LPG Price Hike: ಗ್ಯಾಸ್‌ ಸಿಲಿಂಡರ್ ದರ ಮತ್ತೆ 50 ರೂ ಏರಿಕೆ, ಜನಸಾಮಾನ್ಯರಿಗೆ ಮತ್ತಷ್ಟು ಹೊರೆ!

Published : May 07, 2022, 10:30 AM ISTUpdated : May 07, 2022, 10:36 AM IST
LPG Price Hike: ಗ್ಯಾಸ್‌ ಸಿಲಿಂಡರ್ ದರ ಮತ್ತೆ 50 ರೂ ಏರಿಕೆ, ಜನಸಾಮಾನ್ಯರಿಗೆ ಮತ್ತಷ್ಟು ಹೊರೆ!

ಸಾರಾಂಶ

* ಸಾಮಾನ್ಯರ ಪಾಲಿಗೆ ಅಡುಗೆ ದುಬಾರಿಯಾಗಿದೆ * ಗ್ಯಾಸ್ ಸಿಲಿಂಡರ್ ದರ ಮತ್ತೆ 50 ರೂ ಏರಿಕೆ * ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನೂ ಹೆಚ್ಚಳ

ಬೆಂಗಳೂರು(ಮೇ.07): ಸಾಮಾನ್ಯರ ಪಾಲಿಗೆ ಅಡುಗೆ ದುಬಾರಿಯಾಗಿದೆ. ವಾಣಿಜ್ಯ ಎಲ್‌ಪಿಜಿ ನಂತರ ಈಗ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನೂ ಹೆಚ್ಚಿಸಲಾಗಿದೆ. ಶನಿವಾರ 14.2 ಕೆಜಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆ 50 ರೂ ಹೆಚ್ಚಳವಾಗಿದೆ. ಈ ಹೆಚ್ಚಳವು ಶನಿವಾರದಿಂದ ಅಂದರೆ 7ನೇ ಮೇ 2022 ರಿಂದ ಜಾರಿಗೆ ಬಂದಿದೆ. ಇದೀಗ ರಾಜಧಾನಿ ದೆಹಲಿಯಲ್ಲಿ 14.2 ಕೆಜಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಪ್ರತಿ ಸಿಲಿಂಡರ್‌ಗೆ 999.50 ರೂ.ಗೆ ಏರಿಕೆಯಾಗಿದೆ. ಇದಕ್ಕೂ ಮುನ್ನ ಮಾರ್ಚ್ 22 ರಂದು ದೇಶೀಯ ಎಲ್‌ಪಿಜಿ ಬೆಲೆಯನ್ನು 50 ರೂ.ಗಳಷ್ಟು ಹೆಚ್ಚಿಸಲಾಗಿತ್ತು. ಏಪ್ರಿಲ್ ತಿಂಗಳಲ್ಲಿ ಈ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ.

ಕಳೆದ ಮಾರ್ಚ್ ನಲ್ಲಿ ಹೆಚ್ಚಳವಾಗಿತ್ತು

ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ಚುನಾವಣೆ ಮುಗಿದ ನಂತರ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಬೆಲೆಯಲ್ಲಿ ಏರಿಕೆ ಆಗಲೇ ಶುರುವಾಗಿತ್ತು. ಆ ನಂತರ ಎಲ್‌ಪಿಜಿ ಬೆಲೆಯೂ ಹೆಚ್ಚಾಗತೊಡಗಿತು. ಈ ಅನುಕ್ರಮದಲ್ಲಿ, 22 ಮಾರ್ಚ್ 2022 ರಂದು, ದೇಶೀಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 50 ರೂ.ಗಳಷ್ಟು ಹೆಚ್ಚಿಸಲಾಯಿತು. ಆ ನಂತರ ದೆಹಲಿಯಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ 949.50 ರೂ.ಗೆ ಏರಿತ್ತು.

ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೂಡ ದುಬಾರಿಯಾಗುತ್ತಿದೆ

ದೇಶೀಯ ಎಲ್‌ಪಿಜಿ ಬೆಲೆ ಏರಿಕೆಯ ನಂತರ ಏಪ್ರಿಲ್ 1 ರಂದು 19 ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಅಂದು ಪ್ರತಿ ಸಿಲಿಂಡರ್‌ಗೆ 249.50 ರೂ ಆಗಿತ್ತು. ಇದಾದ ನಂತರ ದೆಹಲಿಯಲ್ಲಿ ಈ ಸಿಲಿಂಡರ್ ಬೆಲೆ 2253 ರೂ.ಗೆ ಏರಿತ್ತು. ಇದರ ನಂತರ, ಮೇ 1, 2022 ರಂದು, ವಾಣಿಜ್ಯ LPC ಗ್ಯಾಸ್ ಸಿಲಿಂಡರ್‌ನ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 104 ರೂ.ಗಳಷ್ಟು ಹೆಚ್ಚಿಸಲಾಯಿತು. ಆ ನಂತರ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಪ್ರತಿ ಸಿಲಿಂಡರ್ ಗೆ 2,355 ರೂ.ಗೆ ಏರಿಕೆಯಾಗಿದೆ.

LPG ಬೆಲೆಯನ್ನು ಈ ರೀತಿ ಪರಿಶೀಲಿಸಿ
ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಪರಿಶೀಲಿಸಲು, ನೀವು ಸರ್ಕಾರಿ ತೈಲ ಕಂಪನಿಯ ವೆಬ್‌ಸೈಟ್‌ಗೆ ಹೋಗಬೇಕು. ಇಲ್ಲಿ ಕಂಪನಿಗಳು ಪ್ರತಿ ತಿಂಗಳು ಹೊಸ ದರಗಳನ್ನು ನೀಡುತ್ತವೆ. https://iocl.com/Products/IndaneGas.aspx ಲಿಂಕ್‌ನಲ್ಲಿ ನಿಮ್ಮ ನಗರದ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ನೀವು ಪರಿಶೀಲಿಸಬಹುದು.

ಜಿಯೋ, ಏರ್ಟೆಲ್ , ವೋಡಾಫೋನ್ ಕಂಪನಿಗಳಿಗೆ BSNL ಟಕ್ಕರ್

ಸಬ್ಸಿಡಿ (Subsidy) ಹೆಚ್ಚಿಸಿದ  ಸರ್ಕಾರ
ಇತ್ತೀಚಿನ ದಿನಗಳಲ್ಲಿ  LPG ಸಿಲಿಂಡರ್ ಬೆಲೆ (LPG Price) ಗಗನಕ್ಕೇರಿತ್ತು. ಸದ್ಯ ಗೃಹ ಬಳಕೆ  ಸಿಲಿಂಡರ್ ಬೆಲೆ  834 ರೂ. ಇದೆ.  ಇದ್ರಿಂದ ಜನಸಾಮಾನ್ಯರಿಗಾಗುತ್ತಿರೋ ತೊಂದರೆಯನ್ನು ಮನಗಂಡ ಸರ್ಕಾರ, ಸಬ್ಸಿಡಿ ರೂಪದಲ್ಲಿ ನೀಡಲಾದ ವಿನಾಯಿತಿಯನ್ನು ಹೆಚ್ಚಿಸಲು  ನಿರ್ಧರಿಸಿದೆ. ಸಬ್ಸಿಡಿ ಪಡೆಯುತ್ತಿರುವ ಗ್ರಾಹಕರು ಈಗ ಪ್ರತಿ ಸಿಲಿಂಡರ್‌ಗೆ ಹೆಚ್ಚಿನ ರಿಯಾಯಿತಿ ಲಾಭವನ್ನು ಪಡೆಯುತ್ತಾರೆ. ಈ ಹಿಂದೆ ಸಿಲಿಂಡರ್ ಖರೀದಿಗೆ ಸಿಗುತ್ತಿದ್ದ ಸಬ್ಸಿಡಿಯನ್ನು ಕೇವಲ 20 ರಿಂದ 30 ರೂ.ಗೆ ಇಳಿಸಲಾಗಿದ್ದು, ನವೆಂಬರ್ ನಲ್ಲಿ ಮತ್ತೆ ಸುಮಾರು 300 ರೂ.ಗೆ ಏರಿಕೆ ಮಾಡಲಾಗಿದೆ. ಉಜ್ವಲ(Ujwala) ಯೋಜನೆಯಡಿ ಗ್ಯಾಸ್ ಸಿಲಿಂಡರ್ ತೆಗೆದುಕೊಳ್ಳುವವರಿಗೆ ಈ ಸಬ್ಸಿಡಿ ಯೋಜನೆಯಿಂದ ಗರಿಷ್ಠ ಲಾಭ ಸಿಗಲಿದೆ. ಈ ಹಿಂದೆ 174.86 ರೂ.ಗಳ ಸಹಾಯಧನವನ್ನು, ಈಗ 312.48 ರೂ.ಗೆ ಹೆಚ್ಚಿಸಲಾಗಿದೆ.  ಇದು ದೇಶಾದ್ಯಂತ ಅನೇಕ ಕುಟುಂಬಗಳಿಗೆ ಸಮಾಧಾನ ಕೊಟ್ಟಿದೆ. ಕೆಲ ಸಮಯದ ಹಿಂದೆ, ಗೃಹೋಪಯೋಗಿ ಎಲ್‌ಪಿಜಿ ಸಿಲಿಂಡರ್‌ಗೆ 594ರೂ  ಕ್ಕೆ ಲಭ್ಯವಿತ್ತು, ಆದರೀಗ ಇದು 834 ರೂ ನಿಂದ ಸುಮಾರು 1,000 ರೂಪಾಯಿ ಗಡಿ ತಲುಪಿದೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್
ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!