
ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಬ್ಯಾರಲ್‌ಗೆ 80 ಡಾಲರ್ (6650 ರು.) ಗಿಂತ ಕೆಳಗೆ ಇಳಿದಿದ್ದು, ಕೇಂದ್ರ ಸರ್ಕಾರ ಶೀಘ್ರವೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಸಬಹುದು ಎಂಬ ವರದಿಗಳಿಗೆ ಮತ್ತೆ ರೆಕ್ಕೆಪುಕ್ಕ ಬಂದಿದೆ.
ಜಾಗತಿಕ ಬೆಳವಣಿಗೆಗಳ ಪರಿಣಾಮ ಕಚ್ಚಾತೈಲ ಬೇಡಿಕೆ ಇಳಿದಿದೆ. ಪರಿಣಾಮ ದರವೂ ಕುಸಿತ ಕಂಡಿದೆ. ಹೀಗಾಗಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳೀಗ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 11 ರು. ಮತ್ತು ಡೀಸೆಲ್ ಮೇಲೆ 6 ರು.ನಷ್ಟು ಭರ್ಜರಿ ಲಾಭ ಪಡೆಯುತ್ತಿವೆ. ಕಳೆದ ಹಲವು ತಿಂಗಳಿನಿಂದಲೂ ಬೆಲೆ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ತೈಲ ಕಂಪನಿಗಳು ತಮ್ಮ ಬೊಕ್ಕಸವನ್ನು ಭರ್ಜರಿಯಾಗಿ ತುಂಬಿಸಿಕೊಂಡಿವೆ.
ಇನ್ನೊಂದೆಡೆ ಕೇಂದ್ರ ಸರ್ಕಾರ ಲೋಕಸಭಾ ಚುನಾವಣೆಗೂ ಮುನ್ನ ತೈಲ ದರ ಇಳಿಸುವ ಮೂಲಕ ಜನಸಾಮಾನ್ಯರ ಓಲೈಕೆಗೆ ಮುಂದಾಗಲಿದೆ ಎಂದು ವರದಿಗಳಿವೆ. ಜೊತೆಗೆ ದರ ಕಡಿತ ಹಣದುಬ್ಬರ ಇಳಿಕೆಗೂ ಕಾರಣವಾಗಲಿದೆ. ಹೀಗಾಗಿ ಶೀಘ್ರವೇ ಸರ್ಕಾರ ತೈಲ ದರ ಇಳಿಕೆಗೆ ಮುಂದಾಗಬಹುದು ಎಂದು ವರದಿಗಳು ತಿಳಿಸಿವೆ.
ಕೃಷ್ಣಾ-ಗೋದಾವರಿ ಪ್ರದೇಶದಲ್ಲಿ ದೊರೆತ ಕಚ್ಚಾ ತೈಲದಿಂದ ಮೊದಲ ಬಾರಿ ತೈಲ ಸಂಸ್ಕರಣೆ!
ಯುಎಇಗೆ ರೂಪಾಯಿಯಲ್ಲೇ ಪಾವತಿಯಾಯ್ತು ಕಚ್ಚಾ ತೈಲ: ಭಾರತಕ್ಕೆ ಮಹತ್ವದ ಉಳಿತಾಯ, ಸ್ಥಳೀಯ ಕರೆನ್ಸಿಗೆ ಜಾಗತಿಕ ಮೌಲ್ಯ!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.