
ಹಣ ಎಷ್ಟಿದ್ರೂ ಖರ್ಚಾಗೋದು ತಿಳಿಯೋದಿಲ್ಲ. ಒಂದೇ ಮೂಲದಿಂದ ಬರೋ ಹಣ ಜೀವನ ನಿರ್ವಹಣೆಗೆ ಸಾಲ್ತಿಲ್ಲ. ಜನರು 9 – 6 ರ ಉದ್ಯೋಗದ ಜೊತೆ ಸೈಡ್ ಬ್ಯುಸಿನೆಸ್ (Side business) ಹುಡುಕ್ತಿದ್ದಾರೆ. ಕಡಿಮೆ ಹಣ ಹೂಡಿ ಆದಾಯ ಗಳಿಸುವ, ಮನೆಯಲ್ಲೆ ಮಾಡಬಹುದಾದ ಸಣ್ಣ ಸಣ್ಣ ಬ್ಯುಸಿನೆಸ್ ಗಳು ಜನರನ್ನು ಸೆಳೆಯುತ್ತಿದೆ. ನೀವು ಕೂಡ ನಿಮ್ಮ ಮಕ್ಕಳ ಇಷ್ಟವನ್ನೇ ಬ್ಯುಸಿನೆಸ್ ಆಗಿ ಬದಲಿಸಿಕೊಳ್ಬಹುದು. ಕಡಿಮೆ ಬಂಡವಾಳ ಹೂಡಿಕೆ ಮಾಡಿ ಹೆಚ್ಚಿನ ಸಂಪಾದನೆ ಮಾಡ್ಬಹುದು. ಮನೆಯಲ್ಲೇ ಚಾಕೋಲೇಟ್ ತಯಾರಿಸಿ ಮಾರಾಟ ಶುರು ಮಾಡೋದು ಉತ್ತಮ ಆಯ್ಕೆ. ಚಾಕೋಲೇಟ್ ಮಕ್ಕಳ ಫೆವರೆಟ್.
ಮಾರುಕಟ್ಟೆಯಲ್ಲಿ ಚಾಕೋಲೇಟ್ (Chocolate) ಗೆ ಸಾಕಷ್ಟು ಬೇಡಿಕೆ ಇದೆ. ಚಾಕೋಲೇಟ್ ಮಾರಾಟಕ್ಕೆ ಯಾವ್ದೆ ಋತುವಿಲ್ಲ. ಎಲ್ಲ ಕಾಲದಲ್ಲೂ ಇದಕ್ಕೆ ಬೇಡಿಕೆ ಇದ್ದೇ ಇದೆ. ಚಾಕೋಲೇಟ್ ತಯಾರಿಸೋದು ನಿಮಗೆ ಇಷ್ಟವಾದ್ರೆ ನೀವು ಆರಾಮವಾಗಿ ಈ ವ್ಯವಹಾರಕ್ಕೆ ಇಳಿಯಬಹುದು. ಮನೆಯಲ್ಲೇ ಸಣ್ಣದಾಗಿ ಬ್ಯುಸಿನೆಸ್ ಶುರು ಮಾಡ್ಬಹುದು. ನಿಮ್ಮ ಈ ಬ್ಯುಸಿನೆಸ್ ಗೆ ಹೆಚ್ಚಿನ ಹಣ ಹೂಡಿಕೆ ಮಾಡ್ಬೇಕಾಗಿಲ್ಲ. ಕೇವಲ 10 ಸಾವಿರ ಕೈನಲ್ಲಿದ್ರೆ ಸಾಕು.
ಯಾವುದೇ ತರಬೇತಿ ಸಂಸ್ಥೆಗೆ ಹೋಗಿ ನೀವು ಚಾಕೋಲೇಟ್ ತಯಾರಿ ಕಲಿಯಬೇಕಾಗಿಲ್ಲ. ಇಂಟರ್ನೆಟ್ (Internet) ಮೂಲಕ ಮನೆಯಲ್ಲೇ ಚಾಕೊಲೇಟ್ ಮಾಡೋದು ಹೇಗೆ ಎಂಬ ಬಗ್ಗೆ ಮಾಹಿತಿ ಪಡೆಯಬಹುದು. ಯುಟ್ಯೂಬ್ ನಲ್ಲಿ ಚಾಕೋಲೇಟ್ ತಯಾರಿ ಬಗ್ಗೆ ಅನೇಕ ವಿಡಿಯೋಗಳಿವೆ. ಚಾಕೋಲೇಟ್ ತಯಾರಿಸಿದ್ರೆ ಸಾಲೋದಿಲ್ಲ, ಅದ್ರ ರುಚಿ ಬಗ್ಗೆ ನೀವು ಹೆಚ್ಚಿನ ಗಮನ ಹರಿಸಬೇಕು. ನಿಮ್ಮ ಚಾಕೋಲೇಟ್ ರುಚಿಕರವಾಗಿದ್ದರೆ ಅದಕ್ಕೆ ಬೇಡಿಕೆ ಹೆಚ್ಚಾಗುತ್ತದೆ.
ಚಾಕೋಲೇಟ್ ತಯಾರಿಸಲು ಏನೆಲ್ಲ ಅಗತ್ಯ? : ನೀವು ಚಾಕೋಲೇಟ್ ತಯಾರಿಸಲು ಕೆಲ ಯಂತ್ರಗಳನ್ನು ಬಳಸಬಹುದು. ಅದ್ರಲ್ಲಿ ಮೆಲ್ಟರ್, ಮಿಕ್ಸರ್ ಇತ್ಯಾದಿ ಸೇರಿವೆ. ಅಲ್ಲದೆ ಕೋಕೋ ಪೌಡರ್, ಹಾಲು, ಫ್ಲೇವರ್ ಗಳನ್ನು ನೀವು ಖರೀದಿ ಮಾಡ್ಬೇಕು. ಪ್ಯಾಕಿಂಗ್ ವಸ್ತುಗಳ ಅಗತ್ಯವೂ ನಿಮಗೆ ಇರುತ್ತದೆ. ಇವೆಲ್ಲವನ್ನು ನೀವು ಸಗಟು ಮಾರುಕಟ್ಟೆಯಲ್ಲಿ ಖರೀದಿ ಮಾಡ್ಬಹುದು.
ಮಾರ್ಕೆಟಿಂಗ್ ಹೇಗೆ? : ಸ್ಥಳೀಯ ಅಂಗಡಿಗಳಲ್ಲಿ ನೀವು ತಯಾರಿಸಿದ ಚಾಕೊಲೇಟ್ಗಳನ್ನು ಮಾರಾಟ ಮಾಡಬಹುದು. ಆನ್ಲೈನ್ ನಲ್ಲಿಯೂ ನಿಮ್ಮ ವ್ಯಾಪಾರ ಪ್ರಾರಂಭಿಸಬಹುದು. ಸೋಶಿಯಲ್ ಮೀಡಿಯಾಗಳು ಮಾರ್ಕೆಟಿಂಗ್ ಗೆ ಉತ್ತಮ ಮಾರ್ಗವಾಗಿದೆ. ಚಾಕೊಲೇಟ್ಗಳ ಕ್ಯಾಟಲಾಗ್ ರಚಿಸಿ, ಇದರಲ್ಲಿ ಚಾಕೊಲೇಟ್ಗಳ ವಿಭಿನ್ನ ಫೋಟೋ, ಅವುಗಳ ಬೆಲೆ, ತಯಾರಿಕೆಯ ವೀಡಿಯೊಗಳು ಇತ್ಯಾದಿಗಳನ್ನು ಸೇರಿಸಿ. ಸೋಶಿಯಲ್ ಮೀಡಿಯಾಗಳಲ್ಲಿ ಈ ವಿಡಿಯೋಗಳನ್ನು ಪೋಸ್ಟ್ ಮಾಡಿ. ಹಾಗೆಯೇ ಸ್ಥಳೀಯವಾಗಿ ನೀವು ಕರಪತ್ರಗಳನ್ನು ಹಂಚಬಹುದು. ಅಮೆಜಾನ್, ಫ್ಲಿಪ್ಕಾರ್ಟ್, ಸ್ವಿಗ್ಗಿ ಅಥವಾ ಜೊಮಾಟೊ ಜೊತೆ ಒಪ್ಪಂದ ಮಾಡ್ಕೊಂಡು ಅಲ್ಲಿಯೂ ನಿಮ್ಮ ಚಾಕೋಲೇಟ್ ಗಳನ್ನು ಮಾರಾಟ ಮಾಡ್ಬಹುದು. ಇಲ್ಲಿ ನಿಮ್ಮ ಚಾಕೋಲೇಟ್ ರುಚಿ ಜೊತೆ ಆಕರ್ಷಕ ಪ್ಯಾಕಿಂಗ್ ಮಹತ್ವ ಪಡೆಯುತ್ತದೆ. ಮಕ್ಕಳನ್ನು ಆಕರ್ಷಿಸುವಂತ ಪ್ಯಾಕಿಂಗ್ ಗೆ ನೀವು ಆದ್ಯತೆ ನೀಡ್ಬೇಕಾಗುತ್ತದೆ. ಹಾಗೆಯೇ ಬೇರೆ ಬೇರೆ ಆಕಾರ ಚಾಕೋಲೇಟ್ ಗಳಿಗೆ ಬೇಡಿಕೆ ಹೆಚ್ಚಿರುತ್ತದೆ. ನೀವು ಹೇಗೆ ಮಾರ್ಕೆಟಿಂಗ್ ಮಾಡಿದ್ದೀರಿ ಮತ್ತು ನಿಮ್ಮ ಚಾಕೋಲೇಟ್ ರುಚಿ ಹೇಗಿದೆ ಎಂಬುದ್ರ ಮೇಲೆ ನಿಮ್ಮ ವ್ಯವಹಾರ ನಿಂತಿದೆ. ಉತ್ತಮ ಗುಣಮಟ್ಟದ ಚಾಕೋಲೇಟ್ ಮಾರಾಟ ಮಾಡಿದ್ರೆ ನೀವು ತಿಂಗಳಿಗೆ 30 ರಿಂದ 40 ಸಾವಿರ ರೂಪಾಯಿಯನ್ನು ಸುಲಭವಾಗಿ ಗಳಿಸಬಹುದು. ಇದು ಸಣ್ಣ ವ್ಯವಹಾರವಾಗಿದ್ದು, ಇದ್ರಿಂದ ನಿಮ್ಮ ಹೆಚ್ಚುವರಿ ಖರ್ಚುಗಳನ್ನು ಸರಿದೂಗಿಸಬಹುದು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.