* 12 ಇಲಾಖೆಯೊಂದಿಗೆ ಸಭೆ ನಡೆಸಲಿರುವ ಮುಖ್ಯಮಂತ್ರಿ ಬೊಮ್ಮಾಯಿ
* ಕೋವಿಡ್ ಪರಿಹಾರಕ್ಕೂ ಅನುದಾನ ನೀಡುವಂತೆ ಕೋರಿಕೆ
* ಹೊಸ ತಾಲೂಕುಗಳಲ್ಲಿ ಆಡಳಿತ ಸೌಧ ನಿರ್ಮಾಣಕ್ಕೆ ಸಾವಿರ ಕೋಟಿ ರು.ಗಿಂತ ಹೆಚ್ಚು ಅನುದಾನ
ಬೆಂಗಳೂರು(ಫೆ.10): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಬಜೆಟ್ ಪೂರ್ವಭಾವಿ ಸಭೆಯನ್ನು(Pre-Budget Meeting) ಆರಂಭಿಸಿದ್ದು, ನಿನ್ನೆ(ಬುಧವಾರ) ಎಂಟು ಇಲಾಖೆಯೊಂದಿಗೆ ಸಭೆ ನಡೆಸಿ ಇಲಾಖಾವಾರು ಪ್ರಸ್ತಾವನೆ ಮತ್ತು ಬೇಡಿಕೆಗಳನ್ನು ಆಲಿಸಿದ್ದಾರೆ.
ಕಂದಾಯ ಇಲಾಖೆ, ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ, ಲೋಕೋಪಯೋಗಿ, ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜತೆ ಸಭೆ ನಡೆಸಿದರು.
Karnataka Budget: ಬಜೆಟ್‌ನಲ್ಲಿ ಹಿಂದುಳಿದ ವರ್ಗಕ್ಕೆ ಕೊಡುಗೆ: ಸಿಎಂ ಭರವಸೆ
ಕಂದಾಯ ಇಲಾಖೆಯು 100 ವರ್ಷಗಳ ದಾಖಲೆಗಳನ್ನು ಉಳಿಸಿಕೊಳ್ಳಲು ಡಿಜಿಟಲ್ ವ್ಯವಸ್ಥೆ(Digital ಶystem) ಮಾಡುವಂತೆ ಮನವಿ ಮಾಡಿದೆ. ಡ್ರೋನ್ ಸಮೀಕ್ಷೆಯನ್ನು(Drone ಶurvey) ಎಲ್ಲ ಕಡೆ ಮಾಡಿಸಬೇಕಾಗಿದೆ. ಹೊಸ ತಾಲೂಕುಗಳಲ್ಲಿ ಆಡಳಿತ ಸೌಧ ನಿರ್ಮಾಣ ಮಾಡಬೇಕು. ಇದಕ್ಕಾಗಿ ಒಂದು ಸಾವಿರ ಕೋಟಿ ರು.ಗಿಂತ ಹೆಚ್ಚು ಅನುದಾನ(Grants) ಮತ್ತು ಕೋವಿಡ್ ಪರಿಹಾರಕ್ಕೂ(Covid Compensation) ಅನುದಾನ ನೀಡುವಂತೆ ಕೋರಲಾಗಿದೆ ಎಂದು ಹೇಳಲಾಗಿದೆ.
ಇನ್ನು ಇಂದು(ಗುರುವಾರ) 12 ಇಲಾಖೆಯೊಂದಿಗೆ ಮುಖ್ಯಮಂತ್ರಿಗಳು ಸಭೆ ನಡೆಸಲಿದ್ದಾರೆ. ಕೈಮಗ್ಗ ಮತ್ತು ಜವಳಿ, ಸಕ್ಕರೆ, ಕಾರ್ಮಿಕ, ಸಾರಿಗೆ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಣ್ಣ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ, ಪೌರಾಡಳಿತ ಮತ್ತು ಕೃಷಿ ಇಲಾಖೆಯೊಂದಿಗೆ ಸಭೆ ನಡೆಸಲಿದ್ದಾರೆ.
ಬಜೆಟ್‌ನಲ್ಲಿ ಶಿಕ್ಷಣಕ್ಕೆ ಹೆಚ್ಚು ಅನುದಾನ: ಸಿಎಂಗೆ ಪತ್ರ
ಕೋವಿಡ್(Covid-19) ಸಂಕಷ್ಟದಿಂದಾಗಿ ಕಳೆದ ಎರಡು ವರ್ಷದಿಂದ ರಾಜ್ಯ ಶಿಕ್ಷಣ ವ್ಯವಸ್ಥೆಯಲ್ಲಿ ಉಂಟಾಗಿರುವ ಬಿಕ್ಕಟ್ಟು ಸುಧಾರಿಸುವ ಸಲುವಾಗಿ ಶಿಕ್ಷಣ ಹಕ್ಕು ಕಾಯ್ದೆ (RTE) ಪರಿಣಾಮಕಾರಿ ಜಾರಿ ಸೇರಿದಂತೆ ಅಗತ್ಯ ಕ್ರಮಗಳ ಜಾರಿಗೆ ಮುಂಬರುವ ಬಜೆಟ್‌ನಲ್ಲಿ(Budget) ಸೂಕ್ತ ಅನುದಾನ ಒದಗಿಸುವಂತೆ ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಅವರು, ರಾಜ್ಯದಲ್ಲಿ ಕೋವಿಡ್ ಮೂರು ಅಲೆಗಳ ಮಧ್ಯೆ ಶಾಲಾ ಶಿಕ್ಷಣ ಕ್ಷೇತ್ರದಲ್ಲಿ ಭಾರೀ ಬಿಕ್ಕಟ್ಟು ಉಂಟಾಗಿದೆ. ಮಕ್ಕಳು ನಿರಂತರ ಕಲಿಕೆಯಿಂದ ವಂಚಿತರಾಗಿದ್ದಾರೆ. ಈ ಬಿಕ್ಕಟ್ಟು ಬಗೆಹರಿಸಲು ಬಜೆಟ್‌ನಲ್ಲಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಕೋರಿದ್ದಾರೆ.
ಅದೇ ರೀತಿ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಲ್ಲಿಸಿರುವ ಸರ್ಕಾರಿ ಶಾಲೆಗಳ ಸಬಲೀಕರಣ ವರದಿ 2017 ಅನ್ನು ಸದನದಲ್ಲಿ ಅಂಗೀಕರಿಸಿ ಜಾರಿಗೊಳಿಸಲು ಆಯವ್ಯಯದಲ್ಲಿ ಬದ್ಧತೆ ಪ್ರದರ್ಶಿಸಿಬೇಕೆಂದು ಅವರು ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದ್ದಾರೆ.
Karnataka Budget 2022 ಬೊಮ್ಮಾಯಿ ಸರ್ಕಾರದ ಮೊದಲ ಬಜೆಟ್‌ಗೆ ಮುಹೂರ್ತ ಫಿಕ್ಸ್
ರಾಜ್ಯದಲ್ಲಿ(Karnataka) ಆರ್‌ಟಿಇ ಕಾಯ್ದೆ ಜಾರಿಯಾಗಿ 12 ವರ್ಷ ಕಳೆದರೂ ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ. ಈ ಸಂಬಂಧ ಲೋಕಸಭೆಯಲ್ಲೇ ಸದಸ್ಯರೊಬ್ಬರು ಕೇಳಿದ ಪ್ರಶ್ನೆಗೆ ಸರ್ಕಾರದಿಂದಲೇ ಆರ್‌ಟಿಇ ಮೂಲಸೌಕರ್ಯಗಳ ಅನುಸರಣೆ 12 ವರ್ಷಗಳ ಬಳಿಕವೂ ಶೇ.23.6 ರಷ್ಟುಮಾತ್ರ ಎಂದು ಉತ್ತರ ಬಂದಿದೆ. ಅಂದರೆ ಶೇ.77 ರಷ್ಟುಶಾಲೆಗಳಲ್ಲಿ ಇನ್ನೂ ಕೂಡ ಆರ್‌ಟಿಇ ಕಾಯ್ದೆ ಅನುಸಾರ ಅಗತ್ಯ ಕಲಿಕಾ ಕೋಣೆ, ಮಕ್ಕಳ ಸಂಖ್ಯೆಗೆ ಅನುಸಾರ ಶಿಕ್ಷಕರು, ಪ್ರತ್ಯೇಕ ಶೌಚಾಲಯ, ಕುಡಿಯುವ ನೀರು, ಗ್ರಂಥಾಲಯ, ಪೀಠೋಪಕರಣ, ಆಟದ ಮೈದಾನ ಹೀಗೆ ಅಗತ್ಯ ಸೌಲಭ್ಯಗಳಿಲ್ಲ. ಇದು ನಿಜಕ್ಕೂ ಆರ್‌ಟಿಇ ಕಾಯ್ದೆ ಮತ್ತು ಸಂವಿಧಾನದ ಉಲ್ಲಂಘನೆ. ಹಾಗಾಗಿ ಆರ್‌ಟಿಇ ಕಾಯ್ದೆ ಪರಿಣಾಮಕಾರಿ ಜಾರಿಗೆ ಬಜೆಟ್‌ನಲ್ಲಿ ವಿಶೇಷ ಅನುದಾನ ಮೀಸಲಿಡಬೇಕು ಎಂದು ಅವರು ಕೋರಿದ್ದಾರೆ.
ಕೋವಿಡ್‌ನಿಂದಾಗಿ ಸಾಕಷ್ಟು ಮಕ್ಕಳು(Children) ಶಾಲೆಯಿಂದ(School) ಹೊರಗುಳಿದಿದ್ದು ಮರಳಿ ಶಾಲೆಗೆ ಕಾರ್ಯಕ್ರಮವನ್ನು ಒಂದು ಆಂಧೋಲನವಾಗಿ ನಡೆಸಲು ಬಜೆಟ್‌ನಲ್ಲಿ ಕಾರ್ಯಕ್ರಮ ಘೋಷಿಸಬೇಕು. 25 ಸಾವಿರ ಸರ್ಕಾರಿ ಶಾಲಾ ಶಿಕ್ಷಕರ ನೇಮಕಕ್ಕೆ(Teachers Recruitment) ಕ್ರಮ ವಹಿಸಬೇಕು. 3ರಿಂದ 18ನೇ ವರ್ಷದ ವರೆಗೆ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ವಿಸ್ತರಿಸಬೇಕು ಎಂದು ಅವರು ತಮ್ಮ ಪತ್ರದಲ್ಲಿ ಮನವಿ ಮಾಡಿದ್ದಾರೆ.