ಚಿನ್ನ ಖರೀದಿದಾರರಿಗೆ ಶಾಕ್ ಕೊಟ್ಟ ಬಜೆಟ್!: ಬಂಗಾರ ಈಗ ಬಲುಭಾರ

By Web DeskFirst Published Jul 5, 2019, 2:10 PM IST
Highlights

ನಿರ್ಮಲಾ ಬಜೆಟ್‌ನಲ್ಲಿ ಚಿನ್ನ ಖರೀದಿದಾರರಿಗೆ ಶಾಕ್| ಚಿನ್ನದ ಆಮದು ಸುಂಕ ಹೆಚ್ಚಿಸಿದ ಕೇಂದ್ರ

ನವದೆಹಲಿ[ಜು.05]: ಬಂಗಾರ ಖರೀದಿದಾರರಿಗೆ ನಿರ್ಮಲಾ ಸೀತಾರಾಮನ್ ಶಾಕ್ ನೀಡಿದ್ದಾರೆ. ಬಜೆಟ್ ನಲ್ಲಿ ಚಿನ್ನದ ಅಮದು ಮೇಲಿನ ಸುಂಕವನ್ನು ಶೇಕಡಾ 10 ರಿಂದ 12.5 ಕ್ಕೆ ಹೆಚ್ಚಿಸುವ ಮೂಲಕ ಚಿನ್ನ ಪ್ರಿಯರಿಗೆ ನಿರಾಸೆಯುಂಟು ಮಾಡಿದ್ದಾರೆ.

ಹೌದು ಚಿನ್ನ ಖರೀದಿದಾರರ ಮೇಲೆ ಬರೆ ಎಳೆದಿರುವ ಕೇಂದ್ರ, ಚಿನ್ನದ ಮೇಲಿನ ಆಮದು ಸುಂಕವನ್ನು ಶೇ.2ರಷ್ಟು ಹೆಚ್ಚಿಸಿದೆ. 10 ಗ್ರಾಂ ಚಿನ್ನಕ್ಕೆ 750 ರೂಪಾಯಿ ಏರಿಕೆ ಮಾಡಲಾಗಿದೆ. 

Finance Minister Nirmala Sitharaman: It is also proposed to increase custom duty on gold & other precious metals from 10% to 12.5%. pic.twitter.com/b3aS6GHBHO

— ANI (@ANI)

ಪ್ರಸ್ತುತ 10 ಗ್ರಾಂ ಚಿನ್ನಕ್ಕೆ 34 ಸಾವಿರ ರೂ. ಇದೆ. ಆದರೆ ತೆರಿಗೆ ಏರಿಕೆಯಿಂದ 10 ಗ್ರಾಂ ಚಿನ್ನಕ್ಕೆ 34 ಸಾವಿರದ 750 ರೂಪಾಯಿಯಾಗಲಿದೆ. ಚಿನ್ನದ ಮೇಲಿನ ಹೊಸ ತೆರಿಗೆ ಏಪ್ರಿಲ್ 1 ರಿಂದಲೇ ಜಾರಿಯಾಗಲಿದೆ.

ಕೇಂದ್ರ ಬಜೆಟ್‌ 2019ಕ್ಕೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ: https://bit.ly/2LC5Jvu

click me!