Edible Oil: ಖಾದ್ಯ ತೈಲ ಕಂಪನಿಗಳಿಂದ ಶೇ.10-15ರಷ್ಟು ಬೆಲೆ ಕಡಿತ!

By Kannadaprabha News  |  First Published Dec 28, 2021, 4:30 AM IST

*  ಅದಾನಿ ವಿಲ್ಮರ್‌ ಮತ್ತು ರುಚಿ ಸೋಯಾದಂತಹ ಕಂಪನಿಯಿಂದ ಮಹತ್ವದ ಹೆಜ್ಜೆ

* ಖಾದ್ಯ ತೈಲ ಕಂಪನಿಗಳಿಂದ ಶೇ.10-15ರಷ್ಟುಬೆಲೆ ಕಡಿತ


ನವದೆಹಲಿ(ಡಿ.: ಅದಾನಿ ವಿಲ್ಮರ್‌ ಮತ್ತು ರುಚಿ ಸೋಯಾದಂತಹ ಖಾದ್ಯ ತೈಲ ತಯಾರಕ ಕಂಪನಿಗಳು ತಮ್ಮ ಉತ್ಪನ್ನಗಳ ಗರಿಷ್ಠ ಮಾರಾಟ ದರವನ್ನು ಶೇ.10ರಿಂದ 15ರಷ್ಟುಕಡಿಮೆ ಮಾಡಲು ನಿರ್ಧರಿಸಿವೆ. ಇದರಿಂದ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದು ತೈಲೋದ್ಯಮ ಒಕ್ಕೂಟ ಹೇಳಿದೆ.

ಅದಾನಿ ಕಂಪನಿಯ ಫಾರ್ಚುನ್‌ ಬ್ರಾಂಡ್‌, ರುಚಿ ಸೋಯಾದ ಮಹಾಕೋಶ್‌, ಸನ್‌ರಿಚ್‌, ರುಚಿ ಗೋಲ್ಡ್‌ ಮತ್ತು ನ್ಯೂಟ್ರೆಲ್ಲಾ ಬ್ರಾಂಡ್‌, ಇಮಾಮಿಯ ಹೆಲ್ತಿ ಅಂಡ್‌ ಟೇಸ್ಟೀ ಬ್ರಾಂಡ್‌, ಬಂಜ್‌ನ ಡಾಲ್ಡಾ, ಗಗನ್‌, ಚಂಬಲ್‌ ಬ್ರಾಂಡ್‌, ಜೆಮಿನಿಯ ಪ್ರೀಡಂ ಸನ್‌ಫ್ಲವರ್‌ ಬ್ರಾಂಡ್‌ಗಳ ಬೆಲೆ ಕಡಿಮೆಯಾಗಲಿದೆ. ‘ನಮ್ಮ ಪ್ರಮುಖ ಖಾದ್ಯ ತೈಲ ಉತ್ಪಾದಕ ಕಂಪನಿಗಳು ದರವನ್ನು ಕಡಿಮೆ ಮಾಡಲು ನಿರ್ಧರಿಸಿವೆ ಎಂದು ತಿಳಿಸಲು ಸಂತೋಷವಾಗುತ್ತಿದೆ. ಹೊಸ ವರ್ಷಕ್ಕೆ ಈ ಕೊಡುಗೆ ಗ್ರಾಹಕರಿಗೆ ದೊರೆಯುವ ಸಾಧ್ಯತೆ ಇದೆ ಎಂದು ತೈಲೋದ್ಯಮ ಒಕ್ಕೂಟ ಪ್ರಕಟಣೆಯಲ್ಲಿ ತಿಳಿಸಿದೆ.

Tap to resize

Latest Videos

ಡಿ.20 ಸರ್ಕಾರ ಆಮದು ಸುಂಕವನ್ನು ಶೇ.17.5ರಿಂದ 12.5ಕ್ಕೆ ಕಡಿಮೆ ಮಾಡಿತ್ತು. ಇದರಿಂದ ಪಾಮ್‌ ಮುಂತಾದ ಕಚ್ಚಾ ವಸ್ತುಗಳ ಬೆಲೆ ಕಡಿಮೆಯಾಗಿರುವುದರಿಂದ ಕಂಪನಿಗಳು ಬೆಲೆ ಇಳಿಸಲು ನಿರ್ಧರಿಸಿವೆ.

ಆಮದು ಸುಂಕ ಇಳಿಕೆಯ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸುವಂತೆ ಉದ್ಯಮ ವಲಯದ ಪ್ರಮುಖರು ಮನವಿ ಮಾಡಿದ್ದರು ಎಂದು ಸಂಸ್ಥೆ ಹೇಳಿದೆ. ಹೀಗಾಗಿ ಗ್ರಾಹಕರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಶೇ.10-15ರಷ್ಟು ಖಾದ್ಯ ತೈಲಗಳ ಮೇಲಿನ ಎಂಆರ್​ಪಿಯನ್ನು ಕಡಿಮೆ ಮಾಡಲಾಗಿದೆ ಎಂಬ ವಿಷಯವನ್ನು ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ ಎಂದು ಸಾಲ್ವೆಂಟ್ ಎಕ್ಸ್‌ಟ್ರಾಕ್ಟರ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾ (ಎಸ್​ಇಎ) ಹೇಳಿಕೆಯಲ್ಲಿ ತಿಳಿಸಿದೆ.

ಗ್ರಾಹಕರಿಗೆ ನೆರವು ನೀಡುವ ಉದ್ದೇಶದಿಂದ ಕೇಂದ್ರ ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಅವರು ಕೆಲವು ದಿನಗಳ ಹಿಂದೆ ಉದ್ಯಮದ ಪ್ರಮುಖರ ಸಭೆಯನ್ನು ಕರೆದಿದ್ದರು. ಸರ್ಕಾರ ಘೋಷಿಸಿದ ಆಮದು ಸುಂಕಗಳ ಕಡಿತಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುವಂತೆ ವಿನಂತಿಸಿದ್ದರು.

ಮುಂಬರುವ ತಿಂಗಳುಗಳಲ್ಲಿ ಅಂತಾರಾಷ್ಟ್ರೀಯ ಬೆಲೆಗಳ ತಗ್ಗಿಸುವಿಕೆಯೊಂದಿಗೆ ದೊಡ್ಡ ದೇಶೀಯ ಬೆಳೆಗಳ ನಿರೀಕ್ಷೆಯೊಂದಿಗೆ ಹೊಸ ವರ್ಷವು ಗ್ರಾಹಕರಿಗೆ ಸಂತೋಷದ ಸುದ್ದಿಯನ್ನು ತರುತ್ತದೆ ಎಂದು ಉದ್ಯಮ ಸಂಸ್ಥೆ ಹೇಳಿದೆ.

ಹೆಚ್ಚಿನ ಅಂತರಾಷ್ಟ್ರೀಯ ಬೆಲೆಗಳಿಂದಾಗಿ ಕಳೆದ ಕೆಲವು ತಿಂಗಳುಗಳಲ್ಲಿ ಖಾದ್ಯ ತೈಲಗಳ ಬೆಲೆ ಹೆಚ್ಚಾಗಿದ್ದು, ಬೆಲೆ ಏರಿಕೆಯು ದೇಶೀಯ ಗ್ರಾಹಕರು ಮತ್ತು ನೀತಿ ನಿರೂಪಕರನ್ನು ಆತಂಕಕ್ಕೀಡುಮಾಡಿದೆ ಎಂದು ಎಸ್​ಇಎ ಹೇಳಿದೆ.

ಖಾದ್ಯ ತೈಲ ಬೆಲೆಗಳನ್ನು ನಿಯಂತ್ರಣದಲ್ಲಿಡಲು, ಸರ್ಕಾರವು ಈ ವರ್ಷ ಸಂಸ್ಕರಿಸಿದ ಮತ್ತು ಕಚ್ಚಾ ಖಾದ್ಯ ತೈಲಗಳ ಮೇಲಿನ ಆಮದು ತೆರಿಗೆಗಳನ್ನು ಪದೇ ಪದೇ ಕಡಿಮೆ ಮಾಡಿದೆ.

ಮಾರ್ಚ್ 2022 ರ ಅಂತ್ಯದ ವೇಳೆಗೆ ಸಂಸ್ಕರಿಸಿದ ತಾಳೆ ಎಣ್ಣೆಯ ಮೂಲ ಕಸ್ಟಮ್ಸ್ ಸುಂಕವನ್ನು ಶೇ.17.5 ರಿಂದ ಶೇ. 12.5 ಕ್ಕೆ ಇಳಿಸಿದ್ದು, ಡಿಸೆಂಬರ್ 20 ರಂದು ಆಮದು ಸುಂಕದಲ್ಲಿ ಕೊನೆಯ ಕಡಿತವನ್ನು ಸರ್ಕಾರ ಮಾಡಿತ್ತು.

click me!