್ರಾಮೀಣ, ಅರೆಪಟ್ಟಣ ಹೀಗೆ ಯಾವ ಪ್ರದೇಶದಲ್ಲಿ ವಾಸಿಸುತ್ತಾನೆ ಎಂಬ ಆಧಾರದಲ್ಲಿ ಡಿಎ ನಿಗದಿಪಡಿಸಲಾಗುತ್ತದೆ. ಹಣದುಬ್ಬರ ಹೆಚ್ಚಳದಿಂದ ಏರಿಕೆಯಾದ ಜೀವನ ನಿರ್ವಹಣಾ ವೆಚ್ಚವನ್ನು ಸರಿದೂಗಿಸಲು ಸರ್ಕಾರ ನೌಕರರಿಗೆ ಡಿಎ ಹೆಚ್ಚಳ ಮಾಡುತ್ತದೆ. ಸಿಪಿಎಸ್ಇಎಸ್ ಕಾರ್ಯನಿರ್ವಾಹಕರು ಹಾಗೂ ಮೇಲ್ವಿಚಾರಕರಿಗೆ ವೇತನ ಶ್ರೇಣಿಯ ಆಧಾರದಲ್ಲಿ ಡಿಎ ಹೆಚ್ಚಳದ ಪ್ರಮಾಣವನ್ನು ನಿಗದಿಪಡಿಸಲಾಗಿದೆ.
ಮಾಸಿಕ 3,500ರೂ. ಮೂಲವೇತನ ಹೊಂದಿರೋರಿಗೆ ಡಿಎ ದರವನ್ನು ವೇತನದ ಶೇ.701.9ರಷ್ಟು ಹೆಚ್ಚಳ ಮಾಡಲಾಗಿದೆ. ಅಂದರೆ ಕನಿಷ್ಠ 15,428ರೂ. ಇನ್ನು ಮೂಲವೇತನ ಮಾಸಿಕ 3,501ರೂ. ಹಾಗೂ 6,500ರೂ. ನಡುವೆ ಇದ್ದರೆ, ಡಿಎ ದರ ವೇತನದ ಶೇ.526.4 ರಷ್ಟು ಏರಿಕೆ ಮಾಡಲಾಗಿದೆ. ಅಂದರೆ ಕನಿಷ್ಠ 24,567ರೂ. ಇನ್ನು ಮೂಲವೇತನ 6,500ರೂ.ಗಿಂತ ಹೆಚ್ಚು ಹಾಗೂ 9,500ರೂ. ತನಕವಿದ್ದರೆ, ಡಿಎ ದರ ವೇತನದ ಶೇ.421.1ರಷ್ಟು ಹೆಚ್ಚಳ. ಅಂದರೆ ಕನಿಷ್ಠ 34,216ರೂ. ಈ ಎಲ್ಲ ದರಗಳು 2023ರ ಜುಲೈ 1ರಿಂದ ಜಾರಿಗೆ ಬರಲಿವೆ.
ಆಹಾರ ಪದಾರ್ಥಗಳ ಬೆಲೆ ಹೆಚ್ಚಳದ ಪರಿಣಾಮ, ಜೂನ್ ತಿಂಗಳಲ್ಲಿ ಶೇ.4.81ಕ್ಕೆ ಏರಿಕೆಯಾದ ಚಿಲ್ಲರೆ ಹಣದುಬ್ಬರ
ಇನ್ನು ತುಟ್ಟಿ ಭತ್ಯೆ 50 ಪೈಸೆ ಅಥವಾ ಅದಕ್ಕಿಂತ ಹೆಚ್ಚಿನ ಪೈಸೆಗಳಲ್ಲಿ ವ್ಯತ್ಯಾಸವಿದ್ದರೆ, ಮುಂದಿನ ಅಧಿಕ ರೂಪಾಯಿಗೆ ಅದನ್ನು ಪರಿಗಣಿಸಬೇಕು. ಒಂದು ವೇಳೇ ಈ ವ್ಯತ್ಯಾಸ 50 ಪೈಸೆಗಿಂತ ಕಡಿಮೆಯಿದ್ದರೆ ಆಗ ಅದನ್ನು ನಿರ್ಲಕ್ಷ್ಯಿಸುವಂತೆ ಇಲಾಖೆ ತಿಳಿಸಿದೆ.
ಡಿಎ ಅಂದರೇನು?
ಡಿಎ ಅಥವಾ ತುಟ್ಟಿ ಭತ್ಯೆ ಅಂದರೆ ಉದ್ಯೋಗಿಗಳಿಗೆ ನೀಡುವ ಜೀವನ ನಿರ್ವಹಣಾ ವೆಚ್ಚದ ಹೊಂದಾಣಿಕೆ ಮೊತ್ತ ಎಂದು ಹೇಳಬಹುದು. ಅಧಿಕ ಹಣದುಬ್ಬರದ ಕಾರಣದಿಂದ ಹೆಚ್ಚಳವಾಗುತ್ತಿರುವ ಬೆಲೆಗಳಿಂದ ಏರಿಕೆಯಾಗಿರುವ ಜೀವನ ನಿರ್ವಹಣಾ ವೆಚ್ಚವನ್ನು ಸರಿದೂಗಿಸಲು ಉದ್ಯೋಗಿಗಳಿಗೆ ನೆರವು ನೀಡಲು ಸರ್ಕಾರ ಡಿಎ ನೀಡುತ್ತದೆ.
ಡಿಎ ಲೆಕ್ಕಚಾರ ಹೀಗೆ
ಉದ್ಯೋಗಿಗಳ ಜೀವನ ನಿರ್ವಹಣಾ ವೆಚ್ಚದ ಆಧಾರದಲ್ಲಿ ಡಿಎ ನಿಗದಿಪಡಿಸಲಾಗುತ್ತದೆ. ಉದ್ಯೋಗಿ ನಗರ, ಗ್ರಾಮೀಣ, ಅರೆಪಟ್ಟಣ ಹೀಗೆ ಯಾವ ಪ್ರದೇಶದಲ್ಲಿ ವಾಸಿಸುತ್ತಾನೆ ಎಂಬ ಆಧಾರದಲ್ಲಿ ಡಿಎ ನಿಗದಿಪಡಿಸಲಾಗುತ್ತದೆ. ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರ ಡಿಎ ಲೆಕ್ಕಾಚಾರ ಮಾಡೋ ಫಾರ್ಮುಲಾವನ್ನು ಕೇಂದ್ರ ಸರ್ಕಾರ 2006ರಲ್ಲಿ ಬದಲಾಯಿಸಿತ್ತು.ಅದು ಈ ಕೆಳಗಿನಂತಿದೆ.
ತುಟ್ಟಿ ಭತ್ಯೆ %= (ಅಖಿಲ ಭಾರತ ಗ್ರಾಹಕ ದರ ಸೂಚ್ಯಂಕದ ಸರಾಸರಿ (ಮೂಲ ವರ್ಷ 2001=100) ಕಳೆದ 12 ತಿಂಗಳು-115.76)/115.76)x100.
ಕೇಂದ್ರೀಯ ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ =(ಅಖಿಲ ಭಾರತ ಗ್ರಾಹಕ ದರ ಸೂಚ್ಯಂಕದ ಸರಾಸರಿ (ಮೂಲ ವರ್ಷ 2001=100) ಕಳೆದ 3 ತಿಂಗಳು-126.33)/126.33)x100.
Good News: ಶೀಘ್ರದಲ್ಲೇ ಟೊಮ್ಯಾಟೋ ದರ ಇಳಿಕೆ; ಕೇಂದ್ರ ಸರ್ಕಾರದಿಂದ ಮಹತ್ವದ ಕ್ರಮ
ಈ ಸೂತ್ರ ಬಳಸಿ ಲೆಕ್ಕಾಚಾರ ಹಾಕಿದರೆ ಡಿಎ ಎಷ್ಟು ಶೇಕಡಾವಾರು ಏರಿಕೆಯಾಗಬೇಕು ಎಂಬುದು ಸಿಗುತ್ತದೆ. ಈ ಸೂತ್ರದಲ್ಲಿ CPI-IW ಅಂದರೆ ಕೈಗಾರಿಕಾ ಕಾರ್ಮಿಕರ ಬೆಲೆ ಸೂಚ್ಯಂಕ. ಇದು ಕಳೆದ 12 ತಿಂಗಳ ಸರಾಸರಿ ಬೆಲೆ ಏರಿಕೆ ಮಾಹಿತಿ ಒದಗಿಸುತ್ತದೆ. ಕೇಂದ್ರ ಸರ್ಕಾರ ತನ್ನ ನೌಕರರ ತುಟ್ಟಿ ಭತ್ಯೆ ಹಾಗೂ ತುಟ್ಟಿ ಪರಿಹಾರವನ್ನು (ಡಿಆರ್) ವರ್ಷದಲ್ಲಿ ಎರಡು ಬಾರಿ ಅಂದರೆ ಜನವರಿ 1 ಮತ್ತು ಜುಲೈ 1 ರಂದು ಪರಿಷ್ಕರಿಸುತ್ತದೆ. ಆದರೆ, ಈ ನಿರ್ಧಾರವನ್ನು ಮಾತ್ರ ಸರ್ಕಾರ ಮಾರ್ಚ್ ಮತ್ತು ಸೆಪ್ಟೆಂಬರ್ ನಲ್ಲಿ ಪ್ರಕಟಿಸುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.