
ನಾಶಿಕ್(ಮಾ.24): ಕೊರೋನಾ ಭೀತಿಯಿಂದಾಗಿ ಇಲ್ಲಿನ ಭಾರತೀಯ ಭದ್ರತಾ ಮುದ್ರಣ ಹಾಗೂ ಅಚ್ಚು ನಿಗಮದ ಎರಡು ಘಟಕಗಳನ್ನು ಮಾ.31ರ ವರೆಗೆ ಮುಚ್ಚಲಾಗಿದೆ.
ಇಂಡಿಯಾ ಸೆಕ್ಯೂರಿಟಿ ಪ್ರೆಸ್ ಹಾಗೂ ಕರೆನ್ಸಿ ನೋಟ್ ಪ್ರೆಸ್ ಘಟಕಗಳನ್ನು ಬಂದ್ ಮಾಡುವುದಾಗಿ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಈ ಎರಡೂ ಘಟಕಗಳಲ್ಲಿ ಕ್ರಮವಾಗಿ 1900 ಹಾಗೂ 2100 ನೌಕರರು ಇದ್ದಾರೆ.
ಕೊರೋನಾ ವೈರಸ್ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಈ ಹಿಂದೆ 1950ರಲ್ಲಿ ನೌಕರರ ಮುಷ್ಕರದಿಂದಾಗಿ ಇಂಡಿಯಾ ಸೆಕ್ಯೂರಿಟಿ ಪ್ರೆಸ್ ಸ್ಥಗಿತಗೊಂಡಿತ್ತು. ಬಳಿಕ 1979 ಮತ್ತೊಂದು ಮುಷ್ಕರದಿಂದಾಗಿ ಎರಡೂ ಘಟಕಗಳು ಕೆಲಸ ನಿಲ್ಲಿಸಿದ್ದವು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.