ಮತ್ತೆ ಚೀನಾ ಕ್ಯಾತೆ: ಲಡಾಯಿ ಯಾವಾಗ ಮುಗಿತೈತೆ?

Published : Jul 13, 2019, 08:05 PM IST
ಮತ್ತೆ ಚೀನಾ ಕ್ಯಾತೆ: ಲಡಾಯಿ ಯಾವಾಗ ಮುಗಿತೈತೆ?

ಸಾರಾಂಶ

ಚೀನಾಗೆ ವೈಮನಸ್ಸು  ಕೊನೆಗಾಣಿಸುವ ಇರಾದೆಯಿಲ್ಲವೇ? ಮತ್ತೆ ಮತ್ತೆ ಪರಸ್ಪರ ಕ್ಯಾತೆ ತೆಗೆಯುವ ಎರಡು ದೇಶಗಳು| ಚೀನಾ-ಅಮೆರಿಕ ನಡುವಿನ ವೈಮನಸ್ಸು ಮತ್ತಷ್ಟು ಉಲ್ಬಣ| ಇರಾನ್ ಮೇಲಿನ ಅಮೆರಿಕದ ಆರ್ಥಿಕ ದಿಗ್ಬಂಧನ ಅಮಾನವೀಯ ಎಂದ ಚೀನಾ| ಇರಾನ್ ಮೇಲಿನ ಆರ್ಥಿಕ ದಿಗ್ಬಂಧನ ವಿರೋಧಿಸುವುದಾಗಿ ಚೀನಾ ಘೋಷಣೆ|

ಬಿಜಿಂಗ್(ಜು.13): ಅಮೆರಿಕ-ಚೀನಾ ನಡುವಿನ  ವೈಮನಸ್ಸು ತಣ್ಣಗಾಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಒಂದಿಲ್ಲೊಂದು ಕಾರಣಕ್ಕೆ ಈ ಎರಡೂ ದೈತ್ಯ ರಾಷ್ಟ್ರಗಳು ಕಾಲು ಕೆದರಿ ಜಗಳಕ್ಕೆ ನಿಲ್ಲುತ್ತಿವೆ.

ಜಿ-20 ಶೃಂಗಸಭೆಯಲ್ಲಿ ಪರಸ್ಪರ ಭೇಟಿಯಾಗುವ ಮೂಲಕ ಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಚೀನಾ ಅಧ್ಯಕ್ಷ ಕ್ಸಿ ಜಿನ್’ಪಿಂಗ್ ವಾಣಿಜ್ಯ ಸಮರಕ್ಕೆ ಇತಿಶ್ರೀ ಹಾಡಿದಂತೆ ಭಾಸವಾಗಿತ್ತು. 

ಆದರೆ ಇದೀಗ ಇರಾನ್ ವಿಚಾರದಲ್ಲಿ ಎರಡೂ ದೇಶಗಳು ಮತ್ತೆ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ನಿಂತಿವೆ. ಇರಾನ್ ವಿರುದ್ಧ ಅಮೆರಿಕದ ಕಾನೂನು ಬಾಹಿರ ಮತ್ತು ಏಕಪಕ್ಷೀಯ ನಿರ್ಬಂಧಗಳನ್ನು ವಿರೋಧಿಸುವುದಾಗಿ ಚೀನಾ ಹೇಳಿದೆ.

ಈ ಕುರಿತು ಮಾತನಾಡಿರುವ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್, ಇರಾನ್ ಮೇಲಿನ ಅಮೆರಿಕದ ಆರ್ಥಿಕ ದಿಗ್ಬಂಧನಗಳು ಅಮಾನವೀಯ ಎಂದು ಹೇಳಿದ್ದಾರೆ. 

ಇರಾನ್ ಸೇರಿದಂತೆ ಜಾಗತಿಕ ಸಮುದಾಯದೊಂದಿಗೆ ಚೀನಾದ ವ್ಯಾಪಾರ ಸಂಬಂಧಗಳು ಅಂತಾರಾಷ್ಟ್ರೀಯ ನಿಯಮಗಳ ಚೌಕಟ್ಟಿನಲ್ಲಿಯೇ ಇವೆ ಎಂದೂ ಶುವಾಂಗ್ ಸ್ಪಷ್ಟಪಡಿಸಿದ್ದಾರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಜನಸಂಖ್ಯೆ ಹೆಚ್ಚಳಕ್ಕೆ ಚೀನಾದಲ್ಲಿ ಕಾಂಡೋಮ್‌ ಟ್ಯಾಕ್ಸ್‌
ಗ್ರಾಹಕರಿಗೆ ಬಂಪರ್‌ ಪ್ಲ್ಯಾನ್‌ ಘೋಷಿಸಿದ Vi: 61 ರೂಪಾಯಿಯ ಮೊಬೈಲ್‌ ರಿಚಾರ್ಜ್‌ಗೆ 25 ಸಾವಿರದ ಬೆನಿಫಿಟ್‌!