Karnataka Budget: ಸಿಎಂ ಬೊಮ್ಮಾಯಿ ಚೊಚ್ಚಲ ಬಜೆಟ್‌ನಲ್ಲಿ 5 ಕ್ಷೇತ್ರಗಳಿಗೆ ಆದ್ಯತೆ?

Kannadaprabha News   | Asianet News
Published : Mar 03, 2022, 05:52 AM IST
Karnataka Budget: ಸಿಎಂ ಬೊಮ್ಮಾಯಿ ಚೊಚ್ಚಲ ಬಜೆಟ್‌ನಲ್ಲಿ 5 ಕ್ಷೇತ್ರಗಳಿಗೆ ಆದ್ಯತೆ?

ಸಾರಾಂಶ

*  ನಾಳೆ ಮಧ್ಯಾಹ್ನ 12.30ಕ್ಕೆ ಸಿಎಂ ಬೊಮ್ಮಾಯಿ ಚೊಚ್ಚಲ ಬಜೆಟ್‌ ಮಂಡನೆ *  2 ವರ್ಷದಿಂದ ಆದ್ಯತೆ ನೀಡದ ಕ್ಷೇತ್ರಕ್ಕೆ ಒತ್ತು ಸಾಧ್ಯತೆ *  ಯಾವ ವಲಯಕ್ಕೆ ಆದ್ಯತೆ?  

ಬೆಂಗಳೂರು(ಮಾ.03): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಶುಕ್ರವಾರ ಮಧ್ಯಾಹ್ನ 12.30ಕ್ಕೆ ತಮ್ಮ ಚೊಚ್ಚಲ ಬಜೆಟ್‌(Budget) ಮಂಡನೆ ಮಾಡಲಿದ್ದು, ಮುಖ್ಯವಾಗಿ ಐದು ಪ್ರಮುಖ ಕ್ಷೇತ್ರಗಳಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಆದ್ಯತೆ ನೀಡುವ ಅಭಿವೃದ್ಧಿಪರ ಬಜೆಟ್‌ ಮಂಡನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಸಂಪನ್ಮೂಲ ಕ್ರೂಢೀಕರಣ, ಹೊಸ ಯೋಜನೆಗಳ ಘೋಷಣೆ ಹಾಗೂ ಅಭಿವೃದ್ಧಿಪರ ಕಾರ್ಯಕ್ರಮಗಳ ಅನುಷ್ಠಾನದ ದೊಡ್ಡ ಸವಾಲು ಬೊಮ್ಮಾಯಿ ಅವರ ಮುಂದಿದೆ. ಕೊರೋನಾ(Coronavirus) ಲಾಕ್‌ಡೌನ್‌(Lockdown), ಪ್ರವಾಹ(Flood) ಸೇರಿದಂತೆ ವಿವಿಧ ಕಾರಣಗಳಿಂದ ಹೊಡೆತ ತಿಂದಿದ್ದ ಆರ್ಥಿಕತೆ ಈಗಷ್ಟೇ ಚೇತರಿಸಿಕೊಳ್ಳುತ್ತಿರುವುದು ಬೊಮ್ಮಾಯಿ ಅವರಿಗೆ ಹೊಸ ಉತ್ಸಾಹ ನೀಡಿದ್ದು, ಚುನಾವಣೆ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಒತ್ತು ನೀಡಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Karnataka Budget 2022-23: ಉತ್ತರದ ಹೆಬ್ಬಾಗಿಲಿಗೆ ಸಿಎಂ ತೋರಣ..!

5 ವಲಯಕ್ಕೆ ಆದ್ಯತೆ:

ಕೊರೋನಾ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಅಭಿವೃದ್ಧಿ ಕಾರ್ಯಕ್ರಮಗಳು ಕಡಿಮೆಯಾಗಿವೆ. ಕೇವಲ ಆರೋಗ್ಯ ಕ್ಷೇತ್ರದಲ್ಲಿನ ಮೂಲಭೂತ ಸೌಕರ್ಯಗಳಿಗಷ್ಟೇ ಆದ್ಯತೆ ನೀಡಲಾಗಿದೆ. ಇದೀಗ ಮುಂದಿನ ವರ್ಷ ಚುನಾವಣಾ ವರ್ಷವಾಗಿರುವುದರಿಂದ ನೀರಾವರಿ, ಕೃಷಿ, ಲೋಕೋಪಯೋಗಿ, ಸಮಾಜ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗಳಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಲು ನಿರ್ಧರಿಸಲಾಗಿದೆ.

ನೀರಾವರಿ, ಕೃಷಿ, ಲೋಕೋಪಯೋಗಿ ಇಲಾಖೆ ಜತೆಗೆ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಹೆಚ್ಚು ಅನುದಾನ ನೀಡುವ ಮೂಲಕ ಮುಂಬರುವ ಜಿಲ್ಲಾ ಪಂಚಾಯತ್‌ ಹಾಗೂ ತಾಲ್ಲೂಕು ಪಂಚಾಯತ್‌ ಚುನಾವಣೆ ಸಿದ್ಧತೆಗೂ ಕಣ್ಣಾಯಿಸಲಿದ್ದಾರೆ ಎಂದು ತಿಳಿದು ಬಂದಿದೆ.

Karnataka Budget 2022-23: ಸಿಎಂ ಚೊಚ್ಚಲ ಬಜೆಟ್‌ ಬಗ್ಗೆ ಹಲವು ನಿರೀಕ್ಷೆ

ಅಭಿವೃದ್ಧಿ ಪರ ಬಜೆಟ್‌ನ ಜಪ ಮಾಡುತ್ತಿರುವ ಬೊಮ್ಮಾಯಿ ಅವರ ಎದುರು ಸವಾಲುಗಳ ರಾಶಿಯೇ ಇದೆ. ಜಿಎಸ್‌ಟಿ ಪರಿಹಾರವು 2022ಕ್ಕೆ ಮುಕ್ತಾಯಗೊಳ್ಳಲಿರುವುದರಿಂದ ಜಿಎಸ್‌ಟಿ(GST) ಆದಾಯ ಮತ್ತಷ್ಟುಕಡಿಮೆಯಾಗುವ ನಿರೀಕ್ಷೆಯಿದೆ. ಹೀಗಾಗಿ ಆದಾಯ ಕ್ರೂಢೀಕರಣ ಸವಾಲಾಗಬಹುದು.

ಇನ್ನು ಸಾರ್ವತ್ರಿಕ ಚುನಾವಣೆಗೆ(General Election) ಮೊದಲು 2023-24ನೇ ಸಾಲಿನ ಬಜೆಟ್‌ ಮಂಡನೆಯ ಅವಕಾಶವಿದ್ದರೂ ಅದು ನಾಮ್‌ ಕೆ ವಾಸ್ತೆ ಬಜೆಟ್‌ ಆಗಲಿದೆ. ಹೀಗಾಗಿ ಶುಕ್ರವಾರ ಮಂಡನೆಯಾಗಲಿರುವ 2022-23ನೇ ಬಜೆಟ್‌ನ್ನೇ ಚುನಾವಣಾ ಬಜೆಟ್‌ ಎಂದು ಬಿಂಬಿಸಲಾಗಿದೆ. ಹೀಗಾಗಿ ಆಡಳಿತ ಪಕ್ಷದ ಶಾಸಕರು ಸೇರಿದಂತೆ ಎಲ್ಲ ಶಾಸಕರು ತಮ್ಮ ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಬಜೆಟ್‌ ಪೂರ್ವಭಾವಿ ಸಭೆಗಳಲ್ಲಿ ಭರಪೂರ ಬೇಡಿಕೆಗಳನ್ನು ನೀಡಿದ್ದಾರೆ. ಇವುಗಳನ್ನು ನಿಭಾಯಿಸುವ ಸವಾಲು ಸಹ ಬೊಮ್ಮಾಯಿ ಅವರ ಮುಂದಿದೆ.

Karnataka Budget 2022-23: ವನ್ಯಜೀವಿ ಸಂಪತ್ತಿನ ರಕ್ಷಣೆಗೆ ಬೇಕು ಒತ್ತು

ಇತ್ತೀಚೆಗೆ ಬೊಮ್ಮಾಯಿ ನಮ್ಮ ಬದ್ಧತೆ ಹಾಗೂ ರಾಜ್ಯದ ಅಭಿವೃದ್ಧಿ ಬಗೆಗಿನ ದೂರದೃಷ್ಟಿ, ಎಲ್ಲ ವರ್ಗಗಳಿಗೂ ಆರ್ಥಿಕ ನ್ಯಾಯ ಒದಗಿಸುವ ಬಜೆಟ್‌ ಮಂಡಿಸುವುದಾಗಿ ಅಧಿವೇಶನದಲ್ಲೇ ಘೋಷಿಸಿದ್ದಾರೆ. ಹೀಗಾಗಿ ಬಜೆಟ್‌ ಕುತೂಹಲ ಮೂಡಿಸಿದೆ.

ಯಾವ ವಲಯಕ್ಕೆ ಆದ್ಯತೆ?

ಕೃಷಿ, ನೀರಾವರಿ, ಲೋಕೋಪಯೋಗಿ, ಸಮಾಜ ಕಲ್ಯಾಣ ಗ್ರಾಮೀಣಾಭಿವೃದ್ಧಿ

ಯಾವ ವಿಷಯಕ್ಕೆ? ಏಕೆ ಆದ್ಯತೆ?

ಕೊರೋನಾ ಹಿನ್ನೆಲೆ 2 ವರ್ಷದಿಂದ ಕೇವಲ ಆರೋಗ್ಯ, ಮೂಲಸೌಕರ್ಯ ವಲಯಕ್ಕೆ ಮಾತ್ರ ಆದ್ಯತೆ ನೀಡಲಾಗಿದೆ
ಹೀಗಾಗಿ ಕಳೆದ 2 ವರ್ಷದಿಂದ ಆದ್ಯತೆ ಪಡೆಯದ 5 ಪ್ರಮುಖ ವಲಯಗಳಿಗೆ ಈ ಬಾರಿ ಹೆಚ್ಚಿನ ಮನ್ನಣೆಗೆ ನಿರ್ಧಾರ
ಜಿಪಂ, ತಾಪಂ ಚುನಾವಣೆ ಹಿನ್ನೆಲೆ ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಅನುದಾನ ಮೂಲಕ ಹಳ್ಳಿಗರ ಮನ ಗೆಲ್ಲುವ ಯತ್ನ
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ