ದೇಶದ ಶೇ.27 ರಷ್ಟು ಸಣ್ಣ ಕಂಪನಿಗಳ ಬಳಿ ದುಡ್ಡಿಲ್ಲ!| ಕೊರೋನಾ ದಾಳಿಯಿಂದ ದಿವಾಳಿಯತ್ತ| ಲೋಕಲ್ ಸರ್ಕಲ್ಸ್ ಸಂಸ್ಥೆಯಿಂದ ಸಮೀಕ್ಷೆ
ಮುಂಬೈ(ಏ.29): ಕೊರೋನಾ ವೈರಸ್ ಬಿಕ್ಕಟ್ಟಿನಿಂದ ದೇಶದ ಆರ್ಥಿಕತೆಯ ಬೆನ್ನೆಲುಬಿನಂತಿರುವ ಸಣ್ಣ ಹಾಗೂ ಮಧ್ಯಮ ಗಾತ್ರದ ಕಂಪನಿಗಳು (ಎಸ್‌ಎಂಇ) ಮತ್ತು ಸ್ಟಾರ್ಟಪ್‌ಗಳ ಪೈಕಿ ಶೇ.27ರಷ್ಟುಕಂಪನಿಗಳು ದಿವಾಳಿ ಭೀತಿ ಎದುರಿಸುತ್ತಿವೆ ಎಂಬ ಸಂಗತಿ ಬೆಳಕಿಗೆ ಬಂದಿದೆ. ಈ ಕಂಪನಿಗಳ ಬಳಿಯಿದ್ದ ಹಣ ಸಂಪೂರ್ಣ ಖಾಲಿಯಾಗಿದ್ದು, ಹೊಸ ಆರ್ಥಿಕ ಮೂಲಗಳೂ ಇವುಗಳಿಗೆ ಇಲ್ಲವಾಗಿವೆ.
ಲೋಕಲ್‌ಸರ್ಕಲ್ಸ್ ಎಂಬ ಸಂಸ್ಥೆ ಮಾಚ್‌ರ್ ಕೊನೆಯಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ತಿಳಿದುಬಂದಿದೆ. ಈಗ ಒಂದು ತಿಂಗಳ ನಂತರ ಪರಿಸ್ಥಿತಿ ಇನ್ನೂ ಹದಗೆಟ್ಟಿರಬಹುದು ಎಂದು ಊಹಿಸಲಾಗಿದೆ.
ಕೊರೋನಾ ನಿಧಿ ಸಂಗ್ರಹಿಸಲು ಶ್ರೀಮಂತರಿಗೆ 40% ತೆರಿಗೆ?
ಶೇ.27ರಷ್ಟುಸ್ಟಾರ್ಟಪ್ ಹಾಗೂ ಎಎಸ್‌ಎಂಇಗಳ ಕೈಲಿ ಸ್ವಲ್ಪವೂ ಹಣ ಉಳಿದಿಲ್ಲ. ಶೇ.20ರಷ್ಟುಕಂಪನಿಗಳು ಇನ್ನೊಂದು ತಿಂಗಳು ಹೇಗೋ ನಿರ್ವಹಣೆ ಮಾಡಬಹುದು ಎಂದು ಹೇಳಿವೆ. ಒಟ್ಟಾರೆ ಸದ್ಯ ಶೇ.47ರಷ್ಟುಕಂಪನಿಗಳು ದಿವಾಳಿಯಾಗಿರುವ ಸಾಧ್ಯತೆಯಿದೆ.
ಶೇ.6ರಷ್ಟುಕಂಪನಿಗಳು ಇನ್ನು 6 ತಿಂಗಳು ಬದುಕಬಹುದು. ಶೇ.23ರಷ್ಟುಕಂಪನಿಗಳು 3ರಿಂದ 6 ತಿಂಗಳು ಬದುಕಬಹುದು. ಶೇ.24ರಷ್ಟುಕಂಪನಿಗಳು 1ರಿಂದ 3 ತಿಂಗಳು ಬದುಕಬಹುದು ಎಂದು ಸಮೀಕ್ಷೆ ತಿಳಿಸಿದೆ. ಶೇ.7ರಷ್ಟುಕಂಪನಿಗಳು ಈಗಾಗಲೇ ಮಾರಾಟಕ್ಕಿವೆ. ಶೆ.13ರಷ್ಟುಕಂಪನಿಗಳು ಬಾಗಿಲು ಮುಚ್ಚಲು ನಿರ್ಧರಿಸಿವೆ. ಶೇ.13ರಷ್ಟುಕಂಪನಿಗಳು ಮಾತ್ರ ಬೆಳವಣಿಗೆಯನ್ನು ನಿರೀಕ್ಷಿಸುತ್ತಿವೆ ಎಂದು ಸಮೀಕ್ಷೆಯಲ್ಲಿ ತಿಳಿದುಬಂದಿದೆ.