ಎಷ್ಟು ವಿಧದ ಬ್ಯಾಂಕ್ ಖಾತೆಗಳನ್ನು ತೆರೆಯಬಹುದು? ಅವುಗಳ ವಿಶೇಷತೆ ಏನು? ಇಲ್ಲಿದೆ ಮಾಹಿತಿ

Published : Apr 30, 2023, 06:20 PM IST
ಎಷ್ಟು ವಿಧದ ಬ್ಯಾಂಕ್ ಖಾತೆಗಳನ್ನು ತೆರೆಯಬಹುದು? ಅವುಗಳ ವಿಶೇಷತೆ ಏನು? ಇಲ್ಲಿದೆ ಮಾಹಿತಿ

ಸಾರಾಂಶ

ಬ್ಯಾಂಕ್ ಖಾತೆ ಬಗ್ಗೆ ಎಲ್ಲರಿಗೂ ತಿಳಿದೇ ಇದೆ.ಆದರೆ,ಬ್ಯಾಂಕ್ ಖಾತೆಗಳಲ್ಲಿ ಕೂಡ ಅನೇಕ ವಿಧಗಳಿವೆ.ಉಳಿತಾಯ, ಚಾಲ್ತಿ, ಆರ್ ಡಿ ಹೀಗೆ ಅನೇಕ ವಿಧಗಳಿದ್ದು,ಇವುಗಳ ಉದ್ದೇಶ ಕೂಡ ಭಿನ್ನವಾಗಿರುತ್ತವೆ.ಹಾಗಾದ್ರೆ ಬ್ಯಾಂಕ್ ನಲ್ಲಿ ಯಾವೆಲ್ಲ ವಿಧದ ಖಾತೆಗಳನ್ನು ಗ್ರಾಹಕರು ತೆರೆಯಬಹುದು? ಅವುಗಳು ಹೇಗೆ ಒಂದಕ್ಕಿಂತ ಒಂದು ಭಿನ್ನವಾಗಿವೆ? ಇಲ್ಲಿದೆ ಮಾಹಿತಿ.

Business Desk: ಇಂದು ಬಹುತೇಕ ಎಲ್ಲರ ಬಳಿ ಬ್ಯಾಂಕ್ ಖಾತೆ ಇದೆ. ಸರ್ಕಾರದ ಯೋಜನೆಗಳಿಂದ ಹಿಡಿದು ವಿವಿಧ ಪ್ರಯೋಜನಗಳನ್ನು ಪಡೆಯಲು ಇಂದು ಬ್ಯಾಂಕ್ ಖಾತೆ ಅತ್ಯಗತ್ಯ. ಕೆಲವರ ಬಳಿಯಂತೂ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳಿರುತ್ತವೆ. ಹಾಗೆಯೇ ಕೆಲವರು ಅನೇಕ ಬ್ಯಾಂಕ್ ಗಳಲ್ಲಿ ಖಾತೆಗಳನ್ನು ಹೊಂದಿರುತ್ತಾರೆ. ಹಾಗಂತ ಎಲ್ಲ ಬ್ಯಾಂಕ್ ಖಾತೆಗಳು ಒಂದೇ ರೀತಿಯದ್ದಾಗಿರೋದಿಲ್ಲ. ಬ್ಯಾಂಕ್ ಖಾತೆಗಳಲ್ಲಿ ಕೂಡ ಕೆಲವು ವಿಧಗಳಿವೆ. ಗ್ರಾಹಕರ ನಿರ್ದಿಷ್ಟ ಅಗತ್ಯಗಳನ್ನು ಪೂರೈಸುವ ಉದ್ದೇಶದಿಂದ ಅದಕ್ಕೆ ಅನುಗುಣವಾಗಿ ಖಾತೆಗಳನ್ನು ರೂಪಿಸಲಾಗುತ್ತದೆ. ಇನ್ನು ಪ್ರತಿ ಬ್ಯಾಂಕ್ ಖಾತೆಯೂ ಅದರದ್ದೇ ಆದ ರೀತಿಯಲ್ಲಿ ಗ್ರಾಹಕರ ಅಗತ್ಯಗಳನ್ನು ಪೂರೈಸುತ್ತದೆ. ಹೀಗಾಗಿ ನೀವು ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಯಾವ ವಿಧದ ಬ್ಯಾಂಕ್ ಖಾತೆ ಅಗತ್ಯ ಎಂಬುದನ್ನು ನಿರ್ಧರಿಸಿ ತೆರೆಯೋದು ಉತ್ತಮ. ಹಾಗಾದ್ರೆ ಎಷ್ಟು ವಿಧದ ಬ್ಯಾಂಕ್ ಖಾತೆಗಳಿವೆ? ಅವುಗಳ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ.

ಉಳಿತಾಯ ಖಾತೆ
ಇದು ಸಾಮಾನ್ಯವಾಗಿ ಎಲ್ಲರೂ ಹೊಂದಿರುವ ಬ್ಯಾಂಕ್ ಖಾತೆ. ಇದರ ಮುಖ್ಯ ಉದ್ದೇಶ ಉಳಿತಾಯ. ಕನಿಷ್ಠ ಠೇವಣಿ ಮೂಲಕ ಸಾರ್ವಜನಿಕ ಅಥವಾ ಖಾಸಗಿ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ತೆರೆಯಬಹುದು. ಇನ್ನು ಉಳಿತಾಯ ಖಾತೆಯಲ್ಲಿನ ಕನಿಷ್ಠ ಬ್ಯಾಲೆನ್ಸ್ ಬ್ಯಾಂಕಿನಿಂದ ಬ್ಯಾಂಕಿಗೆ ಬದಲಾಗುತ್ತದೆ. ಉಳಿತಾಯ ಖಾತೆಯಲ್ಲಿನ ಹಣವನ್ನು ಯಾವುದೇ ಸಮಯದಲ್ಲಿ ವಿತ್ ಡ್ರಾ ಮಾಡಬಹುದು. ಎಟಿಎಂ, ಪಾಸ್ ಬುಕ್, ಚೆಕ್ ಬುಕ್, ನೆಟ್ ಬ್ಯಾಂಕಿಂಗ್ ಹಾಗೂ ಮೊಬೈಲ್ ಬ್ಯಾಂಕಿಂಗ್ ಸೌಲಭ್ಯಗಳನ್ನು ಈ ಖಾತೆದಾರರು ಪಡೆಯಬಹುದು.

SBI ಗ್ರಾಹಕರೇ ಗಮನಿಸಿ, ನೆಟ್ ಬ್ಯಾಂಕಿಂಗ್ ನೋಂದಣಿ ಮನೆಯಲ್ಲೇ ಕುಳಿತು ಮಾಡ್ಬಹುದು, ಹೇಗೆ? ಇಲ್ಲಿದೆ ಮಾಹಿತಿ

ಚಾಲ್ತಿ ಖಾತೆ
ಚಾಲ್ತಿ ಖಾತೆಯನ್ನು ಸಾಮಾನ್ಯವಾಗಿ ಬೃಹತ್ ಸಂಸ್ಥೆಗಳು, ಉದ್ಯಮಗಳು ಹಾಗೂ ಕಂಪನಿಗಳು ತೆರೆಯುತ್ತವೆ. ಈ ಖಾತೆಗಳ ಮೂಲಕ ನಿರಂತರವಾಗಿ ದೊಡ್ಡ ಮಟ್ಟದ ಹಣದ ವಹಿವಾಟು ನಡೆಸಬಹುದು. ಇನ್ನು ಬ್ಯಾಂಕ್ ಕೂಡ ಚಾಲ್ತಿ ಖಾತೆದಾರರಿಗೆ ಅವರ ಠೇವಣಿ ಮೊತ್ತಕ್ಕಿಂತ ಹೆಚ್ಚಿನ ಹಣ ವಿತ್ ಡ್ರಾ ಮಾಡಲು ಅವಕಾಶ ನೀಡುತ್ತದೆ. ಇದನ್ನು ಓವರ್ ಡ್ರಾಫ್ಟ್ (OD) ಸೌಲಭ್ಯ ಎಂದು ಕರೆಯಲಾಗುತ್ತದೆ.

ಸ್ಥಿರ ಠೇವಣಿ (FD) ಖಾತೆ
ನೀವು ನಿರ್ದಿಷ್ಟ ಅವಧಿಗೆ ಸ್ಥಿರ ಠೇವಣಿಯಲ್ಲಿ ಹಣವನ್ನು ಹೂಡಿಕೆ ಮಾಡಬಹುದು. ನಿರ್ದಿಷ್ಟ ಅವಧಿ ಮುಗಿದ ಬಳಿಕ ನಿಮ್ಮ ಠೇವಣಿಗೆ ಬಡ್ಡಿಯನ್ನು ಸೇರಿಸಿ ನೀಡಲಾಗುತ್ತದೆ. ಸ್ಥಿರ ಠೇವಣಿಗೆ ಬೇರೆ ಬೇರೆ ಬ್ಯಾಂಕ್ ಗಳು ಬೇರೆ ಬೇರೆ ಬಡ್ಡಿದರ ನೀಡುತ್ತವೆ. ಉಳಿತಾಯ ಖಾತೆಗೆ ಹೋಲಿಸಿದರೆ ಎಫ್ ಡಿಗೆ ಹೆಚ್ಚಿನ ಬಡ್ಡಿಯನ್ನು ಬ್ಯಾಂಕ್ ಗಳು ನೀಡುತ್ತವೆ.

ರಿಕರಿಂಗ್ ಖಾತೆ
ನೀವು ಬ್ಯಾಂಕ್ ನಲ್ಲಿ ಕಿರು ಅವಧಿಗೆ ಹಣವನ್ನು ನಿಯಮಿತ ಕಂತುಗಳ ರೂಪದಲ್ಲಿ ಠೇವಣಿಯಿಡಲು ಬಯಸಿದ್ರೆ ರಿಕರಿಂಗ್ ಅಥವಾ ಆರ್ ಡಿ ಖಾತೆ ತೆರೆಯಬಹುದು. ಆರ್ ಖಾತೆಗಳ ಅವಧಿ ಒಂದರಿಂದ ಐದು ವರ್ಷಗಳ ತನಕ ಇರುತ್ತದೆ. ಸಾಮಾನ್ಯವಾಗಿ ದೊಡ್ಡ ಮೊತ್ತದ ಹಣವನ್ನು ಹೊಂದಿರೋದಿಲ್ಲವೋ ಅಂಥವರಿಗೆ ಉಳಿತಾಯಕ್ಕೆ ಈ ಖಾತೆ ನೆರವು ನೀಡುತ್ತದೆ. ಪ್ರತಿ ತಿಂಗಳು ಚಿಕ್ಕ ಮೊತ್ತದ ಹಣವನ್ನು ಈ ಖಾತೆಯಲ್ಲಿ ಹೂಡಿಕೆ ಮಾಡುವ ಮೂಲಕ ದೊಡ್ಡ ಮೊತ್ತದ ಉಳಿತಾಯ ಮಾಡಬಹುದು. ಇನ್ನು ಆರ್ ಡಿ ಖಾತೆಗೆ ನೀಡುವ ಬಡ್ಡಿದರ ಉಳಿತಾಯ ಖಾತೆಗಿಂತ ಹೆಚ್ಚಿರುತ್ತದೆ. 

Post Office RD:ಅಧಿಕ ರಿಟರ್ನ್ ಗಳಿಸಲು ಈ ಖಾತೆಯಲ್ಲಿ ತಿಂಗಳಿಗೆ ಎಷ್ಟು ಹೂಡಿಕೆ ಮಾಡ್ಬೇಕು?

ವೇತನ ಖಾತೆ
ವೇತನ ಖಾತೆಯನ್ನು ನೀವು ಉದ್ಯೋಗ ಮಾಡುತ್ತಿರುವ ಸಂಸ್ಥೆ ನಿಮಗೆ ವೇತನ ನೀಡಲು ತೆರೆಯುತ್ತದೆ. ಇದು ಉಳಿತಾಯ ಖಾತೆಯ ಮಾದರಿಯಲ್ಲೇ ಇರುತ್ತದೆ. ಹಾಗೂ ಅದೇರೀತಿಯ ಸೌಲಭ್ಯಗಳನ್ನು ಹೊಂದಿರುತ್ತದೆ.

ಎನ್ ಆರ್ ಐ ಬ್ಯಾಂಕ್ ಖಾತೆ
ಈ ಖಾತೆಯನ್ನು ವಿದೇಶದಲ್ಲಿರುವ ಭಾರತೀಯರು ತೆರೆಯುತ್ತಾರೆ. ಇನ್ನು ಎನ್ ಆರ್ ಐ ಖಾತೆ ಮೂರು ವಿಧದಲ್ಲಿ ಇರುತ್ತದೆ. ಎಫ್ ಸಿಎನ್ ಆರ್, ಎನ್ ಆರ್ ಒ ಹಾಗೂ ಎನ್ ಆರ್ ಇ.

ಡಿಮ್ಯಾಟ್ ಖಾತೆ
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ  ಮಾಡುವ ಹೂಡಿಕೆದಾರರು ಈ ಖಾತೆ ತೆರೆಯುತ್ತಾರೆ. ಈ ಖಾತೆ ಇತರ ಬ್ಯಾಂಕ್ ಖಾತೆ ಮಾದರಿಯಲ್ಲೇ ಕಾರ್ಯನಿರ್ವಹಿಸುತ್ತದೆ. ನೀವು ಖರೀದಿಸಿದ ಷೇರುಗಳನ್ನು ಈ ಖಾತೆಯಲ್ಲಿಡುತ್ತೀರಿ. ಈ ಖಾತೆ ಮೂಲಕ ನೀವು ಷೇರುಗಳ ಖರೀದಿ ಹಾಗೂ ಮಾರಾಟ ಮಾಡಬಹುದು.


 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್
ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!