
ಶಾಂಘೈ(ಅ.27) ಬ್ಯಾಂಕ್ ಶಾಖೆಗೆ ತೆರಳಿ ಹಣದ ವ್ಯವಾಹರ ನಡೆಸುವವರ ಸಂಖ್ಯ ಕಡಿಮೆ. ಕಾರಣ ಆನ್‌ಲೈನ್ ಟ್ರಾಕ್ಷಾನ್ ಹೆಚ್ಚಾಗಿ ಬಳಕೆಯಾಗುತ್ತದೆ. ಇದರ ನಡುವೆ ಬ್ಯಾಂಕ್ ಮೂಲಕ ವ್ಯವಹಾರ ಈಗಲೂ ಸುಸೂತ್ರವಾಗಿ ನಡೆಯುತ್ತಿದೆ. ಹೀಗೆ ಬ್ಯಾಂಕ್ ಶಾಖೆಗೆ ಆಗಮಿಸಿದ ಗ್ರಾಹಕ ಖಾತೆಯಿಂದ ವಿಥ್‌ಡ್ರಾ ಮಾಡಲು ಮುಂದಾಗಿದ್ದಾನೆ. ಗ್ರಾಹಕನ ಆತ್ಮೀಯಾಗಿ ಮಾತನಾಡಿಸಿದ ಬ್ಯಾಂಕ್ ಸಿಬ್ಬಂದಿ ಬಳಿಕ ನೆರವು ನೀಡಿದ್ದಾರೆ. ಚೆಕ್ ಮೂಲಕ ಬರೋಬ್ಬರಿ 6 ಕೋಟಿ ರೂಪಾಯಿ ಹಣವನ್ನು ವಿಥ್‌ಡ್ರಾ ಮಾಡಿದ್ದಾನೆ. ಆದರೆ ಸಿಬ್ಬಂದಿಗಳು ಲಾಕರ್‌ನಿಂದ ಹಣೆ ತೆಗೆದು ಎಣಿಕೆ ಯಂತ್ರದಲ್ಲಿಡುತ್ತದ್ದಂತೆ ಗ್ರಾಹಕರ ಹೊಸ ಬೇಡಿಕೆ ಇಟ್ಟಿದ್ದಾರೆ. ಹಣ ಎಣಿಕೆ ಯಂತ್ರದಲ್ಲಿ ಬೇಡ, ಕೈಯಿಂದಲೇ ಎಣಿಸಿ ನೀಡುವಂತೆ ಸೂಚಿಸಿದ್ದಾನೆ. ಅಲ್ಲೀವರಗೆ ನಗುವಿನಿಂದಲೇ ಗ್ರಾಹಕನ ನೆರವು ನೀಡಿದ ಸಿಬ್ಬಂದಿಗಳ ಮುಖದಲ್ಲಿ ಆತಂಕ ಛಾಯೆ ಆಗಮಿಸಿದೆ.ಈ ಘಟನೆ ನಡೆದಿರುವುದು ಚೀನಾದ ಶಾಂಘೈನಲ್ಲಿ.
ಬ್ಯಾಂಕ್‌ಗೆ ಆಗಮಿಸಿದ ಗ್ರಾಹಕನ ಜೊತೆ ಸೆಕ್ಯೂರಿಟಿ ಗಾರ್ಡ್ ಕಿರಿಕಿ ಮಾಡಿದ್ದಾನೆ. ಇದರಿಂದ ಗ್ರಾಹಕ ಆಕ್ರೋಶಗೊಂಡಿದ್ದಾನೆ. ಸೆಕ್ಯೂರಿಟಿ ಗಾರ್ಡ್ ಜಗಳ ಸಿಬ್ಬಂದಿಗಳಿಗೆ ಅರಿವಿಗೆ ಬಂದಿಲ್ಲ. ಇಷ್ಟೇ ಅಲ್ಲ ಕೆಲ ಸಿಬ್ಬಂದಿಗಳಿಗೆ ತಿಳಿದರೂ ಸುಮ್ಮನಾಗಿದ್ದರು. ಸೆಕ್ಯೂರಿಟಿ ಗಾರ್ಡ್ ಕಿರಿಕ್ ಮಾಡಿದ್ದಾನೆ ಅನ್ನೋ ಆಕ್ರೋಶದಿಂದ ಗ್ರಾಹಕ ಸಿಬ್ಬಂದಿಗಳಿಗೂ ಒಂದು ಪಾಠ ಕಲಿಸಲು ಮುಂದಾಗಿದ್ದಾನೆ.
ಗೂಗಲ್ ಪೇ ಬಳಕೆದಾರರಿಗೆ ಗುಡ್ ನ್ಯೂಸ್: ಎಮರ್ಜೆನ್ಸಿಗೆ 15 ಸಾವಿರ ರೂ. ಸಾಲ ಬೇಕಂದ್ರೂ ಸಿಗುತ್ತೆ ನೋಡಿ..!
ಹಣ ವಿಥ್‌ಡ್ರಾ ಮಾಡಲು ಆಗಮಿಸಿದ ಗ್ರಾಹಕರ ಪ್ಲಾನ್ ಬದಲಾಯಿಸಿದ್ದಾನೆ. ಹಣ ವಿಥ್‌ಡ್ರಾ ಮಾಡಿದ ಗ್ರಾಹಕ, ಹಣವನ್ನು ಮೆಶಿನ್ ಮೂಲಕ ಎಣಿಕೆ ಮಾಡುವುದು ಬೇಡ ಎಂದಿದ್ದಾನೆ. ಕೈಯಿಂದಲೇ ಎಣಿಕೆ ಮಾಡಿ ನೀಡುವಂತೆ ಸೂಚಿಸಿದ್ದಾನೆ. ಗ್ರಾಹಕನ ಸೂಚನೆಯಿಂದ ಬ್ಯಾಂಕ್ ಸಿಬ್ಬಂದಿಗಳು ಹಣ ಎಣಿಕೆ ಮಾಡಲು ಮುಂದಾಗಿದ್ದಾರೆ. ಸಿಬ್ಬಂದಿಗಳು ಎಲ್ಲರೂ ಸೇರಿ ಸತತ 2 ಗಂಟೆಗಳ ಕಾಲ ನೋಟುಗಳ ಎಣಿಕೆ ಮಾಡಿದ್ದಾರೆ.
ಈ ಘಟನೆ ನಡೆದಿರುವುದು 2021ರ ಕೋವಿಡ್ ಸಮಯದಲ್ಲಿ. ಈ ವೇಳೆ ಬ್ಯಾಂಕ್‌ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅನಿವಾರ್ಯತೆ ಕಾರಣ ಹೆಚ್ಚಿನ ಸಿಬ್ಬಂದಿಗಳು ಇರಲಿಲ್ಲ. ಕೋವಿಡ್ ನಿಯಮ ಪಾಲನೆ ವಿಚಾರದಲ್ಲೇ ಸೆಕ್ಯೂರಿಟಿ ಗಾರ್ಡ್ ಜೊತೆ ಕಿರಿಕ್ ಮಾಡಿದ್ದಾನೆ. ಇದೀಗ ಈ ಹಳೆ ಘಟನೆ ವೈರಲ್ ಆಗಿದೆ. ಬ್ಯಾಂಕ್ ಸಿಬ್ಬಂದಿಗಳ ಕೆಟ್ಟ ದಿನ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಜ್ಯೋತಿಷಿ ಮನೆಯಿಂದ ಲಕ್ಷ ರೂ ಕದ್ದ ಕಳ್ಳರು, ಕಂತೆ ಕಂತೆ ನೋಟಿನ ಇನ್‌ಸ್ಟಾ ರೀಲ್ ಮಾಡಿ ಸಿಕ್ಕಿಬಿದ್ದರು!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.