ಕಲಬುರಗಿಗೆ ನಾಳೆ ಸಿಎಂ ಬೊಮ್ಮಾಯಿ ಪುತ್ರ ಭರತ್‌ ಆಗಮನ

By Kannadaprabha News  |  First Published Jan 8, 2023, 11:00 PM IST

ಭರತ ಬೊಮ್ಮಾಯಿ ತುಂಬ ಕಿರಿಯ ವಯಸ್ಸಿನಲ್ಲಿಯೇ ಅಂತಾರಾಷ್ಟ್ರೀಯ ಗಮನ ಸೆಳೆಯುವ ಮೂಲಕ ಯುವ ಉದ್ಯಮಿಗಳಲ್ಲಿ ಹೊಸ ಆಶಾಕಿರಣವಾಗಿ ಹೊರಹೊಮ್ಮಿದ್ದಾರೆ. ಇವರ ಸಾಧನೆಗೆ ವೀರಶೈವ ಲಿಂಗಾಯಿತ ಸಮುದಾಯದಲ್ಲಿ ಹಾಗೂ ಯುವ ಉದ್ಯಮಿಗಳಲ್ಲಿ ಹೊಸ ಹುರುಪು ತಂದಿದೆ. ಈ ಕಾರಣಕ್ಕಾಗಿಯೇ ಭರತ್‌ ಇವರ ಸಾಧನೆಯನ್ನು ಪರಿಚಯಿಸಲು ಕಲಬುರಗಿಯಲ್ಲಿ ಸನ್ಮಾನ, ಸಂವಾದ ಹಮ್ಮಿಕೊಳ್ಳಲಾಗಿದೆ.


ಕಲಬುರಗಿ(ಜ.08):  ಮುಖ್ಯಮಂತ್ರಿ ಬಸವರಾಜ ಬೋಮ್ಮಾಯಿ ಪುತ್ರ, ಯುವ ಉದ್ಯಮಿ ಭರತ ಬೊಮ್ಮಾಯಿ ಜ.9ರಂದು ಸೋಮವಾರ ಕಲಬುರಗಿಗೆ ಆಗಮಿಸುತ್ತಿದ್ದಾರೆ. ಪ್ರತಿಷ್ಠಿತ ಅಂತಾರಾಷ್ಟ್ರೀಯ ಟೈಟಾನ್‌ ಅವಾರ್ಡ್‌- 2022 ಪುರಸ್ಕಾರ ಪಡೆದಿರುವ ಹಿನ್ನೆಲೆಯಲ್ಲಿ ಅವರನ್ನು ಕಲಬುರಗಿಯಲ್ಲಿ ವೀರಶೈವ ಲಿಂಗಾಯಿತ ಬಳಗ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಕೈಗಾರಿಕಾ, ವಾಣಿಜ್ಯ ಸಮಿತಿಯಿಂದ ಸನ್ಮಾನ ಹಾಗೂ ಇಲ್ಲಿನ ಯುವ ಉದ್ಯಮಿಗಳು ಸಂವಾದ ಏರ್ಪಡಿಸಲಾಗಿದೆ.

ಭರತ ಬೊಮ್ಮಾಯಿ ತುಂಬ ಕಿರಿಯ ವಯಸ್ಸಿನಲ್ಲಿಯೇ ಅಂತಾರಾಷ್ಟ್ರೀಯ ಗಮನ ಸೆಳೆಯುವ ಮೂಲಕ ಯುವ ಉದ್ಯಮಿಗಳಲ್ಲಿ ಹೊಸ ಆಶಾಕಿರಣವಾಗಿ ಹೊರಹೊಮ್ಮಿದ್ದಾರೆ. ಇವರ ಸಾಧನೆಗೆ ವೀರಶೈವ ಲಿಂಗಾಯಿತ ಸಮುದಾಯದಲ್ಲಿ ಹಾಗೂ ಯುವ ಉದ್ಯಮಿಗಳಲ್ಲಿ ಹೊಸ ಹುರುಪು ತಂದಿದೆ. ಈ ಕಾರಣಕ್ಕಾಗಿಯೇ ಭರತ್‌ ಇವರ ಸಾಧನೆಯನ್ನು ಪರಿಚಯಿಸಲು ಕಲಬುರಗಿಯಲ್ಲಿ ಸನ್ಮಾನ, ಸಂವಾದ ಹಮ್ಮಿಕೊಳ್ಳಲಾಗಿದೆ.

Tap to resize

Latest Videos

undefined

ಜ.9ರಂದು ಬೆ.10 ಗಂಟೆಗೆ ಸಮಾರಂಭ ಶುರುವಾಗಲಿದ್ದು ಸನ್ಮಾನ ಸ್ವೀಕರಿಸಿ ಭರತ ಯುವ ಉದ್ದಿಮೆದಾರರೊಂದಿಗೆ ಮುಖಾಮುಖಿಯಾಗಲಿದ್ದಾರೆ. ಭರತ್‌ ಬೊಮ್ಮಾಯಿ ಸ್ವಾಗತಕ್ಕೆ ಕಲಬುರಗಿಯ ವೀರಶೈವ ಲಿಂಗಾಯಿತ ಸಮಾಜದ ಯುವಕರು, ಹಿರಿಯರು ಎಲ್ಲರು ಸಜ್ಜಾಗಿದ್ದಾರೆ. ಇದೇ ಮೊದಲ ಬಾರಿಗೆ ಕಲಬುರಗಿಗೆ ಭರತ್‌ ಆಗಮಿಸುತ್ತಿರೋ ಹಿನ್ನೆಲೆಯಲ್ಲಿ ಅದ್ದೂರಿ ಸ್ವಾಗತ ನೀಡಲಾಗುತ್ತಿದೆ.

ಸಿಎಂ ಬೊಮ್ಮಾಯಿ ಪುತ್ರ, ಭರತ್‌ ಬೊಮ್ಮಾಯಿಗೆ ‘ಟೈಟಾನ್‌ ಬಿಸಿನೆಸ್‌’ ಪ್ರಶಸ್ತಿ

ಅಭಿಷೇಕ ಚೆನ್ನಾರಡ್ಡಿ ಪಾಟೀಲ ಅಧ್ಯಕ್ಷತೆಯಲ್ಲಿ ಸ್ವಾಗತ ಸಮೀತಿ ರಚಿಸಲಾಗಿದೆ. ಕಾರ್ಯಾಧ್ಯಕ್ಷರಾಗಿ ಶರಣಗೌಡ ಪಾಟೀಲ, ಉದಯ ಪಾಟೀಲ, ಮಹೇಶ ಕೆ ಪಾಟೀಲ, ಶಿವರಾಜ ಪಾಟೀಲ ತಿಳಗೂಳ. ದಿಪಕ್‌ ಬಬಲಾದಕರ್‌, ಶಿವಲಿಂಗ ಪಾಟೀಲ ಸಾವಳಗಿ, ಲಕ್ಷ್ಮಿಕಾಂತ ಸ್ವಾದಿ, ಡಾ. ರಾಜಶೇಖರ ಬಂಡೆ ಸಮೀತಿಯಲ್ಲಿದ್ದಾರೆ. ಅಭಾ ವೀರಶೈವ ಮಹಾಸಭೆಯ ವಾಣಿಜ್ಯ ಮತ್ತು ಕೈಗಾರಿಕಾ ಸಮಿತಿ ಅಧ್ಯಕ್ಷ ಅಮರನಾಥ ಪಾಟೀಲ ಸಂಚಾಲಕ ಆನಂದ ದಂಡೋತಿ ಮಾರ್ಗದರ್ಶನದಲ್ಲಿ ಸನ್ಮಾನಕ್ಕೆ ಭರ್ಜರಿ ತಯ್ಯಾರಿ ಮಾಡಲಾಗಿದೆ.

ಭರತ್‌ ಬೊಮ್ಮಾಯಿಯವರಿಗೆ ಅಂತಾರಾಷ್ಟ್ರೀಯ ಟೈಟಾನ್‌ ಬಿಸಿನೆಸ್‌ ಪುರಸ್ಕಾರ ದೊರೆತಾಗ ಬೆಂಗಳೂರಲ್ಲಿ ಸನ್ಮಾನಿಸಿದೆ. ಕಲಬುರಗಿ ಯುವಕರಿಗೂ ಪ್ರೇರಣೆಯಾಗಬೇಕೆಂದು ಇಲ್ಲೇ ಸನ್ಮಾನಿಸಲಾಗುತ್ತಿದೆ. ಜ.9ರಂದು ಕಲಬುರಗಿಗೆ ಭರತ್‌ ಆಗಮಿಸಿ ಯುವರಿಗೆ ಮಾರ್ಗದರ್ಶನ ಮಾಡುತ್ತಾರೆ ಅಂತ ಕಲಬುರಗಿ ವೀರಶೈವ ಲಿಂಗಾಯಿತ ಬಳಗದ ಅಧ್ಯಕ್ಷ ಎಂಎಸ್‌ ಪಾಟೀಲ್‌ ನರಿಬೋಳ್‌ ತಿಳಿಸಿದ್ದಾರೆ. 

ಭರತ್‌ ಬೊಮ್ಮಾಯಿ ಕಿರಿಯ ವಯಸ್ಸಲ್ಲಿಯೇ ಉದ್ಯಮ ಕ್ಷೇತ್ರದಲ್ಲಿ ಮಾಡಿರುವ ಸಾಧನೆæ ಕಂಡು ನಮಗೆ ಸಂತೋಷವಾಗಿದೆ. ಅದಕ್ಕಾಗಿ ಅವರಿಗೆ ಅಬಿನಂದಿಸಿ ಶುಭ ಕೋರಲು ನಮಗೆ ಹೆಮ್ಮೆಯಾಗುತ್ತಿದೆನ ಅಂತ ಕಲಬುರಗಿ ಮಲ್ಲೀನಾಥ ಪಾಟೀಲ ಕಾಳಗಿ ಹೇಳಿದ್ದಾರೆ. 

ಭರತ್‌ ಬೊಮ್ಮಾಯಿ ಸಾಧನೆ ಕಲಬುರಗಿ ಭಾಗದಲ್ಲಿ ಯುವಕರಿಗೆ ಪ್ರೇರಣೆಯಾಗಿ ಇಲ್ಲಿಯೂ ಹೊಸ ಉದ್ದಿಮೆಗಳು ಬರಲಿ ಎಂಬುದೇ ನಮ್ಮ ಆಶಯ, ಉದ್ಯಮಿಗಳಿಗೆ ಪ್ರೆರಣೆಯಾಗಿ ಅವರು ಈ ಬಾಗದಲ್ಲಿ ಹೊಸ ಕ್ರಾಂತಿಗೆ ಕಾರಣವಾಗಲಿ ಅಂತ ಕಲಬುರಗಿ ಶಿವರಾಜ ಪಾಟೀಲ ತಿಳಗೂಳ ತಿಳಿಸಿದ್ದಾರೆ. 

click me!