
ಬೀಜಿಂಗ್(ಜು. 13) ಏಯ್ ಚೆಂಜ್ ಇಲ್ಲಪ್ಪಾ!.. ಮುಂದೆ ಹೋಗು ಎಂದು ಎಂದು ಇನ್ನು ಮುಂದೆ ಭಿಕ್ಷುಕರಿಗೆ ಹೇಳುವ ಹಾಗೆ ಇಲ್ಲ. ಯಾಕೆಂದರೆ ಚೀನಾ ಭಿಕ್ಷುಕರು ಕ್ಯಾಶ್ ಲೆಸ್ ಆಗಿದ್ದಾರೆ!
ಇ-ವಾಲೆಟ್ ಮತ್ತು ಕ್ಯೂ ಆರ್ ಕೋಡ್ ಬಳಕೆ ಮಾಡುವುದರ ಜತೆಗೆ ಅದನ್ನು ಚೀನಾ ಭಿಕ್ಷುಕರು ಅಳವಡಿಕೆ ಮಾಡಿಕೊಂಡಿದ್ದಾರೆ.
ಚೆಂಜ್ ಇಲ್ಲ ಎಂದವರ ಬಳಿ ಡಿಜಿಟಲ್ ಪೇಮೆಂಟ್ ಮಾಡಿ ಎನ್ನುತ್ತಿದ್ದಾರೆ. ಕುತ್ತಿಗೆಗೆ ಕ್ಯೂ ಆರ್ ಕೋಡ್ ತೂಗು ಹಾಕಿಕೊಂಡು ಭಿಕ್ಷಾಟನೆಗೆ ಆಗಮಿಸಿ ಕಲೆಕ್ಷನ್ ಜಾಸ್ತಿ ಮಾಡಿಕೊಳ್ಳುತ್ತಿದ್ದಾರೆ. ಆಲಿಬಾಬಾ ಕಂಪನಿಯ ಇ ವಾಲೆಟ್ ಬಳಕೆ ಮಾಡುತ್ತಿರುವುದು ವಿಶೇಷ. ಇ ವಾಲೆಟ್ ಬಳಕೆ ಮಾಡುತ್ತಿರುವುದಕ್ಕೆ ಇನ್ನೊಂದು ಕಾರಣವೂ ಇದೆ.
ಬೆಂಗಳೂರು ಭಿಕ್ಷುಕನ ಬಳಿ ಕಂತೆ ಕಂತೆ ನೋಟು
ಒಂದು ಭಿಕ್ಷಾಟನೆಯ ಹಣ ಇನ್ನೊಂದು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದಾಗ ಪ್ರತಿ ಸಾರಿ ದೊರೆಯುವ ಕ್ಯಾಶ್ ಬ್ಯಾಕ್! ಭಾರತದಲ್ಲಿಯೂ ಭಿಕ್ಷುಕರು ಇಂಥ ವ್ಯವಸ್ಥೆ ಅಳವಡಿಕೆ ಮಾಡಿಕೊಂಡರೆ ಡಿಟಿಜಲ್ ವಾಲೆಟ್ ಇಟ್ಟುಕೊಂಡವರು ಭಿಕ್ಷೆ ನೀಡಲಲ್ಲ ಎಂದು ಹೇಳಲು ಸಾಧ್ಯವೇ ಇಲ್ಲ ಬಿಡಿ!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.