'ಆಲಿಬಾಬಾ'ಗೆ ಚೀನಾ 20 ಸಾವಿರ ಕೋಟಿ ರೂ. ದಂಡ!

Published : Apr 11, 2021, 08:43 AM IST
'ಆಲಿಬಾಬಾ'ಗೆ ಚೀನಾ 20 ಸಾವಿರ ಕೋಟಿ ರೂ. ದಂಡ!

ಸಾರಾಂಶ

ವ್ಯಾಪಾರಿಗಳು ಅನ್ಯ ಆನ್‌ಲೈನ್‌ ಇ-ಕಾಮರ್ಸ್‌ ತಾಣಗಳಲ್ಲಿ ತಮ್ಮ ಉತ್ಪನ್ನ ಮಾರದಂತೆ 2015ರಿಂದಲೂ ಅಡ್ಡಿ| 'ಆಲಿಬಾಬಾ'ಗೆ ಚೀನಾ 20 ಸಾವಿರ ಕೋಟಿ ರೂ. ದಂಡ!

ಬೀಜಿಂಗ್‌:(ಏ.11): ವ್ಯಾಪಾರಿಗಳು ಅನ್ಯ ಆನ್‌ಲೈನ್‌ ಇ-ಕಾಮರ್ಸ್‌ ತಾಣಗಳಲ್ಲಿ ತಮ್ಮ ಉತ್ಪನ್ನ ಮಾರದಂತೆ 2015ರಿಂದಲೂ ಅಡ್ಡಿಪಡಿಸುವ ಮೂಲಕ ಏಕಸ್ವಾಮ್ಯ ಸೃಷ್ಟಿಸಿದ ಕಾರಣಕ್ಕಾಗಿ ಪ್ರಸಿದ್ಧ ಇ-ಕಾಮರ್ಸ್‌ ಕಂಪನಿ ಆಲಿಬಾಬಾ ಗ್ರೂಪ್‌ ಮೇಲೆ ಚೀನಾ ಸರ್ಕಾರ ಬರೋಬ್ಬರಿ 20 ಸಾವಿರ ಕೋಟಿ ರು. ದಂಡ ವಿಧಿಸಿದೆ.

ವಿಶ್ವದ ಅತಿದೊಡ್ಡ ಮೊಬೈಲ್‌ ಚಿಪ್‌ ಪೂರೈಕೆದಾರ ಸಂಸ್ಥೆ ಅಮೆರಿಕದ ಬಹುರಾಷ್ಟ್ರೀಯ ಕಂಪನಿ ಕ್ವಾಲ್‌ಕಾಮ್‌ಗೆ 2015ರಲ್ಲಿ ಚೀನಾ 7 ಸಾವಿರ ಕೋಟಿ ರು. ದಂಡ ವಿಧಿಸಿತ್ತು. ಅದಕ್ಕೆ ಹೋಲಿಸಿದರೆ ಆಲಿಬಾಬಾ ಮೇಲೆ ವಿಧಿಸಿರುವುದು ಸುಮಾರು 3 ಪಟ್ಟು ಅಧಿಕ ದಂಡವಾಗಿದೆ ಎಂದು ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್‌ ಪತ್ರಿಕೆ ವರದಿ ಮಾಡಿದೆ. ಈ ದಂಡವನ್ನು ವಿನಮ್ರವಾಗಿ ಒಪ್ಪಿಕೊಳ್ಳುತ್ತೇವೆ ಎಂದು ಆಲಿಬಾಬಾ ಕಂಪನಿ ತಿಳಿಸಿದೆ.

2019ರಲ್ಲಿ ದೇಶೀಯವಾಗಿ ಆಲಿಬಾಬಾ ಎಷ್ಟುಆದಾಯವನ್ನು ಗಳಿಸಿತ್ತೋ ಅದರಲ್ಲಿ ಈ ದಂಡದ ಪಾಲು ಶೇ.4ರಷ್ಟಾಗಲಿದೆ ಎಂದು ದಂಡ ವಿಧಿಸಿರುವ ಚೀನಾದ ಮಾರುಕಟ್ಟೆನಿಯಂತ್ರಣ ಸಂಸ್ಥೆ ತಿಳಿಸಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!